ಕಾವೇರಿ ಹರಿದರೂ ಕುಡಿಯಲು ಶುದ್ಧ ನೀರಿಲ್ಲ!

By Kannadaprabha NewsFirst Published Sep 14, 2020, 1:09 PM IST
Highlights

ಸರ್ಮಪಕ ಶುದ್ಧ ನೀರಿನ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕಾವೇರಿ ಹರಿಯುತ್ತಿದ್ದರು ಇಲ್ಲಿನ ಜನರಿಗೆ ಮಾತ್ರ ಕುಡಿಯುವ ನೀರು ದೊರೆಯುತ್ತಿಲ್ಲ. 

ರಾಮನಾಥಪುರ (ಸೆ.14):  ಕಾವೇರಿ ನದಿಗೆ ನೀರಿನ ಶುದ್ಧೀಕರಣ ಯಂತ್ರ ಅಳವಡಿಸಿ ಸರ್ಮಪಕ ಶುದ್ಧ ನೀರಿನ ಪೂರೈಕೆ ಮಾಡಬೇಕು ಎಂದು ರಾಮನಾಥಪುರದ ನಾಗರಿಕರು, ಸಂಘಸಂಸ್ಥೆಗಳು, ಸ್ತ್ರೀ ಶಕ್ತಿ ಸಂಘಗಳು ಒತ್ತಾಯಿಸಿವೆ.

ಜೀವನದಿ ಕಾವೇರಿ ನೀರು ಹರಿದರೂ ಸಹ ಇಲ್ಲಿ ಹತ್ತಾರು ವರ್ಷಗಳ ಹಿಂದೆ ಹಾಕಿರುವ ಪೈಪುಗಳಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಮನೆಗಳಿಗೆ ಪೊರೈಕೆಯಾಗುತ್ತಿರುವ ನೀರು ಅಶುದ್ಧವಾಗಿದೆ. ನೀರನ್ನು ಸೋಸಿಕೊಂಡು ಬಳಸಬೇಕಾಗಿದೆ. ರಾಮನಾಥಪುರ ಇಲ್ಲಿಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು ಇಲ್ಲಿಯ ಜನತೆ ಬಹಳ ತೊಂದರೆ ಅನುಭವಿಸುವಂತಾಗಿದೆ.

ಇಲ್ಲಿನ ಬಸವೇಶ್ವರ ವೃತ್ತ, ಕೋಟವಾಳು, ಬಿಳಗೂಲಿ, ರಘುಪತಿಕೊಪ್ಪಲು, ಜನತಾಹೌಸ್‌, ಐ.ಬಿ. ಸರ್ಕಲ್‌ ರಸ್ತೆ ಮುಂತಾದ ಕಡೆ ಹೋಗುವ ರಸ್ತೆಗಳಲ್ಲಿ ಹತ್ತಾರು ವರ್ಷಗಳ ಹಿಂದೆ ಹಾಕಿರುವ ಪೈಪು, ವಾಲ್‌್ವಗಳು ಕೆಲವು ಕಡೆಗಳಲ್ಲಿ ಪೈಪು ಒಡೆದ ಜಾಗದಲ್ಲಿ ಕಲ್ಮಶ ನೀರು ಹರಿಯುವ ಉದಾಹರಣೆಗಳಾಗಿದ್ದು, ನದಿಯಿಂದ ಬರುವ ಕುಡಿವ ನೀರಿನೊಂದಿಗೆ ಮಿಶ್ರವಾಗಿ ಮನೆಗಳಿಗೆ ಸರಬರಾಜಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಹೇಮಾವತಿ ನೀರಿಗಾಗಿ ಸಿಎಂ ಬಳಿಗೆ ನಿಯೋಗ .

ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ನೀರಿನ ಹಳೆ ನೀರಿನ ಟ್ಯಾಕ್‌ ಇದ್ದು, ಇಲ್ಲಿಯ ನೀರು ಎತ್ತುವ ಮೋಟರ್‌ ಹತ್ತಿರ ಕುಡಿಯುವ ನೀರಿನ ಪಂಪುಹೌಸ್‌ ಇದ್ದು, ಕಾವೇರಿ ನದಿಯಲ್ಲಿ ಹೊಸ ನೀರು ಬರುತ್ತಿದ್ದು, ಕುಡಿಯುವ ನೀರು ಮಲಿನವಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ಎಚ್‌.ಎಸ್‌. ಶಂಕರ್‌.

