ಹೊಸ ವರ್ಷಾಚರಣೆ ಹಿನ್ನೆಲೆ, ಜ.1ರ ಮುಂಜಾವು 2 ಗಂಟೆವರೆಗೆ ಬಿಎಂಟಿಸಿ ಬಸ್ ಸೇವೆ

By Gowthami K  |  First Published Dec 29, 2022, 9:42 PM IST

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬಿಎಂಟಿಸಿ  ತಡರಾತ್ರಿ 2ಗಂಟೆ ರವರೆಗೆ ಸೇವೆ ಒದಗಿಸಲಿದೆ. 2022ರ ಡಿಸೆಂಬರ್ 31 ರಿಂದ ಜನವರಿ 2023 ರ ಮಧ್ಯರಾತ್ರಿ 2 ಗಂಟೆವರೆಗೆ ಸಾರ್ವಜನಿಕರ ಓಡಾಟಕ್ಕೆ ಬಸ್ ಗಳ ವ್ಯವಸ್ಥೆ ಇರಲಿದೆ ಎಂದು ಬಿಎಂಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


ಬೆಂಗಳೂರು (ಡಿ.29): ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ 'ನಮ್ಮ ಮೆಟ್ರೋ' ಸೇವೆ ತಡರಾತ್ರಿ 2ಗಂಟೆ ರವರೆಗೆ ಇರಲಿದೆ. ಇದರ ಬೆನ್ನಲ್ಲೇ ಬಿಎಂಟಿಸಿ ಕೂಡ ತಡರಾತ್ರಿ 2ಗಂಟೆ ರವರೆಗೆ ಸೇವೆ ಒದಗಿಸಲಿದೆ. 2022ರ ಡಿಸೆಂಬರ್ 31 ರಿಂದ ಜನವರಿ 2023 ರ ಮಧ್ಯರಾತ್ರಿ 2 ಗಂಟೆವರೆಗೆ ಸಾರ್ವಜನಿಕರ ಓಡಾಟಕ್ಕೆ ಬಸ್ ಗಳ ವ್ಯವಸ್ಥೆ ಇರಲಿದೆ ಎಂದು ಬಿಎಂಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಎಂಜಿ ರೋಡ್ ಮೆಟ್ರೋ ನಿಲ್ದಾಣ ಮತ್ತು ಬ್ರಿಗೇಡ್ ರೋಡ್ ನಿಂದ ನಗರದ ವಿವಿಧ ಪ್ರದೇಶಗಳಿಗೆ ಒಟ್ಟು 50 ಬಸ್‌ಗಳ ವ್ಯವಸ್ಥೆ ಇರಲಿದೆ.

ನಮ್ಮ ಮೆಟ್ರೋ ಅವಧಿ ವಿಸ್ತರಣೆ, ಮುಂಜಾವು 2 ಗಂಟೆಯವರೆಗೆ ಸೇವೆ ಲಭ್ಯ: 2023ರ ಹೊಸ ವರ್ಷಚಾರಣೆ ಪ್ರಯುಕ್ತ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಅವಧಿ ವಿಸ್ತರಣೆ ಮಾಡುತ್ತಿದೆ. ಜನವರಿ 1, 2023ರ  ಮುಂಜಾವು 2 ಗಂಟೆಯವರೆಗೆ ಮೆಟ್ರೋ ಸಂಚಾರ ಇರಲಿದೆ. ಪ್ರತಿನಿತ್ಯ ರಾತ್ರಿ 11 ಗಂಟೆಯವರೆಗೆ ಸೇವೆ ನೀಡುತ್ತಿದ್ದ ನಮ್ಮ ಮೆಟ್ರೋ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ  3 ಗಂಟೆಗಳ ಕಾಲ ನಮ್ಮ ಮೆಟ್ರೋ ಸಂಚಾರ ವಿಸ್ತರಣೆ ಮಾಡುತ್ತಿದೆ.  11.30 ರ ನಂತ್ರ ಎಂ.ಜಿ.ರೋಡ್, ಟ್ರಿನಿಟಿ ,ಕಬ್ಬನ್ ಪಾರ್ಕ್ ನಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಕಾಗದ ಟಿಕೆಟ್ ವಿಸ್ತರಣೆ ಮಾಡಲಿದೆ. ಹೀಗಾಗಿ ವಿಸ್ತರಿಸಿದ 3 ಗಂಟೆಗಳ ಅವಧಿಯಲ್ಲಿ ಟೋಕನ್ ವಿತರಣೆ ಇಲ್ಲ. ಜೊತೆಗೆ  ಬಿಎಂಆರ್‌ಸಿಎಲ್  50 ರೂಪಾಯಿ ಟಿಕೆಟ್ ನಿಗದಿ ಮಾಡಿದೆ.

