ಮಧ್ಯರಾತ್ರಿ 12.15ರ ವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ

By Kannadaprabha News  |  First Published Dec 31, 2019, 10:49 AM IST

ಹೊಸ ವರ್ಷದ ಸ್ವಾಗತಕ್ಕೆ ಸಿದ್ಧತೆಗಳು ಆರಂಭವಾಗಿದೆ. ಹೊಸ ವರ್ಷವನ್ನು ಬರ ಮಾಡಿಕೊಳ್ಳುವ ಜೋಶ್‌ನಲ್ಲಿರುವವರೆಲ್ಲರೂ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಮಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂದರ್ಭ ನೀವು ಅನುಸರಿಸಬೇಕಾದ ನಿಯಮಗಳ ಮಾಹಿತಿ ಇಲ್ಲಿದೆ.


ಮಂಗಳೂರು(ಡಿ.31): ಹೊಸ ವರ್ಷಾಚರಣೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೆಲವೆಡೆ ಸಿದ್ಧತೆಗಳು ನಡೆಯುತ್ತಿದೆ. ಮಂಗಳೂರಿನಲ್ಲಿ ಹೊಸವರ್ಷಕ್ಕೆ ಕಾರ್ಯಕ್ರಮ ಆಯೋಜನೆ ಮಾಡುವವರು ಡಿ.31ರ ಮಧ್ಯರಾತ್ರಿ 12.15ರೊಳಗೆ ಕಾರ್ಯಕ್ರಮ ಮುಕ್ತಾಯಗೊಳಿಸಬೇಕು ಎಂದು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌. ಹರ್ಷ ಸೂಚನೆ ನೀಡಿದ್ದಾರೆ.

ಸೋಮವಾರ ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ರವಾನಿಸಿದ ಕಮಿಷನರ್‌ ಡಾ.ಹರ್ಷ, ಹೊಸ ವರ್ಷ ಎಲ್ಲರಿಗೂ ಶುಭತರಲಿ... ಕಾರ್ಯಕ್ರಮವನ್ನು ಸಂಭ್ರಮ, ಜವಾಬ್ದಾರಿಯಿಂದ ಆಚರಣೆ ಮಾಡೊಣ ಎಂದು ಸಲಹೆ ನೀಡಿದ್ದಾರೆ.

Latest Videos

undefined

ತಿರುಪತಿ ಬಸ್‌ ಓಡಿಸಿದ ಭಟ್ಕಳ ಶಾಸಕ ನಾಯ್ಕ್!

ಪೋಷಕರು ಒಂದು ವಿಚಾರದಲ್ಲಿ ವಿಶೇಷ ಎಚ್ಚರ ವಹಿಸಬೇಕು. ಹೊಸ ವರ್ಷಾಚರಣೆಯ ಒಂದು ದಿನದ ಖುಷಿಗೋಸ್ಕರ ತಮ್ಮ ಮಕ್ಕಳು ಹಾಗೂ ಇನ್ಯಾರದೋ ಜೀವಕ್ಕೆ ತೊಂದರೆ ಮಾಡುವಂತಾಗಬಾರದು. ಮದ್ಯಪಾನ ಮಾಡಿ ಯಾರೂ ವಾಹನ ಚಾಲನೆ ಮಾಡಬೇಡಿ. ನಿಮಗಾಗಿ ನಿಮ್ಮ ಕುಟುಂಬ ಹಾಗೂ ಅನ್ಯರ ಕುಟುಂಬವೂ ಮನೆಯಲ್ಲಿ ಅವರಿಗಾಗಿ ಕಾಯುತ್ತಿದೆ. ದುರ್ಘಟನೆ ನಡೆದ ಮೇಲೆ ಏನೂ ಮಾಡಲಾಗಲ್ಲ. ಆದ್ದರಿಂದ ಎಚ್ಚರವಹಿಸಿ ಎಂದು ಕಮಿಷನರ್‌ ಡಾ.ಪಿ.ಎಸ್‌. ಹರ್ಷರ್‍ ಅವರು ವಿಡಿಯೋ ಸಂದೇಶದಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ.

ವರ್ಷಾಚರಣೆ: ಪ್ರಮುಖ ನಿರ್ದೇಶನಗಳು

  • ಹೊಸ ವರ್ಷಾಚರಣೆ ಕಾರ್ಯಕ್ರಮ ಆಯೋಜಿಸುವವರು ಕಾರ್ಯಕ್ರಮದ ಸಂಪೂರ್ಣ ವಿವರನ್ನೊಳಗೊಂಡ ಅರ್ಜಿಯನ್ನು ಪೊಲೀಸ್‌ ಇಲಾಖೆಗೆ ಸಲ್ಲಿಸಿ, ಕಡ್ಡಾಯವಾಗಿ ಪರವಾನಗಿ ಪಡೆಯಬೇಕು.
  • ವರ್ಷಾಚರಣೆ ಕಾರ್ಯಕ್ರಮ ಮಧ್ಯರಾತ್ರಿ 12.05ಕ್ಕೆ ಮುಗಿಯಬೇಕು, 15 ನಿಮಿಷ ನಿರ್ಗಮನಕ್ಕೆ ಅವಕಾಶ ನೀಡಲಾಗುವುದು. 12.30ರೊಳಗೆ ಜಾಗವನ್ನು ಸಂಪೂರ್ಣ ತೆರವು ಮಾಡಬೇಕು.
  • ಕಾರ್ಯಕ್ರಮ ಆಯೋಜಿಸುವವರು ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ, ಕಾರ್ಯಕ್ರಮಕ್ಕೆ ಪೊಲೀಸ್‌ ಇಲಾಖೆ ಪರವಾನಗಿ ಜತೆ ಇತರ ಇಲಾಖೆಗಳ ಅನುಮತಿ ಕಡ್ಡಾಯ ಪಡೆಯಬೇಕು. ಮದ್ಯ ಮಾರಾಟ ಅವಧಿಯನ್ನು ಸ್ಪಷ್ಟವಾಗಿ ತಿಳಿಸಬೇಕು.

