Covid Rules in Karnataka : ರಾಜ್ಯದ ಗಡಿಯಲ್ಲಿ ಮತ್ತೆ ಕೊರೋನಾ ಕಟ್ಟು ನಿಟ್ಟು ಆರಂಭ

Kannadaprabha News   | Asianet News
Published : Nov 30, 2021, 07:48 AM IST
Covid Rules in Karnataka : ರಾಜ್ಯದ ಗಡಿಯಲ್ಲಿ ಮತ್ತೆ ಕೊರೋನಾ ಕಟ್ಟು ನಿಟ್ಟು ಆರಂಭ

ಸಾರಾಂಶ

ರಾಜ್ಯದ ಗಡಿಯಲ್ಲಿ ಮತ್ತೆ ಕೊರೋನಾ ಕಟ್ಟು ನಿಟ್ಟು ಆರಂಭ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಇಲ್ಲದಿದ್ದರೆ ಸ್ಥಳದಲ್ಲೇ ಪರೀಕ್ಷೆಗೆ ಒಳಪಡಬೇಕು, ಕೇರಳ ವಿದ್ಯಾರ್ಥಿಗಳ ಪರೀಕ್ಷೆಗೂ ಸೂಚನೆ

 ಮಂಗಳೂರು (ನ.30): ರೂಪಾಂತರಿ ಕೊರೋನಾ ವೈರಸ್‌ (Corona virus) ಆತಂಕದ ಹಿನ್ನೆಲೆಯಲ್ಲಿ ಕೇರಳ- ಕರ್ನಾಟಕ (Kerala Karnataka) ನಡುವಿನ ನೇರ ಮತ್ತು ಮುಖ್ಯ ಸಂಪರ್ಕ ರಸ್ತೆಯಾಗಿರುವ ತಲಪಾಡಿ ಸೇರಿದಂತೆ ಗಡಿ ಪ್ರದೇಶಗಳಲ್ಲಿ ಬಿಗಿ ತಪಾಸಣೆ ಆರಂಭವಾಗಿದೆ. ದ.ಕ. ಜಿಲ್ಲೆ (Dakshina kannada) ಪ್ರವೇಶಕ್ಕೆ ಆರ್‌ಟಿಪಿಸಿಆರ್‌  (RTPCR)ನೆಗೆಟಿವ್‌ ವರದಿ ಹೊಂದಿರುವುದು ಕಡ್ಡಾಯ ಮಾಡಿರುವುದರಿಂದ, ವರದಿ ಹೊಂದಿಲ್ಲದೆ ಇರುವವರನ್ನು ಗಡಿಯಲ್ಲೇ ಕೊರೋನಾ ಪರೀಕ್ಷೆಗೆ (corona Test) ಒಳಪಡಿಸಲಾಗುತ್ತಿದೆ. ಸೋಮವಾರದಿಂದ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.

ಅತಿ ಹೆಚ್ಚು ಜನರು ಸಂಚರಿಸುವ ತಲಪಾಡಿ ಗಡಿಯಲ್ಲಿ ಸ್ವಾಬ್‌ ಸಂಗ್ರಹಕ್ಕೆ ಆರೋಗ್ಯ ಇಲಾಖೆ (Health Department) ವ್ಯವಸ್ಥೆ ಮಾಡಿದೆ. ಇತರ ಪ್ರಮುಖ ಗಡಿ ರಸ್ತೆಗಳಲ್ಲಿ (Road) ಕೂಡ ಚೆಕ್‌ ಪೋಸ್ಟ್‌ ಹಾಕಲಾಗಿದ್ದು, ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಹೊಂದಿರದವರಿಗೆ ಎಚ್ಚರಿಕೆ ನೀಡಿ ಬಿಡಲಾಗುತ್ತಿತ್ತು. ಆರಂಭದ ದಿನವಾಗಿರುವುದರಿಂದ ಎಚ್ಚರಿಕೆ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕಟ್ಟುನಿಟ್ಟು ಪಾಲನೆ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಳಿಯಲ್ಲಿ ಸಿಬ್ಬಂದಿ ನಿಯೋಜನೆ: ಚೆಕ್‌ ಪೋಸ್ಟ್‌ಗಳಲ್ಲಿ ( check Post) ಮೂರು ಪಾಳಿಗಳಲ್ಲಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಆರೋಗ್ಯ (Health Department) , ಪೊಲೀಸ್‌ (Police department), ಕಂದಾಯ ಸಿಬ್ಬಂದಿ, ಅಧಿಕಾರಿಗಳಿಗೆ ಈ ಜವಾಬ್ದಾರಿ ನೀಡಲಾಗಿದೆ. ಕೇರಳದಿಂದ (Kerala) ಆಗಮಿಸುವ ಎಲ್ಲರೂ 72 ಗಂಟೆ ಅವಧಿಯೊಳಗಿನ ಆರ್‌ಟಿಪಿಸಿಆರ್‌ ನೆಗೆಟಿವ್‌ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಇಲ್ಲದಿದ್ದರೆ ಪರೀಕ್ಷೆಗಾಗಿ ಅವರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ತಪಾಸಣೆ: ದಕ್ಷಿಣ ಕನ್ನಡ ಜಿಲ್ಲೆಗೆ ನವೆಂಬರ್‌ 12ರಿಂದೀಚೆಗೆ ಆಗಮಿಸಿದ ಕೇರಳದ ವಿದ್ಯಾರ್ಥಿಗಳ ಪಟ್ಟಿಸಿದ್ಧಪಡಿಸಲು ಪ್ಯಾರಾ ಮೆಡಿಕಲ್‌ ಸೈಸ್ಸ್‌, ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ಎಲ್ಲ ಕಾಲೇಜುಗಳಿಗೆ ಸೂಚಿಸಲಾಗಿದೆ. ಕೇರಳದ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಅದಕ್ಕಾಗಿ ನೋಡಲ್‌ ಅಧಿಕಾರಿಗಳನ್ನು ಕಾಲೇಜುಗಳಿಗೆ ನಿಯೋಜಿಸಲಾಗಿದೆ ಎಂದು ಆರೋಗ್ಯಾಧಿಕಾರಿ ಹೇಳಿದರು. ಕಾಸರಗೋಡಿನಿಂದ ದಕ್ಷಿಣ ಕನ್ನಡಕ್ಕೆ ಪ್ರತಿದಿನ ಪ್ರಯಾಣಿಸುವವರು 14 ದಿನಗಳಿಗೊಮ್ಮೆ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗಬೇಕು ಎಂದರು.

ಮಾಲ್‌ ಪ್ರವೇಶಕ್ಕೆ ಲಸಿಕೆ ಪ್ರಮಾಣಪತ್ರ ಕಡ್ಡಾಯ!

ಮಾಲ್‌ಗಳ (Mall) ಒಳಗೆ ಪ್ರವೇಶಿಸಲು ಲಸಿಕಾ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ. ಸರ್ಕಾರಿ ಕಚೇರಿಗಳಲ್ಲಿಯೂ (Govt Office) ಸಹ ಎಲ್ಲ ಸಿಬ್ಬಂದಿಗೆ ಸ್ವತಃ ಎರಡೂ ಡೋಸ್‌ ಲಸಿಕೆ (vaccination) ನೀಡುವಂತೆ ಸೂಚಿಸಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ  ನಿಲ್ದಾಣದಲ್ಲಿ (Mangaluru International airport) ಕೂಡ ಪರೀಕ್ಷೆ ಮುಂದುವರಿಯಲಿದೆ. ಕೇರಳ ಮತ್ತು ಮಹಾರಾಷ್ಟ್ರದ (Maharshtra) ಪ್ರಯಾಣಿಕರು ವಿಮಾನ ಹತ್ತುವ ಮೊದಲು ಕೋವಿಡ್‌-19 (Covid 19)  ನೆಗೆಟಿವ್‌ ಪ್ರಮಾಣ (Negetove Report) ಪತ್ರವನ್ನು ಹೊಂದಿರಬೇಕು. ಇಲ್ಲದಿದ್ದರೆ ಅವರು ಮಂಗಳೂರಿಗೆ ಬಂದ ನಂತರ ಪರೀಕ್ಷೆಗೆ (Test) ಒಳಪಡಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದರು.

ಕೋವಿಡ್‌ನ ರೂಪಾಂತರಿತ ತಳಿ ಒಮಿಕ್ರಾನ್‌ (Omicron) ಬಗ್ಗೆ ಆತಂಕ ಬೇಡ. ಇದು ಕೆಲ ದಿನಗಳ ಹಿಂದಷ್ಟೇ ಪತ್ತೆಯಾಗಿರುವುದರಿಂದ ಆಗುವ ತೊಂದರೆಗಳ ಬಗ್ಗೆ ಇನ್ನಷ್ಟೆದಾಖಲೆ, ದೃಢತೆ ಸಿಗಬೇಕಿದೆ. ಹಾಗಿದ್ದರೂ ಇದು ಸೌಮ್ಯ ವೈರಸ್‌ (Virus) ಆಗಿದ್ದು, ಹರಡುವಿಕೆಯ ಪ್ರಮಾಣ ಹೆಚ್ಚಿನ ಮಟ್ಟದ್ದು ಎಂದು ಮಾತ್ರವೇ ಹೇಳಲಾಗುತ್ತಿದೆ. ಹಾಗಾಗಿ ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪಾಲಿಸುವುದನ್ನು ಬಿಟ್ಟು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.

- ಡಾ. ಕಿಶೋರ್‌ ಕುಮಾರ್‌, ಡಿಎಚ್‌ಒ

PREV
Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು