* ಜೋಡೆತ್ತಿನ ಓಟದಲ್ಲಿ ಮಿಂಚಿದ್ದ ಮಿಲನ್ ಸಾವು
* ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ರಾಸು ಸಾವು
* ಮಿಲನ್ ಶವಯಾತ್ರೆ ನಡೆಸಿ ಅಂತ್ಯಸಂಸ್ಕಾರ
ವರದಿ: ಆಲ್ದೂರು ಕಿರಣ್ ಏಷ್ಯಾ ನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು(ಏ.03): ಜೋಡೆತ್ತಿನ ಗಾಡಿ ಸ್ಪರ್ಧೆ ಎಲ್ಲೇ ನಡೆದರೂ ಅಲ್ಲಿ ಈ ಹೋರಿ(Bull) ಹಾಜರ್, ಯಾರೆಷ್ಟೇ ಪೈಪೋಟಿ ನೀಡಿದರು ಗೆಲುವು ಮಾತ್ರ ಮಿಲನ್(Milan) ನದ್ದೇ, ಜಿಂಕೆಯಂತೆ ಓಡುತ್ತಿದ್ದ ಹೋರಿ ಇದ್ದಕ್ಕಿದ್ದಂತೆ ಅಸ್ತವ್ಯಸ್ತವಾಗಿದೆ. ಸೂಕ್ತ ಸಮಯಕ್ಕೆ ಪಶುವೈದ್ಯಾಧಿಕಾರಿಗಳು(Veterinary Doctors) ಚಿಕಿತ್ಸೆ ನೀಡಿದೇ ಮೃತಪಟ್ಟಿರುವ ಆರೋಪ ಇದೀಗ ಕೇಳಿಬಂದಿದೆ.
ಮಲೆನಾಡಿನ ಪ್ರಖ್ಯಾತ ರಾಸು ಮಿಲನ್ ಸಾವು
ಚಿಕ್ಕಮಗಳೂರು(Chikkamagaluru) ಭಾಗದಲ್ಲಿನ ಜೋಡೆತ್ತಿನ ಗಾಡಿ ಸ್ಪರ್ಧೆಗಳಲ್ಲಿ ಜಯಗಳಿಸಿದ್ದ ಮಿಲನ್ ಪ್ರಖ್ಯಾತಿಯ ಹೋರಿಯೊಂದು ತೀವ್ರ ಅನಾರೋಗ್ಯದಿಂದ ಬಳಲಿದ್ದು ಸ್ಥಳೀಯ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾವನ್ನಪ್ಪಿದೆ ಎನ್ನುವ ಆರೋಪ ಕೇಳಿಬಂದಿದೆ. ಚಿಕ್ಕಮಗಳೂರು, ಮೈಸೂರು, ಹಾಸನ ಅಜ್ಜಂಪುರ, ತರೀಕೆರೆ ಸೇರಿದಂತೆ ಕಡೂರು ಭಾಗದಲ್ಲಿ ಏರ್ಪಡಿಸಲಾಗಿದ್ದ ಸ್ಪರ್ಧೆಗಳಲ್ಲಿ ಸಾಕಷ್ಟು ಘಟಾನುಘಟಿ ಹೋರಿಗಳೊಂದಿಗೆ ಪೈಪೋಟಿ ನೀಡಿದ್ದ ಮಿಲನ್ ಇಂದು ಕೊನೆಯುಸಿರಿಳೆದಿದೆ. ಚಿಕ್ಕಮಗಳೂರು ಜಿಲ್ಲೆ ನಿಂಗೇನಹಳ್ಳಿಯ ಗ್ರಾಮದ ನಿಂಗೇಗೌಡ ಎಂಬವರು ಮಿಲನ್ ಹೋರಿಯ ಮಾಲೀಕರಾಗಿದ್ದು ಸತತವಾಗಿ 5ವರ್ಷಗಳಿಂದ ಇದರ ಪೋಷಣೆಯಲ್ಲಿ ನಿರತರಾಗಿದ್ದರು. ಸರಿಸುಮಾರು 5 ಲಕ್ಷಕ್ಕೆ ಬೆಲೆಬಾಳುವ ರಾಸು ಇದಾಗಿದ್ದು ಕಳೆದ 2 ವಾರಗಳ ಹಿಂದೆ ಇದಕ್ಕೆ ಹಲವು ಹೋರಿ ಮಾಲೀಕರು 4.5 ಲಕ್ಷ ಬೆಲೆಯಲ್ಲಿ ಖರೀದಿಗೆ ಕೇಳಿದ್ದರು.
