ಕಾಂತರಾ ಸಿನಿಮಾ ನೋಡಿದವರಿಗೆ ಕಂಬಳದ ಕರಾಮತ್ತು ಏನೆಂದು ಗೊತ್ತಿರುತ್ತೆ! ಕಂಬಳ ಗದ್ದೆಗೆ ಕೋಣಗಳನ್ನು ಹಿಡಿದು ರಿಷಬ್ ಎಂಟ್ರಿ ಕೊಟ್ಟಾಗ, ಇಡೀ ಥಿಯೇಟರ್ ಹುಚ್ಚೆದ್ದ್ದನ್ನು ಕಂಡಿದ್ದೇವೆ. ಈಗ ಅದೇ ಗದ್ದೆಯಲ್ಲಿ ಅದೇ ಕೋಣಗಳು ಮತ್ತೊಮ್ಮೆ ಓಡಿವೆ.
ಉಡುಪಿ (ನ.26): ಕಾಂತರಾ ಸಿನಿಮಾ ನೋಡಿದವರಿಗೆ ಕಂಬಳದ ಕರಾಮತ್ತು ಏನೆಂದು ಗೊತ್ತಿರುತ್ತೆ! ಕಂಬಳ ಗದ್ದೆಗೆ ಕೋಣಗಳನ್ನು ಹಿಡಿದು ರಿಷಬ್ ಎಂಟ್ರಿ ಕೊಟ್ಟಾಗ, ಇಡೀ ಥಿಯೇಟರ್ ಹುಚ್ಚೆದ್ದ್ದನ್ನು ಕಂಡಿದ್ದೇವೆ. ಈಗ ಅದೇ ಗದ್ದೆಯಲ್ಲಿ ಅದೇ ಕೋಣಗಳು ಮತ್ತೊಮ್ಮೆ ಓಡಿವೆ. ರಿಷಬ್ ಹುಟ್ಟೂರು ಕಿರಾಡಿಯಲ್ಲಿ ಕಾಂತರಾದ ಕಂಬಳ ಮತ್ತೊಮ್ಮೆ ಮರು ಸೃಷ್ಟಿಯಾಗಿದೆ. ಕಾಂತಾರ ಸಿನಿಮಾದಲ್ಲಿ ಕೊನೆಯ 20 ನಿಮಿಷ ಜನರನ್ನು ಎಷ್ಟು ರೋಮಾಂಚನಗೊಳಿಸಿದೆಯೋ, ಆರಂಭದಲ್ಲಿ ಬರುವ ಕಂಬಳದ ಸಿಕ್ವೆನ್ಸ್ ನೋಡಿ ಅಷ್ಟೇ ಮಂದಿ ಹುಚ್ಚೆದ್ದು ಕುಳಿತಿದ್ದಾರೆ.
ಕರಾವಳಿಯ ಕಂಬಳದ ಕಮಾಲ್ ಅದು. ರಿಷಬ್ ಶೆಟ್ಟಿ ಕೋಣಗಳನ್ನು ಓಡಿಸಿದ ಕಿರಾಡಿಯ ಗದ್ದೆಯಲ್ಲಿ ಮತ್ತೊಮ್ಮೆ ಕಂಬಳದ ಸೊಬಗು ಕಂಡು ಬಂದಿದೆ. ರಿಷಬ್ ಶೆಟ್ರ ಮನೆತನಕ್ಕೆ ಸೇರಿದ ಕಂಬಳ ಗದ್ದೆಯಲ್ಲಿ, ಈ ಬಾರಿಯ ಸಾಂಪ್ರದಾಯಿಕ ಕಂಬಳೋತ್ಸವ ನಡೆದಿದೆ. ಎಲ್ಲಾ ನಿರೀಕ್ಷಿಸಿದಂತೆಯೇ ಆಗಿದ್ದರೆ ರಿಷಬ್ ಶೆಟ್ಟಿ ಈ ಕಂಬಳಕ್ಕೆ ಭಾಗವಹಿಸಿ ಸನ್ಮಾನ ಪಡೆಯಬೇಕಿತ್ತು. ರಿಷಬ್ ದೆಹಲಿಯಲ್ಲಿ ಇರುವುದರಿಂದ ಅವರ ಅನುಪಸ್ಥಿತಿಯಲ್ಲಿ ಅದ್ಧೂರಿ ಕಂಬಳ ನಡೆಯಿತು. ಪ್ರತಿ ವರ್ಷ ಸಂಪ್ರದಾಯದಂತೆ ಕಂಬಳೋತ್ಸವ ನಡೆಸಲಾಗುತ್ತೆ.
