ತುಮಕೂರು: ಹಾಫ್ ಹೆಲ್ಮೆಟ್ ಧರಿಸಿದ್ರೆ ಕಠಿಣ ಕ್ರಮ

By Kannadaprabha NewsFirst Published Nov 19, 2019, 8:28 AM IST
Highlights

ಸಂಚಾರಿ ನಿಯಮಗಳು ಬಿಗುವಾದ ನಂತರ ಕಾಟಾಚಾರಕ್ಕೆ ಹಾಫ್ ಹೆಲ್ಮೆಟ್ ಧರಿಸಿ ಓಡಾಡುವವರಿಗೆ ಟ್ರಾಫಿಕ್ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಹಾಸನದಲ್ಲಿ ಟ್ರಾಫಿಕ್ ಪೊಲೀಸರು ಹಾಫ್ ಹೆಲ್ಮೆಟ್ ಆಪರೇಷನ್ ನಡೆಸಿದ್ದರು. ಇದೀಗ ತುಮಕೂರಿನಲ್ಲಿಯೂ ದ್ವಿಚಕ್ರ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ಧಾರೆ.

ತುಮಕೂರು(ನ.19): ಸಂಚಾರಿ ನಿಯಮಗಳೂ ಬಿಗುವಾದ ನಂತರ ಕಾಟಾಚಾರಕ್ಕೆ ಹಾಫ್ ಹೆಲ್ಮೆಟ್ ಧರಿಸಿ ಓಡಾಡುವವರಿಗೆ ಟ್ರಾಫಿಕ್ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಹಾಸನದಲ್ಲಿ ಟ್ರಾಫಿಕ್ ಪೊಲೀಸರು ಹಾಫ್ ಹೆಲ್ಮೆಟ್ ಆಪರೇಷನ್ ನಡೆಸಿದ್ದರು. ಇದೀಗ ತುಮಕೂರಿನಲ್ಲಿಯೂ ದ್ವಿಚಕ್ತ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ಧಾರೆ.

ದ್ವಿಚಕ್ರ ಸವಾರರಿಗೆ ಶಾಕ್; ಪೊಲೀಸರಿಂದ ಹಾಫ್ ಹೆಲ್ಮೆಟ್ ಆಪರೇಷನ್!

ಅರ್ಧ ಹೆಲ್ಮೆಟ್‌ ಧರಿಸಿದರೆ ಕ್ರಮ

ಅರ್ಧ ಹೆಲ್ಮೆಟ್‌ ಧರಿಸುವ ಸವಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸ್‌ ಇಲಾಖೆ ಎಚ್ಚರಿಸಿದೆ. ಐಎಸ್‌ಐ ಮಾರ್ಕ್ ಇಲ್ಲದ ಮತ್ತು ತಲೆಯ ಭಾಗವನ್ನು ಪೂರ್ಣವಾಗಿ ಮುಚ್ಚದಂತಹ ಹೆಲ್ಮೆಟ್‌ಗಳನ್ನು ಧರಿಸಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿರುವುದು ಕಂಡು ಬರುತ್ತಿದೆ.

ಇದರಿಂದ ಅಪಘಾತಗಳು ಸಂಭವಿಸಿ ತಲೆಗೆ ಪೆಟ್ಟುಬಿಟ್ಟು ಸಾವು-ನೋವುಗಳ ಪ್ರಮಾಣ ಹೆಚ್ಚಾಗುತ್ತಿದೆ. ಈಗಾಗಲೇ ಅರ್ಧ ಹೆಲ್ಮೆಟ್‌ ಮಾರಾಟ ಮಾಡುವವರಿಗೆ ನೊಟೀಸ್‌ ಸಹ ನೀಡಲಾಗಿದೆ. ಇದೇ ರೀತಿಯಲ್ಲಿ ಅರ್ಧ ಹೆಲ್ಮೆಟ್‌ಗಳನ್ನು ಮಾರಾಟ ಮಾಡಿದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.

ತಮಾಷೆಯೇ ಅಲ್ಲರೀ! ಕಛೇರಿ ಕೆಲಸಕ್ಕೂ ಹೆಲ್ಮೆಟ್

click me!