ಕೊಬ್ಬರಿ ಬೆಳೆಗಾರರ ನೆರವಿಗೆ 50 ಸಾವಿರ..?

By Kannadaprabha NewsFirst Published Jun 10, 2020, 2:44 PM IST
Highlights

ಬರಗಾಲ, ಅಂತರ್ಜಲ ಕುಸಿತ ಹಾಗೂ ತೆಂಗಿಗೆ ತಗುಲಿದ ನುಸಿ ರೋಗ, ಚಪ್ಪೆ ರೋಗ, ಬೆಂಕಿ ರೋಗ ವಿವಿಧ ರೋಗಗಳ ತೆಂಗು ಸುಳಿ ಬಿದ್ದು 8ಲಕ್ಷಕ್ಕೂ ಹೆಚ್ಚು ಮರ ನಾಶವಾಗಿವೆ.

ಅರಸೀಕೆರೆ(ಜೂ.10): ಬರಗಾಲ, ಅಂತರ್ಜಲ ಕುಸಿತ ಹಾಗೂ ತೆಂಗಿಗೆ ತಗುಲಿದ ನುಸಿ ರೋಗ, ಚಪ್ಪೆ ರೋಗ, ಬೆಂಕಿ ರೋಗ ವಿವಿಧ ರೋಗಗಳ ತೆಂಗು ಸುಳಿ ಬಿದ್ದು 8ಲಕ್ಷಕ್ಕೂ ಹೆಚ್ಚು ಮರ ನಾಶವಾಗಿವೆ.

ಕೊಬ್ಬರಿ ಬೆಳೆಗಾರರ ಬೆಲೆ ಕುಸಿತದಿಂದ ರೈತರು ಮತಷ್ಟುಸಂಕಷ್ಟಕ್ಕೆ ಈಡಾಗಿದ್ದಾರೆ. ಬೆಳೆಗಾರರಲ್ಲಿ ಆತ್ಮಸ್ಥೈರ್ಯ ತುಂಬಲು ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ನ್ಯಾಫೆಡ್‌ ಮೂಲಕ ಕೊಬ್ಬರಿ ಖರೀದಿಗೆ ಮುಂದಾಗಬೇಕು ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಜಿವಿಟಿ ಬಸವರಾಜ್‌ ಆಗ್ರಹಿಸಿದ್ದಾರೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬದ್ಧ: ಸಿಎಂ ಯಡಿಯೂರಪ್ಪ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಹೆಸರು, ಎಳ್ಳು, ಶೆಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಹಾಗೂ ವಿವಿಧ ಬೆಳೆಗಳು ರೈತರ ನೆರವಿಗೆ ಬಂದು ಇಡೀ ಎಪಿಎಂಸಿ ತುಂಬಿ ತುಳುಕುತ್ತಿತ್ತು. ಆದರೆ, ಇದೀಗ ಬಣಗುಡುತ್ತಿರುವ ಮಾರುಕಟ್ಟೆಯಲ್ಲಿ ಅಲ್ಪ-ಸ್ವಲ್ಪ ಕೊಬ್ಬರಿ ಮಾತ್ರ ಕಂಡುಬರುತ್ತಿದ್ದು ಅದು ಸಹ ಬೆಲೆ ಇಲ್ಲದೆ ಸಂಕಷ್ಟಕ್ಕೀಡು ಮಾಡಿದೆ.ಕಳೆದ ವರ್ಷ 18000ದಿಂದ 19000 ಆಸುಪಾಸಿನಲ್ಲಿದ್ದ ಬೆಲೆ 8500-9000ಕ್ಕೆ ಕುಸಿದಿದೆ.

ಮೊದಲೇ ಬೆಳೆ ನಾಶದಿಂದ ಕಂಗೆಟ್ಟಿದ್ದ ಬೆಳೆಗಾರ ಈಗ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಬೆಳೆಗಾರರ ನೆರವಿಗೆ ಬರಬೇಕು. ಈಗ ಇರುವ ನ್ಯಾಫೆಡ್‌ ಕೊಬ್ಬರಿ ದರ 9300 ರು.ಗಳನ್ನು ಕನಿಷ್ಠ 15ಸಾವಿರಕ್ಕೆ ಏರಿಸಿ ನಾಫೇಡ್‌ ಖರೀದಿ ಕೇಂದ್ರ ಆರಂಭಿಸಬೇಕು. ಈ ಸಂದರ್ಭದಲ್ಲಿ ಎಪಿಎಂಸಿ ವರ್ತಕರ ಸಂಘದ ಗೌರವಾಧ್ಯಕ್ಷ ಗೊಲ್ಲರಹಳ್ಳಿ ಬಸವರಾಜ್‌, ಪ್ರಧಾನ ಕಾರ್ಯದರ್ಶಿ ರಾಜಣ್ಣ, ಖಜಾಂಚಿ ಎಸ್‌ವಿಟಿ ಬಾಬು, ನಿರ್ದೇಶಕರಾದ ಮಹಾವೀರ್‌, ಬಿಎನ್‌ಜಿ ಶಂಕರ್‌ ಉಪಸ್ಥಿತರಿದ್ದರು.

click me!