* 2 ವರ್ಷದ ಬಳಿಕ ಅದ್ಧೂರಿಯಾಗಿ ನಡೆದ ರಥೋತ್ಸವ
* ವಿವಾದಗಳ ನಡುವೆಯೂ ಶಾಸೊತ್ರೕಕ್ತವಾಗಿ ಜರುಗಿದ ಜಾತ್ರೆ
* ಅಲಂಕಾರದಿಂದ ಕಂಗೊಳಿಸುತ್ತಿರುವ ಶ್ರೀಚನ್ನಕೇಶವಸ್ವಾಮಿ ವಿಗ್ರಹ
ಬೇಲೂರು(ಏ.14): ಶಿಲ್ಪಕಲೆಗಳ ತವರೂರು ವಿಶ್ವವಿಖ್ಯಾತ ಬೇಲೂರು ಶ್ರೀಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವವು(Beluru Chennakeshava Swamy Fair) ನೆರೆದಿದ್ದ ಸಹಸ್ರಾರು ಭಕ್ತರ ವೇದಘೋಷ ಜೈಕಾರದ ನಡುವೆ ಬುಧವಾರ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ಚನ್ನಕೇಶವಸ್ವಾಮಿ ದೇಗುಲದಲ್ಲಿ(Temle) ಪೂಜಾ ವಿಧಿವಿಧಾನಗಳನ್ನು ಪೂರೈಸಿ ಯಾತ್ರಾದಾನ ಸೇವೆಯ ನಂತರ ಶ್ರೀಯವರ ಉತ್ಸವ ಮೂರ್ತಿಯನ್ನು ಅಲಂಕಾರಗೊಂಡ ದಿವ್ಯರಥದಲ್ಲಿ ಕೂರಿಸಲಾಯಿತು. ಶ್ರೀಯವರ ರಥಾರೋಹಣಕ್ಕೂ ಮೊದಲು ಕೇಸರಿ ಮಂಟಪಕ್ಕೆ ರಥಪ್ರೋಕ್ಷಣೆಯನ್ನು ಮಾಡಲಾಯಿತು. ರಥಕ್ಕೆ ಪೂಜೆಯನ್ನು ಸಲ್ಲಿಸಿದ ನಂತರ ಬಾಳೆಕಂದನ್ನು ಕತ್ತರಿಸಿ ಬಲಿಯನ್ನು ಕೊಡಲಾಯಿತು.
undefined
ಬೇಲೂರು ದೇವಸ್ಥಾನದಲ್ಲಿ ಮುಸ್ಲಿಂ ವ್ಯಾಪಾರಕ್ಕೆ ವಿರೋಧ: ನಮ್ಮ ಜಿಲ್ಲೆಯಲ್ಲಿ ಆ ರೀತಿ ಆಗೋದಕ್ಕೆ ಬಿಡಲ್ಲ: ಎಚ್ಡಿಕೆ
ಕುರಾನ್ ಪಠಣ:
ಹಿಂದಿನ ಸಂಪ್ರದಾಯದಂತೆ ‘ಚಿಕ್ಕಮೇದೂರಿನ ಮೌಲ್ವಿ ರಥದ ಮುಂದೆ ಕುರಾನ್(Quran)ಗ್ರಂಥದ ಕೆಲವು ಸಾಲುಗಳನ್ನು ಪಠಣೆ’ ಮಾಡಿದ ನಂತರ ಭಕ್ತರ ಘೋಷದ ನಡುವೆ 11 ಗಂಟೆ 20 ನಿಮಿಷಕ್ಕೆ ರಥವನ್ನು ಮೂಲಸ್ಥಾನದಿಂದ ಎಳೆಯಲಾಯಿತು. ಹಿಂದಿನ ವಾಡಿಕೆಯಂತೆ ಗರುಡ ಪಕ್ಷಿಯು(Garuda Bird) ರಥ ಎಳೆಯುವ ಸಂದರ್ಭದಲ್ಲಿ ದೇಗುಲದ ಸುತ್ತ ಪ್ರದಕ್ಷಿಣೆ ಮಾಡಿದ್ದನ್ನು ಕಂಡು ಭಕ್ತರು ಭಕ್ತಿಯಿಂದ ಕೈ ಮುಗಿದರು. ರಥವನ್ನು ಎಳೆಯುವ ಸಂದರ್ಭದಲ್ಲಿ ಭಕ್ತರು(Devotees) ದೇವರಿಗೆ ಬಾಳೆಹಣ್ಣು, ಧವನವನ್ನು ಎಸೆದು ಭಕ್ತಿಭಾವದಿಂದ ಕೇಶವನ ನಾಮಸ್ಮರಣೆ ಮಾಡಿದರು.
