ಶಿವಮೊಗ್ಗದಲ್ಲಿ ಪುನಃ ಮಂಗನ ಕಾಯಿಲೆ ಉಲ್ಬಣಗಗೊಂಡಿದ್ದು, 18 ವರ್ಷದ ಯುವತಿ ಬಲಿಯಾಗಿದ್ದಾಳೆ. ಈ ಮೂಲಕ 2024ರಲ್ಲಿ ಮೊದಲ ಸಾವು ಪ್ರಕರಣ ವರದಿಯಾಗಿದೆ.
ಶಿವಮೊಗ್ಗ (ಜ.08): ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮತ್ತೊಮ್ಮೆ ಮಾರಣಾಂತಿಕ ರೋಗ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಸೋಮವಾರ ಮಂಗನ ಕಾಯಿಲೆಗೆ 18 ವರ್ಷದ ಯುವತಿ ಬಲಿಯಾಗಿದ್ದು, 2024ರಲ್ಲಿ ಮಾರಣಾಂತಿಕ ರೋಗಕ್ಕೆ ತುತ್ತಾದ ಮೊದಲ ಪ್ರಕರಣವಾಗಿದೆ.
ರಾಜ್ಯದಲ್ಲಿ ಆಗಿಂದಾಗ್ಗೆ ಶಿವಮೊಗ್ಗ ಜನರನ್ನು ಕಾಡುವ ರೋಗಗಳಲ್ಲಿ ಮಂಗನ ಕಾಯಿಲೆಯೂ ಒಂದಾಗಿದೆ. ಈ ರೋಗಕ್ಕೆ ಹಲವು ವರ್ಷಗಳ ಇತಿಹಾಸವಿದ್ದು, ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ. ಕಾರಣ ಇದಕ್ಕೆ ಸರಿಯಾದ ಚುಚ್ಚುಮದ್ದು, ಔಷಧಿಯನ್ನು ಪಡೆದು ಗುಣಮುಖರಾಗಬಹುದು. ಆದರೆ, ಮಂಗನ ಕಾಯಿಲೆ ಇರುವ ಬಗ್ಗೆ ಅರಿವಿಗೆ ಬಾರದೇ ವಿಳಂಬವಾದಲ್ಲಿ ಅಂತಹವರ ಸಾವು ಕಟ್ಟಿದ್ದ ಬುತ್ತಿ ಆಗಿರುತ್ತದೆ. ಶಿವಮೊಗ್ಗ ಜಿಲ್ಲೆ ಹೊಸನಗರದ ಅರಮನೆ ಕೊಪ್ಪ ವ್ಯಾಪ್ತಿಯ ಗ್ರಾಮದ ಯುವತಿ ಈಗ ಮಂಗನ ಕಾಯಿಲೆಗೆ ಬಲಿಯಾಗುವ ಮೂಲಕ 2024ರಲ್ಲಿ ಮೊಟ್ಟ ಮೊದಲ ಬಾರಿಗೆ ಮೃತಪಟ್ಟ ಯುವತಿ ಇವರಾಗಿದ್ದಾರೆ.
ರಾಮ ಸೀತೆ ವಾಸಿಸಿದ್ದ ಕನಕ ಮಹಲ್‌ನಲ್ಲಿ ಡಾ ಬ್ರೋ! ಇನ್ನೂ ಇದೆ ದೇವರ ಕಾಲಿನ ಧೂಳಿನ ಘಮ
ಈಗ ಚಳಿಗಾಲದ ಅವಧಿ ಆರಂಭವಾಗಿದ್ದು, ಸಾಂಕ್ರಾಮಿಕ ರೋಗ ಹಾಗೂ ಹಲವು ವೈರಸ್‌ಗಳು ಉಲ್ಬಣಗೊಂದು ರೋಗಗಳನ್ನು ಹರಡುವ ಅವಧಿಯಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಮಹಾಮಾರಿಯಾಗಿ ಕಾಡಿದ ಕೋವಿಡ್-19 ವೈರಸ್‌ನ ರೋಪಾಂತರ ತಳಿ ಒಮಿಕ್ರಾನ್ ವೈರಸ್‌ನ ಉಪತಳಿ ಜೆ.ಎನ್.1 ವೈರಸ್ ಪತ್ತೆಯಾಗಿದೆ. ಈಗ ಕೋವಿಡ್‌ಗೆ ಹಲವು ಜನರು ಸಾವಿಗೀಡಾಗುತ್ತಿದ್ದಾರೆ. ಇದರ ನಡುವೆ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಉಲ್ಬಣ ಆಗಿರುವುದು ಜನರಲ್ಲಿ ಹಾಗೂ ಆರೋಗ್ಯ ಇಲಾಖೆಗೆ ಆತಂಕವನ್ನುಂಟು ಮಾಡಿದೆ.
ಹೊಸನಗರದ ಅರಮನೆ ಕೊಪ್ಪ ವ್ಯಾಪ್ತಿಯ ಗ್ರಾಮವೊಂದರ ಯುವತಿಗೆ ವಾರದ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಏಕಾಏಕಿ ಜ್ವರ ಉಲ್ಬಣಗೊಂಡು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಲ್ಲಿ ಕೆಎಫ್ ಡಿ (ಮಂಗನ ಕಾಯಿಲೆ) ಟೆಸ್ಟ್ ನಡೆಸಿದಾಗ ಮೊದಲ ಬಾರಿ ನೆಗೆಟಿವ್ ಬಂದಿತ್ತು. ಪುನಃ ಎರಡನೇ ಬಾರಿ ಪರೀಕ್ಷೆ ಮಾಡಿದಾಗ ಆಕೆಗೆ ಪಾಸಿಟಿವ್ ಬಂದಿತ್ತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ಯುವತಿಯನ್ನು ಶುಕ್ರವಾರ ಸಂಜೆ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಾಲ್ಡೀವ್ಸ್ ಪ್ರವಾಸದಲ್ಲಿ ಭಾರತೀಯರದ್ದೇ ಮೇಲುಗೈ: 2023ರಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದು 17 ಲಕ್ಷ ಜನ!
ಆದರೆ, ಯುವತಿ ಮಂಗನ ಕಾಯಿಲೆಯಿಂದಾಗಿ ಬಹುಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದಳು. ಹೀಗಾಗಿ, ನಿರಂತರ ಚಿಕಿತ್ಸೆ ಮುಂದುವರೆಸಿದರೂ ಚಿಕಿತ್ಸೆ ಫಲಿಸದೇ ಸೋಮವಾರ ಬೆಳಗ್ಗೆ ಯುವತಿ ಸಾವನ್ನಪ್ಪಿದ್ದಾಳೆ.ಇನ್ನು ಶಿವಮೊಗ್ಗದಲ್ಲಿ ಈವರೆಗೆ ಮೂರು ಮಂದಿಗೆ ಮಂಗನ ಕಾಯಿಲೆ ದೃಢಪಟ್ಟಿದೆ. ಅದರಲ್ಲಿ ಒಬ್ಬರು (ಯುವತಿ) ಮೃತಪಟ್ಟಿದ್ದಾರೆ.