ಮಲೆನಾಡಿನ ಜನರಿಗೆ ಕಂಟಕ; ಅರಣ್ಯ ಹಕ್ಕು ಅಧಿಸೂಚನೆ ರದ್ದತಿಗೆ ಶಾಸಕರ ಆಗ್ರಹ

By Kannadaprabha NewsFirst Published Sep 29, 2022, 10:38 AM IST
Highlights
  • ಅಧಿಸೂಚನೆ ರದ್ದತಿಗೆ ಜಿಲ್ಲೆಯ ಶಾಸಕರ ಆಗ್ರಹ
  • ಮಲೆನಾಡಿನ ಜನರಿಗೆ ಕಂಟಕವಾಗಿರುವ ಅಧಿಸೂಚನೆ
  • ಅರಣ್ಯ ಸಮಸ್ಯೆ ಕುರಿತು ಚರ್ಚಿಸಲು ವಿಶೇಷ ಸಭೆ: ಸಚಿವ ಬಸವರಾಜ್‌

ಚಿಕ್ಕಮಗಳೂರು (ಸೆ.29) : ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಲಂ 4(1) ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಜಿಲ್ಲೆಯ ಶಾಸಕರು ಪಕ್ಷಬೇಧ ಮರೆತು ಒಕ್ಕೊರಲಿನಿಂದ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಗ್ರಹಿಸಿದರು.

Forest Dwellers Land Rights ಅರಣ್ಯವಾಸಿಗಳ ಭೂಮಿ ಮಂಜೂರಿಗೆ ಲೋಕಸಭೆಯಲ್ಲಿ ಬಿವೈ ರಾಘವೇಂದ್ರ ಆಗ್ರಹ

ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಶಾಸಕರು ಅರಣ್ಯ ಮತ್ತು ಕಂದಾಯ ಭೂಮಿ ಗೊಂದಲ ಕುರಿತು ಸುಮಾರು ಒಂದು ಗಂಟೆಗಳ ಕಾಲ ಚರ್ಚಿಸಿದರು. 4(1) ಅಧಿಸೂಚನೆಗೆ ಸಂಬಂಧಿಸಿದಂತೆ ಅರಣ್ಯ ವ್ಯವಸ್ಥಾಪನಾಧಿಕಾರಿ ರಾಮಕೃಷ್ಣ ಅವರು ಮಾತನಾಡಿ, ಈ ಅಧಿಸೂಚನೆಗೆ ಸಂಬಂಧಿಸಿದಂತೆ 7168 ಅರ್ಜಿಗಳು ಬಂದಿದ್ದವು. ಈ ಪೈಕಿ 3628 ಅರ್ಜಿಗಳನ್ನು ವಿಚಾರಣೆ ಮಾಡಲಾಗಿದೆ. 1344 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು.

ಇಲ್ಲಿ ಬಂದ ಅರ್ಜಿಗಳು, ಇತ್ಯರ್ಥವಾಗಿರುವ ಅರ್ಜಿಗಳ ಬಗ್ಗೆ ಅಂಕಿ ಅಂಶದ ಅವಶ್ಯಕತೆ ಇಲ್ಲ. ಜನರ ಸಮಸ್ಯೆ ಬಗೆಹರಿಯಬೇಕು. ಮಲೆನಾಡಿನ ಹಲವು ಗ್ರಾಮಗಳಲ್ಲಿ ಜನ ವಸತಿ ಪ್ರದೇಶವಿದೆ. ಸರ್ಕಾರ ಮೂಲಭೂತ ಸವಲತ್ತು ನೀಡಿದೆ. ಅಂತಹ ಪ್ರದೇಶಗಳನ್ನು 4(1) ಅಧಿಸೂಚನೆ ವ್ಯಾಪ್ತಿಯೊಳಗೆ ಸೇರಿಸಲಾಗಿದೆ ಎಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದರು.

ವಿಧಾನಪರಿಷತ್‌ ಸದಸ್ಯ ಎಂ.ಕೆ. ಪ್ರಾಣೇಶ್‌, ಶೃಂಗೇರಿ ಕ್ಷೇತ್ರ ಶಾಸಕ ಟಿ.ಡಿ. ರಾಜೇಗೌಡ ಅವರು ಧ್ವನಿಗೂಡಿಸಿ, ಅಂತಿಮ ಅಧಿಸೂಚನೆ ಹೊರಡಿಸುವ ಮುನ್ನ ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಮಾಡಬೇಕೆಂದು ಆಗ್ರಹಿಸಿದರು. ಅರ್ಜಿಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು ಬಾಳೆಹೊನ್ನೂರಿನಲ್ಲಿ ಅರಣ್ಯ ವ್ಯವಸ್ಥಾಪನಾಧಿಕಾರಿಗಳ ಕಚೇರಿಯನ್ನು ತೆರೆಯಬೇಕೆಂದು ಎಂ.ಕೆ. ಪ್ರಾಣೇಶ್‌ ಹೇಳಿದಾಗ, ಜಿಲ್ಲೆಯಲ್ಲಿ 4(1) ಅಧಿಸೂಚನೆಯನ್ನು ರದ್ದುಪಡಿಸಬೇಕೆಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದರು.

ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌ ಮಾತನಾಡಿ, 1987 ರಿಂದ 2013ರವರೆಗೆ ಅರಣ್ಯಹಕ್ಕು ಕಲಂ 4(1) ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಈವರೆಗೆ ಇಂಡೀಕರಣ ಮಾಡಿಲ್ಲ. ಅಧಿಸೂಚನೆ ಹೊರಡಿಸುವ ಮೊದಲೇ ಸ್ವಾಧೀನ ಇದ್ದಿದ್ದರೆ ಸಮರ್ಪಕವಾದ ದಾಖಲಾತಿಯನ್ನು ನೀಡಬೇಕು ಎಂದರು. ಜಿಲ್ಲೆಯಲ್ಲಿ ಸುಮಾರು 1018 ಪಹಣಿಗಳಲ್ಲಿ ಕಂದಾಯ ಮತ್ತು ಅರಣ್ಯ ಎಂಬುದಾಗಿ ನಮೂದನೆ ಆಗಿತ್ತು. ಈ ಪ್ರಕರಣಗಳಲ್ಲಿ 463 ಆರ್‌ಟಿಸಿಗಳನ್ನು ಸರಿಪಡಿಸಿ ಕಂದಾಯ ಭೂಮಿ ಎಂಬುದಾಗಿ ದಾಖಲಿಸಲಾಗಿದೆ ಎಂದು ಹೇಳಿದರು.

ಇಂಡೀಕರಣ:

ಕೆಲವು ಶಾಲಾ ಕಟ್ಟಡಗಳು ಹಾಳಾಗಿ ಮುಚ್ಚುವ ಸ್ಥಿತಿಯಲ್ಲಿವೆ. ಅಂತಹ ಕಟ್ಟಡಗಳನ್ನು ಬೇರೆ ಉದ್ದೇಶಗಳಿಗೆ ಬಳಸಬೇಕು ಎಂದು ಹೇಳಿದ ರಾಜೇಗೌಡ, ಖಾಸಗಿ ಸ್ವತ್ತಿನಲ್ಲಿ ಕೆಲವು ಸರ್ಕಾರಿ ಶಾಲೆಗಳ ಕಟ್ಟಡಗಳು ಇವೆ. ಅಂತಹ ಕಡೆಗಳಲ್ಲಿ ಆ ಜಾಗವನ್ನು ಶಾಲೆಯ ಹೆಸರಿಗೆ ಖಾತೆ ಮಾಡಿಕೊಳ್ಳಬೇಕೆಂದು ಹೇಳಿದರು. ಶಾಲಾ ಕಟ್ಟಡ ಇವರು ಜಾಗಕ್ಕೆ ಸಂಬಂಧಿಸಿದಂತೆ 11ಬಿ ನೀಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಪಂ ಸಿಇಓ ಪ್ರಭು ಅವರು ಉತ್ತರಿಸಿದರು. ವಿಧಾನಪರಿಷತ್‌ ಸದಸ್ಯಎಸ್‌.ಎಲ್‌. ಭೋಜೇಗೌಡ ಮಾತನಾಡಿ, ಹಲವು ಶಾಲೆಗಳಲ್ಲಿ ಶೌಚಾಲಾಯಗಳಿಲ್ಲ, ಕಾಂಪೌಂಡ್‌ಗಳಿಲ್ಲ, ಆದ್ಯತೆಯ ಮೇಲೆ ಅವುಗಳನ್ನು ನಿರ್ಮಾಣ ಮಾಡಬೇಕೆಂದು ಹೇಳಿದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿಖಾ, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್‌ ಇದ್ದರು.

Chikkamagaluru: ಹಸಿರು ಪರ್ವತಕ್ಕೆ ನೀಲಿ ಹೊದಿಕೆ; ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸಿದ ಕುರಂಜಿ ಹೂ

ಅರಣ್ಯ ಇಲಾಖೆಯಿಂದ ಆಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು 15 ದಿನಗಳೊಳಗೆ ಪ್ರತ್ಯೇಕವಾಗಿ ವಿಶೇಷ ಸಭೆಯನ್ನು ಕರೆಯಲಾಗುವುದು. ಅಗತ್ಯ ಬಿದ್ದರೆ ಮುಖ್ಯಮಂತ್ರಿಗಳ ಬಳಿ ಹೋಗೋಣ.

ಭೈರತಿ ಬಸವರಾಜ್‌ ಜಿಲ್ಲಾ ಉಸ್ತುವಾರಿ ಸಚಿವ

click me!