ಮಂಗಳೂರು: ಹಾಡು ಹಾಡಲೂ ರಮಾನಾಥ ರೈ ಸೈ..!

Published : Nov 19, 2019, 08:00 AM IST
ಮಂಗಳೂರು: ಹಾಡು ಹಾಡಲೂ ರಮಾನಾಥ ರೈ ಸೈ..!

ಸಾರಾಂಶ

ಮಾಜಿ ಸಚಿವ ರಮಾನಾಥ್ ರೈ ರಾಜಕಾರಣಿ ಮಾತ್ರ ಅಲ್ಲ, ಹಾಡುಗಾರರೂ ಹೌದು. ಇದ್ಯಾವಾಗಿನಿಂದ ಎಂದು ಅಚ್ಚರಿಯಾಗಬಹುದು. ಮಾಜಿ ಸಚಿವ ರಮಾನಾಥ ರೈ ಇದೀಗ ಸ್ವತಃ ಹಾಡು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಾಜಿ ಸಚಿವರ ಹಾಡಿಗೆ ಜನ ಚಪ್ಪಾಳೆ ತಟ್ಟಿ ಖುಷಿಪಟ್ಟಿದ್ದಾರೆ.

ಮಂಗಳೂರು(ನ.19): ಮಾಜಿ ಸಚಿವ ರಮಾನಾಥ ರೈ ಇದೀಗ ಸ್ವತಃ ಹಾಡು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು ಮಹಾನಗರ ಪಾಲಿಕೆಯ ಪೋರ್ಟ್‌ ವಾರ್ಡ್‌ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಅಬ್ದುಲ್‌ ಲತೀಫ್‌ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ವಾರ್ಡ್‌ ನಾಗರಿಕರಿಂದ ಭಾನುವಾರ ಸಂಜೆ ಅವರಿಗೆ ಅಭಿನಂದನಾ ಸಮಾರಂಭವನ್ನು ರೊಸಾರಿಯೊ ಚಚ್‌ರ್‍ ಹಾಲ್‌ನಲ್ಲಿ ಏರ್ಪಡಿಸಲಾಗಿತ್ತು.ಅಭಿನಂದನೆ ಸಮಾರಂಭದ ಬಳಿಕ ಸ್ವತಃ ರಮಾನಾಥ ರೈ ವೇದಿಕೆಯಲ್ಲಿ ನಿಂತು ಹಳೆಯ ಚಿತ್ರಗೀತೆ ಹಾಡಿದ್ದಾರೆ.

ಮಂಗಳೂರು ಪಾಲಿಕೆಯಲ್ಲಿ ಈಗ ಹೊಸಬರ ಹವಾ!

ಸಮಾರಂಭದಲ್ಲಿ ಗಾಯಕ ಮಹಮ್ಮದ್‌ ಹನೀಫ್‌ ಗೀತೆಗಳನ್ನು ಹಾಡುತ್ತಿದ್ದರು. ಈ ವೇಳೆ ರಮಾನಾಥ ರೈ ಅವರು ಮಹಮ್ಮದ್‌ ರಫಿಯ ಹಳೆಯ 2 ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ. ಪ್ರೇಕ್ಷಕರು ಚಪ್ಪಾಳೆ ತಟ್ಟಿಹುರಿದುಂಬಿಸಿದ್ದಾರೆ. ರೈ ಅವರ ಹಾಡಿನ ವಿಡಿಯೊ ಈಗ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ.

ಹಿಮಪಾತಕ್ಕೆ ನಾಲ್ವರು ಯೋಧರನ್ನು ಕಳೆದುಕೊಂಡ ಭಾರತ

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