ಬಿಬಿಎಂಪಿ ಕಸದ ಲಾರಿಯೊಂದು ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದ ಹಡ್ಸನ್ ವೃತ್ತದಲ್ಲಿಯೇ ರಸ್ತೆಯನ್ನು ದಾಟುತ್ತಿದ್ದ ಪಾದಚಾರಿ ಮಹಿಳೆ ಮೇಲೆ ಹರಿದಿದೆ.
ಬೆಂಗಳೂರು (ಜು.17): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಸದ ಲಾರಿಯೊಂದು ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದ ಹಡ್ಸನ್ ವೃತ್ತದಲ್ಲಿಯೇ ರಸ್ತೆಯನ್ನು ದಾಟುತ್ತಿದ್ದ ಪಾದಚಾರಿಯ ಕಾಲಿನ ಮೇಲೆ ಹರಿದಿದೆ. ಮಹಿಳೆಯ ಎರಡೂ ಕಾಲುಗಳು ನಜ್ಜುಗುಜ್ದಜಾಗಿದ್ದು, ಮಹಿಳೆಯ ಸ್ಥಿತಿ ತೀವ್ರ ಗಂಭೀರವಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸದ ಲಾರಿಯನ್ನೇ ಹಾವಳಿಯಾಗಿದೆ. ಕಳೆದ ಏಳೆಂಟು ತಿಂಗಳ ಹಿಂದೆ ಮೂವರು ಸಾರ್ವಜನಿಕರನ್ನು ಬಲಿ ಬಡೆದುಕೊಂಡಿದ್ದ ಬಿಬಿಎಂಪಿ ಲಾರಿಗಳ ಚಾಲಕರಿಗೆ ನಂತರ ಪೊಲೀಸರು ಚಾಲನಾ ತರಬೇತಿಯನ್ನು ನೀಡಿ ಅಪಘಾತ ನಿಯಂತ್ರಣ ಮಾಡಿದ್ದರು. ಆದರೆ, ಬಿಬಿಎಂಪಿ ಲಾರಿಗಳ ಹಾವಳಿ ತಪ್ಪಿದೆ ಎನ್ನುವಷ್ಟರಲ್ಲೇ ಈಗ ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗದ ಹಡ್ಸನ್ ವೃತ್ತದಲ್ಲಿಯೇ ಬಿಬಿಎಂಪಿ ಕಸದ ಲಾರಿ ಪಾದಚಾರಿ ಮಹಿಳೆ ಮೇಲೆ ಹರಿದಿದೆ.
Dharwad: ಮಗಳನ್ನು ಪ್ರೀತಿಸುತ್ತಿದ್ದ ಯುವಕನಿಗೆ ಚಾಕು ಚುಚ್ಚಿದ ತಂದೆ
ಮಹಿಳೆ ಸ್ಥಿತಿ ಗಂಭೀರ: ಈ ಘಟನೆ ಹಲಸೂರು ಗೇಟ್ ಸಂಚಾರ ವ್ಯಾಪ್ತಿಯ ಹಡ್ಸನ್ ಸರ್ಕಲ್ ಬಳಿ ಘಟನೆ ನಡೆದಿದೆ. ಹಡ್ಸನ್ ವೃತ್ತದ ಬಳಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಲಾರಿ ಬಂದು ಡಿಕ್ಕಿ ಹೊಡೆದಿದೆ. ಇನ್ನು ಮಹಿಳೆಯ ಎರಡೂ ಕಾಲುಗಳ ಮೇಲೆ ಲಾರಿಯ ಚಕಗ್ರಗಳು ಹರಿದಿವೆ. ಇನ್ನು ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಸ್ಥಳೀಯರು ಮಹಿಳೆಯನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಸಂಬಂಧ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಬಿಬಿಎಂಪಿ ಲಾರಿ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಅಸ್ಸಾಂ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ಬೆಂಗಳೂರು (ಜು.17) : ಮದುವೆ ಆಗುವುದಾಗಿ ನಂಬಿಸಿ ಅಸ್ಸಾಂನಿಂದ ಬೆಂಗಳೂರಿಗೆ ಕರೆತಂದಿದ್ದ ಯುವತಿಯನ್ನು ಪ್ರಿಯಕರನೇ ರೂಮಿನಲ್ಲಿ ಕೂಡಿಹಾಇ ತನ್ನ ನಾಲ್ವರು ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾನೆ ಎಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಸ್ಸಾಂ ಮೂಲದ 20 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆಕೆಯ ಪ್ರಿಯಕರ ಶಾಹೀದ್ ಉದ್ದೀನ್ ಹಾಗೂ ಆತನ ನಾಲ್ವರು ಸ್ನೇಹಿತರ ವಿರುದ್ಧ ಸಾಮೂಹಿಕ ಅತ್ಯಾಚಾರ ಆರೋಪದಡಿ ಎಫ್‌ಐಆರ್ ದಾಖಲಿಸಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕೆಲಸದ ನಿಮಿತ್ತ ಪರಿಚಿತನಾದ ನಂತರ ದೈಹಿಕ ಸಂಪರ್ಕ: ಅಸ್ಸಾಂ ಮೂಲದ ಸಂತ್ರಸ್ತೆ ಮತ್ತು ಆರೋಪಿ ಶಾಹೀದ್ ಕಳೆದ ವರ್ಷ ಪಾರ್ಕ್‌ನಲ್ಲಿ ಪರಸ್ಪರ ಪರಿಚಿತರಾಗಿ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದರು. ಬಳಿಕ ಪ್ರೀತಿಸಲು ಆರಂಭಿಸಿದ್ದರು. ಆರೋಪಿ ಶಾಹೀದ್ ಮದುವೆ ಆಗುವುದಾಗಿ ಸಂತ್ರಸ್ತೆಯನ್ನು ನಂಬಿಸಿ ಕಳೆದ ಜೂನ್‌ನಲ್ಲಿ ಅಸ್ಸಾಂನಿಂದ ಬೆಂಗಳೂರಿಗೆ ಕರೆತಂದಿದ್ದ. ದೊಡ್ಡ ನಾಗಮಂಗಲದ ಬಾಡಿಗೆ ಮನೆಯಲ್ಲಿ ಸಂತ್ರಸ್ತೆಯನ್ನು ಇರಿಸಿ, ಸಂತ್ರಸ್ತೆಯ ವಿರೋಧದ ನಡುವೆಯೂ ಆಕೆ ಜತೆಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಈ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರಿಸಿಕೊಂಡಿದ್ದ.
ರೂಮಿನಲ್ಲಿ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ: ಕೆಲ ದಿನಗಳ ಬಳಿಕ ಶಾಹೀದ್‌ಗೆ ಬೇರೆ ಹೆಂಗಸಿನ ಜತೆಗೆ ಮದುವೆ ಆಗಿರುವ ವಿಚಾರ ಸಂತ್ರಸ್ತೆಗೆ ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿಯು ಬೆಲ್ಟ್‌ನಿಂದ ಹಲ್ಲೆ ನಡೆಸಿ ಮನೆಯ ರೂಮ್‌ನಲ್ಲಿ ಕೂಡಿ ಹಾಕಿದ್ದ. ಬಳಿಕ ನಾಲ್ವರು ಅಪರಿಚಿತರನ್ನು ಮನೆಗೆ ಕರೆಸಿ ಸಂತ್ರಸ್ತೆಯ ರೂಮ್‌ಗೆ ಕಳುಹಿಸಿದ್ದ. ಈ ವೇಳೆ ಸಂತ್ರಸ್ತೆ ಎಷ್ಟೇ ಬೇಡಿಕೊಂಡರೂ ಬಿಡದೆ ಸಾಮೂಹಿಕ ಅತ್ಯಾಚಾರ ಮಾಡಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವೇಶ್ಯಾವಾಟಿಕೆ ದಂಧೆಗೆ ಇಳಿಸುವ ಉದ್ದೇಶದಿಂದ ಆರೋಪಿ ಶಾಹೀದ್ ಸಂತ್ರಸ್ತೆಯನ್ನು ಪ್ರೀತಿಸುವ ನಾಟಕವಾಗಿ ಮದುವೆ ಆಗುವುದಾಗಿ ನಂಬಿಸಿ ಅಸ್ಸಾಂನಿಂದ ಬೆಂಗಳೂರಿಗೆ ಕರೆತಂದಿರುವುದು ಗೊತ್ತಾಗಿದೆ.