
ಉಡುಪಿ(ನ.18): ಇಲ್ಲಿನ ನೇಜಾರು ಗ್ರಾಮದ ಜುಮಾ ಮಸೀದಿ ವತಿಯಿಂದ ಭಾನುವಾರ ನಡೆದ ಮಿಲಾದುನ್ನಬಿ ಮೆರವಣಿಗೆಯಲ್ಲಿ ತೆರಳುತ್ತಿದ್ದ ಮುಸ್ಲಿಂ ಭಕ್ತರು, ಮಾರ್ಗ ಮಧ್ಯೆ ಹಿಂದೂ ಮಹಿಳೆಯೊಬ್ಬರ ಸಾವಿನ ಮನೆಯ ಮುಂದೆ ಧ್ವನಿವರ್ಧಕವನ್ನು ಬಂದ್ ಮಾಡಿ, ಮನೆಗೆ ತೆರಳಿ ಸಂತಾಪ ವ್ಯಕ್ತಪಡಿಸಿ ಸೌಹಾರ್ದವನ್ನು ಮೆರೆದ ಘಟನೆ ನಡೆದಿದೆ.
ಅನಿಲ ಸೋರಿಕೆ: ಮಸೀದಿ ಮೈಕ್ ಬಳಸಿ ಅಲರ್ಟ್, ತಪ್ಪಿತು ಭಾರೀ ದುರಂತ
ಮಿಲಾದುನ್ನಬಿ ಪ್ರಯುಕ್ತ ಮಸೀದಿ ವತಿಯಿಂದ ಮಿಲಾದ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯಲ್ಲಿ ಧ್ವನಿವರ್ಧಕವನ್ನು ಬಳಸಲಾಗಿತ್ತು. ಮೆರವಣಿಗೆ ಮಸೀದಿಯಿಂದ ಹೊರಟು ಮೆರವಣಿಗೆ ಸಂತೆಕಟ್ಟೆಗೆ ಮಾರ್ಗವಾಗಿ ಕಲ್ಯಾಣಪುರಕ್ಕೆ ತೆರಳಿ ಹಿಂದಕ್ಕೆ ಬಂರುತ್ತಿತ್ತು.
ಬಿಜೆಪಿ ಜಿಲ್ಲಾಧ್ಯಕ್ಷಗಾದಿ ಆಕಾಂಕ್ಷಿಗಳಿಗೆ ವಯೋಮಿತಿ ನಿಯಮ ಅಡ್ಡಿ!
ಆಗ ದಾರಿಯಲ್ಲಿ ಸ್ಥಳೀಯ ಮಹಿಳೆ ಜಯಂತಿ ಎಂಬವರು ಅನಾರೋಗ್ಯದಿಂದ ಮೃತಪಟ್ಟಸುದ್ದಿ ತಿಳಿಯಿತು. ಕೂಡಲೇ ಮೃತರ ಮನೆಯ ಮುಂದೆ ಮೆರವಣಿಗೆಯ ಧ್ವನಿವರ್ಧಕವನ್ನು ಬಂದ್ ಮಾಡಲಾಯಿತು.
ಮಸೀದಿಯ ಅಧ್ಯಕ್ಷ ಅಬೂಬಕರ್ ನೇಜಾರು, ತಾ.ಪಂ. ಮಾಜಿ ಸದಸ್ಯ ರಹ್ಮತುಲ್ಲಾ ಹೂಡೆ, ಮಸೀದಿಯ ಖತೀಬ್ ಉಸ್ಮಾನ್ ಮದನಿ, ನೌಫಲ್ ಮದನಿ ನೇಜಾರು ಮತ್ತು ಇತರರು ಮೃತರ ಮನೆಗೆ ತೆರಳಿ ಸಂತಾಪ ಸೂಚಿಸಿದರು. ಈ ಸೌಹಾರ್ದ ವರ್ತನೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
'ಬ್ರಿಟಿಷರನ್ನು ಓಡಿಸಿದಂತೆ ದೇಶದಿಂದ ಮೋದಿಯನ್ನು ಓಡಿಸ್ಬೇಕು'..!