Online Gameನಲ್ಲಿ ಕಳೆದುಕೊಂಡ ಹಣ ಕೊಡಿಸು, ಸವದತ್ತಿ ಯಲ್ಲಮ್ಮನಿಗೆ ಭಕ್ತನ ವಿಚಿತ್ರ ಹರಕೆ

By Suvarna News  |  First Published Jun 24, 2022, 6:10 PM IST
  • ಸುಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ
  • ಹಣದ ಜೊತೆ ಚಿತ್ರ ವಿಚಿತ್ರ ಪತ್ರ ಬರೆದು ದೇವಿಗೆ ಭಕ್ತರ ಹರಕೆ
  • 40ದಿನದಲ್ಲಿ 1.13 ಕೋಟಿ ರೂಪಾಯಿ ನಗದು ಸಂಗ್ರಹ
     

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ (ಜೂನ್ 24): ಜಿಲ್ಲೆಯ ಸವದತ್ತಿ ಪಟ್ಟಣದ ಹೊರವಲಯದಲ್ಲಿ ಇರುವ ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಕರ್ನಾಟಕ ಅಷ್ಟೇ ಅಲ್ಲ ನೆರೆಯ ಮಹಾರಾಷ್ಟ್ರ ಗೋವಾ ಸೇರಿ ದೇಶದ ವಿವಿಧ ರಾಜ್ಯಗಳಿಂದ ಅಪಾರ ಭಕ್ತರು ಆಗಮಿಸುತ್ತಾರೆ. ಯಲ್ಲಮ್ಮದೇವಿಗೆ ಹರಕೆ ಹೊತ್ತು ಇಷ್ಟಾರ್ಥ ಸಿದ್ಧಿ ಬಳಿಕ ಮತ್ತೆ ಆಗಮಿಸಿ ಹರಕೆ ತೀರಿಸೋದು ಅನಾದಿ ಕಾಲದಲ್ಲಿ ನಡೆಯುತ್ತ ಬಂದಿದೆ. ಸವದತ್ತಿ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ದೇವಸ್ಥಾನ ಹುಂಡಿಯಲ್ಲಿ ಹಣದ ಜೊತೆಗೆ ಭಕ್ತರು ಹಾಕಿದ ಚಿತ್ರ ವಿಚಿತ್ರ ಪತ್ರಗಳು ಪತ್ತೆಯಾಗಿವೆ. ಪತ್ರವನ್ನು ಹುಂಡಿಗೆ ಹಾಕಿದ್ರೆ ದೇವಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆಂಬ ನಂಬಿಕೆ ಮೇಲೆ ಚಿತ್ರ ವಿಚಿತ್ರ ಪತ್ರ ಬರೆದು ಹುಂಡಿಗೆ ಹಾಕಿದ್ದಾರೆ. ಭಕ್ತರ ವಿಚಿತ್ರ ಕೋರಿಕೆ ಪತ್ರಗಳನ್ನ ಕಂಡು ಹುಂಡಿ ಖುದ್ದು ಹುಂಡಿ ಎಣಿಕೆ ಸಿಬ್ಬಂದಿ ಶಾಕ್ ಆಗಿದ್ದಾರೆ‌. 

Tap to resize

Latest Videos

ಏಳು ಕೊಳ್ಳದ ಯಲ್ಲಮ್ಮ ದೇವಿಗೆ ಹಣದ ಅಮಿಷವೊಡ್ಡಿದ್ದ ಭಕ್ತ..!
ನನಗೆ ಮಾಟ ಮಂತ್ರ ಮಾಡಿಸಿದವರಿಗೆ ತಕ್ಕ ಶಿಕ್ಷೆ  ನೀಡಿದರೆ 50,001 ರೂಪಾಯಿ ಕಾಣಿಕೆ ನೀಡುವುದಾಗಿ ಪತ್ರ ಬರೆದು ಹುಂಡಿಗೆ ಹಾಕಿದ್ದಾನೆ. ನನ್ನ ವ್ಯವಹಾರಕ್ಕೆ ಮಾಟ ಮಂತ್ರ ಮಾಡಿಸಿದ್ದಾರೆ,ಇದರಿಂದ ಸಾಲಗಾರರ ಕಾಟ ಶುರುವಾಗಿದೆ. ಆನ್‌ಲೈನ್ ಗೇಮ್‌ನಲ್ಲಿ ಕಳೆದುಕೊಂಡ ಹಣ ಮರಳಿ ಬರುವಂತೆ ಮಾಡು ತಾಯಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಷ್ಟೇ ಅಲ್ಲದೇ ಆನ್ ಲೈನ್ ಗೇಮ್ ಆಡಲು ಮನಸ್ಸು ಬರದಂತೆ ಮಾಡು ಎಂದು ಮನವಿ ಮಾಡಿಕೊಂಡಿದ್ದಾನೆ‌. ಇನ್ನು ಯಲ್ಲಮ್ಮ ದೇವಸ್ಥಾನಕ್ಕೆ ನೆರೆಯ ಮಹಾರಾಷ್ಟ್ರದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.‌ ಕೆಲವರು ಮರಾಠಿ ಭಾಷೆಯಲ್ಲೂ ದೇವಿ ಹುಂಡಿಗೆ ಪತ್ರ ಬರೆದು ಹಾಕಿದ್ದಾರೆ.

