ಸಿದ್ದರಾಮಯ್ಯ ಸ್ಪರ್ಧೆ : ಗೊಂದಲಗಳಿಗೆ ತೆರೆ ಎಳೆದ ಪುತ್ರ ಯತೀಂದ್ರ

By Kannadaprabha NewsFirst Published Jan 31, 2023, 7:33 AM IST
Highlights

ರಾಜ್ಯದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೈಸೂರಿನ ವರುಣ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ, ಕೋಲಾರ ವಿಧಾನ ಸಭಾ ಕ್ಷೇತ್ರದಿಂದಲೇ ಚುನಾವಣೆಗೆ ಸ್ವರ್ಧಿಸುತ್ತಾರೆ ಎಂದು ವರುಣ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗು ಸಿದ್ದರಾಮಯ್ಯರ ಪುತ್ರ ಡಾ.ಯತೀಂದ್ರ ಸ್ಪಷ್ಟಪಡಿಸಿದರು.

  ಕೋಲಾರ : ರಾಜ್ಯದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೈಸೂರಿನ ವರುಣ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ, ಕೋಲಾರ ವಿಧಾನ ಸಭಾ ಕ್ಷೇತ್ರದಿಂದಲೇ ಚುನಾವಣೆಗೆ ಸ್ವರ್ಧಿಸುತ್ತಾರೆ ಎಂದು ವರುಣ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗು ಸಿದ್ದರಾಮಯ್ಯರ ಪುತ್ರ ಡಾ.ಯತೀಂದ್ರ ಸ್ಪಷ್ಟಪಡಿಸಿದರು.

ಸೋಮವಾರ ಕೋಲಾರಕ್ಕೆ ಭೇಟಿ ನೀಡಿ ಸಿದ್ದರಾಮಯ್ಯರಿಗಾಗಿ ಬಸವನತ್ತ ಗ್ರಾಮದಲ್ಲಿ ಬಾಡಿಗೆಗೆ ಪಡೆದಿರುವ ಮನೆಯನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್‌ ಹೈಮಾಂಡ್‌ ಯಾವ ಕ್ಷೇತ್ರದಲ್ಲಿ ಸ್ವರ್ಧಿಸಲು ಟಿಕೆಟ್‌ ನೀಡಿದಲ್ಲಿ ಆ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ತಿಳಿಸಿರುವುದು ಪಕ್ಷದ ಸಂಪ್ರದಾಯದ ಪಾಲನೆಯಾಗಿದೆ. ಕೋಲಾರದಿಂದ ಸ್ಪರ್ಧಿಸಲು ಹೈಕಮಾಂಡ್‌ ಸಮ್ಮತಿ ಸಿಗಲಿದೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ತಿಳಿಸಿದರು.

ಕೋಲಾರ ಕ್ಷೇತ್ರದಿಂದಲೇ ಸ್ಪರ್ಧೆ

ಬಾದಾಮಿ ಕ್ಷೇತ್ರದ ಜನತೆ ಸಹ ಚುನಾವಣೆಗೆ ಸ್ಪರ್ಧಿಸಬೇಕೆಂದು ಆಹ್ವಾನಿಸುತ್ತಿದ್ದಾರೆ. ಹೆಲಿಕಾಪ್ಟರ್‌ನ್ನು ನಾವೇ ಕೊಡಿಸುತ್ತೇವೆ, ಚುನಾವಣೆಯ ವೆಚ್ಚವನ್ನು ನಾವೇ ಭರಿಸುತ್ತೇವೆ, ನೀವು ನಾಮಪತ್ರ ಸಲ್ಲಿಸಿ ಸಾಕು ಎಂದು ಒತ್ತಾಯಿಸಿದರು, ಆದರೆ ಸಿದ್ದರಾಮಯ್ಯ ಕೋಲಾರದ ಜನತೆಯು ತೋರುತ್ತಿರುವ ಅಭಿಮಾನದಿಂದಾಗಿ ಕೋಲಾರದಿಂದಲೇ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಕೋಲಾರ ಕಾಂಗ್ರೆಸ್‌ನ ಭದ್ರಕೋಟೆ. ಇಲ್ಲಿಂದಲೇ ನಮ್ಮ ತಂದೆ ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸಿದ್ದಾರೆ, ಇಲ್ಲಿನ ಕಾರ್ಯಕರ್ತರು, ಮುಖಂಡರು ನಮ್ಮ ತಂದೆಯನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.

ದೈವವಾಣಿ ಅದೊಂದು ಆಕಸ್ಮಿಕ

ಎರಡು ಕಡೆ ಸ್ಪರ್ಧಿಸಬೇಕೆಂದು ದೈವವಾಣಿ ಹೇಳಿರುವುದಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದಾಗ, ನಾವು ಹೋಗಿದ್ದು ಆಕ್ಮಸಿಕ, ಅಲ್ಲದೆ ಅದು ನಮ್ಮ ಮನೆಯ ದೇವರಲ್ಲ. ಅದು ನಮ್ಮ ದೈವವಾಣಿಯೂ ಅಲ್ಲ. ನಾವುಗಳು ಅಲ್ಲಿ ಏನನ್ನೂ ಕೇಳಲಿಲ್ಲ. ಅದೊಂದು ಆಕಸ್ಮಿಕವಾಗಿ ಆದ ಪ್ರಕರಣವಾಗಿದೆ. ಅದರ ಬಗ್ಗೆ ನಾವುಗಳು ಅಷ್ಟೇನು ಮಾನ್ಯತೆ ನೀಡಿಲ್ಲ ಎಂದು ಉತ್ತರಿಸಿದರು.

40 ವರ್ಷಗಳಿಂದ ನಮ್ಮ ತಂದೆ ಶೋಷಿತರ ಪರವಾಗಿ ಕೆಲಸ ಮಾಡುತ್ತಿದ್ದಾರೆ, ಅದಕ್ಕಾಗಿ ಶ್ರೀಮಂತರು ಮೇಲ್ವರ್ಗದವರು ಮತ್ತು ವಿರೋಧ ಪಕ್ಷದವರು ಒಟ್ಟಾಗಿ ನಮ್ಮ ತಂದೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ವರುಣದಿಂದ ಸ್ಪರ್ಧಿಸುವಂತೆ ನಾನು ನಮ್ಮ ತಂದೆಗೆ ಆಹ್ವಾನ ನೀಡಿದ್ದೆ. ಆದರೆ ಅವರು ಕೋಲಾರದಿಂದ ಸ್ಪರ್ಧೆಗೆ ತೀರ್ಮಾನ ತೆಗೆದುಕೊಂಡಿದ್ದಾರೆ, ಆದಕಾರಣ ನಾನು ನಮ್ಮ ತಂದೆಗಾಗಿ ಕೋಲಾರದಲ್ಲಿ ಹುಡುಕಿರುವ ಬಾಡಿಗೆ ಮನೆಯನ್ನು ವೀಕ್ಷಣೆ ಮಾಡಲು ಬಂದಿದ್ದೇನೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಮನೆಗೆ ಬಾಡಿಗೆಗೆ ಬರುತ್ತಿದ್ದಾರೆಂಬುದು ನಮಗೆ ಖುಷಿಯಾಗಿದೆ, ಅದರಲ್ಲೂ ಸಿದ್ದರಾಮಯ್ಯರ ಮಗ ಡಾ.ಯತೀಂದ್ರ ನಮ್ಮ ಮನೆಗೆ ಆಗಮಿಸಿ ಮನೆ ವೀಕ್ಷಿಸಿರುವುದು ಸಂತಸ ತಂದಿದೆ. ಮನೆಯು ವಾಸ್ತು ಪ್ರಕಾರ ಇದ್ದು, ಮನೆ ಬಾಡಿಗೆ ಎಷ್ಟುಎಂಬುದನ್ನು ಇನ್ನೂ ಮಾತನಾಡಿಲ್ಲ, ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯರ ಗೆಲುವು ಶತಸಿದ್ಧ. ಇದರಲ್ಲಿ ಯಾವುದೇ ಅನುಮಾನವಿಲ್ಲ.

