ಕಾಂಗ್ರೆಸ್‌ ಹಿರಿಯ ಮುಖಂಡ ಹಂಗರಗಿ ಹೃದಯಾಘಾತದಿಂದ ನಿಧನ

Published : Jun 16, 2023, 10:39 AM IST
ಕಾಂಗ್ರೆಸ್‌ ಹಿರಿಯ ಮುಖಂಡ ಹಂಗರಗಿ ಹೃದಯಾಘಾತದಿಂದ ನಿಧನ

ಸಾರಾಂಶ

ತಿಕೋಟಾ ಪಟ್ಟಣದ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ತಮ್ಮಣ್ಣ ಹಂಗರಗಿ ಅವರ ನಿಧನಕ್ಕೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಂತಾಪ 

ವಿಜಯಪುರ(ಜೂ.16):  ತಿಕೋಟಾ ಪಟ್ಟಣದ ಹಿರಿಯ ಕಾಂಗ್ರೆಸ್‌ ಮುಖಂಡ ತಮ್ಮಣ್ಣ ಕೆ.ಹಂಗರಗಿ(73) ಹೃದಯಾಘಾತದಿಂದ ನಿಧನರಾಗಿದ್ದಾರೆ. ತಿಕೋಟಾ ಪಿಕೆಪಿಎಸ್‌ ಅಧ್ಯಕ್ಷರಾಗಿದ್ದ ಅವರು, ಪತ್ನಿ, ನಾಲ್ಕು ಜನ ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. 1ನೇ ಆಗಸ್ಟ್‌ 1951ರಲ್ಲಿ ತಾಜಪುರದಲ್ಲಿ ಜನಿಸಿದ್ದ ಅವರು ಬಿ.ಎ.ಪದವಿಧರರಾಗಿದ್ದರು. ತಿಕೋಟಾ ಪಿಕೆಪಿಎಸ್‌ ಕಾರ್ಯದರ್ಶಿಯಾಗಿದ್ದ ಅವರು, ನಂತರ ಇದೇ ಪಿಕೆಪಿಎಸ್‌ಗೆ ನಾಲ್ಕುನೇ ಅವಧಿಗೆ ಅಧ್ಯಕ್ಷರಾಗಿದ್ದರು.

ಅಲ್ಲದೇ, ಆಡಳಿತ ಮಂಡಳಿ ನಿರ್ದೇಶಕರು ಮತ್ತು ಸಿಬ್ಬಂದಿಯೊಂದಿಗೆ ಉತ್ತಮ ಸೇವೆ ಸಲ್ಲಿಸುವ ಮೂಲಕ ಡಿಸಿಸಿ ಬ್ಯಾಂಕಿನಿಂದ ಜಿಲ್ಲಾ ಮಟ್ಟದ ಮತ್ತು ಅಪೆಕ್ಸ್‌ ಬ್ಯಾಂಕಿನಿಂದ ರಾಜ್ಯ ಮಟ್ಟದಲ್ಲಿ ಉತ್ತಮ ಪಿಕೆಪಿಎಸ್‌ ಪ್ರಶಸ್ತಿ ಪಡೆಯಲು ಅಪಾರ ಕೊಡುಗೆ ನೀಡಿದ್ದರು. ಅಲ್ಲದೇ, ತಿಕೋಟಾ ಪಿಕೆಪಿಎಸ್‌ನಲ್ಲಿ ಇಂದಿಗೂ ಸದಸ್ಯರು ಅತಿ ಹೆಚ್ಚು ಠೇವಣಿ ಇಡುವ ಮೂಲಕ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಠೇವಣಿ ಹೊಂದಿರವ ಪಿಕೆಪಿಎಸ್‌ ಎಂದು ಮೊದಲ ಸ್ಥಾನದಲ್ಲಿರುವುದು ಅವರ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ಖ್ಯಾತ ವಿಲನ್ ಕಝಾನ್​ ಖಾನ್​ ಹೃದಯಾಘಾತದಿಂದ ನಿಧನ