40 ದಿನಗಳಲ್ಲಿ 1.13ಕೋಟಿ ಹಣ ಸಂಗ್ರಹ..!
ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ ಹುಂಡಿಯಲ್ಲಿ 40 ದಿನಗಳಲ್ಲಿ ಬರೋಬ್ಬರಿ 1.13 ಕೋಟಿ ರೂಪಾಯಿ ನಗದು ಸಂಗ್ರಹ ಮಾಡಿದ್ದಾರೆ. 22 ಲಕ್ಷ‌ ರೂಪಾಯಿ ಮೌಲ್ಯದ ಬಂಗಾರ, 3.86ಲಕ್ಷ ರೂ ಮೌಲ್ಯದ ಬೆಳ್ಳಿ ಆಭರಣ ಪತ್ತೆಯಾಗಿದೆ ಎಂದು ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ.ದೊಡಗೌಡರ ತಿಳಿಸಿದ್ದಾರೆ.

India@75: ಹೋರಾಟಕ್ಕೆ ಶಕ್ತಿ ತುಂಬಿದ ಬೆಳಗಾವಿ ಗಣೇಶೋತ್ಸವ , ತಿಲಕರಿಂದ ಪ್ರಾರಂಭ

ಗಂಟಲಲ್ಲಿ ಸಿಕ್ಕ ಕೃಷ್ಣನ ಮೂರ್ತಿ, ಕಾಪಾಡಿದನಾ ಆ ದೇವರು?
ದೇವರಿಗೆ ಪೂಜೆ ಮಾಡಿ ತೀರ್ಥ ಸೇವಿಸುವ ವೇಳೆ ಅಂಗೈಯಲ್ಲಿ ಇಟ್ಟುಕೊಂಡಿದ್ದ ಬಾಲ ಕೃಷ್ಣನ (Bal Krishna) ಲೋಹದ ಮೂರ್ತಿಯನ್ನು 45 ವರ್ಷದ ವ್ಯಕ್ತಿಯೋರ್ವ ನುಂಗಿದ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ. ಬೆಳಗಾವಿ ಮೂಲದ 45 ವರ್ಷದ ವ್ಯಕ್ತಿಯೋರ್ವ ನಿತ್ಯ ದೇವರ ಪೂಜೆ ಮಾಡಿ ಬಳಿಕ ದೇವರತೀರ್ಥ ಸೇವನೆ ಮಾಡುವ ಅಭ್ಯಾಸ ರೂಢಿ ಮಾಡಿಕೊಂಡಿದ್ದ. ಎಂದಿನಂತೆ ತೀರ್ಥ ಸೇವನೆ ಮಾಡುವಾಗ ಅಚಾತುರ್ಯದಿಂದ ಲೋಹದ ಬಾಲ ಕೃಷ್ಣ ಮೂರ್ತಿಯನ್ನೇ ನುಂಗಿದ್ದಾನೆ. ಬಳಿಕ ಆ ವ್ಯಕ್ತಿಗೆ ಗಂಟಲು ನೋವು ಮತ್ತು ಗಂಟಲು ಊತ ಉಂಟಾಗಿ ಸ್ಥಳಿಯ ವೈದ್ಯರನ್ನ ಸಂಪರ್ಕಿಸಿದ್ದ. 

ಆಗ ಸ್ಥಳಿಯ ವೈದ್ಯರು ಎಕ್ಸರೇ ಮಾಡಿಸಲು ಸೂಚಿಸಿದ್ದಾರೆ. ಎಕ್ಸರೇ (X-Ray) ರಿಪೋರ್ಟ್‌ನಲ್ಲಿ ಕೃಷ್ಣ ಇರುವ ವಿಗ್ರಹ ಗಂಟಲಿನಲ್ಲಿದ್ದಿದ್ದು ಪತ್ತೆಯಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಗೆ ದಾಖಲಾಗಿದ್ದಾನೆ.

ದೀಪ ಹಚ್ಚುವಾಗ ಈ ನಿಯಮಗಳನ್ನು ಪಾಲಿಸುತ್ತಿದ್ದೀರಾ?

ಬಾಲ ಕೃಷ್ಣನ ಮೂರ್ತಿಯ ಎಡಗಾಲು ವ್ಯಕ್ತಿಯ ಆಹಾರ ನಾಳದಲ್ಲಿ ಸಿಲುಕಿತ್ತು. ಇದನ್ನ ಎಂಡೋಸ್ಕೋಪ್ ಮಾಡಿ ದೃಢಪಡಿಸಿಕೊಂಡು ಇಎನ್‌ಟಿ (ENT) ವಿಭಾಗದ ವೈದ್ಯರು ಯಶಸ್ಬಿ ಶಸ್ತ್ರ ಚಿಕಿತ್ಸೆ  ಮಾಡಿ ಗಂಟಲಿನಲ್ಲಿ ಸಿಲುಕಿದ್ದ ಕೃಷ್ಣನ ವಿಗ್ರಹವನ್ನು ಹೊರ ತೆಗೆದಿದ್ದಾರೆ.

ವೈದ್ಯರಿಗೆ ಸವಾಲಾಗಿದ್ದ ಶಸ್ತ್ರಚಿಕಿತ್ಸೆ:  ಗಂಟಲಿನಲ್ಲಿ ಸಿಲುಕಿದ್ದ ಪುಟ್ಟ ಕೃಷ್ಣನ ಮೂರ್ತಿ ಹೊರತಗೆಯೋದು ವೈದ್ಯರಿಗೆ ಸವಾಲಾಗಿತ್ತು. ಅದರಲ್ಲೂ ಬಾಲ ಕೃಷ್ಣನ ಮೂರ್ತಿಯ ಎಡಗಾಲು ವ್ಯಕ್ತಿಯ ಆಹಾರ ನಾಳದಲ್ಲಿ ಸಿಲುಕಿತ್ತು.

click me!