ಬ್ರಹ್ಮರಥೋತ್ಸವದ ಪ್ರಯುಕ್ತ ಬೆಳಿಗ್ಗೆ ಸುಪ್ರಭಾತಾ ಪೂಜೆಯೊಂದಿಗೆ ವಿಜೃಂಭಣೆಯಿಂದ ಯಾಗಶಾಲೆಯಲ್ಲಿನ ಹೋಮಕಾರ್ಯಗಳನ್ನು ಕೈಗೊಳ್ಳಲಾಯಿತು. ನಂತರ ದಿವ್ಯರಥಕ್ಕೆ ಪೂಜೆಯಲ್ಲೂ ಸಲ್ಲಿಸಿ ಬಲಿ ಅನ್ನವನ್ನು ನಾಲ್ಕು ಚಕ್ರಗಳಿಗೂ ಸಮರ್ಪಿಸಲಾಯಿತು. ಬಲಿಪ್ರಧಾನವನ್ನು ನೆರವೇರಿಸಿದ ನಂತರ ಯಾತ್ರಾದಾನದ ನಂತರ ಶ್ರೀಯವರ ಉತ್ಸವ ಮೂರ್ತಿಯನ್ನು ಕೃಷ್ಣಾಗಂಧೋತ್ಸವದೊಂದಿಗೆ 8 ಬೀದಿಯಲ್ಲಿ ಮೆರವಣಿಗೆ ನಡೆಸಿ ಕೇಸರಿ ಮಂಟಪ ಪೂಜೆಯೊಂದಿಗೆ 11ಗಂಟೆಗೆ ದಿವ್ಯರಥದಲ್ಲಿ ಕುಳ್ಳಿರಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಮೂಲಸ್ಥಾನದಿಂದ ಎಳೆದ ರಥವನ್ನು ದೇಗುಲ ಗೋಪುರದ ಮುಂಭಾಗದಿಂದ ಹಾದು ಆಗ್ನೇಯ ದಿಕ್ಕಿನಲ್ಲಿರುವ ಬಯಲು ರಂಗಮಂದಿರದ ಬಳಿ ತಂದು ನಿಲ್ಲಿಸಲಾಯಿತು. ರಥವನ್ನು ಎಳೆಯುವ ಸಂದರ್ಭದಲ್ಲಿ ಭಕ್ತರು ದೇವರಿಗೆ ಬಾಳೆಹಣ್ಣು, ಧವನವನ್ನು ಎಸೆದು ಭಕ್ತಿಭಾವವನ್ನು ಮೆರೆದರು. ಬ್ರಹ್ಮರಥೋತ್ಸವ ಬಂದು ನಿಲ್ಲುವ ಜಾಗವು ಶ್ರೀವಿಷ್ಣು ಮೋಹಿನಿ ಅವತಾರವನ್ನು ತಾಳಿ ಭಸ್ಮಾಸುರನ್ನು ಕೊಂದ ಸ್ಥಳ ಎಂಬ ಪ್ರತೀತಿಯಿದೆ. ಗುರುವಾರ ‘ಹಗಲು ನಾಡ ರಥೋತ್ಸವ’ ನಡೆಯಲಿದ್ದು ರಥವನ್ನು ದೇಗುಲದ ಸುತ್ತ ಪ್ರದಕ್ಷಿಣೆಯನ್ನು ಹಾಕಿಸಿ ಮೂಲಸ್ಥಾನಕ್ಕೆ ಮತ್ತೆ ಎಳೆದು ನಿಲ್ಲಿಸಲಾಗುವುದು.
ಬಿಗಿ ಬಂದೋಬಸ್ತ್:
ರಥೋತ್ಸವದ ವೇಳೆ ಪೊಲೀಸ್(Police) ಬಿಗಿ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು. ದೇಗುಲದ ನಾಲ್ಕು ಮೂಲೆಯಲ್ಲಿ ಸಿಸಿಟಿವಿ ಮತ್ತು ಮೈಕುಗಳನ್ನು ಅಳವಡಿಸಲಾಗಿತ್ತು. ವೃತ್ತನಿರೀಕ್ಷಕರಾದ ಶ್ರೀಕಾಂತ್, ಯೋಗೀಶ್ ಮತ್ತು ಎಸ್‌ಐ ಪಾಟೀಲ್ ಮತ್ತು ಸಿಬ್ಬಂದಿ ದೇಗುಲ ಸುತ್ತ ಕಣ್ಗಾವಲಿಟ್ಟಿದ್ದರು. ಇಲ್ಲಿನ ವಿಷ್ಣುಸಮುದ್ರ ಕೆರೆಯ ಪಕ್ಕದಲ್ಲಿರುವ ಕಲ್ಯಾಣಿಯನ್ನು ಶುಚಿಗೊಳಿಸಲಾಗಿತ್ತು. ಭÜಕ್ತರ ಅನುಕೂಲಕ್ಕೆ ಶಾಶ್ವತವಾಗಿ ಸ್ನಾನಗೃಹ ಹಾಗೂ ಶೌಚಾಲಯವನ್ನು ದೇಗುಲದ ವತಿಯಿಂದ ನಿರ್ಮಿಸಲಾಗಿದೆ. ಭಕ್ತರಿಗೆ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ದೇಗುಲ ಕಾರ್ಯನಿರ್ವಹಣಾಧಿಕಾರಿ ವಿದ್ಯುಲತಾ, ದೇಗುಲ ಆಗಮಿಕರು ಮತ್ತು ನೌಕರ ವರ್ಗದವರು ಕಳೆದ ವಾರದಿಂದಲೇ ಲೋಪವಾದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಸಹಸ್ರಾರು ಭಕ್ತರು ಬರುವ ಸಂದರ್ಭ ಎಲ್ಲೆಂದರಲ್ಲಿ ಎಸೆಯುವ ತ್ಯಾಜ್ಯವನ್ನು ತೆಗೆದು ಸ್ವಚ್ಛತೆ ಕಾಪಾಡಲು ಪುರಸಭೆಯ ಆರೋಗ್ಯಾಧಿಕಾರಿ ಲೋಹಿತ್, ಸಿಬ್ಬಂದಿ, ಮೇಸ್ತಿ್ರ ಹರೀಶ್ ಹಾಗೂ ಪೌರಕಾರ್ಮಿಕರು ಶ್ರಮವಹಿಸಿದರು.
