ಹುಲಿಕಲ್ ಘಾಟ್‌ನಲ್ಲಿ ಮಧ್ಯರಾತ್ರಿ 60 ಅಡಿ ಪ್ರಪಾತಕ್ಕೆ ಉರುಳಿ ಬಿದ್ದ ಖಾಸಗಿ ಬಸ್; 45 ಪ್ರಯಾಣಿಕರಿಗೆ ಗಾಯ!

By Sathish Kumar KH  |  First Published Jan 7, 2025, 12:33 PM IST

ಶಿವಮೊಗ್ಗ ಜಿಲ್ಲೆಯ ಹುಲಿಕಲ್ ಘಾಟ್ ರಸ್ತೆಯಲ್ಲಿ ಬಸ್ ಬ್ರೇಕ್ ಫೈಲ್ ಆಗಿ 60 ಅಡಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. 45 ಪ್ರಯಾಣಿಕರಿದ್ದ ಬಸ್‌ನಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ಶಿವಮೊಗ್ಗ (ಜ.07): ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ ರಸ್ತೆ ತಿರುವಿನಲ್ಲಿ ಸಂಚರಿಸುತ್ತಿದ್ದ ಬಸ್ ಬ್ರೇಕ್ ಫೈಲ್ ಆಗಿ ಸುಮಾರು 60 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದು ಯಾವುದೇ ಪ್ರಾಣಾಪಾಯ ಆಗಿಲ್ಲ.

ದಾವಣಗೆರೆಯಿಂದ ಮಂಗಳೂರು ಮಧ್ಯೆ ಸಂಚರಿಸುತ್ತಿದ್ದ ಖಾಸಗಿ ಬಸ್  ಮೊನ್ನೆ ರಾತ್ರಿ 1.45 ಗಂಟೆಗೆ ಘಾಟಿ ರಸ್ತೆಯ ಶಿವಮೊಗ್ಗ ಜಿಲ್ಲೆ ಗಡಿ ಭಾಗದ ತಿರುವಿನಲ್ಲಿ ಬ್ರೇಕ್ ಫೈಲ್ ಆಗಿದ್ದು ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಪ್ರಪಾತಕ್ಕೆ ಉರುಳಿದೆ. ಈ ಖಾಸಗಿ ಬಸ್‌ನಲ್ಲಿ ಒಟ್ಟು 45 ಮಂದಿ ಪ್ರಯಾಣಿಕರಿದ್ದರು. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

Tap to resize

Latest Videos

ಇದನ್ನೂ ಓದಿ: ಭಗ್ನಪ್ರೇಮಿಯ ಕ್ರೈಂ ಡೈರಿ: ಬ್ರೇಕಪ್‌ ಮಾಡಿಸಿದವರ ಬಾಳು ಮುಗಿಸಲು ಗಿಫ್ಟ್‌ ಮಾಡಿದ್ದ ವಿಷದ ಲಡ್ಡು!

ಇನ್ನು ಹುಲಿಕಲ್ ಬಳಿಯ ಈ ಘಾಟ್ ರಸ್ತೆಯ ಎರಡೂ ಬದಿ ಯಾವುದೇ ತಡೆಗೋಡೆ ಇಲ್ಲ. ರಸ್ತೆ ಬದಿ ಮಣ್ಣು ಹಾಕಿ ಎತ್ತರಿಸಲಾಗಿದ್ದು, ಬದಿಗೆ ಅಳವಡಿಸಿರುವ ಕಬ್ಬಿಣದ ಪಟ್ಟಿಗಳು ಮುಚ್ಚಿಹೋಗಿವೆ. ಇದರಿಂದ ಹೆಚ್ಚಿನ ಅಪಘಾತ ಸಂಭವಿಸುತ್ತಿವೆ. ತಡೆಗೋಡೆ ನಿರ್ಮಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಚಾಲಕ ಬಸವರಾಜ ಒತ್ತಾಯಿಸಿದ್ದಾರೆ. ಇನ್ನು ಯಾರಿಗೂ ಪ್ರಾಣಾಪಾಯ ಆಗದಿರುವುದೇ ನಮ್ಮ ಪುಣ್ಯವಾಗಿದೆ. ಸಾರ್ವಜನಿಕರು ಹಾಗೂ ಪ್ರಯಾಣಿಕರ ಜೀವದ ಜೊತೆಗೆ ಚೆಲ್ಲಾಟವಾಡದೇ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡಿ, ತಡೆಗೋಡೆ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

click me!