ಮಂಗಳೂರು(ನ.30): 2014ರಲ್ಲಿ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯನ್ನು (Student) ಅಪಹರಣ ಮಾಡಿ ಅತ್ಯಾಚಾರ (Rape) ಮಾಡಿದ ಅಪರಾಧಿಗೆ ಮಂಗಳೂರಿನ (Mangaluru) ಹೆಚ್ಚುವರಿ ಸತ್ರ ನ್ಯಾಯಾಲಯ (court) ಮತ್ತು ಎಫ್‌ಟಿಎಸ್‌ಸಿ- 1 ನ್ಯಾಯಾಲಯವು 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ದೇರಳ ಕಟ್ಟೆನಿವಾಸಿ ಇರ್ಫಾನ್ (28) ಶಿಕ್ಷೆಗೀಡಾದವನು. ಇರ್ಫಾನ್, ಸಂತ್ರಸ್ತೆಯ ಪರಿಚಯ ಮಾಡಿಕೊಂಡು ಪೋನ್‌ನಲ್ಲಿ (Phone) ಮಾತನಾಡುತ್ತಿದ್ದ. ಪ್ರೀತಿ (Love) ಮಾಡುತ್ತಿರುವುದಾಗಿಯೂ, ಮದುವೆಯಾಗಬೇಕೆಂದೂ ಒತ್ತಾಯಿಸುತ್ತಿದ್ದ. 2014ರ ಆಗಸ್ಟ್‌ನಲ್ಲಿ ಪರೀಕ್ಷೆ ಬರೆಯಲೆಂದು ವಿದ್ಯಾರ್ಥಿನಿ ಕಾಲೇಜಿಗೆ (College) ಹೋಗುತ್ತಿದ್ದಾಗ ನಾಟೆಕಲ್‌ನಲ್ಲಿ ತಡೆದು ನಿಲ್ಲಿಸಿ ಕಾರಿನಲ್ಲಿ (Car) ಅಪಹರಣ ಮಾಡಿದ್ದ. ಬಳಿಕ ಚಿಕ್ಕಮಗಳೂರಿನ (Chikkamagaluru) ಲಾಡ್ಜ್‌ಗೆ ಕರೆದೊಯ್ದು ಕೂಡಿ ಹಾಕಿ ಅತ್ಯಾಚಾರ ಎಸಗಿದ್ದ. ವಿಚಾರ ಬೇರೆಯವರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ.
ಇತ್ತ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಬಗ್ಗೆ ಆಕೆಯ ಹೆತ್ತವರು ಉಳ್ಳಾಲ ಪೊಲೀಸರಿಗೆ (Police) ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆಗಿನ ಉಳ್ಳಾಲ ಇನ್ಸ್‌ಪೆಕ್ಟರ್ ಸವಿತ್ರ ತೇಜ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ಸಂದರ್ಭದಲ್ಲಿ ಸಂತ್ರಸ್ತೆ ಮತ್ತು ಆಕೆಯ ಮನೆಯವರು ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷ್ಯ ಹೇಳಿದ್ದರು. ಆದರೂ ತನಿಖಾಧಿಕಾರಿಗಳು, ಸಾಂದರ್ಭಿಕ ಸಾಕ್ಷಿದಾರರು ಮತ್ತು ವೈದ್ಯಾಧಿಕಾರಿಗಳ ಸಾಕ್ಷ್ಯವನ್ನು ಪರಿಗಣಿಸಿದ ನ್ಯಾಯಾಲಯವು ಅಪರಾಧ ಸಾಬೀತಾಗಿದೆ ಎಂಬುದಾಗಿ ತೀರ್ಪು ನೀಡಿದೆ. 15 ಮಂದಿ ಸಾಕ್ಷಿದಾರರ ಸಾಕ್ಷ್ಯ ಮತ್ತು 22 ದಾಖಲೆಗಳ ಸಾಕ್ಷ್ಯವನ್ನು ದಾಖಲು ಮಾಡಲಾಗಿತ್ತು.
ಕರೆಸಿ ಕಾರಿನಲ್ಲಿಅತ್ಯಾಚಾರ : ಮ್ಯಾಟ್ರಿಮೋನಿಯಲ್ ಪೋರ್ಟಲ್ (matrimonial portal) ಮೂಲಕ ಪರಿಚಯವಾದ ಹುಡುಗಿಗೆ ವಂಚಿಸಿದ (Fraud) ಆರೋಪದ ಮೇಲೆ ಬಂಧಿತನಾದ 31 ವರ್ಷದ ವ್ಯಕ್ತಿಯನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಪರಿಚಯವಾದ ವ್ಯಕ್ತಿ ತನ್ನನ್ನು ಮದುವೆಯಾಗುವುದಾಗಿ(Marriage) ನಂಬಿಸಿ ನಂತರ ಲೈಂಗಿಕ(ಸೆಷ) ಕ್ರಿಯೆ ನಡೆಸಿದ್ದಾನೆ. ಇದಾದ ನಂತರ ಮೊಬೈಲ್ ನನ್ನ ನಂಬರ್ ಬ್ಲಾಕ್ ಮಾಡಿದ್ದ ಎಂದು ಹುಡುಗಿ ಆರೋಪಿಸಿದ್ದಾಳೆ.
