ನಿಯಮ ಪಾಲಿಸದ 30 ಶಾಲಾ ವಾಹನಗಳನ್ನು ಸೀಜ್ ಮಾಡಿದ RTO ಅಧಿಕಾರಿಗಳು

Published : Aug 23, 2023, 06:43 AM IST
ನಿಯಮ ಪಾಲಿಸದ 30 ಶಾಲಾ ವಾಹನಗಳನ್ನು ಸೀಜ್ ಮಾಡಿದ RTO ಅಧಿಕಾರಿಗಳು

ಸಾರಾಂಶ

ಸುರಕ್ಷತಾ ನಿಯಮಗಳನ್ನು ಪಾಲಿಸದ ಶಾಲಾ ಬಸ್‌ಗಳ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಕಾರ್ಯಾಚರಣೆ ನಡೆಸಿ 30ಕ್ಕೂ ಹೆಚ್ಚಿನ ವಾಹನಗಳನ್ನು ಜಪ್ತಿ ಮಾಡಿದರು.

ಬೆಂಗಳೂರು (ಆ.23): ಸುರಕ್ಷತಾ ನಿಯಮಗಳನ್ನು ಪಾಲಿಸದ ಶಾಲಾ ಬಸ್‌ಗಳ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಕಾರ್ಯಾಚರಣೆ ನಡೆಸಿ 30ಕ್ಕೂ ಹೆಚ್ಚಿನ ವಾಹನಗಳನ್ನು ಜಪ್ತಿ ಮಾಡಿದರು. ಸಾರಿಗೆ ಇಲಾಖೆ ಜಂಟಿ ಆಯುಕ್ತ ಶೋಭಾ ನೇತೃತ್ವದಲ್ಲಿ ಕೇಂದ್ರ ಆರ್‌ಟಿಒ ಎಲ್‌.ದೀಪಕ್‌, ಯಶವಂತಪುರ ಆರ್‌ಟಿಒ ವಿ.ಪಿ.ರಮೇಶ್‌ ಅವರ ನೇತೃತ್ವದ ಪ್ರತ್ಯೇಕ ತಂಡಗಳು ರೆಸಿಡೆನ್ಸಿ ರಸ್ತೆ, ಹೈಗ್ರೌಂಡ್ಸ್‌ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ ಶಾಲಾ ವಾಹನಗಳನ್ನು ತಡೆದು ದಾಖಲೆಗಳನ್ನು ಪರಿಶೀಲನಾ ಕಾರ್ಯ ಮಾಡಿತು. 

ಈ ವೇಳೆ ರೆಸಿಡೆನ್ಸಿ ರಸ್ತೆಯ ಪ್ರತಿಷ್ಠಿತ ಶಾಲೆಯೊಂದರ 15ಕ್ಕೂ ಹೆಚ್ಚಿನ ವಾಹನಗಳನ್ನು ಜಪ್ತಿ ಮಾಡಲಾಯಿತು.  ಜತೆಗೆ ಹೈಗ್ರೌಂಡ್ಸ್‌ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚಿನ ವಾಹನಗಳ ದಾಖಲೆಗಳು ಸರಿಯಿಲ್ಲದ ಕಾರಣ ವಶಕ್ಕೆ ಪಡೆಯಲಾಯಿತು. ವಾಹನ ತಪಾಸಣೆ ವೇಳೆ ತೆರಿಗೆ ಪಾವತಿಸದೆ, ಪರವಾನಗಿ ಪಡೆಯದೆ ಶಾಲಾ ಮಕ್ಕಳ ಸಂಚಾರಕ್ಕೆ ಸೇವೆ ನೀಡುತ್ತಿರುವುದು ಕಂಡು ಬಂದಿದೆ. ಜತೆಗೆ ಕೇಂದ್ರ ಸರ್ಕಾರದ ಸುರಕ್ಷತಾ ಮಾರ್ಗಸೂಚಿ ಪಾಲಿಸದಿರುವುದು ಪತ್ತೆಯಾಗಿದೆ. 

100 ದಿನದಲ್ಲಿ ಎತ್ತಿನಹೊಳೆಯಿಂದ ನಾಲೆಗೆ ನೀರು ಗ್ಯಾರಂಟಿ: ಡಿಕೆಶಿ

ಪ್ರಮುಖವಾಗಿ ಸಿಸಿ ಟಿವಿ ಕ್ಯಾಮೆರಾ, ಸ್ಪೀಡ್‌ ಗೌರ್ನರ್‌ ಅಳವಡಿದೇ ಇರುವುದು. ಮಕ್ಕಳು ಕಿಟಕಿಯಿಂದ ಕೈ ಹೊರಗೆ ಹಾಕದಂತೆ ಗ್ರಿಲ್‌ ಹಾಕದಿರುವುದು, ಆಸನದ ಕೆಳಭಾಗ ಬ್ಯಾಗ್‌ಗಳನ್ನು ಇಡಲು ಸ್ಥಳಾವಕಾಶ ಕಲ್ಪಿಸದಿರುವುದು, ವಾಹನ ನಿಲುಗಡೆ ಸೂಚನೆ ನೀಡುವ ದೀಪಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳದಿರುವುದು ಸೇರಿದಂತೆ ಹಲವು ಲೋಪಗಳು ವಾಹನಗಳಲ್ಲಿ ಕಂಡು ಬಂದಿದೆ. ಜತೆಗೆ ವಾಹನಗಳನ್ನು ಹತ್ತುವ ಮೆಟ್ಟಿಲು 300 ಮಿ.ಮೀ. ಅಂತರದಲ್ಲಿರಬೇಕು ಎಂಬ ನಿಯಮ ಪಾಲಿಸದಿರುವುದು ಪತ್ತೆಯಾಗಿದೆ. 

ತಮಿ​ಳು​ನಾಡಿನ ಹೊಸೂರು ಉದ್ಧಾರ ಆಗಲು ಎಚ್‌ಡಿಕೆ ಕಾರಣ: ಸಂಸದ ಡಿ.ಕೆ.ಸುರೇಶ್‌

ಹೀಗೆ ಲೋಪಗಳಿರುವ ಮತ್ತು ದಾಖಲೆ ಸಮರ್ಪಕವಾಗಿಲ್ಲದ ವಾಹನಗಳನ್ನು ಜಪ್ತಿ ಮಾಡಿ, ಮಾಲಿಕರಿಗೆ ನೋಟಿಸ್‌ ನೀಡಲಾಗಿದೆ. ಮೊದಲ ಹಂತದಲ್ಲಿ ಕೇಂದ್ರ ಮತ್ತು ಯಶವಂತಪುರ ಸಾರಿಗೆ ವಿಭಾಗದ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲೆಡೆ ಕಾರ್ಯಾಚರಣೆ ನಡೆಸಿ, ಶಾಲಾ ಮಕ್ಕಳು ಸಂಚರಿಸುವ ವಾಹನಗಳನ್ನು ತಪಾಸಣೆ ನಡೆಸಲಿದ್ದಾರೆ. ಅದರಲ್ಲೂ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳದ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸಾರಿಗೆ ಇಲಾಖೆಯ ಉದ್ದೇಶವಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on
click me!

Recommended Stories

ವಿದ್ಯಾರ್ಥಿನಿಯರ ಮೈಮುಟ್ಟಿ ಅಸಭ್ಯ ವರ್ತನೆ; ಪ್ರೌಢಶಾಲೆಗೆ ನುಗ್ಗಿ ಪ್ರಾಂಶುಪಾಲನಿಗೆ ಧರ್ಮದೇಟು ಕೊಟ್ಟ ಗ್ರಾಮಸ್ಥರು!
ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!