ಬಾಗಲಕೋಟೆ: ರಬಕವಿಗೆ ಪೊಲೀಸ್‌ ಠಾಣೆ ಭಾಗ್ಯ ಯಾವಾಗ?

By Kannadaprabha News  |  First Published Jun 16, 2023, 11:43 AM IST

ಬಾಗಲಕೋಟೆ ಜಿಲ್ಲೆಯಲ್ಲಿನ ರಬಕವಿ-ಬನಹಟ್ಟಿ ಅವಳಿ ನಗರಗಳು ಒಂದೇ ನಗರಸಭೆ ವ್ಯಾಪ್ತಿಗೆ ಸೇರಿವೆ. ನೂತನ ತಾಲೂಕೆಂದು ದಶಕಗಳ ಹಿಂದೆ ಘೋಷಿಸಿದ್ದ ಸರ್ಕಾರ ಅವಳಿ ನಗರಗಳ ತಾಲೂಕೆಂದು ಘೋಷಿಸಿದೆ. ನಗರಸಭೆ ವ್ಯಾಪ್ತಿಯ ಬನಹಟ್ಟಿ, ಹೊಸೂರ ಮತ್ತು ರಾಮಪುರ ಪ್ರದೇಶಗಳು ಬನಹಟ್ಟಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿದ್ದರೆ, ರಬಕವಿ ನಗರ ಮಾತ್ರ 7 ಕಿಮೀ ದೂರದ ತೇರದಾಳ ಪಟ್ಟಣದ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿದೆ.


ಶಿವಾನಂದ ಪಿ.ಮಹಾಬಲಶೆಟ್ಟಿ

ರಬಕವಿ-ಬನಹಟ್ಟಿ(ಜೂ.16): ಸುಮಾರು 70 ಸಾವಿರ ಜನಸಂಖ್ಯೆ ಹೊಂದಿದ್ದರೂ ರಬಕವಿಯಲ್ಲಿ ಪೊಲೀಸ್‌ ಠಾಣೆ ಇಲ್ಲದೇ ಇರುವುದರಿಂದ ಪಟ್ಟಣದಲ್ಲಿ ಕಳ್ಳತನಕ್ಕೆ ಕಡಿವಾಣ ಇಲ್ಲದಂತಾಗಿದೆ. ನಾಲ್ಕು ದಶಕಗಳಿಂದ ಇಲ್ಲೊಂದು ಪೊಲೀಸ್‌ ಠಾಣೆ ಆಗಬೇಕು ಎಂಬ ಜನರ ಬೇಡಿಕೆ ಇನ್ನೂ ಹಾಗೆ ಉಳಿದುಕೊಂಡಿದೆ. ಇದು ಸಹಜವಾಗಿ ಇಲ್ಲಿಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

Tap to resize

Latest Videos

undefined

ಬಾಗಲಕೋಟೆ ಜಿಲ್ಲೆಯಲ್ಲಿನ ರಬಕವಿ-ಬನಹಟ್ಟಿ ಅವಳಿ ನಗರಗಳು ಒಂದೇ ನಗರಸಭೆ ವ್ಯಾಪ್ತಿಗೆ ಸೇರಿವೆ. ನೂತನ ತಾಲೂಕೆಂದು ದಶಕಗಳ ಹಿಂದೆ ಘೋಷಿಸಿದ್ದ ಸರ್ಕಾರ ಅವಳಿ ನಗರಗಳ ತಾಲೂಕೆಂದು ಘೋಷಿಸಿದೆ. ನಗರಸಭೆ ವ್ಯಾಪ್ತಿಯ ಬನಹಟ್ಟಿ, ಹೊಸೂರ ಮತ್ತು ರಾಮಪುರ ಪ್ರದೇಶಗಳು ಬನಹಟ್ಟಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿದ್ದರೆ, ರಬಕವಿ ನಗರ ಮಾತ್ರ 7 ಕಿಮೀ ದೂರದ ತೇರದಾಳ ಪಟ್ಟಣದ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿದೆ.

