Belagavi; ಮೂಡಲಗಿ ಬಳಿ ಹಳ್ಳದಲ್ಲಿ 7 ಭ್ರೂಣಲಿಂಗ ಪತ್ತೆ!

Published : Jun 24, 2022, 03:57 PM ISTUpdated : Jun 24, 2022, 05:23 PM IST
Belagavi; ಮೂಡಲಗಿ ಬಳಿ ಹಳ್ಳದಲ್ಲಿ 7 ಭ್ರೂಣಲಿಂಗ ಪತ್ತೆ!

ಸಾರಾಂಶ

ಐದು ಡಬ್ಬಗಳಲ್ಲಿ ಏಳು ಭ್ರೂಣಗಳನ್ನಿಟ್ಟು ಕೆರೆಗೆ ಎಸೆದ ಕಿರಾತಕರು ಸ್ಥಳಕ್ಕೆ ಡಿಹೆಚ್‌ಒ ಡಾ‌.ಮಹೇಶ್ ಕೋಣಿ ದೌಡು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ತನಿಖಾ ತಂಡ ರಚನೆಗೆ ನಿರ್ಧಾರ  

ಬೆಳಗಾವಿ (ಜೂನ್ 24): ಜಿಲ್ಲೆಯ ಮೂಡಲಗಿ ಪಟ್ಟಣದ ಹಳ್ಳದಲ್ಲಿ ಏಳು ಭ್ರೂಣಲಿಂಗಗಳು ಪತ್ತೆಯಾಗಿವೆ. ಯಾರೋ ದುಷ್ಕರ್ಮಿಗಳು ಭ್ರೂಣಲಿಂಗ ಪತ್ತೆ ಮಾಡಿ ಬಳಿಕ ಹತ್ಯೆಗೈದು ಐದು ಪ್ಲಾಸ್ಟಿಕ್ ಡಬ್ಬಗಳಲ್ಲಿ ಹಾಕಿ ಎಸೆದಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸ್ಥಳೀಯ ಆರೋಗ್ಯಾಧಿಕಾರಿಗಳು, ಮೂಡಲಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸ್ಥಳಕ್ಕೆ ದೌಡಾಯಿಸಿದ್ದಾರೆ.

'ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಒಂದು ತನಿಖಾ ತಂಡ ರಚನೆ': ಇನ್ನು ಪ್ರಕರಣ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಬೆಳಗಾವಿ ಡಿಹೆಚ್‌ಒ ಡಾ.ಮಹೇಶ್ ಕೋಣಿ, 'ಮೂಡಲಗಿ ಪಟ್ಟಣದ ಸೇತುವೆ ಕೆಳಗೆ ಐದು ಡಬ್ಬಿಯಲ್ಲಿ ಏಳು ಭ್ರೂಣಗಳು ಪತ್ತೆಯಾಗಿವೆ. ಸ್ಥಳೀಯ ಆರೋಗ್ಯಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ಪಂಚಾಯಿತಿ ಕಡೆಯಿಂದ ಪೊಲೀಸರಿಗೆ ದೂರು ನೀಡಲಾಗುವುದು. ಇಂದು ಬೆಳಗ್ಗೆ 10.30ಕ್ಕೆ ನಮಗೆ ಗೊತ್ತಾದ ಮೇಲೆ ಸಿಬ್ಬಂದಿ ಕಳಿಸಿದ್ದೇನೆ. ಇದು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಎಂದು ಹೇಳಬಹುದು.

 Belagavi Crime News: ಸಾಕ್ಷ್ಯಾಧಾರ ಕೊರತೆ: ತ್ರಿಪಲ್ ಮರ್ಡರ್ ಕೇಸ್ ಆರೋಪಿ ಖುಲಾಸೆ

ಫೋಟೋ ನೋಡಿದ್ರೆ ಪತ್ತೆಯಾದ ಭ್ರೂಣಗಳು ಐದು ತಿಂಗಳು ತುಂಬಿದ ಹಾಗೇ ಕಾಣುತ್ತಿದೆ. ಈಗಾಗಲೇ ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಕೇಸ್ ದಾಖಲಾದ ಬಳಿಕ ಅವುಗಳನ್ನ ಬೆಳಗಾವಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತಂದು ಪರೀಕ್ಷೆ ನಡೆಸಲಾಗುವುದು. ಇದನ್ನ ಯಾರು ಮಾಡಿದ್ದಾರೆ, ಎಲ್ಲಿಂದ ಬಂದಿದ್ದು ಎಂಬ ಬಗ್ಗೆ ತನಿಖೆ ಮಾಡಲಾಗುವುದು. ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಒಂದು ತನಿಖಾ ತಂಡ ರಚನೆ ಮಾಡ್ತೇವೆ' ಎಂದು ತಿಳಿಸಿದ್ದಾರೆ.

PREV
Read more Articles on
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು