Ladle Mashak Dargah: ಆಳಂದ ಲಾಡ್ಲೆ ಮಾಶಾಕ್ ದರ್ಗಾ ಸುತ್ತ ಪೊಲೀಸ್ ಸರ್ಪಗಾವಲು

By Ravi Janekal  |  First Published Feb 18, 2023, 10:53 AM IST

ಇಂದು ಶಿವಲಿಂಗ ಪೂಜೆಗೆ 15 ಜನರ ತಂಡ ಮತ್ತು ಮ,ಧ್ಯಾಹ್ನ 2ರಿಂದ ಪೂಜೆಗೆ ಅವಕಾಶ, ಕೇಂದ್ರ ಸಚಿವ ಖುಬಾ, ಜಿಲ್ಲೆಯ ಬಿಜೆಪಿ ಶಾಸಕರು, ಆಂದೋಲನ ಸ್ವಾಮೀಜಿ ಸೇರಿದಂತೆ 15 ಜನರಿಂದ ಪೂಜೆ ಕಾರ್ಯಕ್ರಮ ನಡೆಯಲಿದೆ. ಪೂಜೆ ಬಳಿಕ ಆಳಂದ ಪುರಸಭೆ ವ್ಯಾಪ್ತಿಯ ಹೊರಗೆ ಶಿವ ಸಂಗಮ ಬೃಹತ್ ಬಹಿರಂಗ ಸಭೆ ಆಯೋಜನೆ ಮಾಡಲಾಗಿದೆ.


ಕಲಬುರಗಿ (ಫೆ.18) : ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಇರುವ ಲಾಡ್ಲೆ ಮಾಶಾಖಾ ದರ್ಗಾ ಊರುಸ್ ಮತ್ತು ಅಲ್ಲೇ ಇರುವ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಉಭಯ ಕೋಮಿನವರಿಗೆ ಷರತ್ತು ಬದ್ಧವಾಗಿ ಕೋರ್ಟ್ ಅನುಮತಿ ನೀಡಲಾಗಿರುವ ಹಿನ್ನೆಲೆ, ಇಂದು ಆಳಂದ್ ಪುರಸಭೆ ವ್ಯಾಪ್ತಿಯಲ್ಲಿ 144 ಕಲಂ, ಬಿಗಿ ಬಂದೋ ಬಸ್ತ್ ಮಾಡಲಾಗಿದೆ. ಆಳಂದ ಮಾರ್ಗವಾಗಿ ಬರುವ, ಹೊರ ಹೋಗುವ ಎಲ್ಲಾ ವಾಹನಗಳನ್ನು ತಪಾಸಣೆ  ನಡೆಸುತ್ತಿರುವ ಪೊಲೀಸರು. ಯಾವುದೇ ಅಹಿತರ ಘಟನೆಗಳು ನಡೆಯದಂತೆ ತೀವ್ರ ಕಟ್ಟೆಚ್ಚರ ಕ್ರಮ ಕೈಗೊಂಡಿರುವ ಪೊಲೀಸರು.

ಇಂದು ಶಿವಲಿಂಗ ಪೂಜೆಗೆ 15 ಜನರ ತಂಡ ಮತ್ತು ಮ,ಧ್ಯಾಹ್ನ 2ರಿಂದ ಪೂಜೆಗೆ ಅವಕಾಶ, ಕೇಂದ್ರ ಸಚಿವ ಖುಬಾ, ಜಿಲ್ಲೆಯ ಬಿಜೆಪಿ ಶಾಸಕರು, ಆಂದೋಲನ ಸ್ವಾಮೀಜಿ ಸೇರಿದಂತೆ 15 ಜನರಿಂದ ಪೂಜೆ ಕಾರ್ಯಕ್ರಮ ನಡೆಯಲಿದೆ. ಪೂಜೆ ಬಳಿಕ ಆಳಂದ ಪುರಸಭೆ ವ್ಯಾಪ್ತಿಯ ಹೊರಗೆ ಶಿವ ಸಂಗಮ ಬೃಹತ್ ಬಹಿರಂಗ ಸಭೆ ಆಯೋಜನೆ ಮಾಡಲಾಗಿದೆ.

Tap to resize

Latest Videos

undefined

ಮುಂಜಾಗ್ರತಾ ಕ್ರಮ ಕೆಎಸ್‌ಆರ್‌ಪಿ ತುಕಡಿ, ಡಿಎಆರ್‌ ತುಕಡಿ, ಕ್ಯೂಆರ್‌ಟಿ ಹಾಗೂ ವಿಶೇಷÜ ಪೊಲೀಸ್‌ ಪಡೆ ಸೇರಿದಂತೆ ಸುಮಾರು 500 ಕ್ಕೂ ಅಧಿಕ ಪೊಲೀಸ್‌ ಬಂದೋಬಸ್ತ ಸಲುವಾಗಿ ನಿಯೋಜನೆ ಮಾಡಲಾಗಿದೆ. ಸಾಲದಕ್ಕೆ ಹೆಚ್ಚಿನ ಸಿಬ್ಬಂದಿಗಳ ನಿಯೋಜನೆಗೆ ಇಲಾಖೆಯ ಸಿದ್ಧತೆ ಇದೆ.

ದರ್ಗಾದಲ್ಲಿನ ರಾಘವ ಚೈತನ್ಯ ಲಿಂಗದ ಪೂಜೆಗೆ ಕರ್ನಾಟಕ ವಕ್ಫ್ ಟ್ರಿಬೂನಲ್‌ ನ್ಯಾಯಾಲಯ ಒಬ್ಬ ಧರ್ಮಾಗುರು ಸೇರಿದಂತೆ ಒಟ್ಟು 15 ಜನರಿಗೆ ಅವಕಾಶ ನೀಡಿದ್ದು, ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆಯವರೆಗೆ ಪೂಜೆ ಮಾಡಬಹುದಾಗಿದೆ. ಅದರಂತೆ ಅಂದಿನ ದಿನವೇ ದರ್ಗಾದ ಉರುಸ್‌ ಇರುವ ಮುಸ್ಲಿಂ ಸಮುದಾಯಕ್ಕೂ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ರವರೆಗೆ ಒಬ್ಬ ಧರ್ಮಾ ಗುರುಸೇರಿದಂತೆ ಒಟ್ಟು 15 ಜನರಿಗೆ ಪೂಜೆಗೆ ಅವಕಾಶ ನೀಡಿದೆ.

ಆಳಂದ ದರ್ಗಾದಲ್ಲಿ ಒಂದೇ ದಿನ ಶಿವರಾತ್ರಿ, ಉರುಸ್‌ಗೆ ಅನುಮತಿ!

ಶಿವಲಿಂಗ ಪೂಜೆಗೆ ವಕ್ಫ್ ಟ್ರಿಬ್ಯುನಲ್‌ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಜಿಲ್ಲೆಯ ಆಳಂದ(Alanda) ಪಟ್ಟಣದಲ್ಲಿರುವ ಲಾಡ್ಲೇ ಮಶಾಕ್‌ ದರ್ಗಾ ಉರುಸ್‌(Ladley Mashak Dargah Urus) ಹಾಗೂ ಅದೇ ದಿನ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ() ಶಿವಲಿಂಗ ಪೂಜೆಗೆ ಅನುಮತಿ ನೀಡಿರುವ ಕಲಬುರಗಿಯ ಕರ್ನಾಟಕ ವಕ್ಫ್  ಟ್ರಿಬ್ಯುನಲ್‌ ತೀರ್ಪನ್ನು ಇಲ್ಲಿನ ಹೈಕೋರ್ಟ್ (Karnataka Highcourt) ಪೀಠ ಎತ್ತಿ ಹಿಡಿದಿದೆ.

ದರ್ಗಾದಲ್ಲಿ ಶಿವಲಿಂಗ ಪೂಜೆಗೆ ಅನುಮತಿಸಿರುವ ಕರ್ನಾಟಕ ವಕ್ಫ್ ಟ್ರಿಬ್ಯುನಲ್‌ ಆದೇಶ(Karnataka Waqf Tribunal Order)ವನ್ನು ಪ್ರಶ್ನಿಸಿ ಲಾಡ್ಲೇ ಮಶಾಕ್‌ ದರ್ಗಾ ಕಮೀಟಿಯವರು ಕಲಬುರಗಿ ಹೈಕೋರ್ಟ್ ನಲ್ಲಿ  ಸಿವಿಲ್‌ ರಿವಿಜನ್‌ ಪಿಟಿಷನ್‌ ದಾಖಲಿಸಿದ್ದರು. 39ಯ 192 ರೂಲ್‌ ಅಡಿಯಲ್ಲಿ ವಾದ ಮಂಡಿಸಿದ್ದ ಕಮೀಟಿಯವರು ಆಂದೋಲಾ ಸಿದ್ದಲಿಂಗ ಸ್ವಾಮೀಜಿ (Andola siddalinga swamiji)ಮತ್ತವರ ಹಿಂಬಾಲಕರ್ಯಾರೂ ಶಿವರಾತ್ರಿ(Mahashivaratri) ದಿನ ದರ್ಗಾ ಆವರಣ ಪ್ರವೇಶಿಸಬಾರದು, ಶಿವಲಿಂಗ ಪೂಜೆಗೂ ಅವಕಾಶ ನೀಡಬಾರದು ಎಂದು ತಮ್ಮ ವಾದ ಮಂಡಿಸಿದ್ದರು.

ಸದರಿ ಪ್ರಕರಣದಲ್ಲಿ ಇಬ್ಬರ ವಾದವನ್ನು ಸವಿಸ್ತಾರವಾಗಿ ಆಲಿಸಿರುವ ಹೈಕೋರ್ಟ್ ನ್ಯಾಯಮೂರ್ತಿ ಜೆ.ಎಂ. ಖಾಜಿ(Justic JM Khaji) ಯವರು ಕಲಬುರಗಿಯಲ್ಲಿರುವ ಕರ್ನಾಟಕ ವಕ್ಫ್ ಟ್ರಿಬ್ಯೂನಲ್‌ ಕೋರ್ಟ್ ಆದೇಶವನ್ನೇ ಎತ್ತಿ ಹಿಡಿದ್ದಾರೆ. ಜಿಲ್ಲಾಧಿಕಾರಿಗಳು ಪ್ರತಿವಾರದ ಸರದಿಯಂತೆ ಸಿಬ್ಬಂದಿಗೆ ನೇಮಕ ಮಾಡಿ ಇಲ್ಲಿನ ಬೆಳವಣಿಗೆ ಗಮನಿಸಬೇಕು ಹಾಗೂ ಶಿವರಾತ್ರಿ ದಿನ ಪೂಜೆ, ಉರುಸ್‌ ನಂತರ ಸಂಜೆ 6 ಗಂಟೆಯಾದ ಮೇಲೆ ದರ್ಗಾ ಹಾಗೂ ಶಿವಲಿಂಗ ಆವರಣದಲ್ಲಿ ಯಾರೊಬ್ಬರೂ ಇರಬಾರದು ಎಂಬ ಟ್ರಿಬುನಲ್‌ ಸೂಚನೆಗಳಿಗೆ ಸಡಿಲಿಕೆ ನೀಡಿದೆ.

ಫೆ.18ರ ಶನಿವಾರ ಮಹಾ ಶಿವರಾತ್ರಿಯ ಪವಿತ್ರ ದಿನದಂದು ಪಟ್ಟಣದ ಲಾಡ್ಲೆ ಮಶಾಕ ದರ್ಗಾ ಆವರಣದಲ್ಲಿನ ರಾಘವ ಚೈತನ್ಯ ಲಿಂಗದ ವಿಶೇಷÜ ಪೂಜೆಗೆ ಹಾಗೂ ದರ್ಗಾದ ಉರುಸ್‌ಗೆ ಉಭಯ ಕೋಮಿನ ಕಲಾ 15 ಜನಕ್ಕೆ ಅನುಮತಿಸಿದ್ದರಿಂದ ಪೂಜೆ, ಉರುಸ್‌ ಫೆ. 18 ರ ಶಿವರಾತ್ರಿ ದಿನ ನಡೆಯಲಿವೆ. ಬೆಳಗ್ಗೆ ಹಾಗೂ ಮಧ್ಯಾಹ್ನ ಉಭಯ ಕೋಮಿವರಿಗೆ ಸರದಿಯಂತೆ ಪೂಜೆಗೆ ಅವಕಾಶವಿದೆ.

Mahashivratri: 123 ಅಡಿಯ ಬೃಹತ್ ಶಿವನ ಪ್ರತಿಮೆ ಹೊಂದಿರುವ ದೇವಾಲಯ ಮುರುಡೇಶ್ವರ...

ಶಿವಲಿಂಗಕ್ಕೆ ಪೂಜಿಸಲು ಕೇಂದ್ರ ಸಚಿವರು, ಶಾಸಕರ ಯಾದಿ ಸಿದ್ಧ

ಆಳಂದದಲ್ಲಿ ಶಿವರಾತ್ರಿ ದಿನವಾದ ಫೆ.18ರ ಶನಿವಾರ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸುವ 15 ಜನರ ಯಾದಿ ಸಿದ್ಧವಾಗಿದೆ. ಕಡಗಂಚಿ ವೀರಭದ್ರ ಶಿವಾಚಾರ್ಯ ರು, ಆಂದೋಲಾ ಸಿದ್ದಲಿಂಗ ಶ್ರೀಗಳು, ಕೇಂದ್ರ ಸಚಿವ ಭಗವಂತ ಖೂಬಾ(Bhagwanth Khuba), ಶಾಸಕರಾದ ಸುಭಾಷ ಗುತ್ತೇದಾರ್‌, ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌(Rajkumar Patil Telkur), ದತ್ತಾತ್ರೇಯ ಪಾಟೀಲ್‌ ರೇವೂರ್‌, ಬಸವರಾಜ ಮತ್ತಿಮಡು, ಅವಿನಾಶ ಜಾಧವ್‌, ಮಾಜಿ ಜಿಪಂ ಸದಸ್ಯ ಹ,ರ್ಷಾನಂದ ಗುತ್ತೇದಾರ್‌, ಕ್ರೆಡಲ್‌ ಅಧ್ಯಕ್ಷ ಚಂದ್ರಕಾಂತ ಬಿ ಪಾಟೀಲ್‌, ಆನಂದ ಪಾಟೀಲ್‌ ಕೋರಳ್ಳಿ, ನಾಗನಾಥ ಏಟೆ, ಮಹೇಶ ಗೌಳಿ, ಮಹೇಶ ಗೊಬ್ಬೂರ್‌, ಚೌಡಾಪುರದ ಮುರಾರಿ ಮಹಾರಾಜರು ಶಿವಲಿಂಗ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

click me!