ಹೆತ್ತತಾಯಿ ಸತ್ತರೂ ಮುಖ ನೋಡಲೂ ಬಾರದ ಮಕ್ಕಳು ಆಶ್ರಮದಿಂದಲೇ ಅಂತ್ಯಕ್ರಿಯೆ!

By Kannadaprabha NewsFirst Published Jan 8, 2024, 7:15 AM IST
Highlights

ಈಕೆ ೯೦ರ ಹಾಸುಪಾಸಿನ ವೃದ್ಧೆ, ಮಕ್ಕಳಿಗೆ ಜನ್ಮವಿತ್ತ ಮಹಾತಾಯಿ. ವೃದ್ಧಾಪ್ಯದಲ್ಲಿ ಮಕ್ಕಳಿಗೆ ಬೇಡವಾಗಿ ಅನಾಥಶ್ರಮ ಸೇರಿದ್ದ ಲಕ್ಷ್ಮೀ ಹೆಗ್ಡೆ ಹೃದಯಾಘಾತಕ್ಕೊಳಗಾಗಿ ಭಾನುವಾರ ನಿಧನರಾದರು. ಹೆತ್ತಮ್ಮನ ಅಂತ್ಯಸಂಸ್ಕಾರ ನರವೇರಿಸಲು ಮಕ್ಕಳು ಆಗಮಿಸಬಹುದೆಂಬ ನಿರೀಕ್ಷೆ ಸುಳ್ಳಾಗಿ ಅನಾಥಾಶ್ರಮದವರೇ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ ಘಟನೆ ನಡೆದಿದೆ.

ಉಪ್ಪಿನಂಗಡಿ (ಜ.8) : ಈಕೆ ೯೦ರ ಹಾಸುಪಾಸಿನ ವೃದ್ಧೆ, ಮಕ್ಕಳಿಗೆ ಜನ್ಮವಿತ್ತ ಮಹಾತಾಯಿ. ವೃದ್ಧಾಪ್ಯದಲ್ಲಿ ಮಕ್ಕಳಿಗೆ ಬೇಡವಾಗಿ ಅನಾಥಶ್ರಮ ಸೇರಿದ್ದ ಲಕ್ಷ್ಮೀ ಹೆಗ್ಡೆ ಹೃದಯಾಘಾತಕ್ಕೊಳಗಾಗಿ ಭಾನುವಾರ ನಿಧನರಾದರು. ಹೆತ್ತಮ್ಮನ ಅಂತ್ಯಸಂಸ್ಕಾರ ನರವೇರಿಸಲು ಮಕ್ಕಳು ಆಗಮಿಸಬಹುದೆಂಬ ನಿರೀಕ್ಷೆ ಸುಳ್ಳಾಗಿ ಅನಾಥಾಶ್ರಮದವರೇ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ ಘಟನೆ ನಡೆದಿದೆ.

ಲಕ್ಷ್ಮೀ ಹೆಗ್ಡೆ ಅವರು ಉಪ್ಪಿನಂಗಡಿ ಸಮೀಪದಲ್ಲಿ ಸ್ವಂತ ಮನೆ ಹೊಂದಿದ್ದರು. ವೃದ್ಧಾಪ್ಯದಲ್ಲಿ ಮಕ್ಕಳಿಗೆ ಬೇಡವಾಗಿ ಅಸಹಾಯಕತೆಗೆ ಸಿಲುಕಿದ ಇವರು ನ್ಯಾಯ ಬಯಸಿ ಅಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಮಕ್ಕಳನ್ನು ಕರೆದು ತಾಯಿಯನ್ನು ಪೋಷಿಸುವಂತೆ ಮಕ್ಕಳಿಗೆ ತಿಳಿಹೇಳಿದಾಗ ಮಕ್ಕಳಿಂದ ಅಸಹಕಾರ ವ್ಯಕ್ತವಾಗಿತ್ತು.

