ರೈತ ಸಂಘದಿಂದ ರಾಜ್ಯ ಸರ್ಕಾರವನ್ನೆ ಬದಲಿಸುವ ಎಚ್ಚರಿಕೆ

By Kannadaprabha NewsFirst Published Nov 17, 2021, 2:13 PM IST
Highlights
  • ಜಾಗೇರಿಯ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಮುಂದಾದರೆ ಅಂತಹವರು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಹೋರಾಟ 
  • ಕೊಳ್ಳೇಗಾಲ ಜಾಗೇರಿಯಲ್ಲಿ ಕಳೆದ ಮೂರು ದಶಕಗಳಿಂದಲೂ 14 ಸಾವಿರಕ್ಕೂ ಹೆಚ್ಚು ಜನ ವಾಸ 
  • ಅರಣ್ಯ ಇಲಾಖೆಯವರು ಇವರನ್ನು ಒಕ್ಕಲೆಬ್ಬಿಸುವ ಕಾರ್ಯ ಮಾಡಿದರೆ ರಾಜ್ಯ ಮಟ್ಟದಲ್ಲಿ ಚಳುವಳಿ 

 ಕೊಳ್ಳೇಗಾಲ (ನ.17):  ಜಾಗೇರಿಯ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸಲು (Eviction) ಮುಂದಾದರೆ ಅಂತಹವರು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ, ಕೊಳ್ಳೇಗಾಲ (Kollegala) ಜಾಗೇರಿಯಲ್ಲಿ ಕಳೆದ ಮೂರು ದಶಕಗಳಿಂದಲೂ 14 ಸಾವಿರಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದು, ಅರಣ್ಯ ಇಲಾಖೆಯವರು (forest Department) ಇವರನ್ನು ಒಕ್ಕಲೆಬ್ಬಿಸುವ ಕಾರ್ಯ ಮಾಡಿದರೆ ರಾಜ್ಯ ಮಟ್ಟದಲ್ಲಿ ಚಳುವಳಿ ರೂಪಿಸಲಾಗುವುದು ಎಂದು ರೈತ ಸಂಘದ (Raith sangh) ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ (Badagalapura nagendra) ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರ ಮಂಡಿಸಿರುವ ಮಸೂದೆ ಹಿಂಪಡೆಯದಿದ್ದರೆ ಸರ್ಕಾರವನ್ನೆ ಬದಲಾಯಿಸುವ ಸಂದೇಶವನ್ನು ಚಳುವಳಿಯ ಮೂಲಕ ನೀಡುತ್ತೇವೆ, ದೆಹಲಿಯಲ್ಲಿ (Delhi) ಕಿಸಾನ್‌ ಮೊರ್ಚಾ ಸೇರಿದಂತೆ ಇತರೆ ರೈತ ಸಂಘಟನೆಗಳು (farmers organisations) ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ರೈತ ವಿರೋಧಿ ಮಸೂದೆ ಹಿಂಪಡೆಯುವಂತೆ ನಡೆಸುತ್ತಿರುವ ಚಳುವಳಿಗೆ ಜನವರಿ 26ಕ್ಕೆ ಒಂದು ವರ್ಷವಾಗುವುದರಿಂದ ರಾಜ್ಯ ರೈತ ಸಂಘ ಜಿಲ್ಲೆಯ ಗುಂಡ್ಲುಪೇಟೆಯ ಮೈಸೂರು, ಊಟಿ ರಸ್ತೆ, ಕೊಳ್ಳೇಗಾಲದ ಸತ್ತೇಗಾಲ ಬಳಿ ದಿಂಡಿಗಲ್‌ ರಾಜ್ಯ ಹೆದ್ದಾರಿ, ಮೈಸೂರು ಜಿಲ್ಲೆಯ ಶ್ರೀರಂಗಪಟ್ಟಣ ಬಳಿ ಮೈಸೂರು ಬೆಂಗಳೂರು ಹೆದ್ದಾರಿಗಳ ತಡೆ ಸೇರಿದಂತೆ ರಾಜ್ಯದ 15ಕ್ಕೂ ಹೆಚ್ಚು ಕಡೆ ಪ್ರತಿ ಕೇಂದ್ರದಲ್ಲಿ 5 ಸಾವಿರ ರೈತರು, ಜಾನುವಾರುಗಳು ಹಾಗೂ ಕೃಷಿಯಂತ್ರಗಳ ಸಮೇತ ಹೆದ್ದಾರಿ ತಡೆ ಚಳುವಳಿ ನಡೆಸಲು ತೀರ್ಮಾನಿಸಿದೆ ಎಂದರು.

