ಮಂಗಳೂರು ಗಲಭೆ: ಕಾರಣವೇ ಇಲ್ಲದೆ ಅಮಾಯಕರನ್ನು ಕೊಂದರು ಎಂದ ಮಾಜಿ ಸಂಸದ

By Suvarna News  |  First Published Dec 24, 2019, 2:18 PM IST

ಪೊಲೀಸರು ಕಾರಣವೇ ಇಲ್ಲದೆ ಇಬ್ಬರು ಅಮಾಯಕರನ್ನು ಕೊಂದರು ಎಂದು ಮಾಜಿ ಸಂಸದ ಪಿ.ಕರುಣಾಕರನ್ ಹೇಳಿದ್ದಾರೆ. ಮಂಗಳೂರು ಗಲಭೆಗೆ ಬಗ್ಗೆ ಪ್ರತಿಕ್ರಿಯಿಸಿ ಅವರು ಸೂಕ್ತ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.


ಮಂಗಳೂರು(ಡಿ.24): ಪೊಲೀಸರು ಕಾರಣವೇ ಇಲ್ಲದೆ ಇಬ್ಬರು ಅಮಾಯಕರನ್ನು ಕೊಂದರು ಎಂದು ಮಾಜಿ ಸಂಸದ ಪಿ.ಕರುಣಾಕರನ್ ಹೇಳಿದ್ದಾರೆ. ಮಂಗಳೂರು ಗಲಭೆಗೆ ಬಗ್ಗೆ ಪ್ರತಿಕ್ರಿಯಿಸಿ ಅವರು ಸೂಕ್ತ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಸಿಪಿಐಎಂ ಕೇಂದ್ರ ಸಮಿತಿ ಸದಸ್ಯ ಮತ್ತು ಮಾಜಿ ಸಂಸದ ಪಿ.ಕರುಣಾಕರನ್ ಹೇಳಿಕೆ ನೀಡಿದ್ದು, ಪೊಲೀಸರಿಗೆ ಘಟನೆಯಲ್ಲಿ ಫೈರ್ ಮಾಡುವ ಅಗತ್ಯ ಇರಲಿಲ್ಲ. ಮೊದಲು ಅವರು ಗಾಳಿಯಲ್ಲಿ ಗುಂಡು ಹಾರಿಸಬಹುದಿತ್ತು. ಕಾರಣವೇ ಇಲ್ಲದ ಪೊಲೀಸರು ಹೇಗೆ ಅಮಾಯಕರನ್ನ ಕೊಂದರು ಎಂದು ಆರೋಪಿಸಿದ್ದಾರೆ.

Latest Videos

undefined

ಮಂಗಳೂರು ಗಲಭೆ: ಪೊಲೀಸರ ಕುಟುಂಬಕ್ಕೆ ಬೆದರಿಕೆ..!

ಈ ಘಟನೆ ಬಗ್ಗೆ ಪಕ್ಷಾತೀತವಾದ ನ್ಯಾಯಾಂಗ ತನಿಖೆಯಾಗಲಿ. ತಪ್ಪಿತಸ್ಥ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿ ಕ್ರಮ ಕೈಗೊಳ್ಳಬೇಕು. ಅಲ್ಲದೇ ಎರಡೂ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಮಂಗಳೂರು ಗಲಭೆಯ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೇರಳ ಮತ್ತು ಕರ್ನಾಟಕಕ್ಕೆ ಉತ್ತಮ ಸಂಬಂಧವಿದೆ. ಪ್ರತಿ ನಿತ್ಯ ರೈಲಿನಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಾಗಿ ನಮ್ಮವರು ಇಲ್ಲಿಗೆ‌ ಬರುತ್ತಾರೆ. ಸರ್ಕಾರ ಈಗ ತನಿಖೆಗೆ ಆದೇಶ ಮಾಡಿದೆ, ಆದರೆ ಅದು ಸಾಲೋದಿಲ್ಲ, ನ್ಯಾಯಾಂಗ ತನಿಖೆ ಆಗಲಿ. ನಮ್ಮ ನಿಯೋಗ ಎಲ್ಲಾ ಕಡೆ ಭೇಟಿ ಕೊಟ್ಟು ಪರಿಸ್ಥಿತಿ ಅವಲೋಕಿಸಿದೆ. ಈ ಬಗ್ಗೆ ನಿಷ್ಪಕ್ಷಪಾತವಾಗಿ ನ್ಯಾಯಾಂಗ ತನಿಖೆ ಆಗಲಿ ಅನ್ನೋದೇ ನಮ್ಮ ಅಗ್ರಹ ಎಂದಿದ್ದಾರೆ.

ಕಮಿಷನರ್‌ ಮನವಿಗೆ ಮಾಸ್ ರಿಪ್ಲೈ: ಮಂಗಳೂರು ಗಲಭೆಯ 1000ಕ್ಕೂ ಹೆಚ್ಚು ವಿಡಿಯೋ ಲಭ್ಯ

click me!