ದಿವಂಗತ ಪತ್ರಕರ್ತ ಹಣಮಂತ ಬಬಲಾದಿ ಮನೆಗೆ ಶಿವಾನಂದ ತಗೂಡರ ಭೇಟಿ: ಸಾಂತ್ವಾನ

Published : Aug 16, 2023, 10:23 AM IST
ದಿವಂಗತ ಪತ್ರಕರ್ತ ಹಣಮಂತ ಬಬಲಾದಿ ಮನೆಗೆ ಶಿವಾನಂದ ತಗೂಡರ ಭೇಟಿ: ಸಾಂತ್ವಾನ

ಸಾರಾಂಶ

ಇತ್ತಿಚೆಗೆ ನಿಧನರಾದ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಬೀದರ ಜಿಲ್ಲಾ ಕ್ಯಾಮರಾಮನ್ ಹಣಮಂತ ಬಬಲಾದಿ ಅವರ ಕಲಬುರಗಿ ಮನೆಗೆ ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. 

ಕಲಬುರಗಿ (ಆ.16): ಇತ್ತಿಚೆಗೆ ನಿಧನರಾದ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಬೀದರ ಜಿಲ್ಲಾ ಕ್ಯಾಮರಾಮನ್ ಹಣಮಂತ ಬಬಲಾದಿ ಅವರ ಕಲಬುರಗಿ ಮನೆಗೆ ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ವಿಡಿಯೋ ಜರ್ನಲಿಸ್ಟ್ ಹಣಮಂತ ಬಬಲಾದಿ ಅವರು ಕಳೆದ ಒಂದು ವರ್ಷದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಹಣಮಂತ ಬಬಲಾದಿ ಅವರು ಕಳೆದ ಒಂದು ವಾರದ ಹಿಂದೆ ಕಲಬುರಗಿಯ ತಮ್ಮ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದರು.

ಪತ್ರಕರ್ತರಿಂದ ಶೃದ್ದಾಂಜಲಿ: ಇತ್ತಿಚೆಗೆ ನಿಧನರಾದ ಪತ್ರಕರ್ತ ಹಣಮಂತ ಬಬಲಾದಿ ಅವರ ಅಗಲಿಕೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಲಬುರಗಿ ಜಿಲ್ಲಾ ಘಟಕ ತೀವ್ರ ಕಂಬನಿ ಮಿಡಿದಿದೆ. ಕಲಬುರಗಿಯ  ಅಗಲಿದ ಪತ್ರಕರ್ತ ಹಣಮಂತ ಬಬಲಾದಿ ಅವರಿಗೆ ಕಲಬುರಗಿ ಪತ್ರಿಕಾ ಭವನದಲ್ಲಿ ಮೌನಾಚರಣೆ ಮೂಲಕ ಶೃದ್ದಾಂಜಲಿ ಸಲ್ಲಿಸಲಾಯಿತು. 

ನನ್ನನ್ನು ಟಾರ್ಗೆಟ್‌ ಮಾಡಿದರೆ ಡಿಕೆಶಿ ಸಿಎಂ ಆಗಲ್ಲ: ಸಿ.ಟಿ.ರವಿ

ರಾಜ್ಯಾಧ್ಯಕ್ಷರು ಭೇಟಿ: ದಿವಂಗತ ಹಣಮಂತ ಬಬಲಾದಿ ಅವರ ಕಲಬುರಗಿ ನಿವಾಸಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ರಾಜ್ಯ ಉಪಾಧ್ಯಕ್ಷರಾದ ಭವಾನಿಸಿಂಗ್ ಠಾಕೂರ, ಕಲಬುರಗಿ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಹಾಗೂ ಇತರೇ ಪತ್ರಕರ್ತರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಅಲ್ಲದೇ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ನೆರವಿನ ಚೆಕ್ ವಿತರಿಸಿದರು. ಹಣಮಂತ ಬಬಲಾದಿ ಅವರ ಕುಟುಂಬಕ್ಕೆ ಸರಕಾರದ ಯೋಜನೆಗಳಿಂದ ಮನೆ ನಿರ್ಮಾಣಕ್ಕೆ ನೆರವು, ಮಕ್ಕಳ ಶಿಕ್ಷಣಕ್ಕೆ ಸಹಾಯ ಸೇರಿದಂತೆ ಅಗತ್ಯ ನೆರವು ಕೊಡಿಸಲು ಸಂಘ ಶ್ರಮಿಸಲಿದೆ ಎಂದು ಭರವಸೆ ನೀಡಿದರು. 

ಸಂಸ್ಥೆಯ ಸಹಾಯ ನೆನಪು: ಈ ಸಂದರ್ಭದಲ್ಲಿ ಮಾತನಾಡಿದ ದಿ. ಹಣಮಂತ ಬಬಲಾದಿ ಅವರ ಕುಟುಂಬಸ್ಥರು, ಒಂದು ವರ್ಷ ಚಿಕಿತ್ಸೆಯಲ್ಲಿದ್ದ ಸಂದರ್ಭದಲ್ಲೂ ಏಷ್ಯಾನೇಟ್ ಸುವರ್ಣ ನ್ಯೂಸ್ ಸಂಸ್ಥೆ ನಿರಂತರ ವೇತನ ಹಾಗೂ ಅಗತ್ಯ ಚಿಕಿತ್ಸಾ ನೆರವು ನೀಡಿದೆ. ಅಂತ್ಯಸಂಸ್ಕಾರದ ವೆಚ್ಚವನ್ನೂ ಸಂಸ್ಥೆ ನೀಡಿದೆ.  ತಮ್ಮ ಹಾಗೂ ಏಷ್ಯಾನೆಟ್ ಸಂಸ್ಥೆಯ ನೆರವು ಮರೆಯಲಾಗದು ಎಂದು ಭಾವುಕರಾಗಿ ನುಡಿದರು. 

ಸುಪ್ರೀಂಕೋರ್ಟ್ ಆದೇಶಕ್ಕೂ ಮೊದಲೇ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಹೆಚ್ಚಿನ ನೀರು ಬಿಡುಗಡೆ!

ಹಣಮಂತ ಬಬಲಾದಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಸೇವೆ ಸ್ಮರಣಿಯ. ಏಷ್ಯಾನೇಟ್ ಸುವರ್ಣ ನ್ಯೂಸ್ ಸಂಸ್ಥೆ ಅವರ ಕುಟುಂಬದ ಜೊತೆಗಿದೆ ಎಂದು ಸುವರ್ಣ ನ್ಯೂಸ್ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರ ಶರಣಯ್ಯ ಹಿರೇಮಠ ಕುಟುಂಬಸ್ಥರಿಗೆ ಅಭಯ ನೀಡಿದರು.  ಹಿರಿಯ ಪತ್ರಕರ್ತರಾದ ಹಣಮಂತರಾವ ಭೈರಾಮಡಗಿ,  ದೇವೇಂದ್ರಪ್ಪ ಕಪನೂರ, ಸಂಗಮನಾಥ್ ರೇವತಗಾಂವ್, ಅರುಣಕುಮಾರ ಕದಮ್, ಶಿವರಂಜನ್ ಸತ್ಯಂಪೇಟೆ ಇನ್ನಿತರರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!
ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ: ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!