ಶಿವಮೊಗ್ಗದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ವೇಳೆ ಕಲ್ಲು ತೂರಾಟ: 144 ಸೆಕ್ಷನ್‌ ಜಾರಿ

Published : Oct 01, 2023, 07:43 PM ISTUpdated : Oct 02, 2023, 10:25 AM IST
ಶಿವಮೊಗ್ಗದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ವೇಳೆ ಕಲ್ಲು ತೂರಾಟ: 144 ಸೆಕ್ಷನ್‌ ಜಾರಿ

ಸಾರಾಂಶ

ಶಿವಮೊಗ್ಗ ನಗರದ ರಾಗಿಗುಡ್ಡದ ಬಳಿ ಸಾಗುತ್ತಿದ್ದ ಈದ್‌ ಮಿಲಾದ್‌ ಮೆರವಣಿಗೆ ಗುಂಪಿನ ಮೇಲೆ ಕಲ್ಲು ತೂರಾಟ ಮಾಡಿರುವ ದುರ್ಘಟನೆ ನಡೆದಿದ್ದು, 144 ಸೆಕ್ಷನ್‌ ಜಾರಿ ಮಾಡಲಾಗಿದೆ. 

ಶಿವಮೊಗ್ಗ (ಅ.01): ಶಿವಮೊಗ್ಗ ನಗರದ ರಾಗಿಗುಡ್ಡದ ಬಳಿ ಸಾಗುತ್ತಿದ್ದ ಈದ್‌ ಮಿಲಾದ್‌ ಮೆರವಣಿಗೆ ಗುಂಪಿನ ಮೇಲೆ ಕಲ್ಲು ತೂರಾಟ ಮಾಡಿರುವ ದುರ್ಘಟನೆ ನಡೆದಿದೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥತಿ ನಿಯಂತ್ರಣ ಮಾಡಿದ್ದು, 144 ಸೆಕ್ಷನ್‌ ಜಾರಿ ಮಾಡಲಾಗಿದೆ.

ಪ್ರತಿವರ್ಷ ಹಬ್ಬಗಳ ಆಚರಣೆ ವೇಳೆ ಕೋಮುಯ ಸಂಘರ್ಷಗಳು ಕಂಡುಬರುವ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಭಾನುವಾರ ಸಂಜೆ ನಡೆಯುತ್ತಿದ್ದ ಈದ್‌ ಮಿಲಾದ್‌ ಮೆರವಣಿಗೆ ವೇಳೆಯೂ ಕಲ್ಲು ತೂರಾಟದ ಘಟನೆ ನಡೆದಿದೆ. ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ಸಾಗುವ ವೇಳೆ ಘರ್ಷಣೆ ಕಲ್ಲು ತೂರಾಟದ ಘಟನೆ ನಡೆದಿದ್ದು, ಮೆರವಣಿಗೆ ಸಾಗುತ್ತಿದ್ದ ಜನರು ದಿಕ್ಕಾ ಪಾಲಾಗಿ ಓಡಿದ್ದಾರೆ. ಇನ್ನು ಕೆಲವರು ತಾವು ದೂರ ನಿಂತುಕೊಂಡು ತಾವು ಕೂಡ ಕಲ್ಲೆಸೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಗಣೇಶೋತ್ಸವಕ್ಕೆ ಕೇಸರಿಮಯವಾಗಿದ್ದ ಶಿವಮೊಗ್ಗ; ಈದ್ ಮಿಲಾದ್ ಹಸಿರುಮಯವಾಯ್ತು ನಗರ!