- ಶಂಕರ್‌, ಮನೆ ಮಾಲೀಕ, ಕೋಲಾರ.

ಹೊಸ ಬಾಂಬ್

ಬೆಳಗಾವಿ (ಜ.24) : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧಿಸುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿಕೊಂಡಿದ್ದರೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತ್ರ ಅಂಥ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಕೋಲಾರದಿಂದ ಸ್ಪರ್ಧಿಸಲ್ಲ, ಅವರು ಮೈಸೂರಿಗೆ ಹೋಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಭವಿಷ್ಯ ಹೇಳುತ್ತಿಲ್ಲ. ನನ್ನ ಪ್ರಕಾರ ಸಿದ್ದರಾಮಯ್ಯ((Siddaramaiah) ಕೋಲಾರದಿಂದ ಸ್ಪರ್ಧಿಸುವುದಿಲ್ಲ. ಅವರು ಮೈಸೂರಿಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಆದರೂ ಅವರು ರಾಜಕೀಯ ನಾಟಕ ಮಾಡುತ್ತಿದ್ದಾರೆ. ಒಮ್ಮೆ ಎಲ್ಲಿ ನಿಲ್ಲುತ್ತಾರೆಂದು ಖಚಿತವಾದ ಬಳಿಕ ನಾವು ನಮ್ಮ ಮುಂದಿನ ತಂತ್ರಗಾರಿಕೆ ಮಾಡಬೇಕು, ಅದನ್ನು ಮಾಡುತ್ತೇವೆ. ಸಿದ್ದರಾಮಯ್ಯ ಎರಡು ಕಡೆಯಾದರೂ ಸ್ಪರ್ಧೆ ಮಾಡಲಿ, ಮೂರು ಕಡೆಯಾದರೂ ಸ್ಪರ್ಧೆ ಮಾಡಲಿ, ಅವರು ಸೋತು ಮನೆಗೆ ಹೋಗುವುದಂತು ನಿಶ್ಚಿತ ಎಂದರು.

Assembly election: ಸಿದ್ದು ಆಯ್ತು, ಈಗ ಶ್ರೀರಾಮುಲು ಕ್ಷೇತ್ರ ಚರ್ಚೆ: ಬೆಳಗಾವಿಯಲ್ಲಿ ಮಸೀದಿ ಪಾಲಿಟಿಕ್ಸ್

ಬಿಜೆಪಿಯಲ್ಲಿ ಮಾಸ್‌ ಲೀಡರ್‌ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ಪಕ್ಷದಲ್ಲಿ ಯಾರು ಮಾಸ್‌ ಲೀಡರ್‌ ಇದ್ದಾರೆ. ನಮಗಾದರೂ ಪ್ರಧಾನಿ ಮೋದಿ ಎಂಬ ಒಬ್ಬ ಮಹಾನ್‌ ನಾಯಕ ಇದ್ದಾರೆ. ಅವರೇನು ರಾಹುಲ… ಗಾಂಧಿ ಹಿಡಿದುಕೊಂಡು ಓಡಾಡುತ್ತಾರಾ? ಅವರಿಗೆ ಯಾರಿದ್ದಾರೆ? ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ರಾಷ್ಟ್ರಮಟ್ಟದಲ್ಲಿ ಹಾಗೂ ಎಲ್ಲ ರಾಜ್ಯಗಳನ್ನು ಏಕೆ ಅಧಿಕಾರ ಕಳೆದುಕೊಂಡಿದೆ? ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ರೀತಿ ಹೇಳಿಕೆಗಳಿಂದ ಅವರು ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ನೂರಕ್ಕೆ ನೂರು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು. 

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ: ಹಳೆ ಮೈಸೂರು ಭಾಗದಲ್ಲಿ ಯಾವ ಪಕ್ಷಕ್ಕೆ ನಷ್ಟ?

click me!