ತಮ್ಮ ನೆಚ್ಚಿನ ತಾರೆಯನ್ನು ಕಣ್ಣುಂಬಿಸಿಕೊಳ್ಳಲು ಆಗಮಿಸಿದ್ದ ಜನರ ನೂಕು ನುಗ್ಗಲು ನಿಭಾಯಿಸಲು ಪೊಲೀಸರು ಹಾಗೂ ಶಾಪಿಂಗ್ ಮಾಲ್ ಖಾಸಗಿ ಸುರಕ್ಷಾ ಸಿಬ್ಬಂದಿ ಹೆಣಗಾಡಿದರು. ನೂಕು ನುಗ್ಗಲಿನಲ್ಲಿ ಕೆಲವು ಬೈಕ್ ಗಳು ಜಖಂ ಆದವು. ಮಹಿಳೆಯೊಬ್ಬರು ಕೆಳಗೆ ಬಿದ್ದು ಮೇಲೇಳಲು ಹೆಣಗಾಡಿದರು. ಏತನ್ಮಧ್ಯೆ ಅಭಿಮಾನಿಗಳು ರಚಿತಾ ರಾಮ್ ಮೇಲೆ ಮುಗಿಬಿದ್ದು ಸೆಲ್ಫಿಗಾಗಿ ಮೊರೆ ಇಟ್ಟರು.
ಕಲಬುರಗಿ(ಜ.07): ನಗರದ ವಿಧಾನಸೌಧ ಎದುರಿನ ಮುಖ್ಯ ರಸ್ತೆ ಬದಿ ತಲೆ ಎತ್ತಿರುವ ಬೃಹತ್ ಮಾಂಗಳ್ಯ ಶಾಪಿಂಗ್ ಮಾಲ್ ಸೋಮವಾರ ಲೋಕಾರ್ಪಣೆಗೊಂಡಿತು. ಕನ್ನಡದ ಖ್ಯಾತ ಚಿತ್ರನಟಿ ರಚಿತಾ ರಾಮ್ ನೂತನ ಶಾಪಿಂಗ್ ಮಾಲ್ ಉದ್ಘಾಟಿಸಿ, ಕಲಬುರಗಿ ಸೇರಿದಂತೆ ಸುತ್ತಲಿನ ಜನರ ಮನದಾಸೆ ತಣಿಸುವ ನಿಟ್ಟಿನಲ್ಲಿ ಮಾಂಗಳ್ಯ ಶಾಪಿಂಗ್ ಮಾಲ್ ಪ್ರಧಾನ ಪಾತ್ರ ವಹಿಸಲಿದೆ ಎಂದರು.
ತಮ್ಮ ನೆಚ್ಚಿನ ತಾರೆಯನ್ನು ಕಣ್ಣುಂಬಿಸಿಕೊಳ್ಳಲು ಆಗಮಿಸಿದ್ದ ಜನರ ನೂಕು ನುಗ್ಗಲು ನಿಭಾಯಿಸಲು ಪೊಲೀಸರು ಹಾಗೂ ಶಾಪಿಂಗ್ ಮಾಲ್ ಖಾಸಗಿ ಸುರಕ್ಷಾ ಸಿಬ್ಬಂದಿ ಹೆಣಗಾಡಿದರು. ನೂಕು ನುಗ್ಗಲಿನಲ್ಲಿ ಕೆಲವು ಬೈಕ್ ಗಳು ಜಖಂ ಆದವು. ಮಹಿಳೆಯೊಬ್ಬರು ಕೆಳಗೆ ಬಿದ್ದು ಮೇಲೇಳಲು ಹೆಣಗಾಡಿದರು. ಏತನ್ಮಧ್ಯೆ ಅಭಿಮಾನಿಗಳು ರಚಿತಾ ರಾಮ್ ಮೇಲೆ ಮುಗಿಬಿದ್ದು ಸೆಲ್ಫಿಗಾಗಿ ಮೊರೆ ಇಟ್ಟರು.
ಮದ್ವೆ ಬಗ್ಗೆ ಗುಡ್‌ನ್ಯೂಸ್ ಕೊಡ್ತೀನೆಂದ ರಚಿತಾ ರಾಮ್: ಫಸ್ಟ್ ನೈಟ್ ಹೇಳಿಕೆಯಿಂದ ಸುಮ್ಮನಾದ್ರಾ?
ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಮೇಯರ್ ಯಲ್ಲಪ್ಪ ನಾಲ್ನೋಡಿ, ಮಾಜಿ ಮೇಯರ್ ವಿಶಾಲ ದರ್ಗಿ, ಮಾಂಗಳ್ಯ ಮಾಲ್ ನಿರ್ದೇಶಕರು ಹಾಗೂ ಮಾಲೀಕ ರಾದ ಕಾಸಂ ನಮಃ ಶಿವಾಯ, ಕಾಸಂ ಮಲ್ಲಿಕಾರ್ಜುನ, ಕಾಸಂ ಕೇದಾರನಾಥ, ಕಾಸಂ ಶಿವಪ್ರಸಾದ, ಪುಲ್ಲೂರು ಅರುಣ ಕುಮಾರ್, ಸರಾಫ್ ಸಂಘ ಹಾಗೂ ಆರ್ಯ ವೈಶ್ಯ ಸಮಾಜ ಅಧ್ಯಕ್ಷರಾದ ರಾಘವೇಂದ್ರ ಮೈಲಾಪೂರ ಇದ್ದರು.
ಮಾಂಗಳ್ಯ ಸಂಸ್ಥೆ ಕಳೆದ ಸೆಪ್ಟೆಂಬರ್ ನಲ್ಲಿ ಕರ್ನಾಟಕದ ಮೊದಲ ಮಾಲ್ ರಾಯಚೂರಿನಲ್ಲಿ ಆರಂಭಿಸಿದ್ದು, ಕಲಬುರಗಿಯಲ್ಲಿ 2ನೇ ಮಾಲ್ ಇಂದು ಆರಂಭಿಸಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಇನ್ನೂ ಮೂರು ಮಾಂಗಳ್ಯ ತೆರೆಯುವ ಉದ್ದೇಶವಿದೆ ಸಂಸ್ಥೆಯ ಮೂಲಗಳು ತಿಳಿಸಿವೆ.