ಆರೋಪಿಯನ್ನು ಕರ್ನಾಟಕದ ಬೆಳಗಾವಿಯ(Belagavi) ಕುಂಪಟಗಿರಿ ನಿವಾಸಿ ಪ್ರಶಾಂತ ಭಾವರಾವ್ ಪಾಟೀಲ್ ಎಂದು ಗುರುತಿಸಲಾಗಿದೆ. ಮ್ಯಾಟ್ರಿಮೋನಿಯಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಂಪರ್ಕ ಸಾಧಿಸಿದ ನಂತರ ಅವನು ಈ ರೀತಿ ಅನೇಕ ಮಹಿಳೆಯರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬರುತ್ತಿದೆ. ಈ ಹಿಂದೆಯೇ ಈತನ ಬಂಧನ ಮಾಡಲಾಗಿತ್ತು . 2018 ರಲ್ಲಿ ಸಶಸ್ತ್ರ ಪಡೆಗಳಿಂದ ತಲೆ ತಪ್ಪಿಸಿಕೊಂಡು ಅಲೆಯುತ್ತಿದ್ದ ಎಂದು ಸಿನ್ಹಗಡ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. 2018 ರಿಂದ ಈ ವರ್ಷದ ನವೆಂಬರ್ 20 ರವರೆಗೆ ಪುಣೆ, ಲಾತೂರ್ ಮತ್ತು ಅಹ್ಮದ್‌ನಗರದಲ್ಲಿ ಈತನ ಮೇಲೆ ಒಟ್ಟು ಐದು ಪ್ರಕರಣಗಳನ್ನು ದಾಖಲಿಸಲಾಗಿದೆ.
ತಾಣೊಬ್ಬ ಸೇನಾ ಅಧಿಕಾರಿ ಎಂದು ಆಸಾಮಿ ಯುವತಿಯ ಪರಿಚಯ ಮಾಡಿಕೊಂಡಿದ್ದಾನೆ. ಅಲ್ಲಿಂದ ಮುಂದೆ ಇಬ್ಬರು ಭೇಟಿಯಾಗಿದ್ದು ಹುಡುಗಿಯನ್ನು ನಂಬಿಸಿ ಆಕೆ ಜತೆ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಇದಾದ ಮೇಲೆ ನಂಬರ್ ಬ್ಲಾಕ್ ಮಾಡಿದ್ದ ಎಂದು ಯುವತಿ ಆರೋಪಿಸಿದ್ದಾಳೆ.
ನವೆಂಬರ್ 18 ರಂದು ದಗ್ದುಶೇತ್ ಗಣಪತಿ ದೇವಸ್ಥಾನದಲ್ಲಿ ಹುಡುಗಿ ಮತ್ತು ಪಾಟೀಲ್ ಭೇಟಿಯಾಗಿದ್ದಾರೆ. ಈ ವೇಳೆ ಸೇನೆಯ ಸಮವಸ್ತ್ರದಲ್ಲಿ ಆಸಾಮಿ ಕಾಣಿಸಿಕೊಂಡಿದ್ದ. ಅಲ್ಲಿಂದ ಮಾತುಕತೆಗೆಂಧು ಹತ್ತಿರದ ವಸತಿಗೃಹಕ್ಕೆ ಕರೆದುಕೊಂಡು ಹೋಗಿದ್ದಾನೆ. ಮದುವೆಯಾಗುವ ಭರವಸೆ ನೀಡಿದ್ದಾಮೆ. ನಂತರ ಕಾರ್ ನಲ್ಲಿಯೇ ಒತ್ತಾಯಪೊರ್ವಕವಾಗಿ ನನ್ನ ಮೇಲೆ ಎರಗಿದ್ದಾನೆ ಎಂದು ಯುವತಿ ದೂರಿನಲ್ಲಿ ಹೇಳಿದ್ದಾಳೆ.
ಇದಾದ ನಂತರ ನಂಬರ್ ಬ್ಲಾಕ್ ಮಾಡಿದ್ದು ಸಂಪರ್ಕಕ್ಕೆ ಸಿಗದೆ ಓಡಾಡುತ್ತಿದ್ದ. ಯುವಕ ತನಗೆ ಮೋಸ ಮಾಡಿದ್ದು ಅಜ್ಞಾತವಾಗಿದ್ದಾನೆ ಎಂಬುದನ್ನು ಅರಿತ ಯುವತಿ ದೂರು ದಾಖಲಿಸಿದ್ದಾರೆ