Karnataka Budget 2023: ಹಂಪಿ ಪ್ರವಾಸೋದ್ಯಮಕ್ಕೆ ಬಜೆಟ್‌ ಬಲ!

By Kannadaprabha News  |  First Published Feb 18, 2023, 10:26 AM IST

ಹಂಪಿ ಸ್ಮಾರಕ, ಪ್ರವಾಸೋದ್ಯಮ ಅಭಿವೃದ್ಧಿ, ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ, ಹರಪನಹಳ್ಳಿ ಕೆರೆ ತುಂಬಿಸುವ ಯೋಜನೆ, 50 ಹಾಸಿಗೆ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಸ್ಥಾಪನೆ, ಕನ್ನಡ ವಿಶ್ವವಿದ್ಯಾಲಯದಿಂದ ಕನ್ನಡ ರಾಜವಂಶಗಳ ಇತಿಹಾಸ ಅಧ್ಯಯನ, ಗಣಿಬಾಧಿತ ಪರಿಸರ ಪುನಶ್ಚೇತನ ಯೋಜನೆ, ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ವಿಜಯನಗರ ಜಿಲ್ಲೆಗೆ ದೊರೆತ ಕೊಡುಗೆಗಳು!


ಕೃಷ್ಣ ಎನ್‌. ಲಮಾಣಿ

ಹೊಸಪೇಟೆ (ಫೆ.18) : ಹಂಪಿ ಸ್ಮಾರಕ, ಪ್ರವಾಸೋದ್ಯಮ ಅಭಿವೃದ್ಧಿ, ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ, ಹರಪನಹಳ್ಳಿ ಕೆರೆ ತುಂಬಿಸುವ ಯೋಜನೆ, 50 ಹಾಸಿಗೆ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಸ್ಥಾಪನೆ, ಕನ್ನಡ ವಿಶ್ವವಿದ್ಯಾಲಯದಿಂದ ಕನ್ನಡ ರಾಜವಂಶಗಳ ಇತಿಹಾಸ ಅಧ್ಯಯನ, ಗಣಿಬಾಧಿತ ಪರಿಸರ ಪುನಶ್ಚೇತನ ಯೋಜನೆ, ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ವಿಜಯನಗರ ಜಿಲ್ಲೆಗೆ ದೊರೆತ ಕೊಡುಗೆಗಳು!

Tap to resize

Latest Videos

undefined

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಬಜೆಟ್‌ನಲ್ಲಿ ನೂತನ ವಿಜಯನಗರ(Vijayanagara) ಜಿಲ್ಲೆ ಬಹು ನಿರೀಕ್ಷೆ ಹೊಂದಿದ್ದರೂ ಚುನಾವಣೆ ಪೂರ್ವ ಬಜೆಟ್‌ನಲ್ಲಿ ವಿಜಯನಗರಕ್ಕೂ ಸಿಎಂ ಕೊಡುಗೆ ನೀಡಿದ್ದಾರೆ.

Karnataka Budget 2023: ರಾಜ್ಯ ಬಜೆಟ್‌-ಗದಗ ಜಿಲ್ಲೆಗೆ ಕಬಿ ಖುಷಿ-ಕಬಿ ಗಮ್‌!

ಹಂಪಿ ಪ್ರವಾಸೋದ್ಯಮಕ್ಕೆ ಬಂಪರ್‌:

