Hubballi: ಭಗತ್ ಸಿಂಗ್ ಪುತ್ಥಳಿ ಸ್ಥಾಪನೆಗೆ ರಕ್ತದಲ್ಲಿ ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ಯುವ ಮುಖಂಡ

By Girish Goudar  |  First Published Apr 3, 2022, 4:46 PM IST

*  ತಮ್ಮ ಜನ್ಮದಿನದ ಪ್ರಯುಕ್ತ ನರೇಂದ್ರ ಮೋದಿಗೆ ಪತ್ರ ಬರೆದ ಶ್ರೀಧರ
*  ಭಗತ್‌ ಸಿಂಗ್ ಅವರ ಪುತ್ಥಳಿ ಸ್ಥಾಪಿಸುವಂತೆ ಮನವಿ
* ಮುಂದಿನ ಪೀಳಿಗೆಗೆ ಭಗತ್‌ ಸಿಂಗ್ ಪರಿಚಯಿಸುವ ಸದುದ್ದೇಶದಿಂದ ಇಂತಹ ಕಾರ್ಯಕ್ಕೆ ಮುಂದಾದ ಸಾಂಗ್ಲಿಕರ್


ಹುಬ್ಬಳ್ಳಿ(ಏ.03):  ಭಾರತದ(India) ಸ್ವಾತಂತ್ರ್ಯ(Freedom) ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರ ಅಂದ್ರೆ ಅದು ಭಗತ್ ಸಿಂಗ್, ಭಗತ್ ಸಿಂಗ್ ತಾಕತ್ತು ಇವತ್ತಿಗೂ ಕೋಟ್ಯಂತರ ಭಾರತೀಯರಿಗೆ ಪ್ರೇರಣೆ, ರೋಲ್ ಮಾಡೆಲ್ ಕೂಡ ಹೌದು‌. ಇಲ್ಲೊಬ್ಬ ಅಭಿಮಾನಿ ಭಗತ್ ಸಿಂಗ್ ಪುತ್ಥಳಿ ಸ್ಥಾಪನೆಗೆ ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದು ಸುದ್ದಿಯಾಗಿದ್ದಾನೆ.

Tap to resize

Latest Videos

ಹೌದು, ಹೀಗೆ ತನ್ನ ರಕ್ತದಲ್ಲಿ ಪತ್ರ ಬರೆದ ವ್ಯಕ್ತಿ ಹೆಸರು ಶ್ರೀಧರ್ ಸಾಂಗ್ಲಿಕರ್. ಹುಬ್ಬಳ್ಳಿಯ(Hubballi) ಭಗತ್ ಸಿಂಗ್(Bhagat Singh) ಯುವಕ ಮಂಡಳದ ಅಧ್ಯಕ್ಷರೂ ಆಗಿರುವ ಶ್ರೀಧರ ಸಾಂಗ್ಲಿಕರ್, ತಮ್ಮ ಜನ್ಮದಿನದ ಪ್ರಯುಕ್ತವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಹೊಸೂರಿನ ಗಾಳಿ ದುರ್ಗಮ್ಮ ದೇವಿಯ ದೇವಸ್ಥಾನದ ಹತ್ತಿರದಲ್ಲಿರುವ ಭಗತ್ ಸಿಂಗ್ ಸರ್ಕಲ್‌ನಲ್ಲಿ ದೊಡ್ಡ ಪ್ರಮಾಣದ ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್ ಅವರ ಪುತ್ಥಳಿಯನ್ನು(Statue) ಸ್ಥಾಪಿಸುವಂತೆ ಮನವಿ ಮಾಡಿದ್ದಾರೆ.

Karnataka Politics ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಘೋಷಣೆ

ಈಗಾಗಲೇ ಪುತ್ಥಳಿ ಸ್ಥಾಪನೆಗೆ ಮಹಾನಗರ ಪಾಲಿಕೆ, ಸ್ಥಳೀಯ ಜನ ಪ್ರತಿನಿಧಿಗಳಿಗೆ ಮನವಿ ಮಾಡಿದ್ದ ಸರಿಯಾದ ಸ್ಪಂದಿಸಿಲ್ಲ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರ(Narendra Modi) ಬಳಿ ಮನವಿ ಮಾಡಿದ್ದಾರೆ.
ಅಂದ ಹಾಗೆ ಇಂದು ಈ ಯುವ ಮುಖಂಡನ ಹುಟ್ಟುಹಬ್ಬ. ಇದೇ ಕಾರಣಕ್ಕೆ ಭಗತ್ ಸಿಂಗ್ ಪುತ್ಥಳಿ ಸ್ಥಾಪನೆಗೆ ಪಣತೊಟ್ಟು ಈ ರೀತಿ ರಕ್ತದಲ್ಲಿ ಎರಡು ಪುಟಗಳ ಪತ್ರ ಬರೆದಿದ್ದಾರೆ. ಕ್ರಾಂತಿವೀರ ಭಗತ್‌ ಸಿಂಗ್ ಅವರ ಮೇಲಿನ ಅಪಾರ ಅಭಿಮಾನದಿಂದ ಹಾಗೂ ಮುಂದಿನ ಪೀಳಿಗೆಗೆ ಭಗತ್‌ ಸಿಂಗ್ ಅವರ ಪರಿಚಯಿಸುವ ಸದುದ್ದೇಶದಿಂದ ಇಂತಹದೊಂದು ಕಾರ್ಯಕ್ಕೆ ಮುಂದಾಗಿದ್ದಾರೆ‌ ಶ್ರೀಧರಸಿಂಗ ಸಾಂಗ್ಲಿಕರ. 

ಮುಸ್ಲಿಮರಿಗಿಂತ ಬಿಜೆಪಿಯವರೇ ಹೆಚ್ಚು ಖುರಾನ್ ಓದುತ್ತಿದ್ದಾರೆ: ತಮಟಗಾರ

ಧಾರವಾಡ‌‌‌‌: ಬಿಜೆಪಿಯವರು(BJP) ಸಂವಿಧಾನದ ಬದಲು ಖುರಾನ್(Quran) ಓದುತ್ತಿದ್ದಾರೆ. ಮುಸ್ಲಿಮರಿಗಿಂತ ಬಿಜೆಪಿಯವರೇ ಹೆಚ್ಚು ಖುರಾನ್ ಓದುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಇಸ್ಮಾಯಿಲ್ ತಮಟಗಾರ(Ismail Tamatagar) ಹೇಳಿದ್ದಾರೆ.

ಇಂದು(ಭಾನುವಾರ) ಧಾರವಾಡ(Dharwad) ಸರ್ಕಿಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಇಸ್ಮಾಯಿಲ್ ತಮಟಗಾರ ಅವರು, ಹಲಾಲ್(Halal) ಕಟ್, ಝಟ್ಕಾ(Jhatka) ಕಟ್ ಕುರಿತು ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಧಾರವಾಡದ ಅಂಜುಮನ್‌ ವಾಣಿಜ್ಯ ಕಟ್ಟಡದಲ್ಲಿ ಶೇ. 50 ರಷ್ಟು ಹಿಂದೂಗಳ(Hindu) ಅಂಗಡಿಗಳಿವೆ. ಹಿಂದೂಗಳು, ಮುಸ್ಲಿಂರ(Muslim) ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ ಅಂತಾ ಹೇಳಲು ತಾಕತ್ ಇದೆಯಾ? ಧಾರವಾಡದಲ್ಲಿ ಹಿಂದೂ ಮುಸ್ಲಿಂರು ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದಾರೆ. ಮುಸ್ಲಿಂರು ಮುಂದಿನ ದಿನಗಳಲ್ಲಿ ಮಸೀದಿ ಬದಲು ಶಾಲಾ ಕಾಲೇಜು ಕಟ್ಟುತ್ತಾರೆ ಅಂತ ಹೇಳಿದ್ದಾರೆ. 