ಮಹಿಳೆಯರಿಗೆ ಉಚಿತ ಪ್ರಯಾಣ: ರಶ್‌ ಆದ ಬಸ್‌ನಲ್ಲಿ ಅಜ್ಜಿಯ 30,000 ಹಣ ದೋಚಿದ ಕಳ್ಳರು

ದೂರು ಸಲ್ಲಿಸಲು 7 ಕಿಮೀ ಹೋಗಬೇಕು:

ರಬಕವಿಯಲ್ಲಿ 2011ರ ಜನಗಣತಿ ಪ್ರಕಾರ 70 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೂ ಸ್ವತಂತ್ರ ಪೊಲೀಸ್‌ ಠಾಣೆ ಬೇಕೆಂಬ ಸ್ಥಳೀಯ ಜನರ ಕೂಗು ಮಾತ್ರ ಕಳೆದ ನಾಲ್ಕು ದಶಕಗಳಿಂದ ಹಾಗೆ ಇದೆ. ಇನ್ನೂ ಸರ್ಕಾರ ಕ್ಯಾರೇ ಅಂದಿಲ್ಲ. ಐದು ವರ್ಷಗಳ ಹಿಂದೆ ಬನಹಟ್ಟಿವೃತ್ತ ಪೊಲೀಸ್‌(ಸಿಪಿಐ) ಇಲಾಖೆಯ ಮುಖ್ಯಸ್ಥರು ರಬಕವಿ-ಬನಹಟ್ಟಿಸೇರಿದಂತೆ ನಗರ ಪೊಲೀಸ್‌ ಠಾಣೆ ಮತ್ತು ರಬಕವಿ-ಬನಹಟ್ಟಿಗ್ರಾಮೀಣ ಪ್ರದೇಶಗಳನ್ನು ಒಳಗೊಂಡ ಗ್ರಾಮೀಣ ಪೊಲೀಸ್‌ ಠಾಣೆ ಸ್ಥಾಪನೆ ಮಾಡಲು ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿದ್ದರು. ದೂರದ ತೇರದಾಳಕ್ಕೆ ದೂರು ಸಲ್ಲಿಸಲು, ಪಾಸ್‌ಪೋರ್ಚ್‌ ವಿಚಾರಣೆ, ಮೊಬೈಲ್‌ ಕಳವು, ಚಿಕ್ಕಪುಟ್ಟಕೆಲಸಗಳು ಸೇರಿದಂತೆ ಪ್ರತಿಯೊಂದಕ್ಕೂ ರಬಕವಿ ನಾಗರಿಕರು ಅಲೆದಾಡಬೇಕಿದೆ.

ಸಂಘಟಿತ ಹೋರಾಟವಿಲ್ಲ:

1973ರಲ್ಲಿ ರಬಕವಿ ನಾಗರಿಕರು ತಮಗೆ ಪ್ರತ್ಯೇಕ ಪೊಲೀಸ್‌ಠಾಣೆ ಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೂ ಅದು ಕಾರ್ಯಗತವಾಗಿಲ್ಲ. ಸರ್ಕಾರ ಮತ್ತು ಇಲಾಖೆ ಮೇಲಧಿಕಾರಿಗಳು ಸ್ಪಂದಿಸದಿರುವುದು ಮತ್ತು ರಬಕವಿ ನಗರದ ಜನಸಂಖ್ಯೆ ತೇರದಾಳ ಪಟ್ಟಣದ ಜನಸಂಖ್ಯೆಗಿಂತ ಹೆಚ್ಚಿದ್ದರೂ 7-8 ಕಿ.ಮೀ. ಕ್ರಮಿಸಿ ದೂರು ನೀಡಲು ಇಲ್ಲಿನ ಜನ ತೆರಳುತ್ತಿದ್ದಾರೆ. ರಬಕವಿ ನಾಗರಿಕರ ಸಂಘಟಿತ ಹೋರಾಟ ತೀವ್ರಗೊಳ್ಳದಿರುವುದರಿಂದ ಮತ್ತು ಶಾಸಕರು, ಸಚಿವರು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠರಿಗೆ ಮನವಿ ಕೊಡುತ್ತ ನಿರಂತರ ಹೋರಾಟ ಮರೆತಿರುವುದರಿಂದ ರಬಕವಿಗೆ ಪೊಲೀಸ್‌ಠಾಣೆ ಮಂಜೂರಾತಿ ಅಸಾಧ್ಯವಾಗಿದೆ. ರಬಕವಿಯಲ್ಲಿ ಪೊಲೀಸ್‌ ಔಟ್‌ಪೋಸ್ಟ್‌ ನಾಮ್‌ಕೆ ವಾಸ್ತೆ ಎಂಬಂತಾಗಿದ್ದು, ಇಲ್ಲಿ 6 ಜನ ಸಿಬ್ಬಂದಿ ಕೆಲಸ ಮಾಡಬೇಕು. ಆದರೆ ಇಲ್ಲಿ ಕೇವಲ ಒಂದಿಬ್ಬರು ಸಿಬ್ಬಂದಿ ಮಾತ್ರ ಇದ್ದು, ಯಾವುದೇ ದೂರುಗಳು ಬಂದರೂ ದೂರದ ತೇರದಾಳ ಠಾಣೆಗೆ ತೆರಳಲು ಸೂಚಿಸುವುದರಿಂದ ರಬಕವಿ ನಾಗರಿಕರಿಗೆ, ಮಹಿಳೆಯರಿಗೆ, ನದಿ ತೀರದ ರೈತರಿಗೆ ಅನಗತ್ಯ ಸಮಯ ಮತ್ತು ಆರ್ಥಿಕ ಹೊರೆ ತಪ್ಪದಂತಾಗಿದೆ.

