Bengaluru: ಹಳೆ ಮದ್ರಾಸ್ ರಸ್ತೆಯಲ್ಲಿ ಆಗಸ್ಟ್ ಅಂತ್ಯದವರೆಗೆ ಟ್ರಾಫಿಕ್ ಜಾಮ್, ಪರ್ಯಾಯ ಮಾರ್ಗ ಸೂಚನೆ

By Gowthami K  |  First Published Jul 17, 2023, 12:30 PM IST

ಬೆಂಗಳೂರಿನ ಬೆಣ್ಣಗಾನಹಳ್ಳಿ-ಕೆಆರ್ ಪುರಂ ಮಾರ್ಗದಲ್ಲಿ ಆಗಸ್ಟ್ ವರೆಗೆ ಸಂಚಾರ ದಟ್ಟಣೆ ಉಂಟಾಗಬಹುದು ಎಂದು ಬೆಂಗಳೂರು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


ಬೆಂಗಳೂರು (ಜು.17): ಬೈಯಪನಹಳ್ಳಿ ಮತ್ತು ಹೊಸೂರು ರೈಲು ನಿಲ್ದಾಣಗಳ ನಡುವೆ ರೈಲು ಸಂಪರ್ಕವನ್ನು ಒದಗಿಸುವ  ಬೆಣ್ಣಗಾನಹಳ್ಳಿ ಮೇಲ್ಸೇತುವೆಯಲ್ಲಿ ರೈಲ್ವೆ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ಬೆಂಗಳೂರಿನ ಬೆಣ್ಣಗಾನಹಳ್ಳಿ-ಕೆಆರ್ ಪುರಂ ಮಾರ್ಗದಲ್ಲಿ ಆಗಸ್ಟ್ ವರೆಗೆ ಸಂಚಾರ ದಟ್ಟಣೆ ಉಂಟಾಗಬಹುದು ಎಂದು ಬೆಂಗಳೂರು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕೆಆರ್ ಪುರಂ, ಮಹದೇವಪುರ, ಮಾರತ್ತಹಳ್ಳಿಗೆ ಪ್ರತಿನಿತ್ಯ ಸಂಚರಿಸುವ ಜನರು ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಹೀಗಾಗಿ ಪ್ರಯಾಣಿಕರು ಕಸ್ತೂರಿನಗರದಿಂದ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಕಡೆಗೆ ಎಡ ತಿರುವು ಪಡೆದು ಹೊರವರ್ತುಲ ರಸ್ತೆಯ ಸರ್ವೀಸ್ ರಸ್ತೆಯನ್ನು ಬಳಸಿ ಹಳೆ ಮದ್ರಾಸ್ ರಸ್ತೆಯಲ್ಲಿರುವ ಟಿನ್ ಫ್ಯಾಕ್ಟರಿ ಜಂಕ್ಷನ್‌ಗೆ ತೆರಳುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ

Tap to resize

Latest Videos

undefined

ಟೆಕ್ ವೃತ್ತಿಪರರಿಗೆ ಸಂತಸದ ಸುದ್ದಿ, ವೈಟ್‌ಫೀಲ್ಡ್‌-ಚಲ್ಲಘಟ್ಟ ನಮ್ಮ ಮೆಟ್ರೋ ಸೇವೆ ಆಗಸ್ಟ್‌ನಲ್ಲಿ

ಈಗಾಗಲೇ ಸಂಚಾರ ದಟ್ಟಣೆಯಿಂದ ಬಳಲುತ್ತಿರುವ ಬಾಟಲ್‌ನೆಕ್ ಪ್ರದೇಶವು ಮುಂದಿನ ದಿನಗಳಲ್ಲಿ ತಿರುವುಗಳಿಂದಾಗಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಪೊಲೀಸರು ಸೂಚಿಸಿದ ಮಾರ್ಗಗಳು:
ಬೆಣ್ಣಗಾನಹಳ್ಳಿ ಮೇಲ್ಸೇತುವೆಯ ಎಡಭಾಗಕ್ಕೆ ರೈಲ್ವೇ ಅಂಡರ್‌ಪಾಸ್ ಅನ್ನು ಬಳಸುವುದು
ಹಳೆಯ ಮದ್ರಾಸ್ ರಸ್ತೆಯಲ್ಲಿ ಕಸ್ತೂರಿನಗರ ಕಡೆಗೆ ಎಡಕ್ಕೆ ತಿರುಗುವ ಮೂಲಕ ಬೈಯಪನಹಳ್ಳಿ ಮೆಟ್ರೋ ನಿಲ್ದಾಣದ ಮೂಲಕ ಪ್ರಯಾಣಿಸುವುದು
ಹೊರ ವರ್ತುಲ ರಸ್ತೆಯ ಸರ್ವೀಸ್ ರಸ್ತೆಯನ್ನು ಬಳಸಿ ಕೆ ಆರ್ ಪುರಂ ಕಡೆಗೆ ಪ್ರಯಾಣಿಸುವುದು

ಕೆಆರ್ ಪುರಂ ಮೆಟ್ರೋ ನಿಲ್ದಾಣವನ್ನು ಬೈಯಪ್ಪನಹಳ್ಳಿಗೆ ಸಂಪರ್ಕಿಸುವ ಮೆಟ್ರೋ ಕಾಮಗಾರಿಯು ಸಕ್ರಿಯವಾಗಿ ನಡೆಯುತ್ತಿದ್ದು, ಆಗಸ್ಟ್ 22 ರಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಪ್ರಾಯೋಗಿಕ ಚಾಲನೆಯನ್ನು ನಡೆಸಲು ಸಜ್ಜಾಗಿದೆ.

ದೂದ್ ಸಾಗರ ನೋಡಲು ಹೋದವರಿಗೆ ಬಸ್ಕಿ ಹೊಡೆಸಿದ ಗೋವಾ ಪೊಲೀಸ್, ಪ್ರವಾಸಿಗರ ಪ್ರತಿಭಟನೆ

‘ಮಿಸ್ಸಿಂಗ್‌ ಲಿಂಕ್‌’ ಎನ್ನಿಸಿಕೊಂಡಿರುವ ಬೈಯಪ್ಪನಹಳ್ಳಿ-ಕೆ.ಆರ್‌.ಪುರ ಮೆಟ್ರೋ ಜೊತೆಗೆ ಕೆಂಗೇರಿ-ಚಲ್ಲಘಟ್ಟನಡುವಿನ ಮೆಟ್ರೋ ಮಾರ್ಗವನ್ನೂ ಏಕಕಾಲಕ್ಕೆ ಪ್ರಯಾಣಿಕರಿಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್‌ ತೀರ್ಮಾನಿಸಿದೆ. ಆಗಸ್ಟ್‌ ಅಂತ್ಯಕ್ಕೆ ಜನತೆ ಈ ಮಾರ್ಗಗಳಲ್ಲಿ ಸಂಚರಿಸಲು ಸಾಧ್ಯವಾಗುವ ನಿರೀಕ್ಷೆಯಿದೆ. ಬೈಯಪ್ಪನಹಳ್ಳಿ-ಕೆ.ಆರ್‌.ಪುರ ಮೆಟ್ರೋ 2.1 ಕಿ.ಮೀ. ಹಾಗೂ ಕೆಂಗೇರಿ-ಚಲ್ಲಘಟ್ಟನಡುವಿನ 1.9 ಕಿ.ಮೀ. ಮೆಟ್ರೋ ಕಾಮಗಾರಿ ನಡೆದಿದೆ.  

click me!