ಮಂಗಳೂರಿನಲ್ಲಿ ಸ್ಯಾಂಡ್ ಬಜಾರ್ ಆ್ಯಪ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೆ 11,466 ಬೇಡಿಕೆಗಳು ಸ್ವೀಕೃತವಾಗಿದ್ದು, 11,028 ಬೇಡಿಕೆಗಳಿಗೆ ಮರಳನ್ನು ಆ್ಯಪ್ ಮೂಲಕ ಯಶಸ್ವಿಯಾಗಿ ಪೂರೈಸಲಾಗಿದೆ.
ಮಂಗಳೂರು(ನ.18): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಕಾಮಗಾರಿಗಳಿಗೆ ಹಾಗೂ ಜನಸಾಮಾನ್ಯರಿಗೆ ನಿರ್ದಿಷ್ಟಬೆಲೆ ಮತ್ತು ನಿಗದಿತ ಸಮಯದಲ್ಲಿ ಮರಳು ಪೂರೈಕೆಯಾಗುವ ನಿಟ್ಟಿನಲ್ಲಿ https://www.dksandbazaar.com/ ಸ್ಯಾಂಡ್ ಬಜಾರ್ ಆ್ಯಪ್ ಅನ್ನು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ರಚಿಸಲಾಗಿದ್ದು, 2019ನೇ ಸಾಲಿನ ಮೇ 22 ರಿಂದ ಕಾರ್ಯಾರಂಭ ಮಾಡಲಾಗಿದೆ. ಇದುವರೆಗೆ 11,466 ಬೇಡಿಕೆಗಳು ಸ್ವೀಕೃತವಾಗಿದ್ದು, 11,028 ಬೇಡಿಕೆಗಳಿಗೆ ಮರಳನ್ನು ಆ್ಯಪ್ ಮೂಲಕ ಯಶಸ್ವಿಯಾಗಿ ಪೂರೈಸಲಾಗಿದೆ.
ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಕ್ಕೆ ಮತ್ತೊಂದು ಗಡುವು!
undefined
ಈ ಆ್ಯಪ್ ಮೂಲಕ ಬುಕ್ ಮಾಡಿದ 48 ಗಂಟೆಗಳಲ್ಲಿ ಗ್ರಾಹಕರಿಗೆ ಮರಳನ್ನು ಪೂರೈಕೆ ಮಾಡಲಾಗುತ್ತಿದೆ. ಪ್ರಸ್ತುತ ತುಂಬೆ ಡ್ಯಾಂನಲ್ಲಿ ಹೂಳೆತ್ತುವಿಕೆಯಿಂದ ಬಂದ ಮರಳನ್ನು ಹಾಗೂ ಸಿಆರ್‌ಝಡ್ ಪ್ರದೇಶದಲ್ಲಿ ಗುರುತಿಸಿರುವ ಮರಳು ದಿಬ್ಬಗಳಿಂದ ತೆರವುಗೊಳಿಸಿದ ಮರಳನ್ನು ಗ್ರಾಹಕರಿಗೆ ಪೂರೈಸಲಾಗುತ್ತಿದೆ. ಸಿಆರ್‌ಝಡ್ ಪ್ರದೇಶದಲ್ಲಿನ ಮರಳಿನ ಪ್ರತಿ ಲೋಡ್‌ಗೆ 5,500 ರು. ಹಾಗೂ ತುಂಬೆ ಡ್ಯಾಂನಲ್ಲಿ ಹೂಳೆತ್ತುವಿಕೆಯಿಂದ ಬಂದ ಮರಳಿಗೆ ಪ್ರತಿ ಲೋಡ್‌ಗೆ 4,830 ರು. ದರ ನಿಗದಿಗೊಳಿಸಲಾಗಿದೆ.
ಪಕ್ಷೇತರರು ಸ್ಪರ್ಧಿಸಿರುವಲ್ಲಿ ಕಾಂಗ್ರೆಸ್‌ಗೆ ಸೋಲಿನ ಬುತ್ತಿ!
ಕ್ರೆಡೈ, ಸಿವಿಲ್ ಕಂಟ್ರಾಕ್ಟರ್ಸ್ ಎಸೋಸಿಯೇಷನ್, ವಾಹನ ಮಾಲೀಕರು ಹಾಗೂ ಎಲ್ಲ ತಾತ್ಕಾಲಿಕ ಪರವಾನಗಿದಾರರೊಂದಿಗೆ ಅಕ್ಟೋಬರ್ 11ರಂದು ಸಭೆ ನಡೆಸಿ ಅವರ ಅಹವಾಲುಗಳನ್ನು ಹಾಗೂ ಬೇಡಿಕೆಗಳನ್ನು ಸ್ವೀಕರಿಸಲಾಗಿದ್ದು, ಅದರ ಪ್ರಕಾರ ಪ್ರಸ್ತುತ ಆ್ಯಪ್‌ನಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಿ ಬಲ್ಕ್ ಆರ್ಡರ್‌ಗಳನ್ನು ಸ್ವೀಕರಿಸಲಾಗುತ್ತಿದೆ.
ಜಿಲ್ಲೆಯ ಎಲ್ಲ ಜನಸಾಮಾನ್ಯರು ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಮರಳು ಬೇಡಿಕೆಯನ್ನು ನೋಂದಾಯಿಸುವ ಬಗ್ಗೆ ಹಾಗೂ ಆ್ಯಪ್ ಬಳಸುವ ವಿಧಾನದ ಬಗ್ಗೆ ಮಾಹಿತಿಯನ್ನು ತಿಳಿಸಲು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಕ್ರಮ ಕೈಗೊಳ್ಳುವಂತೆ ಎಲ್ಲಾ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿಯನ್ನೂ ನೀಡಲಾಗಿದೆ.
'ಬ್ರಿಟಿಷರನ್ನು ಓಡಿಸಿದಂತೆ ದೇಶದಿಂದ ಮೋದಿಯನ್ನು ಓಡಿಸ್ಬೇಕು'..!
ಆದ್ದರಿಂದ ಸ್ಯಾಂಡ್ ಬಜಾರ್ ಆ್ಯಪ್‌ನ್ನು ಯಶಸ್ವಿಯಾಗಿ ಮುನ್ನಡೆಸಿ, ಜಿಲ್ಲೆಯಲ್ಲಿನ ಎಲ್ಲ ಗ್ರಾಹಕರು ಆ್ಯಪ್‌ನಲ್ಲಿ ಮರಳಿನ ಬೇಡಿಕೆಯನ್ನು ನೋಂದಣಿ ಮಾಡಲು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಮಾಹಿತಿ ಪಡೆಯಬಹುದಾಗಿದೆ. ಕೇವಲ ಆ್ಯಪ್ ಮೂಲಕ ಮಾತ್ರ ಮರಳನ್ನು ಪೂರೈಕೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.