ದೇಶವನ್ನೇ ಬೆಚ್ಚಿಬೀಳಿಸಿದ ಮಂಗಳೂರು ಗಲಭೆಗೂ ಮುನ್ನ ಎಸ್‌ಡಿಪಿಐ ಸಂಘಟನೆಯ ಮುಖಂಡನೊಬ್ಬ ಹಾಕಿದ್ದ ಸಂದೇಶ ಸದ್ಯ ವೈರಲ್ ಆಗುತ್ತಿದೆ. ಪ್ರಚೋದನಾತ್ಮಕ ಸಂದೇಶ ಕಳುಹಿಸಿದ ಎಸ್‌ಡಿಪಿಐ ಮುಖಂಡನಿಗಾಗಿ ಮಂಗಳೂರು ಪೊಲೀಸರು ಬಲೆ ಬೀಸಿದ್ದಾರೆ.
ಮಂಗಳೂರು(ಡಿ.24): ದೇಶವನ್ನೇ ಬೆಚ್ಚಿಬೀಳಿಸಿದ ಮಂಗಳೂರು ಗಲಭೆಗೂ ಮುನ್ನ ಎಸ್‌ಡಿಪಿಐ ಸಂಘಟನೆಯ ಮುಖಂಡನೊಬ್ಬ ಹಾಕಿದ್ದ ಸಂದೇಶ ಸದ್ಯ ವೈರಲ್ ಆಗುತ್ತಿದೆ. ಪ್ರಚೋದನಾತ್ಮಕ ಸಂದೇಶ ಕಳುಹಿಸಿದ ಎಸ್‌ಡಿಪಿಐ ಮುಖಂಡನಿಗಾಗಿ ಮಂಗಳೂರು ಪೊಲೀಸರು ಬಲೆ ಬೀಸಿದ್ದಾರೆ.
ನಮ್ಮನ್ನ ಹತ್ತಿಕ್ಕಲು ಭಾರತೀಯ ಸೈನಿಕರು ಬಂದರೂ ಸಾಧ್ಯವಿಲ್ಲ ಎಂದು ಎಸ್‌ಡಿಪಿಐ ಮುಖಂಡ ಕಳುಹಿಸಿದ್ದ ಸಂದೇಶ ವೈರಲ್ ಆಗುತ್ತಿದೆ. ಮಂಗಳೂರು ಗಲಭೆ ನಡೆಯುವುದಕ್ಕೂ ಮುನ್ನವೇ ಎಸ್‌ಡಿಪಿಐ ಮುಖಂಡ ಸಂದೇಶ ಕಳುಹಿಸಿದ್ದ.
ಮಂಗಳೂರು ಗಲಭೆ: ಕಾರಣವೇ ಇಲ್ಲದೆ ಅಮಾಯಕರನ್ನು ಕೊಂದರು ಎಂದ ಮಾಜಿ ಸಂಸದ
ಎಸ್‌ಡಿಪಿಐ ರಾಜ್ಯ ನಾಯಕ ರಿಯಾಜ್ ಫರಂಗಿಪೇಟೆ ಕಳುಸಿದ ಸಂದೇಶ ವೈರಲ್ ಆಗುತ್ತಿದೆ. 'ಪೌರತ್ವದ ಹಕ್ಕಿಗಾಗಿ ಎರಕ ಹೊಯ್ದು ಸೀಸದ ಇಟ್ಟಿಗೆಗಳಂತೆ ಸದೃಢವಾಗಿ ನಿಲ್ಲುವ. ನಮ್ಮನ್ನ ಹತ್ತಿಕ್ಕಲು ಪೊಲೀಸರು ಬಿಡಿ, ಭಾರತೀಯ ಸೈನಿಕರಿಗೂ ಸಾಧ್ಯವಿಲ್ಲ' ಎಂಬ ಸಂದೇಶ ಕಳುಹಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಮಂಗಳೂರು ಗಲಭೆಯ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪೊಲೀಸ್ ಮಾಹಿತಿ ಪ್ರಕಾದ ಬಿಹಾರದಲ್ಲಿ ಕೂತು ರಿಯಾಜ್ ಸಂದೇಶ ರವಾನಿಸಿದ್ದ ಎನ್ನಲಾಗುತ್ತಿದೆ. ರಿಯಾಜ್ ಸಂದೇಶದ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ರಿಯಾಜ್ ಪತ್ತೆಗೆ ಮಂಗಳೂರು ಪೊಲೀಸರು ಬಲೆ ಬೀಸಿದ್ದಾರೆ.
ಕಮಿಷನರ್ ಮನವಿಗೆ ಮಾಸ್ ರಿಪ್ಲೈ: ಮಂಗಳೂರು ಗಲಭೆಯ 1000ಕ್ಕೂ ಹೆಚ್ಚು ವಿಡಿಯೋ ಲಭ್ಯ
ಡಿಸೆಂಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