ಕೊಡಗಿನಲ್ಲಿ ಮದುವೆಗಳಲ್ಲಿ ಓಪನ್ ಬಾರ್ ನಿಷೇಧ..?

By Kannadaprabha News  |  First Published Jun 10, 2020, 2:56 PM IST

ಕೊಡಗಿನ ಮದುವೆಗಳಲ್ಲಿ ನಾನ್‌ವೆಜ್ ಹಾಗೂ ಡ್ರಿಂಕ್ಸ್ ಪ್ರಮುಖ ಆಕರ್ಷಣೆ. ಮಂಜಿನನಗರಿಯ ವೈನ್ ಹಾಗೂ ಪೋರ್ಕ್ ಕರಿ ಎಲ್ಲೆಡೆ ಫೇಮಸ್. ಇನ್ನು ಮುಂದೆ ಕೊಡಗಿನ ಮದ್ವೇಲಿ ಮದ್ಯ ಸಿಗೋದು ಡೌಟ್. ಯಾಕೆ..? ಇಲ್ಲಿ ಓದಿ


ಮಡಿಕೇರಿ(ಜೂ.10): ಇತ್ತೀಚೆಗೆ ಮದುವೆ ಮುಹೂರ್ತ ನಡೆಯುವ ಪುಣ್ಯಕಾಲದಲ್ಲಿಯೂ, ಹಲವು ಆಯೋಜಕರು ಓಪನ್‌ ಬಾ​ರ್‌ ತೆರೆಯುವ ಜೊತೆಗೆ, ಚಾಣನೀರ್‌ ಕೈಪ ಸಂಪ್ರದಾಯ (ಗಂಗಾ ಪೂಜೆ) ಮುಗಿದ ನಂತರ, ಕೇಕ್‌ ಕತ್ತರಿಸುವಂತ ಪದ್ಧತಿ ರೂಢಿಸಿ ಕೊಂಡಿರುವುದರಿಂದ ಜನಾಂಗದ ಮೂಲ ಪರಂಪರೆಗೆ ಧಕ್ಕೆ ಬರುತ್ತಿದೆ.

ಹಾಗಾಗಿ ಈ ಪದ್ಧತಿಯನ್ನು ಪ್ರತೀ ಕೊಡವ ಮದುವೆಯಲ್ಲಿಯೂ ನಿಷೇಧಿಸಬೇಕು ಎಂದು ಎಲ್ಲ ಕೊಡವ ಸಮಾಜ ಹಾಗೂ ಕಲ್ಯಾಣ ಮಂಟಪಗಳ ಆಡಳಿತ ಮಂಡಳಿಗೆ, ಕೊಡವಾಮಮೆರ ಕೊಂಡಾಟ ಕೂಟ ಮನವಿ ಮಾಡಿಕೊಂಡಿದೆ.

Tap to resize

Latest Videos

ಮದ್ಯ ಮಾರಾಟ ಸಮಯ ವಿಸ್ತರಣೆ ಜೊತೆ ಎಣ್ಣೆ ಪ್ರಿಯರಿಗೆ ಮತ್ತೊಂದು ಗುಡ್‌ ನ್ಯೂಸ್!

ಈ ಕುರಿತಂತೆ ಎಲ್ಲ ಸಮಾಜ ಮುಖಂಡರಿಗೆ ಪತ್ರ ಬರೆದಿರುವ ಕೊಡವಾಮೆರ ಕೊಂಡಾಟ ಕೂಟದ ಅಧ್ಯಕ್ಷ ಚಾಮೆರ ದಿನೇಶ್‌ ಬೆಳ್ಯಪ್ಪ, ಈಗಾಗಲೇ ಹಲವು ಮೂಲಸಂಪ್ರದಾಯಗಳಿಗೆ ತಿಲಾಂಜಲಿ ಬಿಟ್ಟು, ಆಧುನೀಕತೆ ಪಾಶ್ಚಿಮಾತ್ಯ ಸಂಪ್ರದಾಯಕ್ಕೆ ಒಗ್ಗಿಕೊಳ್ಳುತ್ತಿರುವ ಯುವಜನರ ನಡುವೆ, ಇಂತಹ ಅನಿಷ್ಠ ಪದ್ಧತಿಗಳು ನುಸುಳಿಕೊಂಡು, ಮುಂದೆ ಇಂತವೇ ಅಧಿಕೃತ ಸಂಪ್ರದಾಯಗಳಾಗಿ ರೂಪುಗೊಳ್ಳುವ ಅಪಾಯವಿದೆ.

ಕೋವಿಡ್‌-19 ನೆಪದಲ್ಲಾದ ಲಾಕ್‌ ಡೌನ್‌ನಿಂದಾಗಿ, ಬಹುಪಾಲು ಮೂಲ ಸಂಪ್ರದಾಯದ ಬಳಕೆಯಾಗುತ್ತಿದ್ದು, ಅಲ್ಲದೆ ಓಪನ್‌ ಬಾರ್‌ ಮತ್ತು ಕೇಕ್‌ ಕತ್ತರಿಸುವ ಕಾರಣದಿಂದ, ಹಲವಾರು ಮದುವೆ ಸಮಾರಂಭ ಆಯೋಜಿಸುವವರಿಗೂ ಆರ್ಥಿಕ ಹೊರೆಯಾಗುತಿದ್ದು, ಇದೇ ಸಂದರ್ಭ ಬಳಸಿಕೊಂಡು ಓಪನ್‌ ಬಾ​ರ್‌ ಹಾಗೂ ಕೇಕ್‌ ಕತ್ತರಿಸುವ ಪದ್ಧತಿ ನಿಷೇಧಿಸಬೇಕು ಎಂದು ಕೋರಿದ್ದಾರೆ.

click me!