ಜನರಿಲ್ಲದೇ ಕ್ರಿಕೆಟ್‌ ಮೈದಾನವಾದ ಖಾಸಗಿ ಬಸ್‌ ನಿಲ್ದಾಣ

By Sujatha NR  |  First Published Jul 23, 2023, 6:12 AM IST

ರಾಜ್ಯ ಸರ್ಕಾರ ಮಹಿಳೆಯರಿಗಾಗಿ ರೂಪಿಸಿರುವ ಶಕ್ತಿ ಯೋಜನೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಖಾಸಗಿ ಬಸ್‌ಗಳ ಮಾಲೀಕರು ಮತ್ತು ಸಿಬ್ಬಂದಿಯ ಗೋಳು ಕೇಳುವರೇ ಇಲ್ಲದಂತಾಗಿದೆ.


 ಮಧುಗಿರಿ :  ರಾಜ್ಯ ಸರ್ಕಾರ ಮಹಿಳೆಯರಿಗಾಗಿ ರೂಪಿಸಿರುವ ಶಕ್ತಿ ಯೋಜನೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಖಾಸಗಿ ಬಸ್‌ಗಳ ಮಾಲೀಕರು ಮತ್ತು ಸಿಬ್ಬಂದಿಯ ಗೋಳು ಕೇಳುವರೇ ಇಲ್ಲದಂತಾಗಿದೆ.

ರಾಜ್ಯದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಪ್ರಯಾಣಿಕರಿಗೆ ಖಾಸಗಿ ಬಸ್‌ಗಳ ಸೇವೆ ಲಭ್ಯವಿದ್ದು, ಅಂದಿನಿಂದಲೂ ಸೇವೆ ಸಲ್ಲಿಸುತ್ತಾ ಬಂದಿರುವುದು ಸ್ವಾಗತಾರ್ಹ. ಆದರೆ ಪ್ರಸ್ತುತ ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿರುವುದರಿಂದ ಖಾಸಗಿ ಬಸ್‌ ಮಹಿಳೆಯರು ಬಸ್‌ ಹತ್ತಲು ಬಾರದೇ ಖಾಸಗಿ ಬಸ್‌ ನಿಲ್ದಾಣ ಸಂಪೂರ್ಣ ಭಣಗುಡುತ್ತಿದೆ. ಇದರಿಂದ ಖಾಸಗಿ ಬಸ್‌ ನಂಬಿ ಜೀವನ ನಡೆಸುತ್ತಿದ್ದ ಡ್ರೈವರ್‌, ಕ್ಲೀನರ್‌, ಕಂಡಕ್ಟರ್‌ ಮತ್ತು ಮಾಲೀಕರಿಗೂ ಆರ್ಥಿಕವಾಗಿ ದೊಡ್ಡ ಹೊಡೆತ ಬಿದ್ದಿದೆ. ಬಜೆಟ್‌ನಲ್ಲೂ ಸಹ ಇವರಿಗೆ ಯಾವುದೇ ಅನುದಾನ ಘೋಷಿಸಿಲ್ಲ. ಆರ್ಥಿಕವಾಗಿ ತತ್ತರಿಸಿರುವ ಖಾಸಗಿ ಬಸ್‌ ಮಾಲೀಕರು ಮತ್ತು ಸಿಬ್ಬಂದಿ ಈ ನಷ್ಟದಿಂದ ಹೊರ ಬರಲಾಗದೆ ಒದ್ದಾಡುವಂತಾಗಿದೆ.

Tap to resize

Latest Videos

ಖಾಸಗಿ ಬಸ್‌ಗಳಿಗೆ ಪ್ರಯಾಣ ಬೆಳಸುವವರೇ ಸಂಖ್ಯೆ ಸಂಪೂರ್ಣ ಕುಸಿದು ಸಹಸ್ರಾರು ಮಂದಿಗೆ ಮತ್ತು ಸಿಬ್ಬಂದಿ ಜೀವನ ನಿರ್ವಹಣೆಗೆ ತುಂಬಾ ತೊಂದರೆಯಾಗಿದೆ ಎಂಬುದು ಖಾಸಗಿ ಬಸ್‌ನವರ ಅಂಬೋಣ . ಇದಲ್ಲದೆ ಖಾಸಗಿ ಬಸ್‌ಗಳ ಮೇಲೆ ಅವಲಂಬಿತರಾಗಿದ್ದ ಎಲ್ಲಾ ಅಂಗಡಿಯವರು ಈಗ ವ್ಯಾಪಾರವಿಲ್ಲದೆ ಬೀದಿ ಪಾಲಾಗಿದ್ದಾರೆ. ಶಕ್ತಿ ಯೋಜನೆಯಿಂದ ಟ್ಯಾಕ್ಸಿ, ಆಟೋ ಚಾಲಕರ ಸ್ಥಿತಿ ಹೇಳ ತೀರದು. ಹಣ್ಣು ಅಂಗಡಿಗಳು, ಹೂವಿನ ವ್ಯಾಪಾರ, ಚಿಲ್ಲರೆ ವ್ಯಾಪಾರಸ್ಥರಿಗೆ, ಹೋಟಲ್‌ಗಳಿಗೆ ವ್ಯಾಪಾರವಿಲ್ಲದೆ ಖಾಸಗಿ ಬಸ್‌ ನಿಲ್ದಾಣದಲ್ಲಿ ಜನಸಂದಣಿ ಇಲ್ಲದೆ ಭಣಗುಡುತ್ತಿವೆ.

