ವಿಜಯಪುರ: ಆಪರೇಷನ್‌ ಸಕ್ಸಸ್‌, ಡಾಕ್ಟರ್ಸ್‌ ಸಾಧನೆಗೆ ವೈದ್ಯಕೀಯ ಲೋಕವೇ ಅಚ್ಚರಿ..!

Suvarna News   | Asianet News
Published : Jun 10, 2020, 02:55 PM ISTUpdated : Jun 11, 2020, 03:08 PM IST
ವಿಜಯಪುರ: ಆಪರೇಷನ್‌ ಸಕ್ಸಸ್‌, ಡಾಕ್ಟರ್ಸ್‌ ಸಾಧನೆಗೆ ವೈದ್ಯಕೀಯ ಲೋಕವೇ ಅಚ್ಚರಿ..!

ಸಾರಾಂಶ

ವ್ಯಕ್ತಿಯ ಮೂತ್ರಕೋಶದಲ್ಲಿ ಕಲ್ಲು ಪತ್ತೆ ಹಚ್ಚಿದ ವೈದ್ಯರು| ಶಸ್ತ್ರಚಿಕಿತ್ಸೆಯ ಮೂಲಕ ಕಲ್ಲು ತೆಗೆದ ವಿಜಯಪುರ ನಗರದ ಭಾಗ್ಯವಂತಿ ಆಸ್ಪತ್ರೆಯ ವೈದ್ಯರು| ಶಸ್ತ್ರಚಿಕಿತ್ಸೆ ಮಾಡುವ ಮೂಲಕ 750 ಗ್ರಾಂ ತೂಕದ ಕಲ್ಲು ಹೊರತೆಗೆಯುವಲ್ಲಿ ಯಶಸ್ವಿಯಾದ ವೈದ್ಯರ ತಂಡ|

ವಿಜಯಪುರ(ಜೂ.10): ವೈದ್ಯಕೀಯ ಲೋಕದಲ್ಲಿ ಅಪರೂಪದ ಶಸ್ತ್ರಚಿಕಿತ್ಸೆಯನ್ನ ನಗರದ ವೈದ್ಯರು ಮಾಡಿದ್ದಾರೆ. ಹೌದು, ಮೂತ್ರಕೊಶದ ಸಮಸ್ಯೆಯಿಂದ 48 ವರ್ಷದ ವ್ಯಕ್ತಿಯೊಬ್ಬರು ಭಾಗ್ಯವಂತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ವೈದ್ಯರು ಎಕ್ಸರೇ ತೆಗೆದು ನೋಡಿದಾಗ ವ್ಯಕ್ತಿಯ ಮೂತ್ರಕೋಶದಲ್ಲಿ ಬೃಹತ್ ಗಾತ್ರದ ಕಲ್ಲೊಂದು ಪತ್ತೆಯಾಗಿತ್ತು.

"

ವೈದ್ಯಕೀಯ ಭಾಷೆಯಲ್ಲಿ ಗೇಂಟ್ ವೆಸೈಕಲ್ ಕ್ಯಾಲಕ್ಯೂಲಸ್ ಅಥವಾ ಲಾರ್ಜ್ ಯುರಿನರಿ ಬ್ಲ್ಯಾಡರ್ ಸ್ಟೋನ್ ಎಂದು ಈ ರೋಗವನ್ನ ಕರೆಯಲಾಗುತ್ತದೆ. ಮೂತ್ರ ಸರಿಯಾಗಿ ಹೋಗದೇ ಇರುವುದು, ಮೂತ್ರ ತಡೆಯಿಯುವುದರಿಂದ ಈ ಸಮಸ್ಯೆ ಉಂಟಾಗುತ್ತದೆ.

ವಿಜಯಪುರ: ಕ್ವಾರಂಟೈನ್‌ಗೆ ಒಪ್ಪದ ಯುವತಿ, ಅಧಿಕಾರಿಗಳ ಜೊತೆ ಕಿರಿಕ್‌

ಹೀಗಾಗಿ ಭಾಗ್ಯವಂತಿ ಆಸ್ಪತ್ರೆಯ ಡಾ. ಅಶೋಕ ಬಿರಾದಾರ ಹಾಗೂ ತಂಡ ಶಸ್ತ್ರಚಿಕಿತ್ಸೆ ಮಾಡುವ ಮೂಲಕ 750 ಗ್ರಾಂ ತೂಕದ ಕಲ್ಲು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ವೈದ್ಯಕೀಯ ಲೋಕದಲ್ಲಿ ಇಷ್ಟು ದೊಡ್ಡ ಕಲ್ಲು ಪತ್ತೆಯಾಗಿದ್ದು ಅಪರೂಪ ಪ್ರಕರಣ ಇದಾಗಿದೆ ಎಂದು ಹೇಳಲಾಗುತ್ತಿದೆ. 

PREV
click me!

Recommended Stories

ಸಂತನಾಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿದರೂ ಉನ್ನತ ಶಿಕ್ಷಣ ನೌಕರರ ಸೌಲಭ್ಯಕ್ಕೆ ಕತ್ತರಿ!
ಕಲ್ಯಾಣ ಕರ್ನಾಟಕ ನಾಡು ಈಗ ಗಾಂಜಾ ನೆಲೆವೀಡು: ನಶೆಯಲ್ಲಿ ತೇಲುತ್ತಿರೋ ಯುವ ಜನಾಂಗ