ಈ ಮುಂಚೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವ ಅವರು, ವಿಜಯಪುರ ಡಿಸಿಸಿ ಬ್ಯಾಂಕಿಗೆ ಎರಡು ಬಾರಿ ನಿರ್ದೇಶಕರಾಗಿ, ಜಿ.ಪಂ.ಉಪಾಧ್ಯಕ್ಷರಾಗಿ, ದೆಹಲಿ ಇಫ್ಕೋ ಕಂಪನಿ ನಿರ್ದೇಶಕರಾಗಿ, ವಿಜಯಪುರ ಎಪಿಎಂಸಿ ನಿರ್ದೇಶಕರಾಗಿ, ತಿಕೋಟಾ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೇ, 2010ರಲ್ಲಿ ಸ್ವಂತ ಖರ್ಚಿನಲ್ಲಿ ತಿಕೋಟಾದಲ್ಲಿ ಶ್ರೀ ಬಸವೇಶ್ವರ ಶಿಕ್ಣಣ ಸಂಸ್ಥೆ ಸ್ಥಾಪಿಸಿ ಶಿಕ್ಷಣ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ.

ಹಂಗರಗಿ ನಿಧನಕ್ಕೆ ಎಂಬಿಪಿ ಸಂತಾಪ

ತಿಕೋಟಾ ಪಟ್ಟಣದ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ತಮ್ಮಣ್ಣ ಹಂಗರಗಿ ಅವರ ನಿಧನಕ್ಕೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹಾಗೂ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ತಮ್ಮಣ್ಣ ಹಂಗರಗಿ ಅವರು ಹೃದಯಾಘಾತದಿಂದ ಮೃತಪಟ್ಟಸುದ್ದಿ ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಕುಟುಂಬ ವರ್ಗಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ಪರಮಾತ್ಮ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಭೀಕರ ರಸ್ತೆ ಅಪಘಾತ: ಖ್ಯಾತ ಪೋಷಕ ನಟ, ಸಹಾಯಕ ನಿರ್ದೇಶಕ ಶರಣ್ ರಾಜ್ ನಿಧನ

ಬಿ.ಎ.ಪದವಿಧರರಾಗಿದ್ದ ಅವರು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್‌ ಸದಸ್ಯರಾಗಿದ್ದರು. ತಿಕೋಟಾ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ, ವಿಜಯಪುರ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿ, ಜಿಪಂ ಉಪಾಧ್ಯಕ್ಷರಾಗಿ ವಿಜಯಪುರ ಜಿಲ್ಲೆಗೆ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದರು.

ನಾಲ್ಕು ಬಾರಿ ತಿಕೋಟಾ ಪಿಕೆಪಿಎಸ್‌ ಅಧ್ಯಕ್ಷರಾಗಿದ್ದ ಅವರು ಹಾಗೂ ಆಡಳಿತ ಮಂಡಳಿ ಜನಪರ ಕಾರ್ಯಗಳಿಂದಾಗಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಉತ್ತಮ ಪಿಕೆಪಿಎಸ್‌ ಪ್ರಶಸ್ತಿಗೆ ಪಾತ್ರವಾಗಿದ್ದಾರೆ. ಅಲ್ಲದೇ, ಜಿಲ್ಲೆಯಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಠೇವಣಿ ಇಟ್ಟಿರುವ ಪಿಕೆಪಿಎಸ್‌ ಎಂದೂ ಹೆಸರು ಮಾಡಿದೆ. ಇದರಲ್ಲಿ ತಮ್ಮಣ್ಣ ಹಂಗರಗಿ ಅವರ ಕೊಡುಗೆ ಅಪಾರವಾಗಿದೆ ಎಂದು ಸಚಿವರು ಸ್ಮರಿಸಿದ್ದಾರೆ. ತಮ್ಮಣ್ಣ ಹಂಗರಗಿ ಅವರ ಅಗಲಿಕೆ ವೈಯಕ್ತಿಕವಾಗಿ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಹಾಗೂ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂದು ಎಂ.ಬಿ.ಪಾಟೀಲ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

PREV
Read more Articles on
click me!

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