Latest Videos

ಆನೇಕಲ್‌ನಲ್ಲೊಂದು ಮನಕಲಕುವ ಘಟನೆ; 80 ವರ್ಷದ ವೃದ್ಧೆಯನ್ನ ರಾತ್ರೋರಾತ್ರಿ ರಸ್ತೆಗೆ ಬಿಟ್ಟುಹೋದ ಪಾಪಿಗಳು!

ಠಾಣೆಯಲ್ಲಿ ಕಣ್ಣೀರು ಸುರಿಸುತ್ತ ಆಸರೆಗಾಗಿ ಯಾಚಿಸುತ್ತಿದ್ದ ಲಕ್ಷ್ಮೀ ಹೆಗ್ಡೆ ಅವರನ್ನು ಅಂದಿನ ಠಾಣಾಧಿಕಾರಿ ನಂದ ಕುಮಾರ್‌, ಕನ್ಯಾನದ ಭಾರತ್ ಸೇವಾಶ್ರಮಕ್ಕೆ ಸೇರಿಸಿದ್ದರು. ಆಗಾಗ ಆಶ್ರಮಕ್ಕೆ ಭೇಟಿ ಕೊಟ್ಟು ಅವರ ಯೋಗಕ್ಷೇಮ ವಿಚಾರಿಸುತ್ತಿದ್ದರು.

ರಾಯಚೂರು: ಸಿಂಧನೂರಲ್ಲಿ ತಾಯಿ,ಮಗನ ಮೇಲೆ ಬೀದಿ ನಾಯಿ ದಾಳಿ, ಬೆಚ್ಚಿಬೀಳಿಸುತ್ತೆ ಸಿಸಿಟಿವಿ ದೃಶ್ಯ! 

ಕನ್ಯಾನದ ಆಶ್ರಮದಲ್ಲಿ ಚೆನ್ನಾಗಿಯೇ ಇದ್ದ ಲಕ್ಷ್ಮೀ ಹೆಗ್ಡೆ ಭಾನುವಾರ ಹೃದಯಾಘಾತಕ್ಕೀಡಾಗಿ ನಿಧನರಾದರು. ಆಶ್ರಮಕ್ಕೆ ಸೇರಿದಾಗ ನೀಡಲಾದ ಸಂಬಂಧಿಕರ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿದ ಆಶ್ರಮದವರು, ನಿಧನ ಸುದ್ದಿಯನ್ನು ತಿಳಿಸಿ, ಶವದ ಅಂತ್ಯವಿಧಿ ನೆರವೇರಿಸಲು ಬನ್ನಿ, ಶವವನ್ನು ತೆಗೆದುಕೊಂಡು ಹೋಗುವಂತೆ ಕೋರಿದ್ದಾರೆ. ಆದರೆ ಮನವಿಗೆ ಸ್ಪಂದನ ದೊರೆಯದೇ ಇದ್ದಾಗ ಅವರ ಬಗ್ಗೆ ಕಾಳಜಿ ವಹಿಸಿದ್ದ ಪೊಲೀಸ್ ಅಧಿಕಾರಿ ನಂದಕುಮಾರ್‌ ಅವರನ್ನು ಸಂಪರ್ಕಿಸಲಾಯಿತು. ಕರ್ತವ್ಯದ ಕಾರಣಕ್ಕೆ ದೂರದೂರಿನಲ್ಲಿದ್ದ ನಂದಕುಮಾರ್‌ ಅವರಿಗೆ ಸಕಾಲದಲ್ಲಿ ಆಗಮಿಸಲು ಅಸಾಧ್ಯವಾಗಿತ್ತು. ಈ ಮಧ್ಯೆ ಆಶ್ರಮದ ಕ್ರಮದಂತೆ ಮೃತರ ಅಂತ್ಯವಿಧಿಯನ್ನು ಅಲ್ಲಿಯೇ ನೆರವೇರಿಸಲಾಯಿತು.

click me!