ಸಿಎಂ ಬಸವರಾಜ ಬೊಮ್ಮಾಯಿ ಈಗಾಗಲೇ ಕಳೆದ ಬಜೆಟ್‌ನಲ್ಲೇ ರಾಜ್ಯದ ಪ್ರವಾಸೋದ್ಯಮ(Karnataka tourism) ಅಭಿವೃದ್ಧಿಗೆ ಮೈಸೂರು ಸರ್ಕೀಟ್‌ ಹಾಗೂ ಹಂಪಿ ಸರ್ಕೀಟ್‌ ಘೋಷಣೆ ಮಾಡಿದ್ದಾರೆ. ಇದರ ಫಲವಾಗಿ ಕಲ್ಯಾಣ ಕರ್ನಾಟಕ(Kalyana karnataka) ಹಾಗೂ ಉತ್ತರ ಕರ್ನಾಟಕ(North Karnataka) ಭಾಗದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಈ ಬಜೆಟ್‌ನಲ್ಲೂ ಆದ್ಯತೆ ನೀಡಲಾಗಿದೆ. ಇದರನ್ವಯ ಹಂಪಿಯಲ್ಲಿ ಪ್ರವಾಸೋದ್ಯಮ(Hampi tourism) ಅಭಿವೃದ್ಧಿಗೆ ಪೂರಕವಾಗಿ ಬಜೆಟ್‌ನಲ್ಲಿ ಹಂಪಿ ಸ್ಮಾರಕಗಳ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕೇಂದ್ರ ಸರ್ಕಾರದ ಸ್ವದೇಶ ದರ್ಶನ್‌ 2.0 ಯೋಜನೆಯಡಿ ಹಂಪಿ ಸ್ಮಾರಕಗಳ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ವಿಜಯ ವಿಠ್ಠಲ ದೇಗುಲ, ಪುರಂದರ ಮಂಟಪ ಅಭಿವೃದ್ಧಿ:

ಹಂಪಿಯ ಸ್ಮಾರಕಗಳ ಗುಚ್ಛವನ್ನು ಯುನೆಸ್ಕೊ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ. ಈಗ ಹಂಪಿಗೆ ದೇಶ-ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಂಪಿಗೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ನದಿಯಲ್ಲಿರುವ ಪುರಂದರ ಮಂಟಪ ಮತ್ತು ವಿಜಯ ವಿಠ್ಠಲ ದೇಗುಲಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಸಿಎಂ ಪ್ರಸ್ತಾಪಿಸಿದ್ದಾರೆ. ಈ ಸ್ಮಾರಕಗಳ ಅಭಿವೃದ್ಧಿ ಜತೆಗೆ ತ್ರಿಡಿ ಪ್ರೋಗ್ರಾಂ ಮ್ಯಾಪಿಂಗ್‌, ಧ್ವನಿ ಮತ್ತು ಬೆಳಕು ಪ್ರದರ್ಶನ ಸಾಕಾರಗೊಳಿಸಲು ಮುಂದಾಗಿದ್ದಾರೆ.

ಪ್ರವಾಸಿ ಗೈಡ್‌ಗಳಿಗೆ .5000 ಪ್ರೋತ್ಸಾಹ ಧನ:

ರಾಜ್ಯದ ಪ್ರವಾಸಿ ಮಾರ್ಗದರ್ಶಿಗಳಿಗೆ (ಗೈಡ್‌ಗಳು)ಮಾಸಿಕ .2000 ನಿಂದ .5000ಗೆ ಮಾಸಿಕ ಪೋ›ತ್ಸಾಹ ಧನ ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ. ಅಲ್ಲದೇ .1.10 ಕೋಟಿ ಮೀಸಲು ಕೂಡ ಇಟ್ಟಿದ್ದಾರೆ. ಗೈಡ್‌ಗಳಿಗೆ ಪೋ›ತ್ಸಾಹ ಧನ ನೀಡುವುದರಿಂದ ಹಂಪಿಯಲ್ಲೇ ಹೆಚ್ಚಿನ ನೋಂದಾಯಿತ ಗೈಡ್‌ಗಳಿದ್ದು, ಅವರಿಗೆ ಅನುಕೂಲವಾಗಲಿದೆ. ಈ ಮೂಲಕ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಲಿದೆ.

ರಾಜವಂಶಗಳ ಚರಿತ್ರೆ ಅಧ್ಯಯನ:

ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಗಂಗ, ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರ ಸೇರಿದಂತೆ ವಿವಿಧ ಕನ್ನಡದ ರಾಜವಂಶಗಳ ಇತಿಹಾಸ ಮತ್ತು ಕೊಡುಗೆಯನ್ನು ಅಧ್ಯಯನ ನಡೆಸಲಾಗುತ್ತದೆ. ಇದರಿಂದ ಮುಂದಿನ ಪೀಳಿಗೆಗೆ ಕನ್ನಡ ರಾಜವಂಶಗಳ ನೈಜ ಇತಿಹಾಸ ತಿಳಿಯಲು ಅನುಕೂಲವಾಗಲಿದೆ.

