ಜಿಲ್ಲೆಯ ಶೃಂಗೇರಿಯಲ್ಲಿ ನೂರು ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಗೆ ಆಗ್ರಹಿಸಿ ಆಸ್ಪತ್ರೆ ಹೋರಾಟ ಸಮಿತಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಎರಡನೇ ದಿನವಾದ ಇಂದೂ ಮುಂದುವರೆದಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ನ.26): ಜಿಲ್ಲೆಯ ಶೃಂಗೇರಿಯಲ್ಲಿ ನೂರು ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಗೆ ಆಗ್ರಹಿಸಿ ಆಸ್ಪತ್ರೆ ಹೋರಾಟ ಸಮಿತಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಎರಡನೇ ದಿನವಾದ ಇಂದೂ ಮುಂದುವರೆದಿದ್ದು, ಹೋರಾಟ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಧರಣಿಯಲ್ಲಿ ಭಾಗಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿರುವ ಸಂತೇಮಾರುಕಟ್ಟೆ ಎದುರು ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ನೂರು ಬೆಡ್ ಸುಸಜ್ಜಿತ ಆಸ್ಪತ್ರೆ ಹೋರಾಟ ಸಮಿತಿ ಧರಣಿ ಸತ್ಯಾಗ್ರಹ ನಡೆಸುತ್ತಿದೆ.
undefined
ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯವಿರುವ ಜಾಗ ಮಂಜೂರಾತಿ ಪ್ರಕ್ರಿಯೆ ವಿಳಂಬವಾಗಿದ್ದು, ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಶೀಘ್ರವೇ ಪ್ರಕ್ರಿಯೆ ಪೂರ್ಣಗೊಳಿಸಿ ಜಾಗ ಮಂಜೂರಾತಿ ಮಾಡಬೇಕು ಎಂಬ ಆಗ್ರಹವನ್ನು ಹೋರಾಟ ಸಮಿತಿ ಮುಂದಿಟ್ಟಿದೆ. 2007ರಲ್ಲೇ ಆಸ್ಪತ್ರೆ ಮಂಜೂರಾತಿಯಾಗಿದ್ದು ಇನ್ನೂ ಆಸ್ಪತ್ರೆ ನಿರ್ಮಾಣವಾಗದೇ ಇರುವುದಕ್ಕೆ ಅಧಿಕಾರಿವರ್ಗ ಹಾಗೂ ಜನಪ್ರತಿನಿಧಿಗಳ ವೈಫಲ್ಯವೇ ಕಾರಣ, ಈ ಕುರಿತು ಇನ್ನಾದರೂ ಎಚ್ಚೆತ್ತು ಊರಿಗೆ ಅವಶ್ಯವಿರುವ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡಬೇಕಿದೆ.
Chikkamagaluru: ಇಂದಿನಿಂದ ನೂರು ಬೆಡ್ ಆಸ್ಪತ್ರೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ
ಶೃಂಗೇರಿಯ ಸಂಘ ಸಂಸ್ಥೆಗಳಿಂದ ಬೆಂಬಲ: ನೂರು ಬೆಡ್ಡಿನ ಸುಸಜ್ಜಿತ ಆಸ್ಪತ್ರೆ ಹೋರಾಟಕ್ಕೆ ಬೆಂಬಲಿಸಿ ಜನತಾಪಾರ್ಟಿ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಹುದ್ದೆಗೆ ರಜಿತ್ ಗೌಡ ಬೇಸೂರು ರಾಜೀನಾಮೆ ನೀಡಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಶೃಂಗೇರಿ ಕ್ಷೇತ್ರದ ಜನನಾಯಕರೇ ನಿಮಗೆ ನಿಜವಾಗಿಯೂ ಶೃಂಗೇರಿ ಕ್ಷೇತ್ರದ ಜನರ ಆರೋಗ್ಯದ ಮೇಲೆ ಕಾಳಜಿ ಇದ್ದಲ್ಲಿ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನೂರು ಬೆಡ್ಡಿನ ಸುಸಜ್ಜಿತ ಆಸ್ಪತ್ರೆ ಹೋರಾಟದಲ್ಲಿ ಭಾಗವಹಿಸಿ ಎಂದು ರಜಿತ್ ಗೌಡ ಬೇಸೂರು ಕರೆ ನೀಡಿದ್ದಾರೆ.
100 ಹಾಸಿಗೆ ಆಸ್ಪತ್ರೆಗೆ ಆಗ್ರಹಿಸಿ ಶೃಂಗೇರಿ ಯುವಕರ ತಮಟೆ ಚಳವಳಿ
ಹೋರಾಟವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಮಿತಿಯು ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ನಾಳೆ ಕೊಪ್ಪದಲ್ಲಿ ನಡೆಯುವ ಮುಖ್ಯಮಂತ್ರಿಗಳ ಕಾರ್ಯಕ್ರಮದ ಮೊದಲು ಹೋರಾಟ ಸಮಿತಿಯ ಬೇಡಿಕೆಯನ್ನು ಸರ್ಕಾರ ಅಥವಾ ಅಧಿಕಾರಿಗಳು ಈಡೇರಿಸುತ್ತಾರಾಎಂಬುದನ್ನು ಕಾದುನೋಡಬೇಕಿದೆ. ಜನರಿಂದಲೂ ಉತ್ತಮವಾದ ಪ್ರತಿಕ್ರಿಯೆ, ಬೆಂಬಲ ಈ ಹೋರಾಟಕ್ಕೆ ದೊರೆತಿದ್ದು ಅತೀ ಶೀಘ್ರವಾಗಿ ಬೇಡಿಕೆ ಈಡೇರಬೇಕಿದೆ.