ಸಿದ್ದೇಶ್ವರ ಶ್ರೀಗಳ ಭೇಟಿ ಮಾಡಿದ ಸಾರಿಗೆ ಸಚಿವ, ಆತಂಕ ಬೇಡ ಎಂದ ಶ್ರೀರಾಮುಲು

By Suvarna NewsFirst Published Dec 29, 2022, 10:13 PM IST
Highlights

ನಡೆದಾಡುವ ದೇವರು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆರೋಗ್ಯದ ಬಗ್ಗೆ ವದಂತಿ ಹರಡಿದ ಬೆನ್ನಲ್ಲೆ ಆಶ್ರಮಕ್ಕೆ ಗಣ್ಯರ ದಂಡೆ ಹರಿದು ಬರ್ತಿದೆ.  ಇಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಸಹ ಭೇಟಿ ನೀಡಿದರು.

ವರದಿ: ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಡಿ.29): ನಡೆದಾಡುವ ದೇವರು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆರೋಗ್ಯದ ಬಗ್ಗೆ ವದಂತಿ ಹರಡಿದ ಬೆನ್ನಲ್ಲೆ ಆಶ್ರಮಕ್ಕೆ ಗಣ್ಯರ ದಂಡೆ ಹರಿದು ಬರ್ತಿದೆ. ನಿನ್ನೆ ಶಿಕ್ಷಣ ಸಚಿವರು ಸೇರಿ ಅನೇಕ‌ ಮುಖಂಡರು, ಸ್ವಾಮೀಜಿ, ಮಠಾಧೀಶರ ಭೇಟಿ ಬೆನ್ನಲ್ಲೆ ಇಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಸಹ ಭೇಟಿ ನೀಡಿದರು. ಶ್ರೀಗಳ ಆರೋಗ್ಯ ವಿಚಾರಿಸಿದರು. ಗುರುವಾರ ರಾತ್ರಿ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಭೇಟಿ ಮಾಡಿದ ಸಚಿವ ಶ್ರೀರಾಮುಲು ವಿಜಯಪುರ ನಗರದ ಜ್ಞಾನಯೋಗಾಶ್ರಮ ಆಶ್ರಮದ ಮೊದಲ ಮಹಡಿಯಲ್ಲಿ ವಿಶ್ರಾಂತಿ ಪಡೆಯುತ್ತಿರೋ ಸ್ವಾಮೀಜಿ ಭೇಟಿ ಮಾಡಿದ ಸಚಿವರು.

ಶ್ರೀಗಳ ಆರೋಗ್ಯದ ಬಗ್ಗೆ ಆತಂಕ ಪಡಬೇಕಿಲ್ಲ: ಶ್ರೀರಾಮುಲು
ಬಳಿಕ ಮಾತನಾಡಿದ ಸಚಿವ ಶ್ರೀರಾಮುಲು, ಪೂಜ್ಯರ ಆರೋಗ್ಯ ವಿಚಾರಿಸಲು ಆಗಮಿಸಿ, ಶ್ರೀಗಳ ದರ್ಶನ ಪಡೆದಿದ್ದೇನೆ, ಶ್ರೀಗಳಿಗೆ ಚಿಕಿತ್ಸೆ ನೀಡುವ ವೈದ್ಯರ ಜೊತೆಗೆ ಮಾತನಾಡಿದ್ದೇನೆ. ವೈದ್ಯರ ಪ್ರಕಾರ ಯಾರೂ ಆತಂಕ ಪಡೋ ಅವಶ್ಯಕತೆಯಿಲ್ಲಾ ಎಂದರು. 

ಸಿದ್ದೇಶ್ವರ ಶ್ರೀಗಳ ಭೇಟಿಗೆ ಆಗಮಿಸಲಿರುವ ಸಿಎಂ: ಸ್ವಾಮೀಜಿಗಳ ಆರೋಗ್ಯದ ಕುರಿತು ಸಿಎಂ ಬೊಮ್ಮಾಯಿ ಅವರ ಜೊತೆಗೆ ಪೋನ್ ಮೂಲಕ ಶ್ರೀರಾಮೂಲು ಮಾತನಾಡಿದ್ದಾರೆ. ಹಾಗೇ ಕಿರಿಯ ಶ್ರೀಗಳೊಂದಿಗು ಮಾತುಕತೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಶ್ರೀರಾಮುಲು ನಾಳೆ ರಾಜ್ಯಕ್ಕೆ ಅಮೀತ್ ಶಾ ಭೇಟಿ ನೀಡಿದ ಬಳಿಕ ಸ್ವಾಮೀಜಿ ಅವರ ದರ್ಶನಕ್ಕೆ ಬರೋದಾಗಿ ಸಿಎಂ ಹೇಳಿದ್ದಾರೆ ಎಂದರು.