ಸರ್ಕಾರದ ಉದ್ದೇಶ ಒಳ್ಳೆಯದಿರಬಹುದು. ಆದರೆ ಖಾಸಗಿ ಬಸ್ಸಿನ ಮಾಲೀಕರು ಮತ್ತು ಸಿಬ್ಬಂದಿ ಪ್ರಯಾಣಿಕರಿಲ್ಲದೆ ಆರ್ಥಿಕ ತೊಂದರೆಗೆ ಸಿಲುಕಿದ್ದಾರೆ. ಪ್ರಯಾಣಿಕರ ಪೈಕಿ ಹೆಂಗಸರು ಸರ್ಕಾರಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದು, ಇವರಲ್ಲಿ ಯಾರು ಸಹ ಖಾಸಗಿ ಬಸ್‌ ಹತ್ತುವುದಿಲ್ಲ. ಪುರುಷರು ಮಾತ್ರ ಅಲ್ಲಲ್ಲಿ ಬೆರಳಣಿಕೆಯಷ್ಟುಮಂದಿ ಪ್ರಯಾಣಿಸುತ್ತಿರುವುದರಿಂದ ಖಾಸಗಿ ಬಸ್ಸಿನ ಓಡಾಟಕ್ಕೆ ವೆಚ್ಚವಾಗುವ ಆರ್ಥಿಕ ನಷ್ಟಉಂಟಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಖಾಸಗಿ ಬಸ್ಸಿನವರಿಗೆ ತಗಲುವ ಕೆಲವು ವೆಚ್ಚಗಳನ್ನು ಸರ್ಕಾರ ಭರಿಸಿ ಖಾಸಗಿ ಬಸ್‌ ಮಾಲೀಕರ ಮತ್ತು ಸಿಬ್ಬಂದಿಯನ್ನು ಉಳಿಸಬೇಕಿದೆ.

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಮಧುಗಿರಿ ಖಾಸಗಿ ಬಸ್‌ ನಿಲ್ದಾಣ ಕ್ರಿಕೆಟ್‌ ಮೈದಾನವಾಗಿ ರೂಪುಗೊಂಡಿದೆ. ಶಕ್ತಿ ಯೋಜನೆಯಿಂದ ಖಾಸಗಿ ಬಸ್‌

ಗಳ ಮಾಲೀಕರು ಮತ್ತು ಸಿಬ್ಬಂದಿ ಆರ್ಥಿಕ ಸ್ಥಿತಿ ದುರ್ಬಲವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಮಾಲೀಕರು ಮತ್ತು ಸಿಬ್ಬಂದಿಗೆ ಜೀವನ ನಿರ್ವಹಣೆಗೆ ಅನುಕೂಲ

ಮಾಡಿಕೊಡಬೇಕು.

ಮಂಜುನಾಥ್‌ ಖಾಸಗಿ ಬಸ್‌ ಮಾಲೀಕ, ಮಧುಗಿರಿ.

ಕಳೆದ 33 ವಷÜರ್‍ಗಳಿಂದ ಖಾಸಗಿ ಬಸ್‌ ಮಾಲೀಕರ ಬಳಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದೇನೆ. ಈ ಶಕ್ತಿ ಯೋಜನೆಯಿಂದ ನಮ್ಮ ಶಕ್ತಿ ಕುಂದಿದ್ದು ಖಾಸಗಿ ಬಸ್‌ಗಳ

ಸಿಬ್ಬಂದಿಗೆ ಅನುಕೂಲ ಕಲ್ಪಿಸಬೇಕು.

click me!