ಪ್ರಗತಿಪರರು ನಾಯಿಗಳು, ಹಿಂದೂ ವಿರೋಧಿಗಳು: ಪ್ರಮೋದ್‌ ಮುತಾಲಿಕ್‌

By Girish Goudar  |  First Published Apr 14, 2022, 10:40 AM IST

*   ಸಾಹಿತಿ ಬಸವರಾಜ ಸೂಳಿಭಾವಿ ಹೇಳಿಕೆಗೆ ಆಕ್ರೋಶ
*  ಮುಸ್ಲಿಮರ ಬಗ್ಗೆ ಮಾತನಾಡುವ ಧೈರ್ಯ ಅವರಿಗಿಲ್ಲ
*  ಪ್ರಗತಿಪರರು ಮುಸ್ಲಿಂ, ಕ್ರಿಶ್ಚಿಯನ್‌ ಏಜೆಂಟರರು
 


ಗದಗ(ಏ.14):  ಪ್ರಗತಿಪರರು ನಾಯಿಗಳು, ಅವರೆಲ್ಲ ಹಿಂದೂ(Hindu) ವಿರೋಧಿಗಳು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌(Pramod Mutalik) ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಇಲ್ಲಿ ಶ್ರೀರಾಮ ಸೇನೆಯಿಂದ(Sri Ram Sene) ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಗತಿಪರ ಸಾಹಿತಿ, ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತ, ನಾಯಿಗಳು ಬೊಗಳ್ತವೆ, ಯಾಕೆ ಬೊಗಳ್ತಿಪಾ ಅಂತ ಕೇಳೋದಕ್ಕಾಗಲ್ಲ, ಇವರೆಲ್ಲ ನಾಯಿಗಳು, ಹಿಂದೂ ವಿರೋಧಿ ನಾಯಿಗಳು(Anti-Hindu Dogs) ಅಂತ ಕಿಡಿಕಾರಿದ ಅವರು, ಪ್ರಗತಿಪರರು ಮುಸ್ಲಿಂ(Muslim), ಕ್ರಿಶ್ಚಿಯನ್‌(Christian) ಏಜೆಂಟರರು, ನಮ್ಮ ದೇಶಕ್ಕೆ ಇವರೇ ದೊಡ್ಡ ದೇಶದ್ರೋಹಿಗಳು. ಈ ನಾಯಿಗಳಿಗೆ ಪ್ರತಿ ಸಾರಿಯೂ ಹಚಾ...ತೂ... ಹಚಾ... ತೂ.... ಅನ್ನೋದಕ್ಕಾಗಲ್ಲ. ನಾವು ನಮ್ಮ ಪಾಡಿಗೆ ಹಿಂದೂ ಸಂಘಟನೆ ಜಾಗೃತಿ ಕೆಲಸ ಮುಂದುವರಿಸುತ್ತೇವೆ ಅಷ್ಟೇ ಎಂದರು.

Tap to resize

Latest Videos

ಕರ್ನಾಟಕದಲ್ಲಿ ಮುಸ್ಲಿಂರ ವಿರುದ್ಧ ಮತ್ತೊಂದು ಮೆಗಾ ಅಭಿಯಾನ?: ಮುತಾಲಿಕ್ ಹೇಳಿದ್ದಿಷ್ಟು

ಮುಸ್ಲಿಮರ ಬಗ್ಗೆ ಮಾತನಾಡುವ ಧೈರ್ಯ ಅವರಿಗಿಲ್ಲ. ಅದಕ್ಕಾಗಿ ಕೇವಲ ಹಿಂದೂಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ. ಹಿಂದೂಗಳನ್ನು, ನಮ್ಮ ದೇವರುಗಳನ್ನು ಅವಮಾನಿಸುತ್ತಾರೆ ಎಂದು ಹೇಳಿದರು.
ತೋಂಟದಾರ್ಯ ಮಠದ ದಾತ್ರೆಯ ವಿಚಾರವಾಗಿ ಪ್ರಮೋದ್‌ ಮುತಾಲಿಕ್‌ ಲಿಂಗಾಯತರನ್ನು ಮುಂದೆ ಬಿಟ್ಟು ಸಾಮರಸ್ಯ ಕದಡುತ್ತಿದ್ದಾರೆ ಎಂದು ಬಸವರಾಜ ಸೂಳಿಭಾವಿ ಆರೋಪಿಸಿದ್ದರು.

ಅಪೂರ್ವಾಗೆ ಸಾಂತ್ವನ:

ಮುಸ್ಲಿಂ ಯುವಕನನ್ನು ಮದುವೆಯಾಗಿ ಅವನಿಂದ ಮಾರಣಾಂತಿಕವಾಗಿ ಹಲ್ಲೆಗೆ ಒಳಗಾಗಿರುವ ಗದಗ ನಗರದ ಯುವತಿ ಅಪೂರ್ವಾ ಪುರಾಣಿಕ ಮನೆಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಭೇಟಿ ನೀಡಿ ಸಾಂತ್ವನ ಹೇಳಿದರು.

ಹಿಜಾಬ್‌, ಹಲಾಲ್‌ ನಡುವೆ ಮತ್ತೊಂದು ಅಭಿಯಾನ: ಕರ್ನಾಟಕದಲ್ಲಿ ವಕ್ಫ್‌ ಬೋರ್ಡ್‌ ಬ್ಯಾನ್‌ ಕೂಗು

ಮುತಾಲಿಕ್‌ ಭೇಟಿ ವೇಳೆ ಕಣ್ಣೀರು ಹಾಕಿದ ಅಪೂರ್ವಾ, ಆತನಿಗೆ ಬೇಲ್‌ ಸಿಗಬಾರದು ಸರ್‌, ಮತ್ತೆ ಎಲ್ಲಿ ಕೊಲೆ ಮಾಡುತ್ತಾನೆ ಅಂತ ಭಯ ಆಗುತ್ತಿದೆ. ನನಗೆ ರಕ್ಷಣೆ ನೀಡುವಂತೆ ಆಗ್ರಹಿಸಿದ ಅಪೂರ್ವಾ, ಆ ಪಾಪಿಗೆ ಕಠಿಣ ಶಿಕ್ಷೆ ಆಗಬೇಕು, ನಾಳೆ ಬೇಲ್‌ ಮೇಲೆ ಬಿಡುಗಡೆಯಾಗುವ ಸಂಭವವಿದೆ. ನಾನು ಹಾಗೂ ನನ್ನ ತಾಯಿ ಇಬ್ಬರೇ ಇರುವುದು. ಅವನು ಹೊರಗಡೆ ಬಂದರೆ ಕೊಲೆ ಮಾಡುತ್ತಾನೆ. ನನಗೆ ರಕ್ಷಣೆ ಬೇಕು ಎಂದು ಮನವಿ ಮಾಡಿ​ದ​ರು. ಈ ಸಂದರ್ಭದಲ್ಲಿ ಶ್ರೀರಾಮಸೇನೆಯ ಅನೇಕ ಕಾರ್ಯಕರ್ತರು ಹಾಜರಿದ್ದರು.
 

click me!