20 ವರ್ಷಗಳಿಂದ ಶ್ರೀಗಳ ಶಿಷ್ಯ ಎಂದ ಶ್ರೀರಾಮುಲು: ನಾನು ಕಳೆದ 20 ವರ್ಷಗಳಿಂದ ಮಠದ ಶಿಷ್ಯನಾಗಿ ಭಕ್ತನಾಗಿ ಶ್ರೀಗಳ ಸಂಪರ್ಕದಲ್ಲಿದ್ದೇನೆ. ಸ್ವಾಮೀಜಿಗಳ ಜೊತೆಗೆ ಅನೇಕ ವಿಚಾರ ಹಂಚಿಕೊಂಡಿದ್ದೇನೆ. ಆಶೀರ್ವಾದ ಪಡೆದುಕೊಳ್ಳುತ್ತಾ ಬಂದಿದ್ದೇನೆ. ಸ್ವಾಮೀಜಿ ಅವರ ಆರೋಗ್ಯ ದಿನದಿಂದ ದಿನಕ್ಕೆ ಚೇತರಿಕೆಯಾಗುತ್ತಿದೆ. ಸ್ವಾಮೀಜಿ ಆಶ್ರಮದಲ್ಲೇ ಇರೋದಾಗಿ ಹೇಳಿದ್ದಾರೆ. ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ,
ಚಿಕಿತ್ಸೆಗೆ ಸ್ವಾಮೀಜಿ ಸ್ಪಂದನೆ ಮಾಡುತ್ತಿದ್ದಾರೆ ಎಂದರು.‌

ಶ್ರೀಗಳ ಭೇಟಿಗೆ ಬಂದು ಬೇರೆ ವಿಚಾರ ಮಾತನಾಡಲ್ಲ: ಇನ್ನೂ ಶ್ರೀಗಳ ಭೇಟಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಶ್ರೀರಾಮೂಲು ಪಂಚಮಸಾಲಿ ಮೀಸಲಾತಿ ಕುರಿತು ಮಾತನಾಡಲು ನಿರಾಕರಿಸಿದರು.‌ ಈ ಬಗ್ಗೆ ಮಾಹಿತಿ ಇಲ್ಲ. ಬದಲಾಗಿ ಸ್ವಾಮೀಜಿ ಅವರ ದರ್ಶನಕ್ಕೆ ಇಲ್ಲಿಗೆ ಬಂದಿದ್ದೇನೆ. ಮೊದಲಿನಿಂದಲೂ ಶ್ರೀಗಳ ಜೊತೆಗೆ ಕೆಲಸ ಮಾಡಿಕೊಂಡು ಬಂದಿದ್ದೇನೆ, ಅವರ ಜೊತೆಗೆ  ವೇದಿಕೆ ಹಂಚಿಕೊಂಡಿದ್ದೇನೆ. ತಮಾಷೆ ಮಾಡಿದ್ದೇನೆ, ಹರಟೆ ಹೊಡೆದಿದ್ದೇನೆ, 20-22 ವರ್ಷಗಳ ನೆನಪು ಬಹಳಷ್ಟಿವೆ‌ ಎಂದರು.

ಇಂತಹ ಪ್ರಧಾನಿ ಸಿಕ್ಕಿದ್ದು ಈ ದೇಶಕ್ಕೆ ಸುದೈವ; ಮೋದಿಗೆ ಸಿದ್ದೇಶ್ವರ ಶ್ರೀಗಳ ಹಾರೈಕೆ

ಶ್ರೀಗಳು ಶತಾಯುಷಿಯಾಗಬೇಕು: ಸ್ವಾಮೀಜಿ ಅವರ ಆರೋಗ್ಯ ಸುಧಾರಣೆಯಾಗಬೇಕು ಸ್ವಾಮೀಜಿ ಶತಾಯುಷಿ ಗಳಾಗಬೇಕು ಎಂದರು.‌ ಶ್ರೀಗಳನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಲೆಂದೆ ಸದನ ಕಲಾಪ ಬಿಟ್ಟು ಬಂದಿದ್ದೇನೆ ಎಂದರು.

 

Vijayapura: ಗಂಭೀರ ಆರೋಗ್ಯ ಸಮಸ್ಯೆಯಿಲ್ಲ, ಆಪ್ತರೊಂದಿಗೆ ಜ್ಞಾನ ಯೋಗಾಶ್ರಮ ಸಿದ್ದೇಶ್ವರ ಸ್ವಾಮೀಜಿ ಮಾತು

ಸಚಿವರ ಜೊತೆ ಕಿರಿಯ ಶ್ರೀಗಳ ಮಾತುಕತೆ: ಇದಕ್ಕೂ ಮೊದಲು ಜ್ಞಾನ ಯೋಗಾಶ್ರಮಕ್ಕೆ ಆಗಮಿಸಿದ ಸಚಿವ ಶ್ರೀರಾಮುಲು, ಅವರಿಗೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಸಾಥ ನೀಡಿದರು. ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳ ಭೇಟಿಗಾಗಿ ಸಚಿವರು ಕಾದು ಕುಳಿತರು. ಸಚಿವರು ಆಗಮಿಸುತ್ತಿದ್ದಂತೆ ಪ್ರತ್ಯೇಕ ಸ್ಥಳಕ್ಕೆ ಕರೆದುಕೊಂಡು ಹೋದ ಆಶ್ರಮದ ಕಿರಿಯ ಶ್ರೀಗಳು  ಮಾತುಕತೆ ನಡೆಸಿದರು. ಎಲ್ಲರನ್ನೂ ದೂರ ಕಳಿಸಿ ಸಚಿವರ ಜೊತೆ ಮಾತುಕತೆ ನಡೆಸಿದರು.

click me!