ಕೇಂದ್ರ ಸರ್ಕಾರ (Govt of india) ಬಗ್ಗುವ ತನಕ ಚಳುವಳಿ ನಿಲ್ಲಿಸುವುದಿಲ್ಲ, ಚಳುವಳಿ ಗೆದ್ದರೆ ದೇಶ ಗೆಲ್ಲುತ್ತದೆ ಎಂದು ತಿಳಿದುಕೊಂಡಿದ್ದೇವೆ, ಮಸೂದೆ ಹಿಂಪಡೆಯದಿದ್ದರೆ ಸರ್ಕಾರವನ್ನೆ ಬದಲಾಯಿಸುವ ಸಂದೇಶವನ್ನು ಚಳುವಳಿಯ ಮೂಲಕ ಕೊಡುತ್ತೇವೆ. ಇದು ಮಾಡು ಇಲ್ಲವೆ ಮಡಿ ಹೋರಾಟ, ಕೇಂದ್ರ ಸರ್ಕಾರದ (Central govt) ಮೂರು ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂಸುದಾರಣೆ, ಎಪಿಎಂಸಿ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಗಳ ವಿರುದ್ಧ ಚಳುವಳಿ ನಡೆಯಲಿದೆ, 42ಕ್ಕೂ ಹೆಚ್ಚು ಸಂಘಟನೆಗಳು ಒಟ್ಟಿಗೆ ಸೇರಿ ಸಂಯುಕ್ತ ಕರ್ನಾಟಕ ಹೋರಾಟ ಸಂಘದ ಹೆಸರಿನಲ್ಲಿ ಚಳುವಳಿ ನಡೆಸುತ್ತೇವೆ ಎಂದರು.

ಭೂ ಸುದಾರಣೆ ಮಸೂದೆ ಜಾರಿಗೆ ಬಂದ ಬಳಿಕ ಶೇ 47 ರಷ್ಟು ಭೂ ಮಾರಾಟ ನೊಂದಣಿ ಹೆಚ್ಚಾಗಿ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಣ್ಣ ಹಾಗೂ ಅತಿ ಸಣ್ಣ ರೈತರು ಭೂಮಿ ಕಳೆದುಕೊಳ್ಳುತ್ತಿದ್ದಾರೆ, ಕೃಷಿ ಹೆಸರಿನಲ್ಲಿ ಕೃಷಿಯೇತರ ಉದ್ದೇಶಕ್ಕೆ ನಿರಾತಂಕವಾಗಿ ಬಳಸುವುದು ಮಸೂದೆಯ ಉದ್ದೇಶವಾಗಿದೆ. ರಾಜ್ಯದಲ್ಲಿ 173 ಎಪಿಎಂಸಿಗಳಿದ್ದು, ಈಗಾಗಲೆ 88 ಎಪಿಎಂಸಿಗಳು ಸಂಬಳ ಕೊಡಲಾಗದ ಸ್ಥಿತಿ ತಲುಪಿವೆ, ಗೋಹತ್ಯೆ ನಿಷೇಧ ಭಾವನಾತ್ಮಕ ವಿಚಾರವಾದರು ಪ್ರಾಯೋಗಿಕವಾಗಿ ಯೋಚನೆ ಮಾಡಿದರೆ ಕಷ್ಟ. ಅನುಪಯುಕ್ತ ದನಕರುಗಳ ನಿರ್ವಹಣೆ ಮಾಡುವುದು ಸಮಸ್ಯೆಯಾಗಲಿದೆ. ಡಿಸೆಂಬರ್‌ ಮಹಾ ಪಂಚಾಯಿತಿ ಮಾಡುತ್ತೇವೆ ಜನವರಿಯಲ್ಲಿ ಬೃಹತ್‌ ರೈತ ಸಮಾವೇಶ ಮಾಡುತ್ತೇವೆ ಎಂದರು.

ಜಿಲ್ಲಾಧ್ಯಕ್ಷ ಹೆಬ್ಬಸೂರು ಬಸವಣ್ಣ, ಜಿಲ್ಲಾ ಖಜಾಂಚಿ ಮಹದೇವಪ್ರಸಾದ್‌, ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ತಾಲೂಕು ಅಧ್ಯಕ್ಷ ಗೌಡೇಗೌಡ, ಮಧುವನಹಳ್ಳಿ ಬಸವರಾಜಪ್ಪ ಇದ್ದರು.

ಹೆದ್ದಾರಿ ಬಂದ್ :  

 ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ನಿರಂತರ ಹೋರಾಟ ವರ್ಷ ಕಳೆದರೂ ಕೇಂದ್ರ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ನ.26ಕ್ಕೆ ಬೆಂಗಳೂರು (Bengaluru) ನಗರ, ಗ್ರಾಮಾಂತರ, ಕೋಲಾರ (Kolar), ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-7ನ್ನು (National Highway) ನಗರದ ಹೊರ ವಲಯದ ಚದಲು ಪುರದಲ್ಲಿ ಕ್ರಾಸ್‌ನಲ್ಲಿ  ತಡೆದು ಪ್ರತಿಭಟನೆ ನಡೆಸುವುದಾಗಿ ಸಂಯುಕ್ತ ಹೋರಾಟ ಕರ್ನಾಟಕ (karnataka) ಜಿಲ್ಲಾ ಸಮಿತಿ ಎಚ್ಚರಿಸಿದೆ.

ನಗರದ ಪತ್ರಕರ್ತರ ಭವನದಲ್ಲಿ ಈ ಕುರಿತು ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ವಿವಿಧ ರೈತಪರ, ಕನ್ನಡಪರ, ಪ್ರಗತಿಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಸದಸ್ಯರು, ದೇಶವ್ಯಾಪ್ತಿ ಅಂದು ಹೆದ್ದಾರಿ ಬಂದ್‌ (High bandh) ಚಳವಳಿ ನಡೆಸುವ ಮೂಲಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರದ (Govt Of India) ಮೇಲೆ ಮತ್ತೊಮ್ಮೆ ಒತ್ತಡ ತರಲಾಗುವುದೆಂದರು.

click me!