ಮಂಗಳೂರು: ಇನ್ನು ಡಿಸಿ ಕಚೇರಿ ಎದುರು ಪ್ರತಿಭಟನೆ ಕಷ್ಟ

  • ಕಾರ್ಯಕ್ರಮ ಆಯೋಜಿಸುವವರು ಅಗ್ನಿಶಾಮಕ ದಳದ ವಾಹನ, ಅಂಬುಲೆನ್ಸ್‌ಗಳನ್ನು ಸ್ಥಳದಲ್ಲಿರಿಸಬೇಕು.
  • ಮಹಿಳಾ ಸುರಕ್ಷತೆಯ ಬಗ್ಗೆ ಎಚ್ಚರವಹಿಸಬೇಕು. ಒಂದು ವೇಳೆ ಯಾವುದೇ ದುರ್ಘಟನೆ ನಡೆದರೆ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಾರ್ಯಕ್ರಮ ಆಯೋಜಿಸುವವರು ಮಹಿಳಾ ಸುರಕ್ಷತಾ ಸಿಬ್ಬಂದಿ ನೇಮಿಸಬೇಕು.
  • ಕಾರ್ಯಕ್ರಮ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಮತ್ತು ಯಾವುದೇ ಸಮಯದಲ್ಲಿ ಸಂಬಂಧಪಟ್ಟಠಾಣೆಯವರು ಸಿಸಿಟಿವಿ ದಾಖಲೆ ಕೇಳಿದರೆ ಅದನ್ನು ನೀಡಬೇಕು.
  • ಬಾರ್‌ ಮತ್ತು ಇತರ ಯಾವುದೇ ಕಡೆ ಯಾವುದೇ ತೊಂದರೆಯಾದರೆ ಕರ್ನಾಟಕ ಅಬಕಾರಿ ಕಾಯ್ದೆ -1961ರ 5 ಕಲಂ(21)ರ ಪ್ರಕಾರ ಕ್ರಮಕೈಗೊಳ್ಳಲಾಗುವುದು.
  • ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು.
  • 18ವರ್ಷಕ್ಕಿಂತ ಕೆಳಗಿನವರಿಗೆ ಮದ್ಯ ವಿತರಣೆ ಮಾಡುವಂತಿಲ್ಲ. ಪೋಷಕರು ಇಲ್ಲದಿದ್ದರೆ 18 ವರ್ಷಕ್ಕಿಂತ ಕೆಳಗಿನವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡುವಂತಿಲ್ಲ.
  • ಧ್ವನಿ ವರ್ಧಕ ಬಳಸುವಾಗಲೂ ಶಬ್ದಮಾಲಿನ್ಯವಾಗದಂತೆ, ಸ್ಥಳೀಯ ನಾಗರಿಕರಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು. ಒಂದು ವೇಳೆ ನಿಯಮ ಮೀರಿದರೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು.

ಕುಡುಕರಿಗೆ ಸಬ್ಸಿಡಿ ಮದ್ಯ, ಹೊಸವರ್ಷದ ವೇಳೆ ಸರ್ಕಾರದ ಗಿಫ್ಟ್!.

  • ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಶ್ಲೀಲ ನೃತ್ಯಗಳಿಗೆ ಅವಕಾಶ ನೀಡುವಂತಿಲ್ಲಘಿ. ಹೆಣ್ಣು ಮಕ್ಕಳಿಗೆ ಶುಭ ಕೋರುವ ನೆಪದಲ್ಲಿ ಕೀಟಲೆ ಮಾಡಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು. ಅಬ್ಬಕ್ಕ ಪಡೆಯವರು ಈ ಬಗ್ಗೆ ವಿಶೇಷ ನಿಗಾ ವಹಿಸಲಿದ್ದಾರೆ.
  • ರಸ್ತೆ, ಬೀಚ್‌, ರೈಲ್ವೆ ಸ್ಟೇಷನ್‌, ಕ್ರೀಡಾಂಗಣ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ, ಮದ್ಯಪಾನ ಮಾಡಿ ಅಶ್ಲೀಲ ವರ್ತಿಸುವವರ ವಿರುದ್ಧ ಕಠಿಣ ಕ್ರಮ.
  • ವರ್ಷಾಚರಣೆ ನೆಪದಲ್ಲಿ ಅತಿವೇಗ, ನಿರ್ಲಕ್ಷ್ಯದ ಚಾಲನೆ, ಬೈಕ್‌ ವೀಲಿಂಗ್‌ ಮಾಡುವುದು ಕಂಡು ಬಂದರೆ ಟ್ರಾಫಿಕ್‌ ತಂಡ ಕಾನೂನು ಪ್ರಕಾರ ಕೈಗೊಳ್ಳಲಿದೆ.
  • ಆಸ್ಪತ್ರೆ ವಠಾರದಲ್ಲಿ ಪಟಾಕಿ ಸಿಡಿಸಿದರೆ, ಹಾಸ್ಟೆಲ್‌ಗಳ ಬಳಿ ತೊಂದರೆ ಮಾಡಿದರೆ ಕ್ರಿಮಿನಲ್‌ ಕೇಸು ದಾಖಲು ಮಾಡಲಾಗುವುದು.
click me!