Latest Videos

undefined

2 ಗಂಟೆಯ ವರೆಗೆ ಮೆಟ್ರೋ ಸಂಚಾರ ಅವಕಾಶವಿರುವ ನಿಲ್ದಾಣಗಳಿಂದ ಡಿ.31 ರ ರಾತ್ರಿ 8 ಗಂಟೆಯಿಂದಲೇ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಲಭ್ಯವಿದ್ದು ಈ ನಿಲ್ದಾಣಗಳ ಮೂಲಕ ಸಂಚಾರ ಮಾಡಬಹುದು. ಸ್ಮಾರ್ಟ್ ಕಾರ್ಡ್ ಹಾಗೂ ಕ್ಯೂಆರ್ ಕೋಡ್ ಹೊಂದಿರುವ ಪ್ರಯಾಣಿಕರು ಮೊದಲಿನಂತೆಯೇ ರಿಯಾಯಿತಿ ದರದಲ್ಲೇ ಪ್ರಯಾಣಿಸಬಹುದು. ಕಬ್ಬನ್ ಪಾರ್ಕ್, ಎಂ.ಜಿ.ರೋಡ್, ಟ್ರಿನಿಟಿ ಹೊರತುಪಡಿಸಿ ಯಾವುದೇ ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರು. ಟೋಕನ್ ಸ್ಮಾರ್ಟ್ ಕಾರ್ಡ್ ಹಾಗೂ ಕ್ಯೂಆರ್ ಕೋಡ್ ಟಿಕೆಟ್  ಮೂಲಕ ಸಾಮಾನ್ಯ ದರದಲ್ಲಿ ಪ್ರಯಾಣಿಸಬಹುದು ಎಂದು ಹೊಸ ವರ್ಷ ಕುರಿತಂತೆ ಬಿಎಂಆರ್‌ಸಿಎಲ್ ಪ್ರಕಟಣೆ ಹೊರಡಿಸಿದೆ.

ಬ್ರಿಗೇಡ್‌, ಎಂ.ಜಿ ರಸ್ತೆ ವರ್ಷಾಚರಣೆಗೆ ಡ್ರೋನ್‌ ಕಣ್ಗಾವಲು: ಹೊಸ ವರ್ಷಾಚರಣೆಗೆ ಹೆಚ್ಚಿನ ಜನ ಸೇರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಗಳಿಗೆ ಡಿ.31ರಂದು ಶನಿವಾರ ರಾತ್ರಿ ಭದ್ರತೆಗೆ 2 ಸಾವಿರ ಪೊಲೀಸರ ನಿಯೋಜನೆ ಮಾತ್ರವಲ್ಲದೆ 150 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಖಾಕಿ ಪಡೆ ನಿಗಾವಹಿಸಲಿದೆ.

ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಗಳಿಗೆ ಬುಧವಾರ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ, ಹೊಸ ವರ್ಷದ ಸಂಭ್ರಮದ ವೇಳೆ ಅಹಿತಕರ ಘಟನೆಗಳು ಸಂಭವಿಸದಂತೆ ಸೂಕ್ತ ಬಂದೋಸ್‌್ತ ಕಲ್ಪಿಸಲಾಗುತ್ತದೆ ಎಂದರು.

ಬೆಂಗ್ಳೂರಲ್ಲಿ ವರ್ಷಾಚರಣೆ: ಹೋಟೆಲ್‌ಗೆ ಭಾರಿ ಡಿಮ್ಯಾಂಡ್‌

ನಗರದಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಗಳಲ್ಲಿ ಹೆಚ್ಚಿನ ಜನರು ಸೇರಲಿದ್ದಾರೆ. ಕೊರೋನಾ ಸೋಂಕು ಕಾರಣಕ್ಕೆ ಎರಡು ವರ್ಷಗಳಿಂದ ಇಲ್ಲಿ ಸಾರ್ವಜನಿಕವಾಗಿ ವರ್ಷಾಚರಣೆಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಈ ಬಾರಿ ಆಚರಣೆಗೆ ಅವಕಾಶ ಕೊಟ್ಟಿರುವ ಕಾರಣ ಹೆಚ್ಚಿನ ಜನರು ಸೇರಬಹುದು ಎಂದು ತಿಳಿಸಿದರು.

ಬೆಂಗಳೂರು: ಬ್ರಿಗೇಡ್‌, ಎಂ.ಜಿ ರಸ್ತೆ ವರ್ಷಾಚರಣೆಗೆ ಡ್ರೋನ್‌ ಕಣ್ಗಾವಲು..!

ಸಂಭ್ರಮಾಚರಣೆಗೆ ಆಗಮಿಸುವ ಜನರು ಸರ್ಕಾರದ ಮಾರ್ಗಸೂಚಿ ಪಾಲಿಸಬೇಕಿದೆ. ಪ್ರತಿಯೊಬ್ಬರು ಮಾಸ್‌್ಕ ಧರಿಸಬೇಕು. ಡಿ.31ರಂದು ಸಂಜೆ ಎಂ.ಜಿ.ರಸ್ತೆಯ ಎರಡು ಬದಿಗಳಲ್ಲಿ ಮೆಟಲ್‌ ಡಿಟೆಕ್ಟರ್‌ಗಳನ್ನು ಹಾಕಿ ಎಂ.ಜಿ.ರಸ್ತೆಗೆ ಬರುವ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ.

click me!