ನವಲಿ ಬಳಿ ಸಮಾನಾಂತರ ಜಲಾಶಯ:

ಕೊಪ್ಪಳದ ನವಲಿ ಬಳಿ ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ಅಂತರ್‌ ರಾಜ್ಯ ಯೋಜನೆ ಆಗಿರುವುದರಿಂದ ಈಗಾಗಲೇ ಆಂಧ್ರಪ್ರದೇಶ ಸರ್ಕಾರದೊಂದಿಗೆ ಸಭೆ ನಡೆಸಲಾಗಿದೆ. ಮುಂದೆ ಆಂಧ್ರ ಹಾಗೂ ತೆಲಂಗಾಣ ಸಿಎಂಗಳ ಜತೆಗೆ ಸಭೆ ನಡೆಸಿ ಯೋಜನೆ ಸಾಕಾರಗೊಳಿಸಲಾಗುವುದು ಎಂದಿದ್ದಾರೆ. ಈ ಯೋಜನೆಯಿಂದ ವಿಜಯನಗರ,ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ತುಂಗಭದ್ರಾ ಡ್ಯಾಂನಲ್ಲಿ 33 ಟಿಎಂಸಿಯಷ್ಟುಹೂಳು ತುಂಬಿದ್ದು,ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ದಿನೇ ದಿನೆ ಕುಸಿದಿದೆ. ಹಾಗಾಗಿ ಈ ಯೋಜನೆ ಸಾಕಾರಗೊಂಡರೇ, ಈ ಭಾಗದ ರೈತರಿಗೆ ನೀರು ದೊರೆಯಲಿದೆ.

ಗಣಿಬಾಧಿತ ಪರಿಸರ ಪುನಶ್ಚೇತನ ಯೋಜನೆ:

ಸುಪ್ರೀಂ ಕೋರ್ಚ್‌ನಿಂದ ಗಣಿಬಾಧಿತ ಪರಿಸರ ಪುನಶ್ಚೇತನ ಯೋಜನೆಗಾಗಿ .24,997 ಕೋಟಿ ಅನುಮೋದನೆ ದೊರೆತಿದೆ. ಈ ಪೈಕಿ ಮೇಲುಸ್ತುವಾರಿ ಸಮಿತಿ .4,332 ಕೋಟಿ ಮೊತ್ತದ 151 ಶಿಕ್ಷಣ ಮತ್ತು ಆರೋಗ್ಯ ಸಂಬಂಧಿತ ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳನ್ನು ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಾಕಾರಗೊಳಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ಹಾಗಾಗಿ ಗಣಿಬಾಧಿತ ಪ್ರದೇಶವಾಗಿರುವ ವಿಜಯನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಈ ಯೋಜನೆ ಪೂರಕವಾಗಲಿದೆ.

Karnataka Budget 2023: ಘೋಷಿತ ಯೋಜನೆಗೆ ಅಧಿಕೃತ ಮುದ್ರೆ ಒತ್ತಿದ ಬಜೆಟ್‌

ಹರಪನಹಳ್ಳಿ ಕೆರೆ ತುಂಬಿಸುವ ಯೋಜನೆ, ಹೊಸಪೇಟೆಯಲ್ಲಿ 50 ಹಾಸಿಗೆ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಸ್ಥಾಪನೆ, ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ, ಹೊಸಪೇಟೆ-ಹುಬ್ಬಳ್ಳಿ- ಲೋಂಡಾ-ವಾಸ್ಕೋಡಗಾಮ ಡಬ್ಲಿಂಗ್‌ ರೈಲು ಹಳಿ ಜೋಡಣೆ ಕಾಮಗಾರಿಗೆ ರಾಜ್ಯ ಸರ್ಕಾರದಿಂದಲೂ ನೆರವು, ಹುಬ್ಬಳ್ಳಿ- ಹೊಸಪೇಟೆ- ಬಳ್ಳಾರಿ- ಆಂಧ್ರಗಡಿಯವರೆಗೆ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ .2,200 ಕೋಟಿ ಒದಗಿಸಿದೆ ಎಂದು ಬಜೆಟ್‌ನಲ್ಲಿ ಸಿಎಂ ಪ್ರಸ್ತಾಪಿಸಿದ್ದಾರೆ.

click me!