Mahashivratri: 123 ಅಡಿಯ ಬೃಹತ್ ಶಿವನ ಪ್ರತಿಮೆ ಹೊಂದಿರುವ ದೇವಾಲಯ ಮುರುಡೇಶ್ವರ

ಇಂದು ಮಹಾಶಿವರಾತ್ರಿ..ಹೀಗಿರುವಾಗ ರಾಜ್ಯದಲ್ಲಿರುವ ಈ ಪ್ರಸಿದ್ಧ ಶಿವ ದೇವಾಲಯದ ಬಗ್ಗೆ ತಿಳಿದುಕೊಳ್ಳಲೇಬೇಕು. ವಿಶ್ವದ ಎರಡನೇ ಅತಿದೊಡ್ಡ ಮತ್ತು ಎತ್ತರದ ಶಿವನ ವಿಗ್ರಹವನ್ನು ಹೊಂದಿರುವ ದೇವಸ್ಥಾನ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಮುರುಡೇಶ್ವರ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Mahashivratri 2023, Murudeshwara Shiva Temple and Big Statue of Lord Shiva Vin

ಕರ್ನಾಟಕದಲ್ಲಿರುವ ಶಿವನ ಹೆಸರಾಂತ ದೇವಸ್ಥಾನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಮುರುಡೇಶ್ವರ ದೇವಾಲಯವೂ ಒಂದು. ಬೀಚ್ ನ ಅಕರ್ಷಕ ಪರಿಸರದೊಂದಿಗೆ ಬೃಹತ್ ಈಶ್ವರನ ಮೂರ್ತಿ ಇಲ್ಲಿಗೆ ಆಧ್ಯಾತ್ಮಿಕ ಮಹತ್ವವನ್ನು ತಂದು ಕೊಟ್ಟಿದೆ.  ಮುರುಡೇಶ್ವರ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿದವರು ಆ ತಾಣವನ್ನು ಮರೆಯಲು ಸಾಧ್ಯವೇ ಇಲ್ಲ. ಇಲ್ಲಿ ವಿಶ್ವದ ಮೂರನೆಯ ಅತಿ ದೊಡ್ಡ ಶಿವನ ವಿಗ್ರಹವಿದೆ. 123 ಅಡಿ ಉದ್ದದ ಶಿವನ ಪ್ರತಿಮೆ ಹಾಗೂ ಶಿವಲಿಂಗವನ್ನೂ ಈ ದೇವಾಲಯದಲ್ಲಿ ನಾವು ಕಾಣಬಹುದು.  ಶಿವನ ಪ್ರತಿಮೆಯ ವೈಶಾಲ್ಯವು ಎಲ್ಲಾ ಭಕ್ತರನ್ನು ಮಂತ್ರಮುಗ್ಧಗೊಳಿಸುತ್ತದೆ. ಈ ದೇವಾಲಯವನ್ನು ಕಂದುಕ ಬೆಟ್ಟದ ಮೇಲೆ ನಿರ್ಮಿಸಲಾಗಿದೆ ಮತ್ತು ಮೂರು ಕಡೆ ಅರಬ್ಬಿ ಸಮುದ್ರದಿಂದ ಸುತ್ತುವರಿದಿದೆ. ಮುಖ್ಯ ದೇವಾಲಯದ ಪ್ರವೇಶದ್ವಾರವನ್ನು ಗೋಪುರ ಎಂದು ಕರೆಯಲಾಗುತ್ತದೆ. 

ಮುರುಡೇಶ್ವರದ ಬೃಹತ್ ಶಿವನ ಪ್ರತಿಮೆ
ಮುರುಡೇಶ್ವರದಲ್ಲಿರುವ ಶಿವನ ದೈತ್ಯ ವಿಗ್ರಹವು (Statue) ಅತ್ಯಂತ ಜನಪ್ರಿಯವಾಗಿದೆ. ಇದನ್ನು ನೇಪಾಳದ ಕೈಲಾಸನಾಥ ಮಹಾದೇವ ಪ್ರತಿಮೆಯ ನಂತರ ವಿಶ್ವದ ಎರಡನೇ ಅತಿ ಎತ್ತರದ ಶಿವ ಪ್ರತಿಮೆ ಎಂದು ಹೇಳಲಾಗುತ್ತದೆ. ಈ ಶಿವ ಪ್ರತಿಮೆಯು ಸರಿಸುಮಾರು 123 ಅಡಿ ಎತ್ತರವನ್ನು ಹೊಂದಿದೆ. ಕೆಲ ವರ್ಷಗಳ ಹಿಂದೆ ಸಿಡಿಲಿನ ಆರ್ಭಟಕ್ಕೆ ಈ ಶಿವ ಪ್ರತಿಮೆಯ ಕೈಭಾಗಕ್ಕೆ ಸ್ವಲ್ಪ ಹಾನಿಯಾಗಿತ್ತು. ಆದರೆ ಇದೀಗ ಪ್ರತಿಮೆಯನ್ನು ಮೊದಲಿನಂತೆ ಸರಿ ಮಾಡಲಾಗಿದೆ.

Mahashivratri 2023: ಶಿವನು ನಂದಿಯನ್ನು ವಾಹನವಾಗಿ ಆರಿಸಿಕೊಂಡಿದ್ದೇಕೆ?

ದೇವಾಲಯದ ಗೋಪುರ: ಮುರ್ಡೇಶ್ವರ ದೇವಸ್ಥಾನ (Temple) ಮತ್ತು ರಾಜಗೋಪುರ ಅಥವಾ ಗರ್ಭಗುಡಿ ಹೊರತುಪಡಿಸಿ ದೇವಾಲಯವನ್ನು ಆಧುನೀಕರಿಸಲಾಗಿದೆ. ದೇವಾಲಯದ ಸಂಕೀರ್ಣವು ದೇವಾಲಯ ಮತ್ತು 20-ಅಂತಸ್ತಿನ ರಾಜ ಗೋಪುರವನ್ನು ಹೊಂದಿದೆ. ದೇವಾಲಯವು ಚೌಕಾಕಾರದ ಗರ್ಭಗೃಹದಂತಿದೆ. ಇದರಲ್ಲಿ ಉದ್ದ ಮತ್ತು ಚಿಕ್ಕ ಶಿಖರಗಳಿವೆ, ಅವು ಕುಟಿನಾ ಪ್ರಕಾರದವು. ಹತ್ತಿರದಲ್ಲಿ ಪಿರಮಿಡ್ ಆಕಾರವಿದೆ. ಮುರುಡೇಶ್ವರದಲ್ಲಿರುವ  ದೇವಾಲಯದ ಗೋಪುರವು  'ಕಿಂಗ್ ಆಫ್ ಟವರ್ಸ್' ಎಂದು ಕರೆಸಿಕೊಳ್ಳುತ್ತದೆ. ರಾಜ ಗೋಪುರದಲ್ಲಿ 20 ಮಹಡಿಗಳಿದ್ದು, ಜನರು ಲಿಫ್ಟ್‌ಗಳನ್ನು ಬಳಸುವ ಮೂಲಕ ಗೋಪುರದ ಮೇಲ್ಭಾಗವನ್ನೂ ತಲುಪಬಹುದು. ಗೋಪುರದ ಕೊನೆಯ ಮಹಡಿಯಲ್ಲಿ ನಿಂತು ನೋಡಿದರೆ ನಾವು ಮುರುಡೇಶ್ವರದ ಸಂಪೂರ್ಣ ಸೌಂದರ್ಯವನ್ನು (Beauty) ಸವಿಯಬಹುದು. 

ಮುರುಡೇಶ್ವರ ದೇವಸ್ಥಾನದ ಇತಿಹಾಸ
ಮುರ್ಡೇಶ್ವರ ಎಂಬ ಹೆಸರಿನ ಮೂಲವು ರಾಮಾಯಣ ಕಾಲದಿಂದ ಬಂದಿದೆ ಎಂದು ಹೇಳಲಾಗುತ್ತದೆ. ಹಿಂದೂ ದೇವರುಗಳು ಆತ್ಮಲಿಂಗ ಎಂಬ ದೈವಿಕ ಲಿಂಗವನ್ನು ಪೂಜಿಸುವ ಮೂಲಕ ಅಮರತ್ವ ಮತ್ತು ಅಜೇಯತೆಯನ್ನು ಗಳಿಸಿದ್ದರು. ಅದರ ನಂತರ, ಲಂಕಾದ ರಾಜ, ರಾವಣ, ಶಿವನನ್ನು ಪೂಜಿಸಲು ಆತ್ಮಲಿಂಗದೊಂದಿಗೆ ತನ್ನ ರಾಜ್ಯವಾದ ಲಂಕೆಗೆ ಹೋಗುತ್ತಿದ್ದನು. ಆ ಸಮಯದಲ್ಲಿ ಆತ್ಮಲಿಂಗವನ್ನು ದಾರಿಯಲ್ಲಿ ನೆಲದ ಮೇಲೆ ಇಡಬೇಕಾಗಿತ್ತು ಮತ್ತು ಆ ಸ್ಥಳದಲ್ಲಿಯೇ ಶಿವಲಿಂಗವನ್ನು ಸ್ಥಾಪಿಸಲಾಯಿತು. ನಂತರ ಲಂಕಾಪತಿ ಶಿವಲಿಂಗವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದರು ಆದರೆ ಸಾಧ್ಯವಾಗಗಲಿಲ್ಲ. ಅದಕ್ಕಾಗಿ ಅವನು ಶಿವಲಿಂಗವನ್ನು ತನ್ನ ರಾಜ್ಯದಲ್ಲಿ ತೆಗೆದುಕೊಳ್ಳಲು ತನ್ನ ರಾಜ್ಯವನ್ನು ವಿಸ್ತರಿಸಿದನು ಎಂಬ ಆತ್ಮಲಿಂಗದ ವಿವರಣೆಯು ಶಿವಪುರಾಣದಲ್ಲಿ ಕಂಡುಬರುತ್ತದೆ.

Mahashivratri 2023 ಆಚರಣೆಗೆ ಹೆಸರಾಗಿರೋ ಬೆಂಗಳೂರಿನ ಪ್ರಮುಖ ಶಿವ ದೇವಾಲಯಗಳಿವು..

ಮುರುಡೇಶ್ವರ ದೇವಸ್ಥಾನದ ಕಥೆ
ದಂತಕಥೆಯ ಪ್ರಕಾರ, ರಾವಣನು ಲಂಕಾ ತಲುಪುವ ಮೊದಲು ಅದನ್ನು ನೆಲದ ಮೇಲೆ ಇಟ್ಟುಕೊಳ್ಳಬಾರದು ಎಂಬ ಷರತ್ತಿನ ಮೇರೆಗೆ ಶಿವನಿಂದ ಆತ್ಮ-ಲಿಂಗವನ್ನು ಸಂಪಾದಿಸಿಸಿಕೊಂಡಿದ್ದನು. ರಾವಣನು ಅನೈತಿಕತೆಯಿಂದ ಶಕ್ತಿಶಾಲಿಯಾಗಿ ಎಲ್ಲರನ್ನೂ ಆಳುವುದು ದೇವಾನುದೇವತೆಗಳಿಗೆ ಇಷ್ಟವಿರಲಿಲ್ಲ. ಹೇಗಾದರೂ ಮಾಡಿ ರಾವಣನನ ಕೈಲಿದ್ದ ಆತ್ಮಲಿಂಗವನ್ನು ನೆಲಕ್ಕಿಡುವಂತೆ ಮಾಡಲು ದೇವತೆಗಳು ಯೋಜನೆಯನ್ನು ರೂಪಿಸಿದರು. ಗಣೇಶನ ಬಳಿ ಬಂದು ರಾವಣನು ಶಿವನ ಆತ್ಮಲಿಂಗವನ್ನು ಪಡೆದುಕೊಂಡಿರುವುದರ ಬಗ್ಗೆ ಮತ್ತು ಅದನ್ನು ಹಿಂಪಡೆಯಲು ಕೇಳಿಕೊಂಡರು. ದೇವಾನುದೇವತೆಗಳ ಕೋರಿಕೆಯ ಮೇರೆಗೆ ಗಣೇಶನು ಹುಡುಗನ ರೂಪದಲ್ಲಿ ವೇಷ ಧರಿಸಿ ರಾವಣನಿಂದ ಆತ್ಮಲಿಂಗವನ್ನು ಪಡೆದುಕೊಳ್ಳಲು ಉಪಾಯ ಮಾಡುತ್ತಾನೆ. 

ಸಂಧ್ಯಾವಂದನೆ ಮಾಡಲೆಂದು ರಾವಣನು ತನ್ನ ಕೈಲಿದ್ದ ಆತ್ಮಲಿಂಗವನ್ನು ಬ್ರಾಹ್ಮಣ ಬಾಲಕನ ವೇಷಧರಿಸಿದ್ದ ಗಣೇಶನಿಗೆ ನೀಡುತ್ತಾನೆ. ರಾವಣನು ಸಂಧ್ಯಾವಂದನೆಯನ್ನು ಮುಗಿಸಿ ಬರುವಷ್ಟರಲ್ಲಿ ಗಣೇಶನು ತನ್ನ ಕೈಲಿದ್ದ ಆತ್ಮಲಿಂಗವನ್ನು ನೆಲದ ಮೇಲೆ ಇಡುತ್ತಾನೆ. ಈ ಸ್ಥಳವೇ ಗೋಕರ್ಣ. ಕೋಪದಿಂದ ರಾವಣನು ಲಿಂಗವನ್ನು ನಾಶಮಾಡಲು ಪ್ರಯತ್ನಿಸಿದನು ಮತ್ತು ದಾಳಿಯ ಬಲದಿಂದ ಲಿಂಗವು ಛಿದ್ರವಾಯಿತು. ಇದು ಇಂದು ಇಡೀ ದೇಶದ ಅನೇಕ ಪವಿತ್ರ ಸ್ಥಳಗಳಾಗಿವೆ. ಅದರಲ್ಲಿ ಮುರುಡೇಶ್ವರನೂ ಸೇರಿಕೊಂಡಿದೆ ಎಂದು ಹೇಳುತ್ತಾರೆ.

Latest Videos
Follow Us:
Download App:
  • android
  • ios