ಇನ್ನು ಮುಂದೆ ಈ ಭಾಗದ ಜಾಗದಲ್ಲಿ ಯಾವುದೇ ತರಹದ ಹೋಮಚಾರ, ಮಾಟ-ಮಂತ್ರ ತಡೆ ಹೊಡೆಯುವುದನ್ನು ಗ್ರಾಮ ಪಂಚಾಯಿತಿಯವರು ಕಟ್ಟುನಿಟ್ಟು ಕ್ರಮ ಕೈಗೊಂಡರೂ ಸಹ ಇಲ್ಲಿಯ ವಾಮಚಾರಗಳು ಕದ್ದು, ಮುಚ್ಚಿ ನಡೆಯುತ್ತಲೇ ಇದ್ದು, ಸ್ವಚ್ಚತೆ ಇಲ್ಲವಾಗಿದೆ ಸಾರ್ವಜನಿಕರು.

KGF ಬೆಡಗಿಯ ವಾಟರ್ ಬೇಬಿ ಲುಕ್ ವೈರಲ್: ಇಲ್ಲಿವೆ ಫೋಟೋಸ್

ಶುದ್ಧ ನೀರಿಗೆ ಆಗ್ರಹ:  ಮೊದಲು ಭೂಮಿಯ ಮೇಲ್ಮಟ್ಟದ ನೀರನ್ನು ಮಾತ್ರ ಬಳಸುತ್ತಿದ್ದವು. ಅದರೆ ಈಗ ಬಹುತೇಕ ಅಂತರ್ಜಲವನ್ನು ಅವಲಂಬಿಸಿದ್ದೇವೆ. ನೀರಿನ ಮೂಲದಿಂದ ಬಳಕೆದಾರರವರೆಗೆ ಬರುವ ಮಾರ್ಗದಲ್ಲಿ ಉಂಟಾಗಬಹುದಾದ ಸೋರಿಕೆಯಿಂದಾಗಿ ನೀರು ವ್ಯರ್ಥವಾಗುವುದರ ಜೊತೆಗೆ ಕಲುಷಿತಗೊಳ್ಳುವುದರಿಂದ ಹಲವಾರು ಸಂಕ್ರಮಿಕ ರೋಗಗಳು ಹರಡಲು ಕಾರಣವಾಗಿದೆ. ಕಲುಷಿತ ನೀರಿನಿಂದ ಹರಡಬಹುದಾದ ಅತಿಸಾರ, ಕರಳುಬೇನೆ, ರಕ್ತಭೇದಿ, ಕಲರಾ ಪೋಲಿಯೋ ಮುಂತಾದ ಕಾಯಿಲೆಗಳು ಹರಡದ ರೀತಿ ಉತ್ತಮ ನೀರು ವ್ಯವಸ್ಥೆ ಮಾಡಬೇಕಾಗಿದೆ ಎಂದು ಪಂಚಾಯಿತಿ ಮಾಜಿ ಸದಸ್ಯ ಎಚ್‌.ಎಸ್‌. ಶಂಕರ್‌ ಆಗ್ರಹಿಸಿದ್ದಾರೆ.

ಇಲ್ಲಿಯ ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಕಾರ್ಯ ನಿರ್ವಾಣಾ​ಧಿಕಾರಿಗಳು ಮತ್ತು ಜಿಲ್ಲಾಧಿ​ಕಾರಿಗಳಿಗೆ ಶುದ್ಧ ನೀರು ಪೂರೈಕೆಗೆ ಶುದ್ಧೀಕರಣ ಯಂತ್ರದ ನೀರಿನ ವ್ಯವಸ್ಥೆ ಮಾಡುವಂತೆ ಈಗಾಗಲೇ ಮನವಿ ಮಾಡಲಾಗಿದೆ. ಅಲ್ಲದೇ ಕಾವೇರಿ ನದಿಯ ದಂಡೆಯಲ್ಲಿ ಇನ್ನು ಮುಂದೆ ಯಾವುದೇ ತರಹದ ಹೋಮಚಾರ, ಮಾಟ-ಮಂತ್ರ ತಡೆ ಹೊಡೆಯುವುದನ್ನು ಕಟ್ಟುನಿಟ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿ​ಕಾರಿ ವಿಜಯಕುಮಾರ್‌ ಭರವಸೆ ನೀಡಿದ್ದಾರೆ.

click me!