ಶಿರಾ ಉಪ ಚುನಾವಣೆ : ಜನರಿಂದ ಹೊಸ ಪ್ಲಾನ್

By Kannadaprabha NewsFirst Published Sep 14, 2020, 1:29 PM IST
Highlights

ಶೀಘ್ರದಲ್ಲೇ ಉಪಚುನಾವಣೆ ನಡೆಯುವ ಶಿರಾ ಕ್ಷೇತ್ರದ ಜನರು ಹೊಸ ಪ್ಲಾನ್ ಒಂದನ್ನು ಸಿದ್ಧ ಮಾಡಿದ್ದಾರೆ. ಹಾಗಾದ್ರೆ ಇಲ್ಲಿನ ಜನರು ಮಾಡಿರುವ ಆ ಪ್ಲಾನ್ ಏನು..? 

ಶಿರಾ (ಸೆ.14): ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಪ್ರಕಟಿಸುವುದು ಸಾಮಾನ್ಯ. ಆದರೆ, ಪ್ರಜೆಗಳೇ ತಮ್ಮ ಕ್ಷೇತ್ರಕ್ಕೆ ಬೇಕಾಗಿರುವ ಸವಲತ್ತುಗಳನ್ನು ಪ್ರಣಾಳಿಕೆ ರೂಪದಲ್ಲಿ ರಾಜಕೀಯ ಪಕ್ಷಗಳ ಮುಂದಿಡುವ ಪ್ರಯತ್ನವನ್ನು ಶಿರಾ ವಿಧಾನಸಭಾ ಪ್ರಜಾಪ್ರಣಾಳಿಕೆ ಸಮಿತಿ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಪ್ರಜಾಪ್ರಣಾಳಿಕೆಯ ಸಂಚಾಲಕ ತಿಪ್ಪೇಸ್ವಾಮಿ, ಪ್ರಜಾಪ್ರಭುತ್ವ ಮತ್ತಷ್ಟುಗಟ್ಟಿಗೊಳಿಸಲು ಈ ರೀತಿಯ ಕಾರ್ಯಕ್ರಮಗಳು ಆಗಬೇಕು. ಸದ್ಯ ಶಿರಾ ವಿಧಾನಸಭಾ ಉಪಚುನಾವಣೆ ಬರುತ್ತಿರುವುದರಿಂದ ತಾಲೂಕಿನ ಜನತೆ ತಮ್ಮ ಅಗತ್ಯಗಳನ್ನು ಗುರುತಿಸಿಕೊಂಡು ಅದು ಚುನಾವಣೆಯ ಆದ್ಯತೆಯಾಗುವಂತೆ ಸಂವಾದ ನಡೆಸಬೇಕು. ಇಂತಹ ಪ್ರಯತ್ನದ ಭಾಗವಾಗಿ ಶಿರಾ ವಿಧಾನಸಭಾ ಪ್ರಜಾಪ್ರಣಾಳಿಕೆ ಸಮಿತಿಯು ತಾಲ್ಲೂಕಿನ ಜನತೆಯ ದನಿಗಳನ್ನು ರಾಜಕೀಯ ಪಕ್ಷಗಳಿಗೆ ತಲುಪಿಸುವ ಸಲುವಾಗಿ ಶಿರಾ ವಿಧಾನಸಭಾ ಪ್ರಜಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿದೆ ಎಂದರು.

ಶಿರಾ ಭಿನ್ನಮತ ಕಾಂಗ್ರೆಸ್‌ಗೆ ತಲೆನೋವು ..

ಪ್ರಜಾಪ್ರಣಾಳಿಕೆಯ ಬೇಡಿಕೆಗಳೇನು?

ತಾಲೂಕಿನ ಶಾಶ್ವತ ನಿರಾವರಿ ಯೋಜನೆ ಜಾರಿ, ಕಳ್ಳಂಬೆಳ್ಳ, ಶಿರಾ ಮತ್ತು ಮದಲೂರು ಕೆರೆ ಸೇರಿದಂತೆ ತಾಲ್ಲೂಕಿನ ವಿವಿಧ ಕೆರೆಗಳಿಗೆ ಕುಡಿಯಲು ಹಾಗೂ ಕೃಷಿಗೆ ನೀರು ನೀಡಿ, ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಯನ್ನು ತ್ವರಿತವಾಗಿ ಮುಗಿಸಿ, ಕಸ್ತೂರಿ ರಂಗಪ್ಪನ ಕೋಟೆ, ಮರಡಿ ಗುಡ್ಡ, ಮಲ್ಲಿಕ್‌ ರೆಹಾನ್‌ ದರ್ಗ, ಜಮೀಯಾ ಮಸೀದಿ, ಕಗ್ಗಲಾಡು ಪಕ್ಷಿಧಾಮ, ಜುಂಜಪ್ಪನ ಗುಡ್ದೆ ಸೇರಿದಂತೆ ತಾಲ್ಲೂಕಿನ ವಿವಿಧ ಐತಿಹಾಸಿಕ ಮತ್ತು ಪ್ರೇಕ್ಷಣೀಯ ತಾಣಗಳನ್ನು ಗುರುತಿಸಿ ಪ್ರವಾಸಿತಾಣಗಳನ್ನಾಗಿ ರೂಪಿಸುವುದು. ಪಶುಪಾಲಕರ ನಾಯಕ ಜುಂಜಪ್ಪನ ಹೆಸರಿನಲ್ಲಿ ಶಾಶ್ವತವಾದ ಗೋಶಾಲೆಯನ್ನು ಕಳುವರಹಳ್ಳಿಯಲ್ಲಿ ನಿರ್ಮಾಣಮಾಡುವುದು.

ಉಲ್ಟಾ ಹೊಡೆದು ಮತ್ತೊಂದು ಹುದ್ದೆಗೆ ಪಟ್ಟು ಹಿಡಿದ ಶಾಸಕ .

ಕೇಂದ್ರೀಯ ವಿದ್ಯಾಲಯ ಸ್ಥಾಪನೆ, ಚಿಕ್ಕನಹಳ್ಳಿಯಲ್ಲಿ ಉಗ್ರೇಗೌಡರ ಕನಸಿನಂತೆ ಕೃಷಿ ಕಾಲೇಜು ಪ್ರಾರಂಭ, ಪಶುಪಾಲನೆ ಮತ್ತು ಪಶುವೈದ್ಯಕೀಯ ಕಾಲೇಜು ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ನಮೂದಿಸಿದ್ದಾರೆ.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕ ಕಟಾವೀರನಹಳ್ಳಿ ನಾಗರಾಜು, ರಂಗ ಕಲಾವಿದ ಗೋಮಾರದನಹಳ್ಳಿ ಮಂಜುನಾಥ್‌, ನವೋದಯ ಯುವ ವೇದಿಕೆಯ ಅಧ್ಯಕ್ಷ ಜಯರಾಮಕೃಷ್ಣ, ಎಸ್‌.ಎಲ್‌.ರಮೇಶ್‌, ಕೆಂಪರಾಜು ಇದ್ದರು.

click me!