ಹೊಸದೊಂದು ವಿಚಿತ್ರ ಕೀಟ ಬಂದಿದೆ. ಇದು ಕಚ್ಚಿದ್ರೆ ಕೆಲವೇ ಕ್ಷಣಗಳಲ್ಲಿ ಸಾವು ಖಚಿತ ಇಂತದೊಂದು ವಾಟ್ಸಪ್ ಸಂದೇಶ ಕಲಬುರಗಿ ಜಿಲ್ಲೆಯ ರೈತರಲ್ಲಿ ಆತಂಕ ಸೃಷ್ಟಿಸಿದೆ. ರೈತರು ಮತ್ತು ಕೃಷಿ ಕಾರ್ಮುಕರು ಹೊಲಕ್ಕೆ ಹೋಗಲು ಹೆದರುತ್ತಿದ್ದಾರೆ.
ವರದಿ :- ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್ ಕಲಬುರಗಿ
ಕಲಬುರಗಿ (ಜು.23):- ಹೊಸದೊಂದು ವಿಚಿತ್ರ ಕೀಟ ಬಂದಿದೆ. ಇದು ಕಚ್ಚಿದ್ರೆ ಕೆಲವೇ ಕ್ಷಣಗಳಲ್ಲಿ ಸಾವು ಖಚಿತ ಇಂತದೊಂದು ವಾಟ್ಸಪ್ ಸಂದೇಶ ಕಲಬುರಗಿ ಜಿಲ್ಲೆಯ ರೈತರಲ್ಲಿ ಆತಂಕ ಸೃಷ್ಟಿಸಿದೆ. ರೈತರು ಮತ್ತು ಕೃಷಿ ಕಾರ್ಮುಕರು ಹೊಲಕ್ಕೆ ಹೋಗಲು ಹೆದರುತ್ತಿದ್ದಾರೆ.
undefined
ಹೌದು ! ಈ ವಾಟ್ಸಪ್ ಸಂದೇಶ ಕಲಬುರಗಿ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಚಿಂಚೋಳಿ ತಾಲೂಕಿನ ಹಲವೆಡೆ ಭಾರಿ ವೈರಲ್ ಆಗಿದೆ. ಒಂದು ವಿಚಿತ್ರವಾದ ಕೀಟದ ಫೋಟೋ.. ಹೊಲದಲ್ಲಿ ಇಬ್ಬರು ವ್ಯಕ್ತಿ ಸತ್ತು ಬಿದ್ದಿರುವ ಫೋಟೋ.. ಮತ್ತು ಈ ಕೀಟ ಕಚ್ಚಿದ್ರೆ ಕ್ಷಣದಲ್ಲೇ ಸತ್ತೆ ಹೋಗ್ತಿರಿ ಹುಷಾರ್ ಎನ್ನುವ ಆಡಿಯೋ ಸಂದೇಶ ಒಳಗೊಂಡ ಮಾಹಿತಿ ರೈತರನ್ನು ಕಂಗೆಡಿಸಿದೆ.
ಈ ಸಂದೇಶ ದಿನದಿಂದ ದಿನಕ್ಕೆ ಕಲಬುರಗಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್ ಆಗುತ್ತಿದೆ. ಸದ್ಯ ಮಳೆ ಆಗಿದ್ದು, ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಆದ್ರೆ ಈ ಕೀಟದ ಭಯದಿಂದ ಕೆಲವೆಡೆ ರೈತರು ಮತ್ತು ಕೃಷಿ ಕಾರ್ಮಿಕರು ಹೊಲಕ್ಕೆ ಹೋಗಲು ಹೆದರುತ್ತಿದ್ದಾರೆ.
ಹೆಬ್ಬುಲಿ ಹೇರ್ ಕಟ್ ಮಾಡಿಸಿದವರಿಗಿಲ್ಲ ಶಾಲೆ ಪ್ರವೇಶ; ಶಿಸ್ತು ತರಲು ಶಾಪ್ ಮಾಲೀಕರಿಗೆ ಮುಖ್ಯಶಿಕ್ಷಕರ ಪತ್ರ!
ಕೃಷಿ ಇಲಾಖೆ ಸ್ಪಷ್ಟೀಕರಣ
ವಿಚಿತ್ರ ಕೀಟ ಕಚ್ಚಿ ರೈತರಿಬ್ಬರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿಯೇ ಸುಳ್ಳು. ಇದು ಕೇವಲ ವದಂತಿ. ಯಾವ ರೈತರೂ ಆತಂಕ ಪಡಬೇಕಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮ್ಮದ್ ಪಟೇಲ್ ರೈತರಿಗೆ ಅಭಯ ನೀಡಿದ್ದಾರೆ.
ವೈರಲ್ ಆಗಿರುವ ಸಂದೇಶದಲ್ಲಿರುವ ಕೀಟದ ಹೆಸರು ಸೆರ್ಸಾ ಲ್ಯಾಪಿಡಾ (Cersa Lapida). ಈ ಹುಳು ಕಡಿತದಿಂದ ಮನುಷ್ಯ ಸಾವನಪ್ಪುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಸ್ಪಷ್ಟನೆ ನೀಡಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ವಾಟ್ಸ್ಯಾಪ್ ಗ್ರೂಪ್‍ನಲ್ಲಿ ಸೆರ್ಸಾ ಲ್ಯಾಪಿಡಾ (Cersa Lapida) ಹುಳು ಕಡಿದರೆ ಮನುಷ್ಯ ಸಾವನ್ನಪ್ಪುತ್ತಾನೆ ಎಂಬ ಧ್ವನಿ ಸಂದೇಶದ ಜೊತೆಗೆ ಸದರಿ ಹುಳುವಿನ ಫೋಟೋ ಹರಿದಾಡುತ್ತಿದ್ದು, ಇದು ಶುದ್ಧ ಸುಳ್ಳಿನ ಸಂದೇಶವಾಗಿದೆ. ಈ ಹುಳು ಕಡಿತದಿಂದ ಮನುಷ್ಯ ಸಾವನ್ನಪ್ಪುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಇದರವೈಜ್ಞಾನಿಕ ಹೆಸರು ಸೆರ್ಸಾ ಲ್ಯಾಪಿಡಾ
ವಾಟ್ಸ್ಯಾಪ್ ಗ್ರೂಪ್‍ನಲ್ಲಿ ಹರಿದಾಡುತ್ತಿರುವ ಹುಳುವಿನ ವೈಜ್ಞಾನಿಕ ಹೆಸರು ಸೆರ್ಸಾ ಲ್ಯಾಪಿಡಾ (Cersa Lapida) . ಇದು ಕೇವಲ ಒಂದು ಎಲೆ ತಿನ್ನುವ ಕೀಟ, ಸರ್ವೇ ಸಾಮಾನ್ಯವಾಗಿ ಔಡಲ ಹಾಗೂ ಸೂರ್ಯಕಾಂತಿ ಬೆಳೆಗಳಲ್ಲಿ ಬಹಳ ವಿರಳವಾಗಿ ಕಂಡುಬರುತ್ತದೆ. ಇನ್ನು ಈ ಹುಳು ಎಲೆ ತಿಂದಾಗ ಹಸಿರು ಬಣ್ಣದಾಗಿರುತ್ತದೆ, ಹೂ ತಿಂದಾಗ ಹಳದಿ ಬಣ್ಣಕ್ಕೆ ಹಾಗೂ ಕಾಯಿ ತಿಂದಾಗ ಕಪ್ಪು ಬಣ್ಣಕ್ಕೆ ಸಹಜವಾಗಿ ತಿರುಗುತ್ತದೆ ಎಂಬಿತ್ಯಾದಿ ಸತ್ಯಕ್ಕೆ ದೂರವಾದ ತಪ್ಪು ಮಾಹಿತಿಯು ವಾಟ್ಸಾಪ್ ಗ್ರೂಪ್‍ನಲ್ಲಿ ಹರಿದಾಡುತ್ತಿದೆ.
ಇದು ಮೀನುಗಳ ಸೀಮೋಲ್ಲಂಘನ... ಪೋರ್ಟ್ ಕೊಚ್ಚಿಯಲ್ಲಿ ಸೆರೆಯಾದ ಅಪರೂಪದ ವೀಡಿಯೋ
ಇದೊಂದು ಕಂಬಳಿ ಹುಳು
ವಾಸ್ತವವಾಗಿ ಈ ಹುಳು ಮನುಷ್ಯನಿಗೆ ಕಡಿಯಲು ಬರುವುದಿಲ್ಲ. ಬೇರೆ ಹುಳುಗಳಂತೆ ಇದೊಂದು ಕಂಬಳಿ ಹುಳು. ಇದರಿಂದ ಮನುಷ್ಯನಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕಾರಣ ರೈತ ಭಾಂದವರು ಇಂಥ ಸುಳ್ಳು, ಸುದ್ದಿಗಳಿಗೆ ಕಿವಿಗೊಡದೆ ಕಳೆದ 4-5 ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಸಮದ್ ಪಟೇಲ್ ಅವರು ರೈತ ಬಾಂಧವರಲ್ಲಿ ಮನವಿ ಮಾಡಿದ್ದಾರೆ.
ಕಳೆದ ವರ್ಷವೂ ವೈರಲ್ ಆಗಿದ್ದ ಸಂದೇಶ
ಇದೇ ರೀತಿಯ ಸುಳ್ಳು ಸಂದೇಶ ಕಳೆದ ವರ್ಷವೂ ಸಹ ರಾಜ್ಯದ ಹಲವು ಜಿಲ್ಲೆಗಳಲ್ಲಿ ವೈರಲ್ ಆಗಿತ್ತು. ಆಗಲೂ ರೈತರು ಆತಂಕಗೊಂಡು ಹೊಲಗಳಿಗೆ ಹೋಗುವುದನ್ನೆ ಬಿಡುವ ಪರಿಸ್ಥಿತಿ ಬಂದಿತ್ತು. ಇದೀಗ ಕಲಬುರಗಿ ಜಿಲ್ಲೆಯಲ್ಲಿ ಈ ಸಂದೇಶ ಮತ್ತೆ ವೈರಲ್ ಆಗುತ್ತಿದೆ. ಆದ್ರೆ ಇನ್ನಷ್ಟು ವೈರಲ್ ಆಗುವ ಮುನ್ನವೇ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮ್ಮದ್ ಪಟೇಲ್ ಅವರು ಸ್ಪಷ್ಟೀಕರಣ ನೀಡುವ ಮೂಲಕ ರೈತರಿಗೆ ಅಭಯ ನೀಡಿದ್ದಾರೆ. ಹಾಗಾಗಿ ಇಂತಹ ಸುಳ್ಳು ಸುದ್ದಿ ಹನ್ನಿಸುವುದನ್ನು ಬಿಟ್ಟು ಕೃಷಿ ಚಟುವಟಿಕೆಗಳಿಗೆ ಸಹಕರಿಸಬೇಕಾಗಿದೆ