Udupi: ತತ್ವಜ್ಞಾನವನ್ನು ಹೊರಗಿಟ್ಟು ಸಾಹಿತ್ಯ ಬೆಳೆಯುವುದು ಅಸಾಧ್ಯ: ವೀಣಾ ಬನ್ನಂಜೆ
ರಿಷಬ್ ಶೆಟ್ಟರ ಮನೆತನಕ್ಕೆ ಸೇರಿದ ಜಾಗದಲ್ಲೇ ಕಿಲಾಡಿ ಕಂಬಳ ನಡೆಯುತ್ತೆ. ವರ್ಷಕ್ಕೊಮ್ಮೆ ಕಾಲಿಗದ್ದೆಯಲ್ಲಿ ಕೃಷಿಕರಲ್ಲ ಸೇರಿ ಸಾಂಪ್ರದಾಯಕ ರೀತಿಯಲ್ಲಿ ಕೋಣಗಳನ್ನು ಓಡಿಸುವ ಸೊಬಗು ನೋಡುವುದೇ ಚಂದ. ಈ ಬಾರಿಯ ಕಂಬಳದ ವಿಶೇಷ ಏನು ಗೊತ್ತಾ? ಶೆಟ್ರ ತವರೂರಿನಲ್ಲಿ ಕಾಂತರಾ ಸಿನಿಮಾದ ಕಂಬಳದ ಶೂಟಿಂಗ್ ನಡೆದಿತ್ತು. ಈ ಬಾರಿ ಅದೇ ಗದ್ದೆಯಲ್ಲಿ ಜಿಲ್ಲೆಯ ಎರಡನೇ ಅತಿ ದೊಡ್ಡ ಕಂಬಳ ಏರ್ಪಾಟಾಗಿತ್ತು. ಕಾಂತರಾ ಸಿನಿಮಾದಲ್ಲಿ ಪವರ್ ಫುಲ್ ಆಗಿ ಓಡಿ ಜನರ ಮೆಚ್ಚುಗೆ ಪಡೆದಿದ್ದವೋ, ಆ ಕೋಣಗಳೇ ಮತ್ತೊಮ್ಮೆ ಅದ್ಧೂರಿಯಾಗಿ ಗದ್ದೆಗೆ ಇಳಿದು ಅಬ್ಬರಿಸಿದ್ದು ಮನಮೋಹಕವಾಗಿತ್ತು.
ಮಂಗಳೂರು ಸ್ಫೋಟ ಪ್ರಕರಣ: ಸಮಾಜವನ್ನು ದುರ್ಬಲಗೊಳಿಸಲು ಬಿಡುವುದಿಲ್ಲ: ಸಚಿವ ಸುನಿಲ್ ಕುಮಾರ್
ಕಪಿಲ ಮತ್ತು ದೇವ ಅಂದರೆ ಕಪಿಲ್ ದೇವ್ ಹೆಸರಿನ ಈ ಕೋಣ ಓಟ ನೋಡಲು ಸಾವಿರಾರು ಜನ ಬಂದಿದ್ದರು. ಕರಾವಳಿಯ ಜನಪದ ಕ್ರೀಡೆಯಾಗಿದ್ದ ಕಂಬಳ ನಿಷೇಧದ ನಂತರ ರಾಜ್ಯದ ಕ್ರೀಡೆಯಾಗಿ ಬೆಂಬಲ ಪಡೆಯಿತು. ಇದೀಗ ಕಾಂತರಾ ಸಿನಿಮಾ ಬಿಡುಗಡೆಯಾದ ನಂತರ ದೇಶ ಮಾತ್ರವಲ್ಲ ವಿದೇಶಗಳಲ್ಲೂ ಕಂಬಳದ ಮೈ ನವಿರುಳಿಸುವ ಓಟ ಕಂಡು ಜನ ಬೆರಗಾಗಿದ್ದಾರೆ. ಈ ಬಾರಿ ಅಂತೂ ಕೆರಾಡಿಯಲ್ಲಿ ಕಿಲಾಡಿ ಕೋಣಗಳನ್ನು ನೋಡುವುದು ಜನರಿಗೆ ನಿಜಕ್ಕೂ ಹಬ್ಬವಾಗಿತ್ತು.