Online Class : ಆನ್‌ಲೈನ್‌ ಕ್ಲಾಸಲ್ಲಿ ಅಶ್ಲೀಲ ವಿಡಿಯೋ! ಲಿಂಕ್‌ ಅಪ್‌ಲೋಡ್‌

By Kannadaprabha News  |  First Published Nov 30, 2021, 9:33 AM IST
  •  ಆನ್‌ಲೈನ್‌ ಕ್ಲಾಸಲ್ಲಿ ಅಶ್ಲೀಲ ವಿಡಿಯೋ! ಲಿಂಕ್‌ ಅಪ್‌ಲೋಡ್‌
  •  ವಿದ್ಯಾರ್ಥಿನಿಯೊಬ್ಬಳ ಲಾಗಿನ್‌ನಿಂದ ಲಿಂಕ್‌ ಅಪ್‌ಲೋಡ್‌
  • ಯಾವುದೇ ದೂರು ನೀಡದ ಶಾಲೆ -ವಿಷಯವನ್ನು ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಗಮನಕ್ಕೆ ತಂದ ಕೆಲ ಪೋಷಕರು
     

 ಬೆಂಗಳೂರು (ನ.30): ನಗರದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ (Private School) ಆನ್‌ಲೈನ್‌ ತರಗತಿ (online class) ವೇಳೆ ದಿಢೀರ್‌ ಅಪ್‌ಲೋಡ್‌ (upload) ಆದ ಲಿಂಕ್‌ ವೊಂದನ್ನು ಕ್ಲಿಕ್‌ ಮಾಡುತ್ತಿದ್ದಂತೆ ಅಶ್ಲೀಲ ವಿಡಿಯೋಗಳು (Video) ತೆರೆದುಕೊಂಡು ವಿದ್ಯಾರ್ಥಿಗಳು (Students), ಶಿಕ್ಷಕರು, ಪೋಷಕರು ಮುಜುಗರಕ್ಕೀಡಾಗಿ ಶಾಲೆಯವರು ತಕ್ಷಣ ಆನ್‌ಲೈನ್‌ ತರಗತಿಯನ್ನೇ ಬಂದ್‌ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಹೆಣ್ಣೂರು ಮುಖ್ಯರಸ್ತೆಯ ಲಿಂಗರಾಜಪುರ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಕೆಲ ದಿನಗಳ ಹಿಂದೆ ಘಟನೆ ನಡೆದಿದ್ದು, ಕೆಲ ಪೋಷಕರು ಈ ಬಗ್ಗೆ ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ (trust) ಗಮನಕ್ಕೆ ತಂದಿದ್ದರಿಂದ ಇದು ಬಹಿರಂಗವಾಗಿದೆ. ಆದರೆ, ಆಡಳಿತ ಮಂಡಳಿ ತಮ್ಮ ಶಾಲೆಯ (School) ಹೆಸರು ಹಾಳಾಗಬಹುದು ಎಂಬ ಕಾರಣಕ್ಕಾಗಿ ಈವರೆಗೆ ಯಾರಿಗೂ ದೂರು ನೀಡಿಲ್ಲ ಎಂದು ತಿಳಿದು ಬಂದಿದೆ.

ಸರ್ಕಾರ (govt) ಭೌತಿಕ ತರಗತಿ ನಡೆಸಲು ಅನುಮತಿ ನೀಡಿದ್ದರೂ ಸದರಿ ಶಾಲೆ ಆನ್‌ ಲೈನ್‌ ಮೂಲಕವೇ ತರಗತಿ ನಡೆಸುತ್ತಿದೆ. ಎರಡು ದಿನಗಳ ಹಿಂದೆ ಶಾಲೆಯ ಎಲ್ಲ ಮಕ್ಕಳು ತಮ್ಮ ಲಾಗಿನ್‌ ಮೂಲಕ ಆನ್‌ಲೈನ್‌ ತರಗತಿಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ, ವಿದ್ಯಾರ್ಥಿನಿಯೊಬ್ಬಳು (Student) ನೆಟ್‌ವರ್ಕ್ (Network) ಸಮಸ್ಯೆಯಿಂದ ಕೆಲ ನಿಮಿಷ ನಿರ್ಗಮಿಸಿದ್ದಾಳೆ. ಇದಾದ ಕೆಲ ಹೊತ್ತಲ್ಲೇ ಆ ವಿದ್ಯಾರ್ಥಿನಿ ಲಾಗಿನ್‌ನಿಂದ ಆನ್‌ಲೈನ್‌ ತರಗತಿಗೆ ಸೇರಲು ಮನವಿ ಬಂದಿದೆ. ಅದನ್ನು ತರಗತಿ ಶಿಕ್ಷಕರು (Teachers) ಸ್ವೀಕರಿಸಿದ್ದಾರೆ. ತಕ್ಷಣ ಅಶ್ಲೀಲ ವಿಡಿಯೋಗಳ (Video) ಲಿಂಕ್‌ ಅಪ್‌ಲೋಡ್‌ ಆಗಿ ಆನ್‌ಲೈನ್‌ನಲ್ಲಿದ್ದ ಎಲ್ಲ ಮಕ್ಕಳಿಗೂ ತಲುಪಿವೆ. ಇದರ ಅರಿವಿಲ್ಲದೆ ಆ ಲಿಂಕ್‌ಗಳನ್ನು ಕ್ಲಿಕ್‌ ಮಾಡುತ್ತಿದ್ದಂತೆ ಅಶ್ಲೀಲ ವಿಡಿಯೋಗಳು ತೆರೆದುಕೊಂಡಿವೆ. ಇದರಿಂದ ಮಕ್ಕಳು, ಮಕ್ಕಳೊಂದಿಗೆ ಆನ್‌ಲೈನ್‌ ತರಗತಿಯಲ್ಲಿ ಕುಳಿತಿದ್ದ ಪೋಷಕರು, ತರಗತಿ ನಡೆಸುತ್ತಿದ್ದ ಶಿಕ್ಷಕರು ಗಾಬರಿ ಆಗಿದ್ದಾರೆ. ತಕ್ಷಣ ಶಾಲೆಯವರ ಗಮನಕ್ಕೆ ಬಂದಾಗ ಆನ್‌ಲೈನ್‌ ತರಗತಿಯನ್ನು ಸಂಪೂರ್ಣ ಬಂದ್‌ ಮಾಡಿದರು. ನಂತರ ಶಾಲಾ ಆಡಳಿತ ಮಂಡಳಿ ಮುಂದೆ ಇಂತಹ ಘಟನೆಗಳು ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದೆ ಎಂದು ಆ ಶಾಲೆಯ ಕೆಲ ಪೋಷಕರು ಮಾಹಿತಿ ನೀಡಿದ್ದಾರೆ.