ಎರಡು ಎತ್ತುಗಳ ನಡುವಿನ ಜಗಳ ಬಿಡಿಸಿದ ಗೂಳಿ... ನೋಡಿ ವೈರಲ್ ವಿಡಿಯೋ
ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ರಾಸು ಸಾವು
ಸದೃಢ ಮೈಕಟ್ಟು, ಬಳಿ ಬಣ್ಣ ಹೊಂದಿದ್ದ ಮಿಲನ್ ಅಖಾಡದಲ್ಲಿ ತನ್ನದೇ ಆದ ಹೆಸರು ಗಳಿಸಿತ್ತು. ಸದ್ಯ ಮೂರು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಈ ಹೋರಿಯನ್ನು ಸ್ಥಳೀಯ ಪಶು ಆಸ್ಪತ್ರೆಗೆ ತೋರಿಸಿದ್ದರು. ಪಶುವೈದ್ಯಕೀಯ ಆಸ್ಪತ್ರೆಯ ವೈದ್ಯರು ಸೂಕ್ತ ಚಿಕಿತ್ಸೆ(Treatment) ನೀಡಿದೇ ರಾಸು ಮೃತಪಟ್ಟಿದೆ ಎನ್ನುವ ಆರೋಪವನ್ನು ನಿಂಗೇಗೌಡ್ರು ಮಾಡುತ್ತಿದ್ದಾರೆ.
ಸದ್ಯ ಮಲ್ಲೇನಹಳ್ಳಿಯ ಪಶುವೈದ್ಯಕೀಯ ಚಿಕಿತ್ಸಾಲಯದಲ್ಲಿ ಮಹಿಳಾ ವೈದ್ಯರು ನೇಮಕಗೊಂಡಿದ್ದು, ಈ ವೈದ್ಯೆ ಹಾಗೂ ಕಾಂಪೌಂಡರ್ ಎಲ್ಲ ಸಂಧರ್ಭದಲ್ಲಿ ಕಚೇರಿಯಲ್ಲಿ ಲಭ್ಯವಿಲ್ಲವಿರುವುದಿಲ್ಲ. ಗ್ರಾಮದ ದನಕರುಗಳ ಪೋಷಣೆ , ಚಿಕಿತ್ಸೆಯಲ್ಲಿ ನಿಗವಹಿಸುತ್ತಿಲ್ಲ ಎನ್ನುವ ಆರೋಪ ಗ್ರಾಮಸ್ಥರದ್ದು.
ಮಿಲನ್ ಶವಯಾತ್ರೆ ನಡೆಸಿ ಅಂತ್ಯಸಂಸ್ಕಾರ
ಪ್ರೀತಿಯಿಂದ ಸಾಕಿ ಸಲುಹಿದ ರಾಸು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಮನೆಯವರಲ್ಲಿ ಸೂತಕದ ಛಾಯೆ ಮನೆಮಾಡಿತ್ತು. ಮಿಲನ್ ಶವಯಾತ್ರೆ ಗ್ರಾಮದಲ್ಲಿ ನಡೆಸಿ, ನಿಂಗೇಗೌಡರ ಜಮೀನಿನಲ್ಲಿ ಅಂತ್ಯಸಂಸ್ಕಾರ(Funeral) ಮಾಡಲಾಗಿದೆ.
26 ಲಕ್ಷ ನೀಡಿ ಹಳ್ಳಿಕಾರ್ ಹೋರಿ ಖರೀದಿಸಿದ ಶಾಸಕ ಜಯರಾಮ್!
ತುರುವೇಕೆರೆ: ಶಾಸಕ ಮಸಾಲ ಜಯರಾಮ್ (Masala Jayaram) ಅವರು 26 ಲಕ್ಷ ರೂ.ಗೆ ಏಕಲವ್ಯ ಎಂಬ ಹೆಸರಿನ ಹಳ್ಳಿಕಾರ್ ಹೋರಿಯನ್ನು ಖರೀದಿ ಮಾಡಿದ್ದಾರೆ. ಅಳಿವಿನಂಚಿನಲ್ಲಿರುವ ಹಳ್ಳಿಕಾರ್ ತಳಿಯ ಎರಡು ಎತ್ತುಗಳನ್ನು ಜಯರಾಮ್ ಖರೀದಿಸಿದ್ದರು.