ಸರಕು ಸಾಗಾಣಿಕೆಯಿಂದ ಬರೊಬ್ಬರಿ 4160 ಕೋಟಿ ರೂ. ಲಾಭ ಗಳಿಸಿದ ನೈಋತ್ಯ ರೈಲ್ವೆ

ಎರಡು ವರ್ಷದಲ್ಲಿ ರಾಜ್ಯದಲ್ಲಿ(Karnataka) ಇನ್ನೂರಕ್ಕೂ ಹೆಚ್ಚು ಮಹಿಳಾ ಕಾಲೇಜುಗಳು(Women Colleges) ಸ್ಥಾಪನೆಯಾಗುತ್ತವೆ. ಅಂಜುಮನ್‌ ಕಾಲೇಜಿನಲ್ಲಿ ಶೇ.40 ರಷ್ಟು ಹಿಂದೂ ವಿಧ್ಯಾರ್ಥಿಗಳಿದ್ದಾರೆ. ನಮ್ಮಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳಿದ್ದಾರೆ. ಎಲ್ಲರ ಧರ್ಮವನ್ನು ಅಂಜುಮನ್ ಗೌರವಿಸುತ್ತದೆ. ಮುಂದಿನ ದಿನಗಳಲ್ಲಿ ಹಿಜಾಬ್‌ಗೆ ಎಲ್ಲಿ ಅವಕಾಶ ಇದೆಯೋ ಅಲ್ಲಿ ಕಲಿಯುತ್ತಾರೆ. ಬಿಜೆಪಿ ಸರ್ಕಾರ, ಸಮಾಜದ ಸಾಮರಸ್ಯ ಹಾಳು ಮಾಡುತ್ತಿದೆ ಎಂದು ಇಸ್ಮಾಯಿಲ್ ತಮಟಗಾರ ಬಿಜೆಪಿ ಸರ್ಕಾರದ(BJP Government) ವಿರುದ್ಧ ಹರಿಹಾಯ್ದಿದ್ದಾರೆ.  

ಹಲಾಲ್ v/s ಝಟ್ಕಾ ಕಟ್, ಸ್ಟನ್ನಿಂಗ್ ಕಡ್ಡಾಯ ಆದೇಶ ಹೊರಡಿಸಿಲ್ಲ: ಪ್ರಭು ಚವ್ಹಾಣ್ ಸ್ಪಷ್ಟನೆ

ಬೆಂಗಳೂರು: ಹಲಾಲ್‌ ಕಟ್ v/s ಝಟ್ಕಾ ಕಟ್ ನಡುವಿನ ವಿವಾದದ ಮಧ್ಯೆ ಪಶುಪಾಲನಾ ಇಲಾಖೆ ಎಂಟ್ರಿ ಕೊಟ್ಟಿದ್ದು, ಆದೇಶ ಪ್ರತಿಯೊಂದು ವರಲ್ ಆಗುತ್ತಿದೆ. ಇನ್ಮುಂದೆ ಆಹಾರಕ್ಕಾಗಿ ಪ್ರಾಣಿ  ವಧೆ ಮಾಡುವಾಗ ಪ್ರಾಣಿಗಳಿಗೆ ಹಿಂಸೆ ನೀಡಬಾರದು. ಆಹಾರಕ್ಕಾಗಿ ಪ್ರಾಣಿ ವಧೆ ಮಾಡುವವರು ಇನ್ಮುಂದೆ  ಸ್ಟನ್ನಿಂಗ್ (Stunning) ವಿಧಾನ ಕಡ್ಡಾಯಗೊಳಿಸುವಂತೆ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಉಮಾಪತಿ ಆದೇಶಿಸಿದ್ದಾರೆ.  ಆದ್ರೆ, ಸ್ಟನ್ನಿಂಗ್ ಕಡ್ಡಾಯ ನಿಯಮ ಆದೇಶವನ್ನು ನಾವು ಹೊರಡಿಸಿಲ್ಲ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸ್ಪಷ್ಟಪಡಿಸಿದ್ದಾರೆ.
 

click me!