ನೀರಿನ ಬಾಕಿ ಕಂತುಗಳಲ್ಲಿ ಪಾವತಿಸಲು ಅವಕಾಶ ಕೊಡಿ : ಸಾರ್ವಜನಿಕರ ಮನವಿ

Published : Feb 08, 2023, 06:06 AM IST
  ನೀರಿನ ಬಾಕಿ ಕಂತುಗಳಲ್ಲಿ ಪಾವತಿಸಲು ಅವಕಾಶ ಕೊಡಿ : ಸಾರ್ವಜನಿಕರ ಮನವಿ

ಸಾರಾಂಶ

ಮೈಸೂರು ಮಹಾನಗರಪಾಲಿಕೆ ವಲಯ ಕಚೇರಿ 8 ಉದಯಗಿರಿ ಮತ್ತು ವಲಯ ಕಚೇರಿ 9ರ ಗಾಯತ್ರಿಪುರಂನಲ್ಲಿ ಮೇಯರ್‌ ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಅದಾಲತ್‌ನಲ್ಲಿ ಸಾರ್ವಜನಿಕರ ಅವಹಾಲುಗಳ ಮಹಾಪೂರವೇ ಹರಿದು ಬಂದಿತು.

 ಮೈಸೂರು :  ಮೈಸೂರು ಮಹಾನಗರಪಾಲಿಕೆ ವಲಯ ಕಚೇರಿ 8 ಉದಯಗಿರಿ ಮತ್ತು ವಲಯ ಕಚೇರಿ 9ರ ಗಾಯತ್ರಿಪುರಂನಲ್ಲಿ ಮೇಯರ್‌ ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಅದಾಲತ್‌ನಲ್ಲಿ ಸಾರ್ವಜನಿಕರ ಅವಹಾಲುಗಳ ಮಹಾಪೂರವೇ ಹರಿದು ಬಂದಿತು.

ಮೊದಲಿಗೆ ವಲಯ ಕಚೇರಿ 8ರಲ್ಲಿ ಸಾಲುಗಟ್ಟಿನಿಂತಿದ್ದ ಸಾರ್ವಜನಿಕರು ದೂರು ಸಲ್ಲಿಸಿದರು. ಕುಡಿಯುವ ನೀರಿನ ಬಾಕಿ ಹಣ ಕಟ್ಟಲು ಬಡ್ಡಿ ಮನ್ನಾ ಮಾಡಿ ಒಂದೇ ಕಂತಿನಲ್ಲಿ ಕಟ್ಟಲು ಹೇಳಿರುವುದರಿಂದ ತುಂಬಾ ತೊಂದರೆಯಾಗಿದ್ದು, 2- 3 ಕಂತುಗಳಲ್ಲಿ ಕಟ್ಟಲು ಅವಕಾಶ ಮಾಡಿಕೊಡಬೇಕು ಎಂದು ರಾಘವೇಂದ್ರನಗರದ ಮುದ್ದಯ್ಯ ಮನವಿ ಸಲ್ಲಿಸಿದರು. ಇದೇ ರೀತಿ 10 ರಿಂದ 25 ಸಾವಿರವರೆಗೆ ಅಸಲು ಉಳಿಸಿಕೊಂಡಿದ್ದ ರಾಮಸ್ವಾಮಿ, ಮುನಿರಾಜು, ಮಾದಮ್ಮ ಎಂಬವರು ಕೂಡ ನಮಗೆ 3- 4 ಕಂತಿನಲ್ಲಿ ಬಾಕಿ ಕಟ್ಟಲು ಅನುವು ಮಾಡಿಕೊಡಬೇಕು ಎಂದು ಕೋರಿದರು.

ಈ ಮನವಿಗೆ ಸ್ಪಂದಿಸಿದ ಮೇಯರ್‌ ಶಿವಕುಮಾರ್‌, ವಲಯವಾರು ಕಚೇರಿಗಳಲ್ಲಿ ನಡೆಸಿದ ಅದಾಲತ್‌ನಲ್ಲಿ ಈ ರೀತಿಯ ಮನವಿಗಳು ಸಾಕಷ್ಟುಬಂದಿವೆ. ಸರ್ಕಾರದ ನಿಯಮಾನುಸಾರ ಒಂದೇ ಬಾರಿ ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡಬೇಕು. ಮುಂದಿನ ದಿನಗಳಲ್ಲಿ ಆಯುಕ್ತರು ಸೇರಿದಂತೆ ಇನ್ನಿತರ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕು. ಒಂದು ವೇಳೆ ಅದಕ್ಕೆ ಅವಕಾಶ ಇದ್ದಲ್ಲಿ ಕಂತುಗಳಲ್ಲಿ ಪಾವತಿಗೆ ಅವಕಾಶ ಮಾಡಿ ಕೊಡಲಾಗುವುದು ಎಂದು ಭರವಸೆ ನೀಡಿದರು.

ಹಳೆಯ ಪ್ರದೇಶಗಳಲ್ಲಿ ಅಳವಡಿಸಿರುವ ಮೀಟರ್‌ಗಳು ತಾಂತ್ರಿಕ ದೋಷವಿದ್ದಲ್ಲಿ ಅದನ್ನು ಬದಲಾಯಿಸಿ ವೈಜ್ಞಾನಿಕವಾಗಿ ನೀರಿನ ಬಿಲ್‌ ಬರುವಂತೆ ಮಾಡಬೇಕು. ಕೂಡಲೇ ನಿಗದಿಗಿಂತ ಜಾಸ್ತಿ ಬಂದಿರುವ ಬಿಲ್‌ಗಳನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಮೇಯರ್‌ ಅಧಿಕಾರಿಗಳಿಗೆ ಸೂಚಿಸಿದರು.

ಗಾಯತ್ರಿಪುರಂ ನಿವಾಸಿ ತಂಗಮಣಿ ಅವರು, ಪೌರಕಾರ್ಮಿಕರ ಕಾಲೋನಿಗಳಿಗೆ ಮೂಲಸೌಕರ್ಯ ಒದಗಿಸಬೇಕು. ವಿವಿಧ ಬಡಾವಣೆಗಳಿಗೆ ಸ್ವಚ್ಛತಾ ಕಾರ್ಯಕ್ಕೆ ಹೋಗುವವರಿಗೆ ಬಸ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಉಪ ಮೇಯರ್‌ ಡಾ.ಜಿ. ರೂಪಾ, ಪಾಲಿಕೆ ಸದಸ್ಯರಾದ ಶ್ರೀಧರ್‌, ಎಚ್‌.ಎಂ. ಶಾಂತಕುಮಾರಿ, ಉಷಾ ನಾರಾಯಣಪ್ಪ, ಸಾತ್ವಿಕ್‌, ಸಾವುದ್‌ ಖಾನ್‌, ಪುಷ್ಪಲತಾ ಜಗನ್ನಾಥ್‌, ಬಷೀರ್‌ ಅಹ್ಮದ್‌, ಅಯಾಜ್‌ ಪಾಷ, ವಲಯ ಆಯುಕ್ತರಾದ ಶಿವಕುಮಾರ್‌, ಕೃಷ್ಣ ಮೊದಲಾದವರು ಇದ್ದರು.

ನೀರು‌ ಕೃಷಿಕರಿಗೆ ಸಿಂಹ ಸ್ವಪ್ನ

ಉಡುಪಿ  : ಈ ಹಿಂದೆ ಇದೇ ಭಾಗದಲ್ಲಿ ಮೂರು ನಾಲ್ಕು ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಈಗ ಕಿಲೋ ಮೀಟರ್ ಉದ್ದಕ್ಕೂ ಗದ್ದೆಗಳು ಬಂಜಾರಾಗಿ ಬಿದ್ದಿವೆ. ಹಾಗಾಂತ ಇಲ್ಲಿ ಕೃಷಿಗೆ ಪೂರಕವಾದ ವ್ಯವಸ್ಥೆ ಇಲ್ಲ ಅಂತಲ್ಲಾ. ಕೃಷಿ ಗದ್ದೆಯ ಪಕ್ಕದ ಹರಿಯು ಹೊಳೆ ಇದ್ದರು, ಅದೇ ನೀರು‌ ಸದ್ಯ ಕೃಷಿಕರಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದೆ ಎಂದರೆ ತಪ್ಪಾಗಲಾರದು. ಇಷ್ಟಕ್ಕೂ ಇಲ್ಲಿನ ಸಮಸ್ಯೆ ಏನು ಗೊತ್ತಾ?.  ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಕೋಡಿ ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆ, ಕೋಡಿ ವ್ಯಾಪ್ತಿಯ ಸಮಸ್ಯೆ. ಈ ಭಾಗದಲ್ಲಿ ಕೃಷಿಕರಿಗೆ ಜೀವ ಸೆಲೆ ಎನ್ನುವಂತೆ ಸೀತಾ ನದಿ ಹರಿಯುತ್ತಾಳೆ. ಅರಬ್ಬಿ ಸಮುದ್ರದ ಎರಡು ಕಿಮೀ ಈಚೆಗೆ ಸಮುದ್ರಕ್ಕೆ ಸಮಾನಾಂತರ ವಾಗಿ ಸೀತಾ ನದಿ ಸೆರಗು ಕಾಣಬಹುದಾಗಿದೆ. 

ಇಲ್ಲಿ ಸಮುದ್ರ ಉಬ್ಬರ ಇಳಿತ, ಅಮಾವಾಸ್ಯೆ ಹುಣ್ಣಿಮೆ ಸಂದರ್ಭ ಹೊಳೆಯ ನೀರಿನ ಏರಿಳಿತ ಸರ್ವೆ ಸಾಮಾನ್ಯ. ಈ ಸಂದರ್ಭದಲ್ಲಿ ಸಮುದ್ರದ ಉಪ್ಪು ನೀರು ಭಾರಿ ಪ್ರಮಾಣದಲ್ಲಿ ಹೊಳೆಗೆ ಬರುತ್ತಿರುತ್ತದೆ. ಮೊದಲೆಲ್ಲಾ ಈ ಭಾಗದ ಸೀತಾ ನದಿ ಆಳವಿದ್ದ ಕಾರಣ ಉಬ್ಬರ ಇಳಿತದ ಇಫೆಕ್ಟ್ ನದಿ ಪಾತ್ರದ ಜನಗಳಿಗೆ ಅಷ್ಟಾಗಿ ಆಗುತ್ತಿರಲಿಲ್ಲ.

PREV
Read more Articles on
click me!

Recommended Stories

ಅಡಿಕೆ ತೋಟದ ದುರಂತ: ಗೊನೆ ಕೊಯ್ಯುವಾಗ ಆಯತಪ್ಪಿ ಬಿದ್ದ ಕಾರ್ಮಿಕ ಸಾವು
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!