ಟಿ.ನರಸೀಪುರ ತಾಲೂಕು ಬನ್ನೂರಿನ ಕೃಷ್ಣೇಗೌಡ (Krishnegowda) ಎಂಬುವವರು ಸಾಕಿದ್ದ ಮೂರು ವರ್ಷದ ಹೋರಿ ಏಳು ಅಡಿ ಎತ್ತರವಿದ್ದು, ಸಾಕಷ್ಟು ಪ್ರದರ್ಶನಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಸಹ ಪಡೆದಿದೆ. ಈ ಹೋರಿಗೆ ಫೆ.20ರಂದು ಮಂಡ್ಯದ (Mandya) ಬನ್ನೂರು ಗ್ರಾಮದಲ್ಲಿ ಅದ್ಧೂರಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 6.5 ಲಕ್ಷ ರೂ. ಬೆಲೆಯ ಅಮೃತ್ ಮಹಲ್ ತಳಿ ಜೋಡಿ ಎತ್ತುಗಳನ್ನು ಶಾಸಕ ಜಯರಾಮ್ ಖರೀದಿಸಿದ್ದಾರೆ. ಅಂಕಲಕೊಪ್ಪ ಗ್ರಾಮ ಶಾಸಕರ ತೋಟದಲ್ಲಿ ಜಾನುವಾರುಗಳು ಇವೆ.
ಆಟ ನಿಲ್ಲಿಸಿದ ಹಾವೇರಿ ಡಾನ್ 111... ಸಂಕ್ರಾಂತಿ ಹಬ್ಬಕ್ಕೆ ಸೂತಕದ ಛಾಯೆ
1 ಕೋಟಿಯ ಹಳ್ಳಿಕಾರ್ ಹೋರಿ ನೋಡಿ ನಿಬ್ಬೆರಗಾದ ಜನ: ಜಿಕೆವಿಕೆಯಲ್ಲಿ(GKVK) ಆಯೋಜಿಸಿರುವ ಕೃಷಿ ಮೇಳಕ್ಕೆ(Krishimela) ಆಗಮಿಸಿದ್ದ 1 ಕೋಟಿ ಮೌಲ್ಯದ ಹಳ್ಳಿಕಾರ್ ಹೋರಿ(Hallikar Hori) ‘ಕೃಷ್ಣ’ನೇ ಚರ್ಚಾ ವಿಷಯವೂ ಆಗಿದ್ದು ವಿಶೇಷವಾಗಿತ್ತು. ಹೋರಿ ಎಲ್ಲಿದೆ ಎಂದು ಬಹುತೇಕರು ಹುಡುಕುತ್ತಿದ್ದುದು ಕಂಡುಬಂತು. ವಿದ್ಯಾರ್ಥಿಗಳು(Students), ರೈತರು(Farmers), ಮಾಧ್ಯಮದವರ ಕೇಂದ್ರ ಬಿಂದುವೂ ಆಗಿದ್ದ.
ಒಂದು ಕೋಟಿ ರು. ಬೆಲೆಯ ಹೋರಿಯ ಮಾಲಿಕ ಮಂಡ್ಯ ಜಿಲ್ಲೆ ಮಳವಳ್ಳಿಯ ಬೋರೇಗೌಡ ಹೋರಿಯ ವೀರ್ಯ(Sperm) ಮಾರಾಟದ ಅಂಕಿ ಅಂಶ ನೀಡುತ್ತಿದ್ದಂತೆ ಅಬ್ಬಬ್ಬಾ ಎಂದು ಹುಬ್ಬೇರಿಸಿದರು. ‘ವಾರಕ್ಕೆ ಎರಡು ಬಾರಿ ಕೃಷ್ಣನಿಂದ ವೀರ್ಯ ಸಂಗ್ರಹಿಸಲಾಗುತ್ತದೆ. ಇದರಲ್ಲಿ ಕಡಿಮೆ ಎಂದರೂ ಒಂದು ಸಲಕ್ಕೆ 300 ಸ್ಟಿಕ್ ವೀರ್ಯ ಸಂಗ್ರಹಿಸಿ ಕೆಡದಂತೆ ನೈಟ್ರೋಜನ್ ಕಂಟೈನರ್‌ನಲ್ಲಿ ಸಂಗ್ರಹಿಸಲಾಗುವುದು. ಇದಕ್ಕಾಗಿಯೇ ವೀರ್ಯ ಸಂವರ್ಧನ ಕೇಂದ್ರವನ್ನು ಸ್ಥಾಪಿಸಲಾಗಿದೆ.