ಶಿವಮೊಗ್ಗದಲ್ಲಿ ಇಂದು ಬೃಹತ್‌ ಮಟ್ಟದ ಈದ್ ಮಿಲಾದ್‌ ಅಂಗವಾಗಿ ಮೆರವಣಿಗೆಯನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ರಾಗಿಗುಡ್ಡದಿಂದ ಒಂದು ಮುಸ್ಲಿಂ ಗುಂಪು ಗಾಂಧಿ ಬಜಾರ್ ನಿಂದ ಹೊರಡುವ ಮೆರವಣಿಗೆ ಹೊರಡುವ ಗುಂಪನ್ನು ಸೇರಿಕೊಳ್ಳಲು ಚಿಕ್ಕದಾಗಿ ಮೆರವಣಿಗೆ ಹೋಗಲಾಗುತ್ತೊತ್ತು. ಇನ್ನು ರಾಗಿಗುಡ್ಡದಿಂದ ಮೆರವಣಿಗೆ ಹೊರಟಾಗ ಹಿಂದೂ ದೇಗುಲದ ಬಳಿ ಮೆರವಣಿಗೆ ಹಿಂಬದಿಯ ಯುವಕನ ಜೊತೆ ಮಾತಿನ ಚಕ್ರಮಕಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಉಂಟಾದ ಮಾತಿನ ಚಕಮಕಿಯಿಂದಾಗಿ ಮುಂದೆ ಸಾಗಿದ್ದ ಮೆರವಣಿಗೆ ಮರಳಿ ಬಂದಿದೆ.

ಮೆರವಣಿಗೆ ಹೋಗುತ್ತಿದ್ದವರು ಕ್ಷುಲ್ಲಕ  ಕಾರಣಕ್ಕೆ ಶುರುವಾದ ಘರ್ಷಣೆಯಲ್ಲಿ ಭಾಗವಹಿಸಿ ಘರ್ಷಣೆಯ ಹಂತಕ್ಕೆ ತಲುಪಿದೆ. ಈ ವೇಳೆ ಕೆಲ ವ್ಯಕ್ತಿಗಳು ಈದ್‌ ಮಿಲಾದ್‌ ಮೆರವಣಿಗೆ ಹೊರಟಿದ್ದ ಗುಂಪಿನ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಕೇಳಿಬಂದಿದೆ. ಈ ವೇಳೆ ಎರಡು ಕೋಮಿನ ಯುವಕರ ಗುಂಪಿನಿಂದ ಕಲ್ಲುತೂರಾಟ ಮಾಡಲಾಗಿದೆ. ಕಲ್ಲುತೂರಾಟ ಹಿನ್ನೆಲೆ ಹಲವು ಕಾರು, ಬೈಕು, ಮನೆಗಳ ಕಿಟಕಿ ಗಾಜುಗಳು ಜಖಂ ಆಗಿವೆ. ಕಲ್ಲು ತೂರಾಟದಿಂದ ಹಲವರಿಗೆ ಗಾಯಗಳೂ ಉಂಟಾಗಿವೆ.

ಕೇಸರಿ ಬಾವುಟ ತೆರವಿನಿಂದ ಗೊಂದಲ: ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ

ಕಲ್ಲು ತೂರಾಟದ ಘಟನೆ ನಡೆದ ತಕ್ಷಣವೇ ರಾಪಿಡ್ ಆಕ್ಷನ್ ಫೋರ್ಸ್ ನಿಂದ ಕಾರ್ಯಚರಣೆ ಮಾಡಲಾಗಿದೆ. ಪೊಲೀಸರಿಂದ ಗುಂಪು ಚದುರಿಸಲು ಲಘು ಲಾಟಿ ಪ್ರಹಾರ ಮಾಡಲಾಗಿದೆ. ಕಲ್ಲು ತೂರಾಟ ನಡೆಸಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನು ಕೂಡ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಕಂಡುಬರುತ್ತಿದೆ. ಮತ್ತೊಂದೆಡೆ, ಕಲ್ಲು ತೂರಾಟದ ಘಟನೆಯನ್ನು ನಿಯಂತ್ರಿಸಲು ಬಂದ ಪೊಲೀಸರ ಮೇಲೆಯೂ ಕಲ್ಲು ತೂರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ. 

PREV
Read more Articles on
click me!

Recommended Stories

ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