ನಿಯಮದಂತೆ ಮಾತು ತಪ್ಪಿದ ಗೋಲ್ಡನ್ ಹೋಮ್ಸ್ ಬಿಲ್ಡರ್(Golden homes builder)ಗೆ ಜಿಲ್ಲಾ ಗ್ರಾಹಕರ ಆಯೋಗ ಪ್ಲ್ಯಾಟ್ ತೆಗೆದುಕೊಂಡವರಿಗೆ ಕ್ರಯ ಪತ್ರ ಬರೆದುಕೊಡುವಂತೆ ಆದೇಶಿಸಿದೆ.
ಧಾರವಾಡ (ಜು.2) : ನಿಯಮದಂತೆ ಮಾತು ತಪ್ಪಿದ ಗೋಲ್ಡನ್ ಹೋಮ್ಸ್ ಬಿಲ್ಡರ್(Golden homes builder)ಗೆ ಜಿಲ್ಲಾ ಗ್ರಾಹಕರ ಆಯೋಗ ಪ್ಲ್ಯಾಟ್ ತೆಗೆದುಕೊಂಡವರಿಗೆ ಕ್ರಯ ಪತ್ರ ಬರೆದುಕೊಡುವಂತೆ ಆದೇಶಿಸಿದೆ.
ಹುಬ್ಬಳ್ಳಿಯ ಕಾರವಾರ ರಸ್ತೆಯ ಗೋಲ್ಡನ್ ಹೈಟ್ಸ್ ಅಪಾರ್ಟ್‌ಮೆಂಟ್(Golden Heights Apartment) ನಿವಾಸಿ ಕಾಂತಾ ನಂದಿಕೇಶ್ವರ(Kanta nandikeshwar) ಅನ್ನುವವರು 2011ನೇ ಇಸವಿಯಲ್ಲಿ ಗೋಲ್ಡನ್ ಹೋಮ್ಸ್ ಬಿಲ್ಡರ್ಸ್ ಕಡೆಯಿಂದ .20.42ಲಕ್ಷಕ್ಕೆ ಪ್ಲ್ಯಾಟ್ ನಂ.ಜಿ-004 ಖರೀದಿಸಿದ್ದರು. ಈ ಬಗ್ಗೆ ಉಭಯತರ ಮಧ್ಯೆ ಖರೀದಿ ಒಪ್ಪಂದ ಪತ್ರ ಆಗಿತ್ತು.
ಪ್ರಿಂಟರ್ ಬುಕ್ ಮಾಡಿದ ವ್ಯಕ್ತಿಗೆ ಸ್ಪೀಕರ್ ಡೆಲಿವರಿ: ಅಮೆಜಾನ್‌ಗೆ 30,000 ದಂಡ..!
ಪ್ಲ್ಯಾಟ್ ಕಟ್ಟಿಸಿ ಸ್ವಾಧೀನತೆ ಕೊಟ್ಟಿದ್ದರೂ ಸದರಿ ಬಿಲ್ಡರ್ಸ್ ದೂರುದಾರರಿಗೆ ನೋಂದಾಯಿತ ಕ್ರಯ ಪತ್ರ ಮಾಡಿಕೊಟ್ಟಿರಲಿಲ್ಲ. ಆ ಕಾರಣದಿಂದ ಗೋಲ್ಡನ್ ಹೋಮ್ಸ್ ಬಿಲ್ಡ್‌ರ್ಸ್‌ನವರು ಸೇವಾ ನ್ಯೂನ್ಯತೆ ಎಸಗಿ ತನಗೆ ಮೋಸ ಮಾಡಿದ್ದಾರೆ ಎಂದು ಅವರ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗ(District Consumer Commission)ಕ್ಕೆ ದೂರು ಸಲ್ಲಿಸಿದ್ದರು.
ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿಮತ್ತು ಪ್ರಭು ಹಿರೇಮಠ, ದೂರುದಾರರ ಪೂರ್ತಿ ಹಣಕೊಟ್ಟಮೇಲೆ ಈ ಬಗ್ಗೆ ನೋಂದಾಯಿತ ಕ್ರಯ ಪತ್ರ ಮಾಡಿಕೊಡದೇ ಇರುವುದು ಸೇವಾ ನ್ಯೂನ್ಯತೆ. ತೀರ್ಪು ನೀಡಿದ 45 ದಿವಸಗಳ ಒಳಗಾಗಿ ದೂರುದಾರರ ಪರವಾಗಿ ನೋಂದಾಯಿತ ಕ್ರಯಪತ್ರ ಮಾಡಿಕೊಡುವಂತೆ ಆದೇಶಿಸಿದೆ.
ಧಾರವಾಡ: ಮನೆ ಪೂರ್ತಿಗೊಳಿಸದ ಗುತ್ತಿಗೆದಾರಗೆ ₹7.50 ಲಕ್ಷ ದಂಡ!
ಅದಕ್ಕೆ ತಪ್ಪಿದ್ದಲ್ಲಿ ಕೋರ್ಟ್ ಕಮೀಷನರ್ ಮೂಲಕ ದೂರುದಾರರು ತನ್ನ ಸ್ವಂತ ಖರ್ಚಿನಲ್ಲಿ ನೋಂದಾಯಿತ ಕ್ರಯ ಪತ್ರ ಪಡೆಯಲು ಅರ್ಹರಿದ್ದಾರೆ ಎಂದು ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ.