ಕೋಲಾರದಲ್ಲಿ ಕತ್ತಿ ವರಸೆ ಪ್ರದರ್ಶಿಸಿದ ಹಿಂದೂ ಮುಖಂಡನ ಮೇಲೆ ಎಫ್‌ಐಆರ್‌

By Sathish Kumar KHFirst Published Oct 1, 2023, 4:38 PM IST
Highlights

ಕೋಲಾರ ನಗರದಲ್ಲಿ ಗಣೇಶ ಹಬ್ಬದ ಮೆರವಣಿಗೆ ವೇಳೆ ಕತ್ತಿ ವರಸೆ ಪ್ರದರ್ಶನ ಮಾಡಿದ ಹಿಂದೂ ಮುಖಂಡನ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ.

ಕೋಲಾರ (ಅ.01): ರಾಜ್ಯದ ಗಡಿಜಿಲ್ಲೆ ಕೋಲಾರ ನಗರದಲ್ಲಿ ಈದ್‌ ಮಿಲಾದ್‌ ಹಬ್ಬದ ದಿನದಂದು ಮುಸ್ಲಿಂ ಸಮುದಾಯದಿಂದ ಬೃಹತ್ ಪ್ರಮಾಣದ ಖಡ್ಗವನ್ನು ಅಳವಡಿಕೆ ಮಾಡಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲಿಯೇ ಹಿಂದೂ ಸಂಘಟನೆಯಿಂದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಹಿಂದೂ ಮುಖಂಡನೊಬ್ಬ ಕತತಿ ವರಸೆಯನ್ನುಯ ಮಾಡಿದ್ದು, ಅವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಗಣೇಶ ಹಬ್ಬದಲ್ಲಿ ಕತ್ತಿ ವರಸೆ ಪ್ರದರ್ಶನ ಮಾಡಿದ್ದ ಬಿಜೆಪಿ ಮುಖಂಡನ ವೀಡಿಯೋ ವೈರಲ್‌ ಆಗಿತ್ತು. ಇದರ ಬೆನ್ನಲ್ಲಿಯೇ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಕತ್ತಿ ವರಸೆ ಹಿಂದೂ ಮುಖಂಡ ಓಂ ಶಕ್ತಿ ಚಲಪತಿ ಕತ್ತಿ ಹಿಡಿದು ಪ್ರದರ್ಶನ ಮಾಡಿದ್ದರು. ಇದರ ಬೆನ್ನಲ್ಲಿಯೇ ಬಿಜೆಪಿ ಮುಖಂಡನ ವಿರುದ್ದವೂ ಪ್ರಕರಣ ದಾಖಲು ಮಾಡಲಾಗಿದೆ. ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಕತ್ತಿ ಪ್ರದರ್ಶನ ಮಾಡಿ ಶಾಂತಿ ಭಂಗ ಅರೋಪ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಓಂ ಶಕ್ತಿ ಚಲಪತಿ ವಿರುದ್ದ ಪ್ರಕರಣದಿಂದ ಹಿಂದೂ ಕಾರ್ಯಕರ್ತದಲ್ಲಿ ಆಕ್ರೋಶ ವ್ಯಕ್ತವಾಗಿದೆ. 

ಕೋಲಾರದಲ್ಲಿ 15 ಅಡಿ ಉದ್ದದ ಮುಸ್ಲಿಂ ಖಡ್ಗ, ಹಸಿರು ಬಟ್ಟೆ, ಉರ್ದು ಬರಹದ ಬ್ಯಾನರ್‌ ಅಳವಡಿಕೆ

ಇನ್ನು ಈದ್ ಮಿಲಾದ್ ಹಬ್ಬದ ದಿನ ಕೋಲಾರದಲ್ಲಿ ಕತ್ತಿಗಳ ಅಳವಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು  ಐವರ ಮೇಲೆಯೂ FIR ದಾಖಲು ಮಾಡಿದ್ದಾರೆ. ಕುದುರೆ ಮೇಲೆ ಕತ್ತಿ ಹಿಡಿದು ಮೆರವಣಿಗೆ ಮಾಡಿದ್ದವನ ಮೇಲೂ FIR ಮಾಡಲಾಗಿದೆ. ಈಗ ಕೋಲಾರ ನಗರದಲ್ಲಿ ಕತ್ತಿ ವಿಚಾರದಲ್ಲಿ ಹಿಂದೂ - ಮುಸ್ಲಿಂ ಎರಡು ಸಮುದಾಯದ ಮುಖಂಡರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. 

ಸೆಪ್ಟಂಬರ್‌ 28ರಂದು ಬೆಳಗ್ಗೆ ಈದ್‌ ಮಿಲಾದ್‌ ಹಬ್ಬದ ಅಂಗವಾಗಿ ಕೋಲಾರ ನಗರದ ಮಧ್ಯಭಾಗದಲ್ಲಿಯೇ ಉರ್ದು ಭಾಷೆಯ ಬರಹಗಳನ್ನು ಹೊಂದಿದ ಸುಮಾರು 15 ಅಡಿ ಉದ್ದ 2 ಅಡಿ ಅಗಲದ ಖಡ್ಗ, ಹಸಿರು ಬಾವುಟಗಳು, ಹಸಿರು ಬಟ್ಟೆಗಳು ಹಾಗೂ ಖುರಾನ್‌ ಶ್ಲೋಕಗಳನ್ನು ಬರೆದಿರುವ ಬಟ್ಟೆಯ ಬ್ಯಾನರ್‌ಗಳನ್ನು ಅಳವಡಿಕೆ ಮಾಡಲಾಗಿತ್ತು. ಕೋಲಾರದ ನಗರದ ಕ್ಲಾಕ್‌ ಟವರ್‌ ವೃತ್ತದಲ್ಲಿ ಗಣೇಶ ಹಬ್ಬದ ಕುರಿತ ಯಾವುದೊಂದೂ ಕೇಸರಿ ಬಾವುಟ, ಬ್ಯಾನರ್‌ ಅಳವಡಿಕೆಯನ್ನೂ ಮಾಡಿಲ್ಲ. 15 ಅಡಿ ಉದ್ದದ ದೊಡ್ಡ ಖಡ್ಗಗಳನ್ನು ರಸ್ತೆಯ ಮೇಲ್ಭಾಗದಲ್ಲಿ ಅಳವಡಿಕೆ ಮಾಡಲಾಗಿದೆ. ಈ ಖಡ್ಗಗಳ ಮೇಲೆ ಉರ್ದುವಿನಲ್ಲಿ ಕೆಲವು ಬರವಣಿಗೆಗಳನ್ನು ಬರೆಯಲಾಗಿದೆ. ಇನ್ನು ಇದೇ ವೃತ್ತದ ಬಳಿ ಬಟ್ಟೆಯ ಬ್ಯಾನರ್‌ಗಳನ್ನು ಅಳವಡಿಕೆ ಮಾಡಿದ್ದು, ಅದರಲ್ಲಿ ಮುಸ್ಲಿಂ ಶ್ಲೋಕಗಳನ್ನು ಬರೆಯಲಾಗಿತ್ತು. 

ಕೋಲಾರದಲ್ಲಿ ಮುಸ್ಲಿಂ ಖಡ್ಗಕ್ಕೆ ವಿರುದ್ಧವಾಗಿ ಹಿಂದೂ ತ್ರಿಶೂಲ ಹಾಕುವುದಾಗಿ ತಾಕೀತು ಮಾಡಿದ ಬೆನ್ನಲ್ಲೇ ಖಡ್ಗ ತೆರವು!

ರಾಜ್ಯದ ಗಡಿ ಜಿಲ್ಲೆಯಾಗಿರುವ ಕೋಲಾರ ನಗರದ ಕ್ಲಾಕ್‌ ಟವರ್‌ನ ಬಳಿ ಈದ್ ಮಿಲಾದ್‌ ಅಂಗವಾಗಿ ಮುಸ್ಲಿಂ ಸಮುದಾಯದಿಂದ ರಾತ್ರೋ ರಾತ್ರಿ 15 ಅಡಿ ಉದ್ದದ ಬೃಹತ್‌ ಖಡ್ಗವನ್ನು ಅಳವಡಿಕೆ ಮಾಡಲಾಗುತ್ತು. ಇದರ ಬೆನ್ನಲ್ಲಿಯೇ ಹಿಂದೂ ಸಮುದಾಯದಿಂದ ತ್ರಿಶೂಲವನ್ನು ಅಳವಡಿಕೆ ಮಾಡುವುದಾಗಿ ಜಿಲ್ಲಾಧಿಕಾರಿ ಅಕ್ರಮ್‌ಪಾಷಾ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾರಾಯಣಸ್ವಾಮಿ ಅವರಿಗೆ ತಾಕೀತು ಮಾಡಿದ ಬೆನ್ನಲ್ಲಿಯೇ ಮುಸ್ಲಿಂ ಖಡ್ಗ ಮತ್ತು ಹಸಿರು ಬಟ್ಟೆಯನ್ನು ತೆರವುಗೊಳಿಸಿದ್ದಾರೆ ಎಂದು ಸಂಸದ ಮುನಿಸ್ವಾಮಿ ಹೇಳಿದ್ದರು. ಈಗ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಆಚರಣೆ ಮಾಡಿದರು.

click me!