Hassan: ಬೇಲೂರು ದೇವಸ್ಥಾನದಲ್ಲಿ ಮುಸ್ಲಿಂ ವರ್ತಕರಿಗೆ ಬಹಿಷ್ಕಾರ ಪ್ರಶ್ನೆಯೇ ಇಲ್ಲ..!
ವಿಶೇಷವಾಗಿ ಅಲಂಕಾರ ಮಾಡಲ್ಪಟ್ಟ ಸೌಮ್ಯ ನಾಯಕಿ
ರಥೋತ್ಸವದ ಅಂಗವಾಗಿ ಶ್ರೀಚನ್ನಕೇಶವ ಹಾಗೂ ಸೌಮ್ಯ ನಾಯಕಿ ಅಮ್ಮನವರಿಗೆ ಚಿನ್ನಾಭರಣಗಳಿಂದ ವಿಶೇಷವಾದ ಅಲಂಕಾರವನ್ನು ಮಾಡಲಾಗುತ್ತದೆ. ‘ಚೆಲುವ ಚೆನ್ನಿಗ’ನೆಂದೇ ಪ್ರಸಿದ್ಧಿ ಪಡೆದಿರುವ ಚೆನ್ನಕೇಶವ ಮೂರ್ತಿಯ ತಲೆಗೆ ಚಿನ್ನದ ಕಿರೀಟ, ಗಧೆ, ಪಟ್ಟಪೀತಾಂಬರಗಳನ್ನು ಉಡಿಸಿ ಕೈಗಳಿಗೆ ಚಿನ್ನದ ಕಡಗ ತೊಡಿಸಿ ಸುಂದರ ಮುಖಕ್ಕೆ ಮೂಗುಬಟ್ಟನ್ನು ಇಡಲಾಗಿತ್ತು. ಚೆನ್ನಕೇಶವನು ಮೋಹಿನಿ ಅವತಾರವನ್ನು ತಾಳಿ ಭಸ್ಮಾಸುರನನ್ನು ಸಂಹಾರ ಮಾಡಿರುವ ಬಗ್ಗೆ ಐತಿಹ್ಯ ಇರುವ ಹಿನ್ನೆಲೆಯಲ್ಲಿ ಚೆನ್ನಿಗನಿಗೆ ಅಲಂಕಾರದ ಸಮಯದಲ್ಲಿ ಮೂಗುಬೊಟ್ಟನ್ನು ಇಡಲಾಗುತ್ತದೆ. ಸರ್ವಾಲಂಕಾರಭೂಷಿತ ಬೃಹತ್ ಮೂರ್ತಿಯ ಜೊತೆಗೆ ಸೌಮ್ಯನಾಯಕಿ ಅಮ್ಮನವರ ವಿಶೇಷ ಅಲಂಕಾರದ ಅಂದವನ್ನು ಕಣ್ತುಂಬಿಕೊಳ್ಳಲು ಭಕ್ತರು ಬೆಳಗಿನಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದರು.
ಚನ್ನಕೇಶವಸ್ವಾಮಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದ ಕೆಲವೇ ಕ್ಷಣದಲ್ಲಿ ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದ ಭಕ್ತ ಸಮೂಹಕ್ಕೆ ಪಾನಕ, ಮಜ್ಜಿಗೆ, ಪ್ರಸಾದವನ್ನು ನೀಡಲಾಯಿತು. ಇಲ್ಲಿನ ಬಸ್ ನಿಲ್ದಾಣದಿಂದ ದೇಗುಲದ ರಸ್ತೆಯ ಉದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಪಾನಕ ಮಜ್ಜಿಗೆಯನ್ನು ವಿತರಿಸಲಾಯಿತು. ಪಟ್ಟಣದಲ್ಲಿನ ವಿವಿಧ ಸಂಘಸಂಸ್ಥೆಗಳು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವತಿಯಿಂದ ಸಾವಿರಾರು ಭಕ್ತರಿಗೆ ತಂಪಾದ ಮಜ್ಜಿಗೆಯನ್ನು ವಿತರಣೆ ಮಾಡಲಾಯಿತು.