Bengaluru: ರಾತ್ರಿ ವೇಳೆ ಡಿಸಿಪಿಗೆ ದೂರು ನೀಡಲು ಕ್ಯುಆರ್‌ ಕೋಡ್‌: ಆಗ್ನೇಯ ವಿಭಾಗದ ಠಾಣೆಗಳಲ್ಲಿ ಜಾರಿ

Published : Feb 23, 2023, 06:52 AM IST
Bengaluru: ರಾತ್ರಿ ವೇಳೆ ಡಿಸಿಪಿಗೆ ದೂರು ನೀಡಲು ಕ್ಯುಆರ್‌ ಕೋಡ್‌: ಆಗ್ನೇಯ ವಿಭಾಗದ ಠಾಣೆಗಳಲ್ಲಿ ಜಾರಿ

ಸಾರಾಂಶ

ಈಗಾಗಲೇ ಆಗ್ನೇಯ ವಿಭಾಗದ ಠಾಣೆಗಳಲ್ಲಿ ಕ್ಯೂಆರ್‌ ಕೋಡ್‌ ವ್ಯವಸ್ಥೆ ಅಳವಡಿಸಿ ಪೊಲೀಸರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಣೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಬೆಂಗಳೂರು (ಫೆ.23): ನಾಗರಿಕರೇ ನಿಮಗೆ ತುರ್ತು ಪರಿಸ್ಥಿತಿಯಲ್ಲಿ ಪೊಲೀಸರ ನೆರವು ಸಿಗದಿದ್ದರೆ ಕ್ಯೂಆರ್‌ ಕೋಡ್‌ ಬಳಸಿ ನೇರವಾಗಿ ಡಿಸಿಪಿ ಅವರಿಗೆ ಸಂಪರ್ಕಿಸಿ ದೂರು ಸಲ್ಲಿಸಬಹುದು..! ಹೌದು ಇಂಥದೊಂದು ನೂತನ ಕ್ಯೂಆರ್‌ ಕೋಡ್‌ ವ್ಯವಸ್ಥೆಯನ್ನು ‘ಲೋಕ ಸ್ಪಂದನ, ನಿಮ್ಮ ನುಡಿ ನಮ್ಮ ನಡೆ’ ಹೆಸರಿನಲ್ಲಿ ತಮ್ಮ ಆಗ್ನೇಯ ವಿಭಾಗದಲ್ಲಿ ಡಿಸಿಪಿ ಡಾ.ಸಿ.ಕೆ.ಬಾಬಾ ಜಾರಿಗೊಳಿಸಿದ್ದಾರೆ.

ಈಗಾಗಲೇ ಆಗ್ನೇಯ ವಿಭಾಗದ ಠಾಣೆಗಳಲ್ಲಿ ಕ್ಯೂಆರ್‌ ಕೋಡ್‌ ವ್ಯವಸ್ಥೆ ಅಳವಡಿಸಿ ಪೊಲೀಸರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಣೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಉತ್ತೇಜಿತರಾಗಿ ಡಿಸಿಪಿ ಸಿ.ಕೆ.ಬಾಬಾ ಅವರು, ಈಗ ಇರುಳು ಹೊತ್ತಿನಲ್ಲಿ ತೊಂದರೆಗೆ ಸಿಲುಕುವ ನಾಗರಿಕರ ನೆರವಾಗಿ ಧಾವಿಸಲು ಮುಂದಾಗಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲಿ ಪೊಲೀಸರು ಸ್ಪಂದಿಸದಿದ್ದರೆ ನೇರವಾಗಿ ಕ್ಯೂಆರ್‌ ಕೋಡ್‌ ಬಳಸಿ ಡಿಸಿಪಿ ಅವರಿಗೆ 200 ಪದಗಳಲ್ಲಿ ದೂರು ಸಲ್ಲಿಸಹುದು.

ಮಹದಾಯಿ ಐತೀರ್ಪು ಜಾರಿಗೆ ಕೇಂದ್ರ ಪ್ರಾಧಿಕಾರ:‘ಪ್ರವಾಹ್‌’ ಪ್ರಾಧಿಕಾರ ರಚನೆ

ಈ ಸಂಬಂಧ ‘ಕನ್ನಡಪ್ರಭ’ ಬುಧವಾರ ಜತೆ ಮಾತನಾಡಿದ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಅವರು, ಇಲಾಖೆಯಲ್ಲಿ ಹೆಚ್ಚು ‘ಜನ ಸ್ನೇಹಿ’ಯನ್ನಾಗಿಸುವ ನಿಟ್ಟಿನಲ್ಲಿ ‘ಲೋಕಸ್ಪಂದನ; ನಿಮ್ಮ ನುಡಿ, ನಮ್ಮ ನಡೆ’ ಹೆಸರಿನಲ್ಲಿ ಕ್ಯೂಆರ್‌ ಕೋಡ್‌ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆ ಮತ್ತಷ್ಟುಉತ್ತಮಪಡಿಸುವ ನಿಟ್ಟಿನಲ್ಲಿ ತುರ್ತು ಸಮಯ ಹಾಗೂ ರಾತ್ರಿ ವೇಳೆಯಲ್ಲಿ (ರಾತ್ರಿ 11ರಿಂದ ಬೆಳಗ್ಗೆ 5 ಗಂಟೆ) ಕಾಲ ವಿಳಂಬವಿಲ್ಲದೆ ಜನರಿಗೆ ನೆರವಾಗುವ ವ್ಯವಸ್ಥೆ ರೂಪಿಸಲಾಗಿದೆ ಎಂದು ಹೇಳಿದರು.

ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಮೇಲಧಿಕಾರಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ಡಿಸಿಪಿ ಅವರ ವಾಟ್ಸಾಪ್‌ ಡಿಪಿಯಲ್ಲಿ ಲೋಕಸ್ಪಂದನ ಚಿಹ್ನೆ ಅಳವಡಿಸಿಕೊಳ್ಳಲಾಗಿದೆ. ಇದನ್ನು ಸ್ಕಾ್ಯನ್‌ ಮಾಡುವ ಮೂಲಕ ನೇರವಾಗಿ ದೂರುಗಳನ್ನು ಡಿಸಿಪಿ ಅವರಿಗೆ ಸಲ್ಲಿಸಬಹುದು. ಇರಿಂದ ಸಕಾಲಕ್ಕೆ ದೂರುಗಳು ಇತ್ಯರ್ಥವಾಗಲು ಅನುಕೂಲವಾಗುತ್ತದೆ ಎಂದು ಬಾಬಾ ಅಭಿಪ್ರಾಯಪಟ್ಟಿದ್ದಾರೆ.

ಅರ್ಜಿಯಲ್ಲಿಯೂ ಫೀಡ್‌ಬ್ಯಾಕ್‌ ನೀಡಿ: ಠಾಣೆಗೆ ಭೇಟಿ ನೀಡುವ ನಾಗರಿಕರು ಸ್ಮಾರ್ಚ್‌ ಪೋನ್‌ ಇಲ್ಲಿದ್ದರೂ ಪೊಲೀಸರ ಕಾರ್ಯನಿರ್ವಹಣೆಗೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಈಗಾಗಲೇ ಪ್ರತಿ ಠಾಣೆಗಳಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮುದ್ರಿತ ನಮೂನೆಯ ಅರ್ಜಿಗಳನ್ನು ಇಡಲಾಗಿದೆ. ಆ ಅರ್ಜಿಯಲ್ಲಿ ಪೊಲೀಸರ ಕಾರ್ಯವೈಖರಿ ಬಗ್ಗೆ ಚುಕ್ಕಿ ಗುರುತಿನ ಪ್ರಶ್ನೆಗಳಿಗೆ ಸಾರ್ವಜನಿಕರು ಉತ್ತರಿಸಿ ಬಾಕ್ಸ್‌ನಲ್ಲಿ ಹಾಕಬೇಕು. ಆ ಅರ್ಜಿಗಳು ನಮ್ಮ ಕಚೇರಿ ತಲುಪಿದ ಬಳಿಕ ಪರಿಶೀಲಿಸಿ ಕ್ರಮ ಜರುಗಿಸಲಾಗುತ್ತದೆ ಎಂದು ಡಿಸಿಪಿ ಸಿ.ಕೆ.ಬಾಬಾ ಮಾಹಿತಿ ನೀಡಿದರು.

ಕ್ಯೂಆರ್‌ ಕೋಡ್‌ ವ್ಯವಸ್ಥೆಗೆ ಸ್ಪಂದಿಸಿದವರ ವಿವರ
ಠಾಣೆ ಭೇಟಿ ನೀಡಿದ ಜನ ಫೀಡ್‌ ಬ್ಯಾಕ್‌

ಆಡುಗೋಡಿ 978 438
ಬಂಡೇಪಾಳ್ಯ 270 203
ಬೇಗೂರು 1024 939
ಬೊಮ್ಮನಹಳ್ಳಿ 586 482
ಎಲೆಕ್ಟ್ರಾನಿಕ್‌ ಸಿಟಿ 534 421
ಎಚ್‌ಎಸ್‌ಆರ್‌ ಲೇಔಟ್‌ 188 197
ಹುಳಿಮಾವು 306 254
ಕೋರಮಂಗಲ 563 445
ಮಡಿವಾಳ 376 323
ಮೈಕೋ ಲೇಔಟ್‌ 1050 879
ಪರಪ್ಪನ ಅಗ್ರಹಾರ 727 422
ಸಿಇಎನ್‌ 989 787
ಸದ್ದುಗುಂಟೆಪಾಳ್ಯ 743 470
ತಿಲಕನಗರ 328 552
ಒಟ್ಟು 8662 6812

ಜನರಿಂದ ಫೈವ್‌ ಸ್ಟಾರ್‌ ರೇಟಿಂಗ್‌!: ಪೊಲೀಸರ ಕಾರ್ಯನಿರ್ವಹಣೆ ಬಗ್ಗೆ ಜನರು ಸ್ಟಾರ್‌ ರೇಟಿಂಗ್‌್ಸ ಸಹ ನೀಡಬಹುದಾಗಿದೆ. ಇದುವರೆಗೆ 5832 ಜನರು 5 ಸ್ಟಾರ್‌ ನೀಡಿದರೆ, 766 ಜನರು 4 ಸ್ಟಾರ್‌ ನೀಡಿದ್ದಾರೆ. ಹಾಗೆಯೇ 160 ಜನರು 3 ಸ್ಟಾರ್‌ ಸಹ ಕೊಟ್ಟಿದ್ದಾರೆ. 21 ಮಂದಿ 2 ಸ್ಟಾರ್‌ ಹಾಗೂ 33 ಜನರು 1 ಸ್ಟಾರ್‌ ನೀಡಿ ಬೇಸರ ವ್ಯಕ್ತಪಡಿಸಿದ್ದಾರೆ.

8 ವರ್ಷ​ದಿಂದ ರೋಹಿಣಿ ನನ್ನ ಮನೆಯವರ ಹಿಂದೆ ಬಿದ್ದಿ​ದ್ದಾರೆ: ರೂಪಾ ಆಡಿಯೋ?

ಡಿಸಿಪಿ ಅವರ ಸರ್ಕಾರಿ ಮೊಬೈಲ್‌ ನಂ.94808 01601 ವಾಟ್ಸಪ್‌ ಡಿಪಿಯಲ್ಲಿ ಕ್ಯೂಆರ್‌ ಕೋಡ್‌ ಲಿಂಕ್‌ ಸಿಗಲಿದೆ.

‘ಜನ ಸ್ನೇಹಿ’ ಆಡಳಿತ ನಮ್ಮ ಧ್ಯೇಯವಾಗಿದೆ. ತಾಂತ್ರಿಕತೆ ಬಳಸಿಕೊಂಡು ಜನರಿಗೆ ಮತ್ತಷ್ಟುಪರಿಣಾಮಕಾರಿಯಾಗಿ ಪೊಲೀಸ್‌ ಸೇವೆಗಳು ಲಭಿಸುವಂತೆ ಯೋಜಿಸಲಾಗಿದೆ.
-ಡಾ.ಸಿ.ಕೆ.ಬಾಬಾ, ಡಿಸಿಪಿ, ಆಗ್ನೇಯ ವಿಭಾಗ.

PREV
Read more Articles on
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!