ಕಾಗೆ, ಕೋಳಿ ಬೆನ್ನಲ್ಲೇ ಹಂದಿಗಳ ಸರಣಿ ಸಾವು : ಆತಂಕಗೊಂಡ ಜನತೆ

By Suvarna News  |  First Published Mar 18, 2020, 11:25 AM IST

ಕಾಗೆ, ಕೋಳಿಗಳ ಸರಣಿ ಸಾವು ಬೆನ್ನಲ್ಲೇ ಹಂದಿಗಳು ಸಾವನ್ನಪ್ಪುತ್ತಿದ್ದು ಜನರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ. ಜನರಲ್ಲಿ ಭಯವನ್ನುಂಟು ಮಾಡಿದೆ. 


ಶಿವಮೊಗ್ಗ [ಮಾ.18]: ಕೊರೋನಾ, ಮಂಗನ ಕಾಯಿಲೆ ಆರ್ಭಟದ ನಡುವೆ ಮಲೆನಾಡಿಗರಿಗೆ ಮತ್ತೊಂದು ಕಾಯಿಲೆ ಆತಂಕ ಎದುರಾಗಿದೆ. 

ಶಿವಮೊಗ್ಗ ಜಿಲ್ಲೆಯ ಅಬ್ಬಲಗೆರೆ ಗ್ರಾಮದ ಚನ್ನಮುಂಬಾಪುರಲ್ಲಿ 10ಕ್ಕೂ ಹೆಚ್ಚು ಹಂದಿಗಳು ಸಾವಿಗೀಡಾಗಿವೆ. 

Tap to resize

Latest Videos

ಮಂಗನ ಕಾಯಿಲೆಯಿಂದ ಆತಂಕಗೊಂಡ ಬೆನ್ನಲ್ಲೇ ಇದೀಗ ಹಂದಿಗಳ ಸಾವು ಜನರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ. 

ಸರಣಿಯಾಗಿ ಸಾವಿಗೀಡಾಗುತ್ತಿವೆ ಕಾಗೆಗಳು : ಆತಂಕದಲ್ಲಿ ಜನತೆ

ಕಾಯಿಲೆಯಿಂದಲೋ ಅಥವಾ ವಿಷ ಆಹಾರ ಸೇವಿಸಿ ಹಂದಿಗಳು ಸಾವಿಗೀಡಾಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. 

ಆದರೆ ಇನ್ನೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಆದರೆ ಹಂದಿಗಳ ಸಾವು ಗ್ರಾಮಸ್ಥರಲ್ಲಿ ಹೆಚ್ಚು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

click me!