Latest Videos

undefined

ಹೇಗಾಯಿತೋ ಗೊತ್ತಿಲ್ಲ?

ಘಟನೆ ಬಳಿಕ ಶಾಲೆಯವರು (School) ಯಾವ ಅಶ್ಲೀಲ ವಿಡಿಯೋ ಲಿಂಕ್‌ ಅಪ್‌ಲೋಡ್‌ ಆದ ಲಾಗಿನ್‌ಗೆ ಸಂಬಂಧಿಸಿದ ವಿದ್ಯಾರ್ಥಿನಿಯನ್ನು ಪ್ರಶ್ನಿಸಿದ್ದಾರೆ. ಆದರೆ, ಆ ವಿದ್ಯಾರ್ಥಿನಿ ( ತರಗತಿಯಲ್ಲಿ ಭಾಗವಹಿಸಿದ್ದ ನನಗೆ ನೆಟ್‌ವರ್ಕ್ (Network) ಸಮಸ್ಯೆಯಾಗಿ ನಿರ್ಗಮನವಾಯಿತು. ಬಳಿಕ ಮತ್ತೆ ಲಾಗಿನ್‌ ಆಗಲು ಯತ್ನಿಸಿದೆ ಅಷ್ಟೆ. ಮುಂದೆ ಏನಾಯಿತು ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾಳೆ. ವಿದ್ಯಾರ್ಥಿನಿ (Students) ಬೇರೆವರಿಗೆ ತನ್ನ ಲಾಗಿನ್‌ ಐಡಿ ಪಾಸ್‌ವರ್ಡ್‌ ನೀಡಿದ್ದು ಅವರು ಇಂತಹ ಅಚಾತುರ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಆದರೆ, ವಿದ್ಯಾರ್ಥಿನಿ ತನ್ನ ಪೋಷಕರನ್ನು ಬಿಟ್ಟು ಯಾರಿಗೂ ಐಡಿ, ಪಾಸ್‌ವರ್ಡ್‌ ನೀಡಿಲ್ಲ ಎಂದು ಹೇಳಿದ್ದಾಳೆ ಎಂದು ತಿಳಿದು ಬಂದಿದೆ.

ರಕ್ಷಣಾ ನಿಯಮ ರೂಪಿಸಿ

ರಾಜ್ಯದಲ್ಲಿ ಆನ್‌ಲೈನ್‌ ತರಗತಿ ವಿಚಾರವಾಗಿ ಯಾವುದೇ ಸ್ಪಷ್ಟನೀತಿ ಇಲ್ಲ. ಮಕ್ಕಳ ರಕ್ಷಣೆ ದೃಷ್ಟಿಯಿಂದ ಇಂತಹ ಘಟನೆಗಳು ಯಾವುದೇ ಶಾಲೆಯಲ್ಲಿ ಮರುಕಳಿಸದಂತೆ ತಡೆಯಲು ಸರ್ಕಾರ ಕೂಡಲೇ ಆನ್‌ಲೈನ್‌ ತರಗತಿಗೆ ಸಂಬಂಧಿಸಿದಂತೆ ರಕ್ಷಣಾ ನಿಯಮ ರೂಪಿಸಬೇಕೆಂದು ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಆಗ್ರಹಿಸಿದೆ.

ಘಟನೆ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರಿಗೆ ಪತ್ರ ಬರೆದಿರುವ ಟ್ರಸ್ಟ್‌ ನಿರ್ದೇಶಕ ನಾಗರಸಿಂಹ ಜಿ.ರಾವ್‌ ಅವರು, ಶಾಲೆಗಳ ಆನ್‌ಲೈನ್‌ ತರಗತಿಗಳಲ್ಲಿ ಸೈಬರ್‌ ಕ್ರೈಂ ಪೊಲೀಸರು ಭಾಗಿಯಾಗಲು ಅವಕಾಶ ಕಲ್ಪಿಸಿ ಅಪರಾಧಿಗಳ ಪತ್ತೆಗೆ ಕ್ರಮ ವಹಿಸಬೇಕು. ಪ್ರತಿ ಶಾಲಾ ಶಿಕ್ಷಕರಿಗೂ ಆನ್‌ ಲೈನ್‌ ತರಗತಿಯಲ್ಲಿ ಆಗಬಹುದಾದ ಸಮಸ್ಯೆಗಳ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮದ ತರಬೇತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

click me!