ಕೆಲವೊಮ್ಮೆ ಔಟ್‌ಪೋಸ್ಟ್‌ ಬಾಗಿಲು ತೆರೆದಿರುತ್ತದೆ. ಆದರೆ ಯಾವುದೇ ಸಿಬ್ಬಂದಿ ಇರುವುದಿಲ್ಲ. ರಾಮಪುರ ಸೇತುವೆ ಮಧ್ಯಭಾಗದಿಂದ ತೇರದಾಳ ಠಾಣೆ ವ್ಯಾಪ್ತಿ ಆರಂಭವಾಗುವುದರಿಂದ ಬೆಳೆದಿರುವ ನಗರ ರಬಕವಿಯ ಜನತೆ ತೇರದಾಳಕ್ಕೇ ತೆರಳಬೇಕಿದೆ. ಇದನ್ನು ಸರಿಪಡಿಸಲು ರಬಕವಿ ನಗರದಲ್ಲಿ ಸ್ವಂತ ಜಾಗೆ ಹೊಂದಿರುವ ಇಲಾಖೆ ರಬಕವಿ-ಬನಹಟ್ಟಿ ಗ್ರಾಮೀಣ ಪೊಲೀಸ್‌ ಠಾಣೆ ಮಂಜೂರಿಸುವುದು ಅತ್ಯಗತ್ಯವಾಗಿದೆ.

ಬಾಗಲಕೋಟೆ ಜಿಲ್ಲಾ ಉಸ್ತುವಾರಿ ತಿಮ್ಮಾಪೂರಗೆ ಹಲವು ಸವಾಲು..!

ಬೆಳೆದ ಗಿಡಗಂಟಿ:

ರಬಕವಿ ಪೊಲೀಸ್‌ ಠಾಣೆ ಮತ್ತು ವಸತಿಗೃಹಗಳ ನಿರ್ಮಾಣಕ್ಕೆ ನಗರದ ಮಧ್ಯಭಾಗದಲ್ಲಿರುವ ಹೊಸ ಬಸ್‌ ನಿಲ್ದಾಣ ರಸ್ತೆಗೆ ಹೊಂದಿಕೊಂಡ ಒಂದೂವರೆ ಎಕರೆ ಜಾಗೆಯನ್ನು ನ್ಯಾ.ಚಂದ್ರಕಾಂತ ನಾಗಪ್ಪ ದುರಡಿ ನೀಡಿದ್ದರೂ ಇಲ್ಲಿ ರಬಕವಿ ಔಟ್‌ಪೋಸ್ಟ್‌ ಎಂಬ ಓಬೇರಾಯನ ಕಾಲದ ನಾಮಫಲಕದಡಿ ಹುಲುಸಾಗಿ ಬೆಳೆದಿರುವ ಗಿಡಗಂಟಿಗಳ ನಡುವೆ ರೋಧಿಸುತ್ತಿದೆ. ಸಣ್ಣಪುಟ್ಟಕೆಲಸಗಳೂ ಸೇರಿದಂತೆ ಯಾವುದೇ ದೂರು ನೀಡಲು ಕೇವಲ ಒಂದು ಕಿ.ಮೀ. ದೂರದಲ್ಲಿರುವ ಬನಹಟ್ಟಿಪೊಲೀಸ್‌ಠಾಣೆಗೆ ರಬಕವಿ ನಗರ ಪ್ರದೇಶವನ್ನು ವರ್ಗಾಯಿಸದ ಇಲಾಖೆ ಕ್ರಮದಿಂದ ಮತ್ತು ಸ್ವತಂತ್ರ ಪೊಲೀಸ್‌ಠಾಣೆ ಬೇಕೆಂದು ನಾಲ್ಕೂವರೆ ದಶಕಗಳಿಂದ ಕಾಟಾಚಾರಕ್ಕೆ ಮನವಿ ಸಲ್ಲಿಸುತ್ತಿರುವ ಆಸಕ್ತರ ಹೊರತಾಗಿ ನಾಗರಿಕರಲ್ಲಿ ಗಟ್ಟಿಧ್ವನಿಯ ನಿರಂತರ ಹೋರಾಟದ ಕೊರತೆಯ ಕಾರಣಕ್ಕೆ ನಾಲ್ಕೂವರೆ ದಶಕಗಳ ಹೋರಾಟದ ಧ್ವನಿ ದಪ್ಪ ತೊಗಲಿನ ಸರ್ಕಾರಕ್ಕೆ ಮತ್ತು ಇಲಾಖೆ ಮೇಲಧಿಕಾರಿಗಳಿಗೆ ಕೇಳಿಸದಂತಾಗಿ¨.

ಪೊಲೀಸ್‌ ಇಲಾಖೆ ಮತ್ತು ಸರ್ಕಾರಕ್ಕೆ ಕಳೆದ ನಾಲ್ಕೂವರೆ ದಶಕಗಳಿಂದ ಮನವಿ ನೀಡಿ ಆಗ್ರಹಿಸಿದರೂ ರಬಕವಿ ನಗರಕ್ಕೆ ಪ್ರತ್ಯೇಕ ಠಾಣೆ ಮಂಜೂರಾಗಿಲ್ಲ. ಇಲಾಖೆಗೆ ಸ್ವಂತ ಜಾಗೆಯಿದೆ. ರಬಕವಿ ನಗರ ಬೃಹದಾಕಾರವಾಗಿ ಬೆಳೆದಿದೆಯಾದರೂ ನಮ್ಮ ಬೇಡಿಕೆಗೆ ಇನ್ನೂ ಮನ್ನಣೆ ದೊರೆತಿಲ್ಲ. ರಬಕವಿ-ಬನಹಟ್ಟಿಗ್ರಾಮೀಣ ಮತ್ತು ನಗರ ಪೊಲೀಸ್‌ ಠಾಣೆಗಳನ್ನು ಸೃಷ್ಟಿಸಿ ರಬಕವಿ ನಗರವನ್ನು ಬನಹಟ್ಟಿನಗರ ಠಾಣೆ ವ್ಯಾಪ್ತಿಗೆ ಸೇರಿಸಬೇಕೆಂಬ ಇಚ್ಚಾಸಕ್ತಿ ಸರ್ಕಾರ ಮತ್ತು ಪೊಲೀಸ್‌ ವರಿಷ್ಠರಿಗೆ ಬಾರದಿರುವುದು ನಾಗರಿಕರಿಗೆ ಶಾಪವಾಗಿದೆ. ಸರ್ಕಾರ ನಮ್ಮ ಬೇಡಿಕೆಗೆ ಮನ್ನಣೆ ನೀಡದಿದ್ದರೆ ನಾಗರಿಕರೆಲ್ಲ ಉಗ್ರ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ ಅಂತ ರಬಕವಿ-ಬನಹಟ್ಟಿ ನಗರಸಭೆ ಮಾಜಿ ನಗರಾಧ್ಯಕ್ಷ ಸಂಜಯ ವೀರಪ್ಪ ತೆಗ್ಗಿ ತಿಳಿಸಿದ್ದಾರೆ. 

click me!