ಕೇಂದ್ರ ಸರ್ಕಾರ ಕ್ರಮಕ್ಕೆ ಅಭಿನಂದನೆ, ಕೊಲೆಗಳನ್ನು ತಪ್ಪಿಸಿದ ಶಿವಮೊಗ್ಗ ಪೊಲೀಸರು: ಆರಗ ಜ್ಞಾನೇಂದ್ರ
ಶಿವಮೊಗ್ಗ(ಸೆ.29): ಕೇಂದ್ರ ಸರ್ಕಾರ ಯುಎಪಿಎ ಕಾಯ್ದೆಯಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ವನ್ನು ನಿಷೇಧ ಮಾಡಿದ್ದು, ಇಡೀ ದೇಶದ ಜನರ ಬಹಳ ದಿನದ ಅಪೇಕ್ಷೆ ಈಡೇರಿಸಂತಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಅಪಾಯಕಾರಿ ಮತಾಂಧ ಶಕ್ತಿಯನ್ನು ಬ್ಯಾನ್ ಮಾಡಬೇಕು ಎಂಬುದಾಗಿತ್ತು. ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು ಅಭಿನಂದಿಸುತ್ತೇನೆ. ಪಿಎಫ್‌ಐ ಸಂಘಟನೆ ಯುವಕರಿಗೆ ಪ್ರಚೋದನೆ ಮಾಡುತ್ತಿದ್ದ ದೇಶದ್ರೋಹಿ ಕೃತ್ಯ ಎಸಗುತಿತ್ತು. ಪೊಲೀಸರು ಅಲರ್ಚ್ ಆಗಿದ್ದಾರೆ. ಅವರ ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ. ದೇಶದ್ರೋಹದ ಬಗ್ಗೆ ಸರಿಯಾದ ಸಾಕ್ಷ ಲಭಿಸಿದ ಹಿನ್ನೆಲೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದರು.
ರಾಜ್ಯದಲ್ಲಿ ವಶಕ್ಕೆ ಪಡೆದವರ ಪಿಎಫ್‌ಐ ಕಾರ್ಯಕರ್ತರ ವಿಳಾಸ, ಆದಾಯದ ಮೂಲ ಪತ್ತೆ ಹಚ್ಚಿದ್ದಾರೆ. ದೇಶದ್ರೋಹ ಚಟುವಟಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಕೃತ್ಯದಲ್ಲಿ ಭಾಗಿಯಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಮಿ ಇನ್ನೊಂದು ಮುಖ ಪಿಎಫ್‌ಐ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪಿಎಫ್‌ಐ ಸಂಘಟನೆ ಮೇಲಿದ್ದ ಕೇಸ್ ವಾಪಸ್ ತಗೊಂಡಿದ್ದರು. ಇಂತಹ ಸಂಘಟನೆ ಬೆಳೆಯಲು ಅವರೇ ಕಾರಣ. ಪಿಎಫ್‌ಐ ಸಂಘಟನೆ ನಿಷೇಧ ಅವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ, ಈ ರೀತಿ ಅವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಇದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಶಿವಮೊಗ್ಗದ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದರಿಂದಾಗಿ ಹಲವು ಲಿಂಕ್ ಸಿಕ್ಕಿತು. ಎಷ್ಟೋ ಕೊಲೆ ನಡೆಯುವುದನ್ನು ತಪ್ಪಿಸಿದ್ದಾರೆ ಎಂದರು.
ಪಿಎಫ್‌ಐ ದಾಳಿ ವೇಳೆ ಸಾವರ್ಕರ್ ಸೇರಿ ಹಲವು ಪುಸ್ತಕ, ಹಣ ಪತ್ತೆ
ಧರ್ಮದ ಆಧಾರದ ಮೇಲೆ ಬ್ಯಾನ್ ಮಾಡಿಲ್ಲ:
ಧರ್ಮದ ಆಧಾರದ ಮೇಲೆ ಎಫ್‌ಐ ಬ್ಯಾನ್ ಮಾಡಿಲ್ಲ. ಅವರ ದೇಶ ವಿರೋಧಿ ಕೃತ್ಯ ಮತ್ತು ಚಟುವಟಿಕೆಗಳನ್ನು ಗಮನಿಸಿ ಬ್ಯಾನ್ ಮಾಡಿದೆ. ಅವರ ಮಾನಸಿಕತೆ ಬದಲಾಗಬೇಕಿದೆ. ಬ್ಯಾನ್ ಮಾಡಿದ ನಂತರವೂ ಅವರು ಬೇರೆ ರೂಪದಲ್ಲಿ ಬರುವ ಸಾಧ್ಯತೆ ಇರುವುದರಿಂದ ಪೊಲೀಸರು ಅವರ ಮೇಲೆ ಗಮನ ಇಡಲಿದ್ದಾರೆ. ಹಾಗೆ ಬಂದರೆ ಕಾನೂನು ಕ್ರಮ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ಶಿವಮೊಗ್ಗದಲ್ಲಿ ಅನೇಕ ಲಿಂಕ್ ಸಿಕ್ಕಿದೆ:
ಶಿವಮೊಗ್ಗದಲ್ಲಿ ಮೊನ್ನೆ ನಡೆದ ದಾಳಿಯಲ್ಲಿ ಅನೇಕರ ವಿಳಾಸ, ಆಸ್ತಿ ಗೊತ್ತಾಗಿದೆ, ಪೋನ್ ನಂಬರ್ ಪತ್ತೆಯಾಗಿದೆ. ಅವರ ಮೇಲೆ ನಿಗಾ ಇಡಲಾಗಿದೆ. ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನದಿಂದ ಅನೇಕ ಲಿಂಕ್ ಸಿಕ್ತು. ಬರೀ ಎಫ್‌ಐಆರ್ ಹಾಕಿದ್ದರೆ ಏನೂ ಆಗುತ್ತಿರಲಿಲ್ಲ. ಗಂಭೀರವಾಗಿ ತನಿಖೆ ಆದ ಕಾರಣ ಅನೇಕ ದಾಳಿ, ಬಾಂಬ್ ತಯಾರಿ, ಕೊಲೆ ಮತ್ತಿತರ ದುರ್ಘಟನೆ ತಪ್ಪಿದ್ದು, ಪೊಲೀಸರನ್ನು ಅಭಿನಂದಿಸುತ್ತೇನೆ. ಪಿಎಫ್‌ಐ ಬ್ಯಾನ್ ನಂತರ ಎದುರಾಗಬಹುದಾದ ಪರಿಸ್ಥಿತಿ ಎದುರಿಸಲು ಇಲಾಖೆ ಸಿದ್ಧವಾಗಿದೆ. ಇದು ದೇಶದ ಸುರಕ್ಷತೆ ಪ್ರಶ್ನೆ. ಯಾರೇ ದುಷ್ಕ್ರತ್ಯಕ್ಕೆ ಇಳಿದರೂ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.